Property Good News: ಆಸ್ತಿದಾರರಿಗೆ ಬಿಗ್‌ ಗುಡ್‌ನ್ಯೂಸ್‌ ಕೊಟ್ಟ ಸರ್ಕಾರ: ಬಿ ಖಾತಾಗಳಿಗೆ ಮತ್ತೊಂದು ಬಂಪರ್!

ಬೆಂಗಳೂರಿನ ಆಸ್ತಿದಾರರಿಗೆ ರಾಜ್ಯ ಕಾಂಗ್ರೆಸ್‌ ಸರ್ಕಾರವು ಮತ್ತೊಂದು ಗುಡ್‌ನ್ಯೂಸ್‌ ಕೊಟ್ಟಿದೆ. ಆಸ್ತಿದಾರರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಈಗಾಗಲೇ ಹಲವು ಗುಡ್‌ನ್ಯೂಸ್‌ಗಳನ್ನು ಕೊಟ್ಟಿದೆ. ಇದೀಗ ಆಸ್ತಿದಾರರಿಗೆ ನಕ್ಷೆ ಮಂಜೂರಾತಿ ವಿಚಾರದಲ್ಲಿ ಬಿಗ್‌ಗುಡ್‌ನ್ಯೂಸ್‌ ಕೊಟ್ಟಿದೆ. ಈ ವಿಷಯದ ಬಗ್ಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ಆಸ್ತಿದಾರರಿಗೆ ಸಂಬಂಧಿಸಿದಂತೆ ಸರ್ಕಾರ ಕೊಟ್ಟ ಹೊಸ ಅಪ್ಡೇಟ್ಸ್‌ ಏನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಇಷ್ಟು ದಿನ ಬೆಂಗಳೂರಿನಲ್ಲಿ ಭೂ ಪರಿವರ್ತನೆ ಹಾಗೂ ರೆವಿನ್ಯೂ ಸ್ವತ್ತುಗಳಿಗೂ ನಕ್ಷೆ ಮಂಜೂರಾತಿ ಸೇರಿದಂತೆ ಕೆಲವೊಂದು ಪ್ರಮುಖ ಸೇವೆಗಳು ಬಿಡಿಎಯಲ್ಲಿ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಸಿಗುತ್ತಿತ್ತು. ಆದರೆ ಇದೀಗ ಆ ಸೇವೆಗಳನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡುವುದಕ್ಕೆ ರಾಜ್ಯ ಸರ್ಕಾರವು ಮುಂದಾಗಿದೆ. ಇದರಿಂದ ಬಿಬಿಎಂಪಿ - ಬಿಡಿಎ ಎಂದು ಎರಡು ಕಚೇರಿಗಳಿಗೆ ಅಲೆದಾಡುವುದು ಇನ್ಮುಂದೆ ತಪ್ಪಲಿದೆ. ಈಗಾಗಲೇ ಆಸ್ತಿಗೆ ಸಂಬಂಧಿಸಿದಂತೆ ಮಹತ್ವದ ಸೇವೆಗಳು ಬಿಬಿಎಂಪಿಯಲ್ಲಿ ಸಿಗುತ್ತಿವೆ. ಇದೀಗ ಬಿಡಿಎ ವ್ಯಾಪ್ತಿಯಲ್ಲಿದ್ದ ಕೆಲವೊಂದು ಸೇವೆಗಳನ್ನು ಬಿಬಿಎಂಪಿಗೆ ಹಸ್ತಾಂತರಿಸುತ್ತಿರುವುದು ಆಸ್ತಿದಾರರಿಗೆ ಅನುಕೂಲವಾಗಲಿದೆ. ಅಲ್ಲದೇ ರೆವಿನ್ಯೂ ಸ್ವತ್ತು ಇರುವ ಆಸ್ತಿ ಮಾಲೀಕರಿಗೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ.

Karnataka Government Given Big Good News to Property Owners Another Bumper for B Khatas

ಇನ್ನು ಈ ಮೊದಲು ಬಿಡಿಎಗೆ ಇದ್ದ ರೆವಿನ್ಯೂ ಸ್ವತ್ತುಗಳ ಭೂ ಪರಿವರ್ತನೆಯ ಅಧಿಕಾರವನ್ನು ಸರ್ಕಾರವು ಬಿಬಿಎಂಪಿಯ ನಗರ ಯೊಜನೆ ವಿಭಾಗಕ್ಕೆ ಹಸ್ತಾಂತರಿಸಿದೆ. ಪರಿವರ್ತನೆ ಮತ್ತು ಸುಧಾರಣಾ ಶುಲ್ಕ ತೆಗೆದುಕೊಂಡು ನಕ್ಷೆ ಮಂಜೂರಾತಿ ನೀಡುವುದಕ್ಕೆ ಅವಕಾಶ ಇರಲಿದೆ.

