Get Updates
Get notified of breaking news, exclusive insights, and must-see stories!

K.H.Muniyappa Profile: ದೇವನಹಳ್ಳಿ ಅಖಾಡದಲ್ಲಿ ಜೆಡಿಎಸ್‌ಗೆ ಠಕ್ಕರ್‌ ಕೊಡಲು ಕೆ.ಎಚ್‌.ಮುನಿಯಪ್ಪ ಸಜ್ಜು

ದೇವನಹಳ್ಳಿ, ಮಾರ್ಚ್‌, 31: ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದ್ದು, ಕಾಂಗ್ರೆಸ್‌, ಜೆಡಿಎಸ್‌, ಎಎಪಿ ಪಕ್ಷಗಳಿಂದ ಅಭ್ಯರ್ಥಿಗಳ ಮೊದಲನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದೇ ರೀತಿಯಲ್ಲಿ ಈ ಬಾರಿ ದೇವನಹಳ್ಳಿಯಿಂದ ಕಾಂಗ್ರೆಸ್‌ ಟಿಕೆಟ್‌ ಅನ್ನು ಕೆ.ಎಚ್‌.ಮುನಿಯಪ್ಪನವರಿಗೆ ಘೋಷಣೆ ಮಾಡಲಾಗಿದೆ. ಹಾಗಾದರೆ ಇವರ ಪರಿಚಯವನ್ನು ಇಲ್ಲಿ ತಿಳಿಯಿರಿ.

ವೆಂಕಟಸ್ವಾಮಿಯವರು 2013 ಮತ್ತು 2018ರಲ್ಲಿ ಕಾಂಗ್ರೆಸ್‌ನಿಂದ ದೇವನಹಳ್ಳಿಯಲ್ಲಿ ಸ್ಪರ್ಧಿಸಿ ಎರಡು ಬಾರಿಯೂ ಸೋಲು ಕಂಡಿದ್ದಾರೆ. ಆದ್ದರಿಂದ ಎಚ್ಚೆತ್ತ ಕಾಂಗ್ರೆಸ್‌ ಇದೀಗ ದೇವನಹಳ್ಳಿ ಕ್ಷೇತ್ರದ ಅಖಾಡಕ್ಕೆ ಕೆ.ಎಚ್‌.ಮುನಿಯಪ್ಪಯವರನ್ನು ಇಳಿಸಿದ್ದು, ಈ ಮೂಲಕವಾದರೂ ಮುಂದಿನ ಬಾರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆಯಾ ಎಂದು ಕಾದುನೋಡಬೇಕಿದೆ.

Karnataka Election 2023: Devanahalli Assembly Constituency candidate K.H.Muniyappa Profile

ಕೆ.ಎಚ್‌.ಮುನಿಯಪ್ಪನವರ ರಾಜಕೀಯದ ಹಾದಿ

ಕರ್ನಾಟಕ ರಾಜಕೀಯ ರಂಗದ ಅತ್ಯಂತ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿರುವ ಕೆ.ಎಚ್‌.ಮುನಿಯಪ್ಪನವರು ಸುದೀರ್ಘ ರಾಜಕೀಯ ಜೀವನದ ಅನುಭವವನ್ನು ಹೊಂದಿದ್ದಾರೆ. 1960ರಲ್ಲಿ ತಮ್ಮ ರಾಜಕೀಯ ಜೀವನಕ್ಕೆ ಮುನ್ನುಡಿ ಬರೆದ ಅವರು ಇಲ್ಲಿಯವರೆಗೂ ಸಕ್ರಿಯ ರಾಜಕಾರಣದಲ್ಲಿ ಮುಂದುವರೆದಿದ್ದಾರೆ. ಇತ್ತೀಚೆಗಷ್ಟೇ ಕಾಂಗ್ರೆಸ್‌ ಟಿಕೆಟ್‌ ಘೋಷಣೆ ಮಾಡಿದ್ದು, ಕೆ.ಎಚ್‌.ಮುನಿಯಪ್ಪನವರು ದೇವನಹಳ್ಳಿ ಕ್ಷೇತ್ರದ ಅಖಾಡದಲ್ಲಿ ಗೆಲವು ಸಾಧಿಸಲು ತುದಿಗಾಲಲ್ಲಿ ನಿಂತಿದ್ದಾರೆ.

