• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪ್ರವಾಹ ಪರಿಸ್ಥಿತಿ: ಯಡಿಯೂರಪ್ಪ ಸರ್ಕಾರಕ್ಕೆ ಎಎಪಿ ನೀಡಿದ ಸಲಹೆಗಳು

|
   Karnataka Flood : ಪ್ರವಾಹ ಪರಿಸ್ಥಿತಿ ಹಿನ್ನೆಲೆ ಬಿ ಎಸ್ ಯಡಿಯೂರಪ್ಪ ಸರ್ಕಾರಕ್ಕೆ ಎಎಪಿ ಸಲಹೆಗಳು

   ಕರ್ನಾಟಕ ರಾಜ್ಯವು ಅಧಿಕಾರಕ್ಕಾಗಿ ಹಾತೊರೆಯುವ ಮೂರು ಪಕ್ಷಗಳ ಆಟದ ಮೈದಾನದಂತಾಗಿರುವುದು ವಿಪರ್ಯಾಸ. ಅಧಿಕಾರಕ್ಕಾಗಿ ಎಂಥಹ ನೀಚ ಕೆಲಸವನ್ನೂ ಮಾಡಲು ಸಿದ್ಧರಿರುವ ಈ ಪಕ್ಷಗಳಿಗೆ ಕರ್ನಾಟಕದ ಅಭಿವೃದ್ಧಿಗೆ ಸರಿಯಾದ ಯಾವುದೇ ಯೋಜನೆಯೂ ಇಲ್ಲ. ತಮ್ಮ ಪಕ್ಷದ ಪ್ರಣಾಳಿಕೆಯು ಕೂಡ ಚುನಾವಣಾ ಸಂದರ್ಭದ ಕರಪತ್ರದಂತಿದ್ದು, ಚುನಾವಣಾ ಪೂರ್ವ ಆಶ್ವಾಸನೆಗಳೆಲ್ಲವೂ ಆ ಕರಪತ್ರಗಳ ಜೊತೆಗೆ ಮೂಲೆ ಸೇರಿವೆ.

   ಚುನಾಯಿತರಾಗಿರುವ ಜನಪ್ರತಿನಿಧಿಗಳಿಗೆ ಅಧಿಕಾರ ಉಳಿಸಿಕೊಳ್ಳುವ ಮತ್ತು ಅಧಿಕಾರ ಅನುಭವಿಸುವುದರಲ್ಲಿರುವ ಉತ್ಸಾಹ, ಜನರ ಸಮಸ್ಯೆಗಳನ್ನು ಪರಿಹರಿಸುವ ಬಗೆಗೆ ಕವಡೆ ಕಾಸಿನಷ್ಟೂ ಇಲ್ಲ. ರಾಜ್ಯದಲ್ಲಿ 156 ತಾಲ್ಲೂಕುಗಳು ಬರ ಪೀಡಿತ ಪಟ್ಟಿಯಲ್ಲಿದ್ದು, ನಿರುದ್ಯೋಗದಂತಹ ದಾರುಣ ಸಮಸ್ಯೆಗಳಿಂದ ಕಂಗಾಲಾಗಿರುವ ಕರ್ನಾಟಕದ ಜನರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಮಳೆಯಿಂದಾಗುತ್ತಿರುವ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಾಗಿ ಜನರು ಮತ್ತಷ್ಟು ಸಂಕಷ್ಟಗಳಿಗೆ ಸಿಲುಕಿಕೊಂಡಿದ್ದಾರೆ.

   ಕರ್ನಾಟಕ ಪ್ರವಾಹ: ಸಂತ್ರಸ್ತರಿಗೆ ನೆರವು ನೀಡುವುದು ಹೇಗೆ? ಕರ್ನಾಟಕ ಪ್ರವಾಹ: ಸಂತ್ರಸ್ತರಿಗೆ ನೆರವು ನೀಡುವುದು ಹೇಗೆ?

