ರಮ್ಯಾ ವಿರುದ್ಧ ನಿಮ್ಹಾನ್ಸ್ ಎದುರು ಪ್ರತಿಭಟನೆ ಇಲ್ಲ: ಬಿಜೆಪಿ
ಮಾಜಿ ಸಂಸದೆ, ಚಿತ್ರನಟಿ ರಮ್ಯಾ ವಿರುದ್ಧ ವಿನೂತನ ರೀತಿಯಲ್ಲಿ ನಿಮ್ಹಾನ್ಸ್ ಎದುರು ಪ್ರತಿಭಟನೆ ಮಾಡುವುದಾಗಿ ತಿಳಿಸಿದ್ದ ರಾಜ್ಯ ಬಿಜೆಪಿ ಘಟಕ ಯೂ ಟರ್ನ್ ಹೊಡೆದಿದ್ದು, ಸೂಕ್ತ ಕಾರಣ ನೀಡದೆ ನಿರ್ಧಾರವನ್ನು ಕೈಬಿಟ್ಟಿದೆ.
ಬೆಂಗಳೂರು, ನವೆಂಬರ್, 29: ಮಾಜಿ ಕಾಂಗ್ರೆಸ್ ಸಂಸದೆ, ಚಿತ್ರನಟಿ ರಮ್ಯಾ ಅವರ ವಿರುದ್ಧ ಬುಧವಾರ ನಿಮ್ಹಾನ್ಸ್ ಎದುರು ಪ್ರತಿಭಟನೆ ಮಾಡುವುದಾಗಿ ಘೋಷಿಸಿದ್ದ ಬಿಜೆಪಿ ತನ್ನ ನಿರ್ಧಾರವನ್ನು ಬದಲಿಸಿಕೊಂಡಿದೆ.
ಪ್ರತಿಷ್ಠಿತ ಮನೋರೋಗ ಚಿಕಿತ್ಸಾ ಕೇಂದ್ರವಾದ ಬೆಂಗಳೂರಿನ ನಿಮ್ಹನ್ಸ್ ಎದರು ರಮ್ಯಾ ಅವರ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡುವುದಾಗಿ ಬಿಜೆಪಿ ಮುಖಂಡರು ತಿಳಿಸಿದ್ದರು. ಆದರೆ ಈಗ ಯಾವುದೇ ಸೂಕ್ತ ಕಾರಣ ನೀಡದೆ ಪ್ರತಿಭಟನೆ ನಿರ್ಧಾರವನ್ನು ಹಿಂಪಡೆದಿರುವಾಗಿ ತಿಳಿಸಿದ್ದಾರೆ.

ಬಿಜೆಪಿ ಪಕ್ಷ ಮತ್ತು ಮುಖಂಡರ ವಿರುದ್ಧ ತಲೆಬುಡವಿಲ್ಲದಂತೆ ರಮ್ಯಾ ಅವರು ಆರೋಪ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ನೋಟು ನಿಷೇಧದ ಕುರಿತು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಬಿಜೆಪಿ ಮುಖಂಡರು ಪ್ರತಿಭಟನೆ ಮಾಡಲು ನಿರ್ಧರಿದ್ದರು.
ಇತ್ತೀಚೆಗಷ್ಟೇ ನೋಟು ನಿಷೇಧ ಕುರಿತು ಹೇಳಿಕೆ ನೀಡಿದ್ದ ರಮ್ಯಾ ಅವರು "ನೋಟು ನಿಷೇಧ ಕುರಿತು ಬಿಜೆಪಿ ನಾಯಕರಿಗೆ ಮೊದಲೇ ಗೊತ್ತಿತ್ತು ಎಂದು ಆರೋಪಿಸಿದ್ದರು. ಅವರ ಈ ಹೇಳಿಕೆ ಖಂಡಿಸಿ ಪ್ರತಿಭಟನೆ ಮಾಡಲು ನಿರ್ಧರಿಸಿರುವುದಾಗಿ ರಾಜ್ಯ ಬಿಜೆಪಿ ಘಟಕ ತಿಳಿಸಿತ್ತು.












Click it and Unblock the Notifications