ಶಿಕಾರಿಪುರದ ಹೆಣ್ಣುಬಾಕನ ಸಿಡಿ ಹಾಲಪ್ಪಗೆ ಸಿಕ್ಕಿರಬೇಕು ಎಂದ ಬೇಳೂರು
Recommended Video

ಬೆಂಗಳೂರು, ಏಪ್ರಿಲ್ 19: ಶಿಕಾರಿಪುರದಲ್ಲಿ ಒಬ್ಬ ಹೆಣ್ಣುಬಾಕ ಇದ್ದಾನೆ ಅವನ ಸಿಡಿ ಹಾಲಪ್ಪಗೆ ಸಿಕ್ಕಿರಬೇಕು, ಅದನ್ನೇ ತೋರಿಸಿ ಹೆದರಿಸಿ ಬಿಎಸ್‌ವೈ ನಿಂದ ಟಿಕೆಟ್ ಗಿಟ್ಟಿಸಿದ್ದಾನೆ ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಜೆಪಿಯಿಂದ ಬಂದವರಿಗೆಲ್ಲಾ ಟಿಕೆಟ್ ನೀಡಲಾಗಿದೆ, ನಾನು ಬಿಜೆಪಿಗೆ ನಿಷ್ಠನಾಗಿದ್ದು ಕೆಜೆಪಿಗೆ ಹಾರದೇ ಇದ್ದದ್ದಕ್ಕೆ ಈಗ ಶಿಕ್ಷೆ ನೀಡಲಾಗುತ್ತಿದೆ, ನಮ್ಮ ಕಾರ್ಯಕರ್ತರ ಶಾಪ ಯಡಿಯೂರಪ್ಪಗೆ ತಟ್ಟದೆ ಇರದು ಎಂದರು.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಯಡಿಯೂರಪ್ಪ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ ಅವರು, ಶಿಕಾರಿಪುರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಲಿಂಗಾಯತ ಅಭ್ಯರ್ಥಿಯನ್ನು ಕಣಕ್ಕಿಳಿಸದಂತೆ ನೋಡಿಕೊಂಡಿದ್ದಾರೆ ಎಂದರು.

'ನನಗೆ ಜೆಡಿಎಸ್‌ನಿಂದ ಬುಲಾವ್ ಬಂದಿದೆ ಆದರೆ ನಾನು ಹೋಗುವುದಿಲ್ಲ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ನನ್ನ ಬಲವನ್ನು ಯಡಿಯೂರಪ್ಪಗೆ ಸಾಬೀತು ಮಾಡುತ್ತೇನೆ, ಹಾಲಪ್ಪನನ್ನು ಸೋಲಿಸುವುದೇ ನನ್ನ ಗುರಿ' ಎಂದರು. ಜೆಡಿಎಸ್ ಪಕ್ಷವು ಬಾಹ್ಯವಾಗಿ ಅಥವಾ ಆಂತರಿಕವಾಗಿ ನನಗೆ ಬೆಂಬಲ ನೀಡಿದರೆ ನಾನು ಬೇಡವೆನ್ನುವುದಿಲ್ಲ ಎಂದರು.
ಬೇಳೂರು ಗೋಪಾಲಕೃಷ್ಣ ಅವರು ಸಾಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಬದಲಾಗಿ ಹಾಲಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ. ಹಾಲಪ್ಪ ಅವರು ಯಡಿಯೂರಪ್ಪ ಅವರು ಕೆಜೆಪಿ ಮಾಡಿದಾಗ ಅವರೊಂದಿಗೆ ಸೇರಿಕೊಂಡಿದ್ದರು, ಬೇಳೂರು ಗೋಪಾಲಕೃಷ್ಣ ಬಿಜೆಪಿಯಲ್ಲಿಯೇ ಉಳಿದಿದ್ದರು.












Click it and Unblock the Notifications