ಕೆ.ಎಚ್. ಮುನಿಯಪ್ಪನವರು ಕೋಲಾರ ಜಿಲ್ಲೆಯ ಕಂಬದಹಳ್ಳಿಯಲ್ಲಿ ಮಾರ್ಚ್‌ 07, 1948ರಲ್ಲಿ ಜನಿಸಿದ್ದು, ಇದೀಗ ಇವರಿಗೆ 75 ವರ್ಷ ವಯಸ್ಸಾಗಿದೆ. ಇವರು ಮೊದಲು ವಕೀಲ ವೃತ್ತಿಯನ್ನು ಮಾಡಿದ್ದು, ಸಾಮಾಜಿಕ ಕಾರ್ಯಕರ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ತಂದೆ ಹನುಮಪ್ಪ, ತಾಯಿ ಶ್ರೀಮತಿ ವೆಂಕಟಮ್ಮ ಆಗಿದ್ದು, ಸದ್ಯ ಇವರು ದಿವಂಗತರಾಗಿದ್ದಾರೆ. ಇನ್ನು ನಾಗರತ್ನಮ್ಮನವವರು ಹೆಂಡತಿ ಆಗಿದ್ದು, ಇವರಿಗೆ ಒಬ್ಬ ಮಗ ಹಾಗೂ 4 ಪುತ್ರಿಯರಿದ್ದಾರೆ.

Karnataka Election 2023: Devanahalli Assembly Constituency candidate K.H.Muniyappa Profile

ಕೋಲಾರ ಕ್ಷೇತ್ರದಲ್ಲಿ ಏಳು ಬಾರಿ ಗೆಲುವು

ಕೆ.ಎಚ್‌.ಮನಿಯಪ್ಪನವರು ಕೋಲಾರ ಕ್ಷೇತ್ರದಿಂದ ಸತತ ಏಳು ಬಾರಿ ವಿಜಯ ಸಾಧಿಸುವ ಮೂಲಕ ದಾಖಲೆ ಮಾಡಿದ್ದಾರೆ. ಇದೀಗ ಕಾಂಗ್ರೆಸ್‌ ಪಕ್ಷವು ಇವರಿಗೆ ದೇವನಹಳ್ಳಿ ಕ್ಷೇತ್ರದಿಂದ ಟಿಕೆಟ್ ನೀಡಿದೆ. 1991 ರಿಂದ ಕೋಲಾರ ಲೋಕಸಭಾ ಕ್ಷೇತ್ರದ ಮೇಲೆ ಪ್ರಬಲ ಹಿಡಿತ ಸಾಧಿಸಿರುವ ಮುನಿಯಪ್ಪ ಅಂದಿನಿಂದ ಇಲ್ಲಿಯವರೆಗೆ ಸತತವಾಗಿ ಏಳು ಬಾರಿ ಸಂಸದರಾಗಿ ಆಯ್ಕೆ ಆಗಿದ್ದಾರೆ. ಕೇಂದ್ರದ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆ ರಾಜ್ಯ ದರ್ಜೆ ಸಚಿವರಾಗಿಯೂ ನಿಭಾಯಿಸಿದ್ದಾರೆ. 2009 ಮೇ 28ರಂದು ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ ಅವರಿಂದ ಪ್ರಮಾಣ ವಚನ ಸ್ವೀಕರಿಸಿ ಕೇಂದ್ರ ಸಂಪುಟದ ಸಚಿವರಾಗಿ ಹೊರಹೊಮ್ಮಿದ್ದರು.

