B Khata: ಬಿ - ಖಾತಾದಿಂದ ಎ - ಖಾತಾ ಯಾವ ಖಾತಾ ಪರಿವರ್ತನೆಗೆ ಎಷ್ಟು ಶುಲ್ಕ ?

B Khata to A Khata: ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಬಿ ಖಾತಾ ಆಸ್ತಿದಾರರಿಗೆ ಗುಡ್‌ನ್ಯೂಸ್ ಕೊಟ್ಟಿದೆ. ಕಳೆದ ಆರು ತಿಂಗಳ ಹಿಂದೆ ಒಂದು ಬಾರಿ ಬಿ ಖಾತಾ ಮಾಡಿಸಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿತ್ತು. ಇದರಲ್ಲಿ ಅನಧಿಕೃತ ಹಾಗೂ ರೆವಿನ್ಯೂ ಸೈಟ್‌ಗಳಿಗೆ ಒಂದು ಬಾರಿ ಬಿ- ಖಾತಾ ನೀಡುವ ಯೋಜನೆಯನ್ನು ಎರಡು ಬಾರಿ ವಿಸ್ತರಿಸಲಾಗಿತ್ತು. ಇದೀಗ ಬಿ - ಖಾತಾದಿಂದ ಎ - ಖಾತಾಗೆ ಪರಿವರ್ತನೆ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದ್ದು. ವಿವಿಧ ಆಸ್ತಿಗಳಿಗೆ ನಿರ್ದಿಷ್ಟ ಮೊತ್ತ ನಿಗದಿ ಮಾಡಲಾಗಿದೆ ಎಂದು ಹೇಳಲಾಗಿದೆ.

ಕರ್ನಾಟಕದಲ್ಲಿ ಬಿ - ಖಾತಾ ಆಸ್ತಿದಾರರು ಆಸ್ತಿ ಇದ್ದರೂ ಅದಕ್ಕೆ ನಿಖರವಾದ ಮಾರುಕಟ್ಟೆ ಮೌಲ್ಯ ಸಿಗದೆ ಪರದಾಡುವಂತಾಗಿತ್ತು. ಅಲ್ಲದೇ ಬಿ ಖಾತಾ ಆಸ್ತಿದಾರರು ಆಸ್ತಿ ಜಾಗದಲ್ಲಿ ಕಟ್ಟಡಗಳ ನಿರ್ಮಾಣ ಹಾಗೂ ಮಾರಾಟದಂತಹ ಕೆಲಸಗಳಿಗೂ ಭಾರೀ ತೊಡಕಾಗಿತ್ತು.

Karnataka government orderB Khata to A Khata Check New Conversion Fees and Guidelines in Karnataka

ಇದೀಗ ಬಿ ಖಾತಾ ಆಸ್ತಿದಾರರಿಗೆ ಕರ್ನಾಟಕ ಸರ್ಕಾರವು ಗುಡ್‌ನ್ಯೂಸ್ ಕೊಟ್ಟಿದೆ. ಆದರೆ, ಇದರೊಂದಿಗೆ ಬಿ - ಖಾತಾದಿಂದ ಎ -ಖಾತಾ ಪರಿವರ್ತನೆ ಮಾಡುವುದಕ್ಕೆ ದುಬಾರಿ ದಂಡವನ್ನೂ ವಿಧಿಸಲಾಗಿದೆ ಎನ್ನುವ ಆರೋಪವೂ ಕೇಳಿ ಬಂದಿದೆ. ಹಾಗಾದರೆ ಬಿ - ಖಾತಾದಿಂದ ಎ - ಖಾತಾ ಪರಿವರ್ತನೆ ಮಾಡಿಕೊಳ್ಳುವುದಕ್ಕೆ ಯಾವುದಕ್ಕೆ ಎಷ್ಟು ನಿಗದಿ ಮಾಡಲಾಗಿದೆ ಎನ್ನುವ ವಿವರ ಇಲ್ಲಿದೆ.

ಸಬ್-ರಿಜಿಸ್ಟಾ‌ ಮಾರ್ಗಸೂಚಿ ದರ (ಪ್ರತಿ ಚದರ ಅಡಿಗೆ) | ನಿವೇಶನದ ಅಳತೆ | ನಿವೇಶನದ ಬೆಲೆ | ಬಿ ಖಾತಾ ಇಂದ ಎ ಖಾತಾ ಪರಿವರ್ತನೆ ಶುಲ್ಕ (ಮಾರ್ಗಸೂಚಿ ಬೆಲೆಯ 5%)

5,000 30x40 = 1200 60 ಲಕ್ಷ 3 ಲಕ್ಷ

10,000 30x40 = 1200 1.2 ಕೋಟಿ 6 ಲಕ್ಷ

15,000 30x40 = 1200 1.8 ಕೋಟಿ 9 ಲಕ್ಷ

20,000 30x40 = 1200 2.4 ಕೋಟಿ 2 ಲಕ್ಷ

ಇನ್ನು ಈ ದರ ಕೇವಲ 2000 ಚ.ಮೀ. ಗಳ ವರೆಗೆ ಮಾತ್ರ ಅನ್ವಯವಾಗಲಿದೆ . ಈ ದರ 100 ದಿನಗಳಿಗೆ ಮಾತ್ರ ಅನ್ವಯ. ಮುಂದೆ ಪರಿಷ್ಕರಣೆ ಮಾಡಲಾಗುವುದು. ಆರಂಭಿಕ ಪರಿಶೀಲನಾ ಶುಲ್ಕ 500 ರೂ. ಪ್ರತ್ಯೇಕ ಇರಲಿದೆ ಎಂದು ಹೇಳಲಾಗಿದೆ. ಬಿ ಖಾತಾ ಆಸ್ತಿ ಇದ್ದರೂ ಇಲ್ಲದಂತಾಗಿದ್ದ ಆಸ್ತಿದಾರರು ಇದೀಗ ಅನಿವಾರ್ಯವಾಗಿ ಇಷ್ಟು ಹಣವನ್ನು ಪಾವತಿ ಮಾಡಿಕೊಂಡು ಆಸ್ತಿ & ನಿವೇಶನಗಳನ್ನು ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಬಿ - ಖಾತಾದಿಂದ ಎ- ಖಾತಾ ಪರಿವರ್ತನೆ ಮಾಡಿಕೊಳ್ಳುವುದಕ್ಕೆ ಯಾವುದೇ ಗಡುವು ನಿಗದಿ ಮಾಡಿಲ್ಲ.

ಆದರೆ, ಈ ದುಬಾರಿ ಶುಲ್ಕವು ಆಸ್ತಿದಾರರಲ್ಲಿ ಸಂಕಷ್ಟವನ್ನುಂಟು ಮಾಡಿದೆ. ಈ ಮಾದರಿಯ ದರಪಟ್ಟಿಯನ್ನು ವಿರೋಧ ಪಕ್ಷಗಳು ಹಂಚಿಕೊಂಡಿವೆ. ಆದರೆ ಬಿ ಖಾತಾದಿಂದ ಎ - ಖಾತಾ ಗುಡ್‌ನ್ಯೂಸ್ ಎಂದು ಹೇಳಿರುವ ಸರ್ಕಾರವು, ದರಪಟ್ಟಿಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+