   ಕಳೆದ ವರ್ಷ ಕೊಡಗಿನಲ್ಲಿ ಪ್ರವಾಹವಾಗಿ ಸಾವಿರಾರು ಜನರು ನಿರಾಶ್ರಿತರಾಗಿ ಬೀದಿಪಾಲಾಗಿದ್ದಂತಹ ಚಿಂತಾಜನಕ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಾರಿಯೂ ಪ್ರವಾಹದಿಂದಾಗಿ ಬೆಳಗಾವಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ ಜಿಲ್ಲೆಗಳಲ್ಲಿ ಕೆರೆ, ನದಿ, ಹಳ್ಳಿ, ನಗರಗಳೆಲ್ಲವೂ ಮುಳುಗಿಹೋಗಿವೆ. ಈಗಾಗಲೇ ರಾಜ್ಯದಲ್ಲಿ 57 ಸೇತುವೆಗಳು ಪ್ರವಾಹದಲ್ಲಿ ಮುಳುಗಿದ್ದು, ಇಬ್ಬರು ಸಾವನ್ನಪಿರುವ ಹೃದಯವಿದ್ರಾಯಕ ಘಟನೆ ನಡೆದಿದೆ.

   ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನೆರೆ ಸಂತ್ರಸ್ತರ ನೆರವಿಗಾಗಿ ಈಗಾಗಲೇ ಕೆಲಸಮಾಡುತ್ತಿದ್ದು, ರಾಜ್ಯ ಸರ್ಕಾರಕ್ಕೆ ನೆರವು ನೀಡಲು ಸಿದ್ಧರಿದ್ದಾರೆ. ಸರ್ಕಾರವು ಎಎಪಿ ಕಾರ್ಯಕರ್ತರನ್ನೂ ಹಾಗೂ ಪ್ರವಾಹಕ್ಕೊಳಗಾದವರಿಗೆ ನೆರವು ನೀಡುತ್ತಿರುವ ಹಲವು ಸಂಘಟನೆಗಳನ್ನು ಸಂಪರ್ಕಿಸಿ ಸಹಾಯ ಪಡೆದುಕೊಳ್ಳಬೇಕು ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ಘಟಕದ ಮೋಹನ್ ದಾಸರಿ ಹೇಳಿದ್ದಾರೆ.

   ಕಾವೇರಿ ಕೊಳ್ಳದ 4 ಜಲಾಶಯಗಳಲ್ಲಿ ಎಷ್ಟು ನೀರಿದೆ? ಕಾವೇರಿ ಕೊಳ್ಳದ 4 ಜಲಾಶಯಗಳಲ್ಲಿ ಎಷ್ಟು ನೀರಿದೆ?

   ಬೆಂಗಳೂರಿನ ನೀರಿನ ಬೇಡಿಕೆಯನ್ನು ಪೂರೈಸಲು ರಾಜ್ಯದ ಹಲವು ನದಿಗಳಿಂದ ನೀರು ತರುವ ಅಪ್ರಾಯೋಗಿಕ, ಅವೈಜ್ಞಾನಿಕ ಯೋಜನೆಗಳನ್ನು ಮಾಡುತ್ತಿರುವ ರಾಜ್ಯ ಸರ್ಕಾರಕ್ಕೆ ಪೋಲಾಗುವ ನೀರನ್ನು ಸಂಗ್ರಹಿಸುವ, ಪ್ರವಾಹದ ಭೀತಿಯನ್ನು ನಿಯಂತ್ರಿಸುವ ಯಾವುದೇ ಯೋಜನೆಗಳೂ ಇಲ್ಲ.

   ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್ ಘೋಷಣೆ

   ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್ ಘೋಷಣೆ

   ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗಿನಲ್ಲಿಯೂ ಧಾರಾಕಾರ ಮಳೆಯಾಗುತ್ತಿದ್ದು ಶಿರಾಡಿ ಘಾಟ್, ಆಗುಂಬೆ ಘಾಟ್, ಚಾರ್ಮಡಿ ಘಾಟಿನ ರಸ್ತೆಗಳು ಮುಚ್ಚಿಹೋಗಿದ್ದು, ನೂರಾರು ರಸ್ತೆಗಳು ಸಂಪರ್ಕ ಕಳೆದುಕೊಂಡು ಈ ಜಿಲ್ಲೆಗಳು ಕರ್ನಾಟಕದ ಇತರೆ ಭಾಗಗಳಿಂದ ಸಂಪರ್ಕವನ್ನೇ ಕಳೆದುಕೊಂಡಿವೆ. ಈ ಜಿಲ್ಲೆಗಳಲ್ಲಿ ಇನ್ನೂ ಐದು ದಿನಗಳ ಕಾಲ ವಿಪರೀತ ಮಳೆಯಾಗುವ ಸಂಭವವಿದೆ ಎಂದು ರಾಜ್ಯ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ. ಈ ಅತಿವೃಷ್ಟಿಯಿಂದಾಗಿ ಜನರು ತಮ್ಮ ಆಸ್ತಿ-ಪಾಸ್ತಿ, ಬೆಳೆಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇಂತಹ ಪ್ರವಾಹದ ಸಂದರ್ಭದಲ್ಲಿ ನೆರವು ನೀಡಲು ಕರ್ನಾಟಕ ಸರ್ಕಾರವು ಎಮರ್ಜೆನ್ಸಿ ಆಕ್ಷನ್ ಫೋರ್ಸ್ ಕೂಡ ರಚಿಸಿಕೊಂಡಿಲ್ಲ.

   ಬಾಯಾರಿಕೆಯಾದಾಗ ಬಾವಿ ತೋಡುವ ರೀತಿ ಬಿಡಿ

   ಬಾಯಾರಿಕೆಯಾದಾಗ ಬಾವಿ ತೋಡುವ ರೀತಿ ಬಿಡಿ

   ಪದೇ ಪದೇ ಪಶ್ಚಿಮ ಘಟ್ಟಗಳಲ್ಲಿ ಪ್ರವಾಹದ ಭೀತಿ ಉದ್ಭವವಾಗುತ್ತಲೇ ಇದೆ. ಪ್ರವಾಹ ಸಂಭವಿಸಿದಾಗ ಪ್ರವಾಹಕ್ಕೆ ಸಿಲುಕಿದ ಜನರನ್ನು ಹೊರತರುವುದು, ಅವರಿಗೆ ಗಂಜಿ ಕೇಂದ್ರಗಳನ್ನು ಮಾಡಿ ಆಹಾರ ಒದಗಿಸುವುದೇ ದೊಡ್ಡ ಸಾಧನೆಯೆಂಬಂತೆ ಬೊಬ್ಬೆಹೊಡೆಯುವ ಸರ್ಕಾರದ ನೀತಿಗಳು ಬಾಯಾರಿಕೆಯಾದಾಗ ಬಾವಿ ತೋಡುವ ರೀತಿಯಲ್ಲಿವೆ. ಕಳೆದ 15 ದಿನಗಳಿಂದ ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಕೃಷ್ಣಾ ನದಿಯು ಕರ್ನಾಟಕದ ಮುಖಾಂತರವೇ ಹರಿದು ಹೋಗುವುದರಿಂದ ಈ ಅಪಾಯವನ್ನು ಮುಂಚೆಯೇ ಅರಿತು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದ್ದರೆ, ಇಂದಿನ ಅನಾಹುತಗಳನ್ನು ನಿಯಂತ್ರಿಸಬಹುದಿತ್ತು. ಆದರೆ ನೈಸರ್ಗಿಕ ವಿಕೋಪಗಳಿಂದಾಗುವ ಅನಾಹುತಗಳನ್ನು ನಿಯಂತ್ರಿಸಲು ಮುನ್ನೆಚ್ಚರಿಕೆಯ ಯೋಜನೆಯನ್ನು ರೂಪಿಸಲು ಯಾವ ತಯಾರಿಯನ್ನೂ ರಾಜ್ಯ ಸರ್ಕಾರ ಮಾಡದೆ, ಅಧಿಕಾರದ ಮೋಜಿನಲ್ಲಿ ಕಾಲ ಕಳೆಯುತ್ತಿದೆ.

   ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿ

   ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿ

   ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ವಾರವೇ ಕಳೆದರೂ ಸಚಿವ ಸಂಪುಟ ರಚನೆಯಾಗದೇ, ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರೂ ಇಲ್ಲದೆ, ಪ್ರವಾಹಕ್ಕೆ ಸಿಲುಕಿರುವ ಜನರ ಗೋಳನ್ನು ಕೇಳುವವರಿಲ್ಲದಂತಾಗಿದೆ. ಎಂಎಲ್ಎಗಳು ತಾವೇನೂ ಮಾಡಲಾಗದ ಅಸಹಾಯಕರೆಂಬಂತೆ ಕಣ್ಣು-ಬಾಯಿ ಮುಚ್ಚಿ ಕುಳಿತಿದ್ದಾರೆ. ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯನಂತೆ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರವಾಹಕ್ಕೆ ಸಿಲುಕಿರುವವರ ನೆರವಿಗೆ ಕ್ರಮಗಳನ್ನು ಕೈಗೊಳ್ಳದೆ, ಕೇಂದ್ರ ಸರ್ಕಾರದ ನೆರವನ್ನೂ ಕೇಳದೆ ತನಗೂ ಪ್ರವಾಹಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ದೆಹಲಿಗೂ ಬೆಂಗಳೂರಿಗೂ ಹಾರಾಡುತ್ತಾ ಅಧಿಕಾರದ ಮೋಜು-ಮಸ್ತಿ ಮಾಡುತ್ತಿದ್ದಾರೆ.

   ದೆಹಲಿಯ ಆಪ್ ಸರ್ಕಾರ ಉತ್ತಮ ಯೋಜನೆ

   ದೆಹಲಿಯ ಆಪ್ ಸರ್ಕಾರ ಉತ್ತಮ ಯೋಜನೆ

   ಅದಲ್ಲದೆ, ಯಮುನಾ ನದಿಯ ಪ್ರವಾಹದಿಂದ ಬರುವ ನೀರನ್ನು ಸಂಗ್ರಹಿಸಲು ದೆಹಲಿಯ ಪಲ್ಲಾ ಮತ್ತು ವಾಜಿರಾಬಾದ್ ನಡುವೆ ಜಲಾಶಯವನ್ನು ನಿರ್ಮಿಸುವ ಶಾಶ್ವತ ಯೋಜನೆಯನ್ನು ರೂಪಿಸಿದ್ದು, ದೆಹಲಿಯಲ್ಲಿರುವ ಮನೆಗಳ ಮೇಲೆ ಮಳೆ ನೀರು ಸಂಗ್ರಹಕ್ಕಾಗಿ ದೊಡ್ಡ ದೊಡ್ಡ ಟ್ಯಾಂಕ್‌ಗಳನ್ನೂ ಕಟ್ಟುವ ಕ್ರಿಯಾತ್ಮಕ ಯೋಜನೆಯನ್ನೂ ಆರಂಭಿಸಿದೆ.