ಮತ್ತೊಮ್ಮೆ ಚುನಾವಣಾ ಸಮರಕ್ಕೆ ಸಜ್ಜಾಗಿರುವ ದೇವನಹಳ್ಳಿ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದಾಗಿದೆ. 2018, ಕಳೆದ ಚುನಾವಣೆಯಲ್ಲಿ ಇಲ್ಲಿ ಜನತಾ ದಳ (ಜಾತ್ಯತೀತ) ಪಕ್ಷದ ಅಭ್ಯರ್ಥಿ ಎಲ್.ಎನ್. ನಾರಾಯಣಸ್ವಾಮಿ ಜಯಗಳಿಸಿದ್ದರು. ಇವರ ವಿರುದ್ದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ವೆಂಕಟಸ್ವಾಮಿ 17,010 ಮತಗಳ ಅಂತರದಿಂದ ಸೋಲನುಭವಿಸಿದ್ದರು. ಇದೀಗ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕೆ.ಎಚ್‌.ಮುನಿಯಪ್ಪ ಅವರನ್ನು ಕಣಕ್ಕಿಳಿಸಲಾಗಿದೆ.

ಇನ್ನು ಜೆಡಿಎಸ್‌ನಿಂದ ಗೆಲವು ಸಾಧಿಸಿದ್ದ ಪಿಳ್ಳಮುನಿಶಾಮಪ್ಪ ಸದ್ಯ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. 2018ರಲ್ಲಿ ಟಿಕೆಟ್ ವಂಚಿತ ಪಿಳ್ಳಮುನಿಶ್ಯಾಮಪ್ಪ ಮತ್ತು ಅವರ ಬೆಂಬಲಿಗರು ಜೆಡಿಎಸ್ ವರಿಷ್ಠರ ಈ ನಡೆಯಿಂದ ಮುನಿಸಿಕೊಂಡಿದ್ದರು. ಬಳಿಕ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಮತ್ತೊಂದೆಡೆ ಜೆಡಿಎಸ್‌ನಿಂದ ಈ ಬಾರಿಯೂ ಕೂಡ ನಿಸರ್ಗ ನಾರಾಯಣ ಸ್ವಾಮಿ ಅವರಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ. ಮತ್ತೊಂದೆಡೆ ಕಾಂಗ್ರೆಸ್‌ನಿಂದ ಕೆ.ಎಚ್‌. ಮುನಿಯಪ್ಪಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ.

ದೇವನಹಳ್ಳಿ ಮತದಾರರ ವಿವರ

ಕ್ಷೇತ್ರದಲ್ಲಿ ಮೊದಲಿನಿಂದಲೂ ಕೂಡ ಜೆಡಿಎಸ್‌, ಕಾಂಗ್ರೆಸ್‌ ನಡುವೆ ನೇರ ಪೈಪೋಟಿ ಇದ್ದು, ಈ ಭಾರಿ ನಿಸರ್ಗ ನಾರಾಯಣ ಸ್ವಾಮಿ ಮತ್ತು ಕೆ.ಎಚ್‌. ಮುನಿಯಪ್ಪನವರು ನಡುವೆ ಕಾಳಗ ಏರ್ಪಡಲಿದೆ. ಹಾಗೆಯೇ ವನಹಳ್ಳಿ ಕ್ಷೇತ್ರದಲ್ಲಿ ಒಟ್ಟು 20,6029 ಮತದಾರರಿದ್ದಾರೆ. ಇದರಲ್ಲಿ ಎಸ್‌ಸಿ, ಎಸ್‌ಟಿ 74,662, ಒಕ್ಕಲಿಗ 45,723, ಕುರುಬರು 16,231 ಮತದಾರರಿದ್ದಾರೆ. 8723 ಜನ ಮುಸ್ಲಿಂ ಮತದಾರಿದ್ದರೆ, ಲಿಂಗಾಯತ 7233, ವಿಶ್ವಕರ್ಮ ಸಮುದಾಯದವರು 2,621 ಜನ ಮತದಾರರು ಇದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+