ಬಿ ಖಾತಾಗಳಿಗೆ ಬಂಪರ್: ಸರ್ಕಾರವು ಏಕ ನಿವೇಶನ ಕಟ್ಟಡ ವಿನ್ಯಾಸ ನಕ್ಷೆ ಮಂಜೂರಾತಿಗೆ ಸಂಬಂಧಿಸಿ ಸಹ ಕೆಲವೊಂದು ಬದಲಾವಣೆ ಮಾಡಿದೆ. ರಾಜ್ಯ ಸರ್ಕಾರವು ಅನಧಿಕೃತ ಹಾಗೂ ರೆವಿನ್ಯೂ ಆಸ್ತಿಗಳಿಗೆ ಬಿ ಖಾತಾ ನೀಡುವುದಕ್ಕೆ ನಿರ್ಧರಿಸಿದೆ. ಆದರೆ ಕೆಲವೊಂದು ಆಸ್ತಿಗಳಿಗೆ / ಬಿ ಖಾತಾಗಳಿಗೆ ಕಟ್ಟಡ ಮಂಜೂರಾತಿ ನಕ್ಷೆ ಕಷ್ಟವಾಗುತ್ತಿತ್ತು. ಇದೀಗ ರೆವಿನ್ಯೂ ಜಾಗದ ಮಾಲೀಕರಿಗೆ ಬಂಪರ್ ಕೊಟ್ಟಿದೆ. ಈ ಹೊಸ ಬದಲಾವಣೆಯು ಬಿ ಖಾತಾ ಆಸ್ತಿದಾರರಿಗೆ ಲಾಭವಾಗಲಿದೆ ಎಂದು ಹೇಳಲಾಗಿದೆ.

Take a Poll

ಸರ್ವೇ ವಿಧಾನ ಬದಲಾವಣೆ: ಇನ್ನು ರಾಜ್ಯದಲ್ಲಿ ಆಸ್ತಿಗಳಿಗೆ ಸಂಬಂಧಿಸಿದಂತೆ ಸರ್ವೇ ಮಾಡುವ ವಿಧಾನವು ಹಲವು ವರ್ಷಗಳಿಂದ ಬದಲಾಗಿಲ್ಲ ಇದೀಗ ಹೊಸ ಮಾದರಿಯ ಟೆಕ್ನಾಲಜಿ ಬಂದಿದ್ದು. ಅದಕ್ಕೆ ತಕ್ಕಂತೆ ಬದಲಾಗಬೇಕಿದೆ. ರಾಜ್ಯದಲ್ಲಿ ಆಸ್ತಿ ಸರ್ವೇ ವಿಚಾರದಲ್ಲೂ ಕೆಲವೊಂದು ನಿರ್ದಿಷ್ಟ ಬದಲಾವಣೆಗಳು ಆಗಬೇಕಿವೆ. ಹೀಗಾಗಿ ಈ ನಿಟ್ಟಿನಲ್ಲಿ ಸರ್ಕಾರವು ಸಿದ್ಧತೆ ಪ್ರಾರಂಭಿಸಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದ್ದಾರೆ.

ಇದಕ್ಕಾಗಿ 5,000 ಸಾವಿರ ರೋವರ್‌ಗಳ ಖದೀರಿಗೆ ಟೆಂಡರ್ ಆಗಿದೆ. ಹಂತ ಹಂತವಾಗಿದೆ ಖರೀದಿ ಮಾಡುವುದಕ್ಕೆ ಹೇಳಲಾಗಿದೆ ಎಂದಿದ್ದಾರೆ. ಡಿಜಿಟಲೀಕರಣ ಮಾಡುವುದರಿಂದಾಗಿ ನೌಕರರಿಗೆ ಹೊರೆ ಕಡಿಮೆಯಾಗಲಿದೆ. ಕಂದಾಯ ಇಲಾಖೆಯಲ್ಲಿ ಎಲ್ಲಾ ಪ್ರಕ್ರಿಯೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+