ಆರೋಗ್ಯ ಸಚಿವ ಖಾದರ್ ಗೆ ಇದು ಬೇಸರದ ಸಂಗತಿ

ಬೆಂಗಳೂರು, ಏ.30: ಜನಪರ ಕಾಳಜಿಯುಳ್ಳ ಆರೋಗ್ಯ ಸಚಿವ ಯುಟಿ ಖಾದರ್ ಅವರಿಗೆ ಇದು ನಿಜಕ್ಕೂ ಬೇಸರದ ಸಂಗತಿ. ಏನಪ್ಪಾ ಅಂದರೆ ದುಡ್ಡು ಕೊಡ್ತೀವಿ ಬನ್ನಿ ಅಂದ್ರೂ ಸರಕಾರಿ ಆಸ್ಪತ್ರೆಗಳಿಗೆ ತಜ್ಞ ವೈದ್ಯರು ಬರುತ್ತಿಲ್ಲ! ಅಂದಹಾಗೆ, ಇದು ನಿನ್ನೆ ಮೊನ್ನೆಯ ಕಥೆಯಲ್ಲ. ಮತ್ತು ಕರ್ನಾಟಕ ರಾಜ್ಯಕ್ಕಷ್ಟೇ ಸೀಮಿತವಾದುದಲ್ಲ. ಸರ್ವಾಂತರ್ಯಾಮಿ...

ಪರಿಣತರು ಹಾಗಿರಲಿ ಇನ್ನೂ ಆಗ್ತಾನೆ ಕಣ್ಬಿಡುತ್ತಿರುವ ಎಳೆ ವೈದ್ಯ ಮಹಾಶಯರುಗಳೇ ಕಡ್ಡಾಯವಾಗಿ ಒಂದೆರಡು ವರ್ಷ ಸರಕಾರಿ ಆಸ್ಪತ್ರೆಗಳಲ್ಲಿ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಕೆಲ್ಸ ಮಾಡ್ರಪ್ಪಾ, ಜನರ ಋಣ/ಸರಕಾರದ ಋಣ ತೀರಿಸರಪ್ಪಾ ಅಂದ್ರೂ ಅತ್ತ ಹೆಜ್ಜೆ ಹಾಕದಿರುವ ಪರಿಸ್ಥಿತಿಯಿದೆ. ಹಾಗಿರುವಾಗ ಚೆನ್ನಾಗಿ ಪ್ರಾಕ್ಟೀಸ್ ಮಾಡಿ ಒಂದು ಹಂತಕ್ಕೆ ಬಂದ ನುರಿತ ವೈದ್ಯರು ಸರಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ಬರುತ್ತಾರಾ!?

ಈ ದಾರುಣ ಸಮಸ್ಯೆಯ ಸಮ್ಮುಖದಲ್ಲಿ ರಾಜ್ಯ ಸರಕಾರವು ಖಾಸಗಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರಾಗಿ ದುಡಿಯುತ್ತಿರುವ ವೈದ್ಯರನ್ನು ರಾಜ್ಯದ ಸರಕಾರಿ ಆಸ್ಪತ್ರೆಗಳ ಸೇವೆಗೆ ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದೆ.

Short of specialists in Karnataka govt hospitals- Pvt doctors to be roped in- ut khader

ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ ಉತ್ತರ ಕರ್ನಾಟಕದ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರೇ ಗತಿಯಿಲ್ಲ. ಹಾಗಾಗಿ ಸರಕಾರ ತಿಂಗಳಿಗೆ ತಲಾ ಲಕ್ಷಾಂತರ ರೂಪಾಯಿ ಪಗಾರದಾಸೆ ತೋರಿಸಿ ನುರಿತ ವೈದ್ಯರನ್ನು ಆಹ್ವಾನಿಸಿದೆ. ಆದ್ರೂ ಯಾವುದೇ ಪರಿಣತ ವೈದ್ಯರು ಸರಕಾರಿ ಕರೆಗೆ ಓಗೊಟ್ಟಿಲ್ಲ.