   ಈ ಯೋಜನೆಯಿಂದಾಗಿ ಪ್ರವಾಹವನ್ನು ನಿಯಂತ್ರಿಸಿ, ನೀರನ್ನು ಶೇಖರಿಸುವುದರಿಂದ ಹಾಗೂ ಭೂಮಿಯಲ್ಲಿ ಇಂಗುವಂತೆ ಮಾಡುವುದರಿಂದ ಇಂದಿನ ನೀರಿನ ಸಮಸ್ಯೆಯನ್ನು ಬಗೆಹರಿಸಲು ಸಹಾಯವಾಗುತ್ತದೆ ಮತ್ತು ಭವಿಷ್ಯದಲ್ಲೂ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇಲ್ಲ. ಇದು ಸರ್ಕಾರಗಳು ಕಾರ್ಯನಿರ್ವಹಿಸಬೇಕಾದ ರೀತಿ.

   ಎಮರ್ಜೆನ್ಸಿ ಕಾಲ್ ಸೆಂಟರ್‌ ಹೆಚ್ಚಾಗಲಿ

   ಎಮರ್ಜೆನ್ಸಿ ಕಾಲ್ ಸೆಂಟರ್‌ ಹೆಚ್ಚಾಗಲಿ

   * ಯಡಿಯೂರಪ್ಪನವರು ತಮ್ಮ ಅಧಿಕಾರ ಅಭದ್ರತೆಯ ವಿಚಾರವನ್ನು ಬದಿಗಿಟ್ಟು, ಮೆಳೆಯ ಅಬ್ಬರಕ್ಕೆ ತುತ್ತಾಗಿರುವ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಕೂಡಲೇ ನೇಮಿಸಿ, ಸಂತ್ರಸ್ತರ ನೆರವಿಗೆ ಮುಂದಾಗಬೇಕು.
   * ಪ್ರವಾಹ ಸಂಭವಿಸಿರುವ ಜಿಲ್ಲೆಗಳಲ್ಲಿ ಎಮರ್ಜೆನ್ಸಿ ಕಾಲ್ ಸೆಂಟರ್‌ಗಳನ್ನ ಸ್ಥಾಪಿಸಬೇಕು.
   * ಪ್ರವಾಹಕ್ಕೆ ತುತ್ತಾಗಿರುವ ಪ್ರದೇಶದ ಜನರಿಗೆ ಸಾಂಕ್ರಮಿಕ ರೋಗಗಳು ಹರಡದಂತೆ ಪ್ಯಾರಾ ಮೆಡಿಕಲ್ ತಂಡವನ್ನ ನೇಮಿಸಬೇಕು.
   * ಮುಂದಿನ ದಿನಗಳಲ್ಲಾದರೂ ಪ್ರವಾಹದಿಂದ ವ್ಯರ್ಥವಾಗುವ ನೀರನ್ನು ಸಂಗ್ರಹಿಸಲು ಯೋಜನೆಗಳನ್ನು ರೂಪಿಸಬೇಕು.
   * ಪ್ರವಾಹಕ್ಕೆ ಸಿಲುಕಿದವರ ರಕ್ಷಣೆಗಾಗಿ ಎಮರ್ಜನ್ಸಿ ಆಕ್ಷನ್ ಫೋರ್ಸ್ ಮತ್ತು ನೆರೆ ಪರಿಹಾರ ತಂಡವನ್ನು ರಚಿಸಬೇಕು.
   * ನದಿ ತೀರದ ಜಮೀನುಗಳಲ್ಲಿ ದೊಡ್ಡ ದೊಡ್ಡ ಬದುಗಳನ್ನು ನಿರ್ಮಿಸಿ, ನೀರು ಇಂಗುವಂತೆ ಮಾಡಬೇಕು. ನೀರು ಭೂಮಿಯಲ್ಲಿ ಇಳಿದು ಭೂಮಿ ವ್ಯವಸಾಯಕ್ಕೆ ಪೂರಕವಾಗಿ ಸಿದ್ದವಾಗುವವರೆಗೆ ರೈತರ ಭೂಮಿಗೆ ಪರಿಹಾರ ನೀಡಬೇಕು.

   English summary
   Karnataka Floods: AAP Karnataka give suggestions to Karnataka government on floods and natural calamity control and
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X