'336 ಎಂಬಿಬಿಎಸ್ ವೈದ್ಯರು ಮತ್ತು 1,500 ತಜ್ಞ ವೈದ್ಯರ ನೇಮಕಾತಿ ಮಾಡಿಕೊಳ್ಳುವ ಸಂಬಂಧ ಪ್ರಸ್ತಾವನೆಯೊಂದನ್ನು ತಮ್ಮ ಇಲಾಖೆಯು ಹಣಕಾಸು ಇಲಾಖೆಯ ಅನುಮೋದನೆಗೆ ಕಳುಹಿಸಿಕೊಟ್ಟಿದೆ. ಒಂದೊಂದೇ ಪ್ರಕರಣಕ್ಕೆ ಅಥವಾ ದೈನಂದಿನ ಆಧಾರದ ಮೇಲೆ ಅಥವಾ ಆಪರೇಶನ್ ಕೇಸುಗಳಿಗೆ ಅಥವಾ ಒಳರೋಗಿ ಚಿಕಿತ್ಸೆಗಾಗಿ ವೈದ್ಯರ ನೇಮಕಾತಿಗೆ ಸರಕಾರ ಪ್ರಯತ್ನಿಸುತ್ತಿದೆ. ಆದರೆ ಅವರಾರೂ ಮುಂದೆ ಬರುತ್ತಿಲ್ಲ' ಎಂದು ಆರೋಗ್ಯ ಸಚಿವ ಖಾದರ್ ಅವರು ವಿಷಾದದ ದನಿಯಲ್ಲಿ ಹೇಳಿದ್ದಾರೆ.

ಇದಕ್ಕೆ ಖಾಸಗಿಯಾಗಿ ಪ್ರಾಕ್ಟೀಸ್ ಮಾಡುತ್ತಿರುವ ತಜ್ಞ ವೈದ್ಯರು ಹೇಳುವುದೇನೆಂದರೆ ಸರಕಾರಿ ಆಸ್ಪತ್ರೆಯಲ್ಲಿ ಒಂದು ಕೇಸಿಗೆ 100 ರೂ. ಕೊಡ್ತಾರಂತೆ. ಆದರೆ ಅದೇ ದಿನವಿಡೀ ನಾವು ಖಾಸಗಿ ಆಸ್ಪತ್ರೆಯಲ್ಲಿ ಪ್ರಾಕ್ಟೀಸ್ ಮಾಡಿದರೆ ಹತ್ತು ಪಟ್ಟು ಅಂದರೆ 1,000 ರೂ ಸಿಗುತ್ತದೆ ಅನ್ನುತ್ತಾರೆ.

ಏನೇ ಆಗಲಿ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ತಜ್ಞ ವೈದ್ಯರ ಅಗತ್ಯ ತುರ್ತಾಗಿ ಬೇಕಿದೆ. ಹಾಗಾಗಿ ಎಷ್ಟೇ ಹೆಚ್ಚಾದರೂ ಹಣ ಕೊಡಲು ನಾವು ರೆಡಿಯಾಗಿದ್ದೇವೆ. ದಯವಿಟ್ಟು ರೋಗಿಗಳ ಸೇವೆಗೆ ಬನ್ನಿ ಎಂದು ಸಚಿವ ಖಾದರ್ ಕೋರಿದ್ದಾರೆ. ಸಚಿವ ಖಾದರ್ ಅವರಿಗೆ ಶುಭವಾಗಲಿ!

ರಾಜ್ಯದಲ್ಲಿರುವ ಸರಕಾರಿ ಆಸ್ಪತ್ರೆಗಳ ಸಂಖ್ಯೆ ಹೀಗಿದೆ:
* ಜಿಲ್ಲಾಸ್ಪತ್ರೆಗಳು: 30
* ತಾಲೂಕು ಆಸ್ಪತ್ರೆ: 146
* ಸಮುದಾಯ ಆರೋಗ್ಯ ಕೇಂದ್ರಗಳು: 206
* ಪ್ರಾಥಮಿಕ ಆರೋಗ್ಯ ಕೇಂದ್ರಗಳು 2,353

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+