ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳಾ ಉದ್ಯೋಗಿಗಳೂ ಸೈನಿಕರಂತೆ: ರಾಹುಲ್ ಗಾಂಧಿ

|
Google Oneindia Kannada News

ಬೆಂಗಳೂರು, ಮೇ 9: ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಯುಕ್ತ ಪ್ರಚಾರಕ್ಕಾಗಿ ಬೀಡುಬಿಟ್ಟಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಬುಧವಾರ ಗಾರ್ಮೆಂಟ್ ಕಾರ್ಖಾನೆಯೊಂದಕ್ಕೆ ತೆರಳಿ ಅಲ್ಲಿನ ಮಹಿಳಾ ಉದ್ಯೋಗಿಗಳ ಜತೆ ಸಂವಾದ ನಡೆಸಿದರು. ಬಳಿಕ ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ನಂತರ ಚಿಕ್ಕಪೇಟೆ ಹಾಗೂ ಗಾಂಧಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದರು.

ಹೊಸೂರು ರಸ್ತೆಯ ಕೃಷ್ಣನಗರ ಕೈಗಾರಿಕಾ ಪ್ರದೇಶದಲ್ಲಿರುವ ಕ್ರಿಯೇಟಿವ್ ಗಾರ್ಮೆಂಟ್ಸ್ ಕಂಪೆನಿಗೆ ಭೇಟಿ ನೀಡಿದ ರಾಹುಲ್ ಗಾಂಧಿ, ಅಲ್ಲಿನ ಮಹಿಳಾ ಕೆಲಸಗಾರರ ಜತೆ ಹರಟಿದರು. ಅಲ್ಲಿ ತಯಾರಿಸಲಾಗುವ ವಿವಿಧ ಬಗೆಯ ಬಟ್ಟೆಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಬಟ್ಟೆಯ ಕಚ್ಚಾವಸ್ತುಗಳನ್ನು ಎಲ್ಲಿಂದ ತರಿಸಿಕೊಳ್ಳಲಾಗುತ್ತಿದೆ, ಯಾವ ತಂತ್ರಜ್ಞಾನದಿಂದ ಬಟ್ಟೆಗಳನ್ನು ಹೊಲಿಯಲಾಗುತ್ತದೆ ಮುಂತಾದವುಗಳನ್ನು ಕೇಳಿ ತಿಳಿದುಕೊಂಡರು.

ಮೋದಿ ಬರುವ ಮುಂಚೆ ಅಭಿವೃದ್ಧಿಯೇ ಆಗಿರಲಿಲ್ಲವಾ : ರಾಹುಲ್ ಪ್ರಶ್ನೆಮೋದಿ ಬರುವ ಮುಂಚೆ ಅಭಿವೃದ್ಧಿಯೇ ಆಗಿರಲಿಲ್ಲವಾ : ರಾಹುಲ್ ಪ್ರಶ್ನೆ

ಮಹಿಳಾ ಉದ್ಯೋಗಿಗಳ ಜತೆ ಸಂವಾದ ಆರಂಭವಾದಾಗ ಅವರು ಸಂತಸ ವ್ಯಕ್ತಪಡಿಸಿದರು. ಇದೇ ಮೊದಲ ಬಾರಿಗೆ ಇಷ್ಟೊಂದು ಮಹಿಳೆಯರ ಜೊತೆ ಸಂವಾದ ನಡೆಸುತ್ತಿದ್ದೇನೆ. ಇದು ಖುಷಿ ನೀಡುತ್ತಿದೆ ಎಂದು ಹೇಳಿದರು.

ಸೈನಿಕರಿಗೆ ಹೋಲಿಸಿದ ರಾಹುಲ್

ಸೈನಿಕರಿಗೆ ಹೋಲಿಸಿದ ರಾಹುಲ್

ಮಹಿಳಾ ಉದ್ಯೋಗಿಗಳ ಜತೆ ಸಂವಾದ ನಡೆಸಿದ ರಾಹುಲ್ ಗಾಂಧಿ, ಅವರನ್ನು ದೇಶದ ಗಡಿ ರಕ್ಷಣೆ ಮಾಡುವ ಸೈನಿಕರಿಗೆ ಹೋಲಿಸಿದರು.

ನೀವು ಮಾಡುತ್ತಿವುದು ತುಂಬಾ ಕಷ್ಟ ಹಾಗೂ ಶ್ರಮದ ಕೆಲಸ. ಇದು ನಿಮಗೋಸ್ಕರ ಮಾಡಿಕೊಳ್ಳುತ್ತಿರುವ ಕೆಲಸವಲ್ಲ. ಇಡೀ ದೇಶದ ಬೆಳವಣಿಗೆಗಾಗಿ ದುಡಿಯುತ್ತಿದ್ದೀರಿ. ನಿಮ್ಮ ಬಗ್ಗೆ ಹೆಮ್ಮೆ ಇದೆ. ಗಡಿಯಲ್ಲಿ ಸೈನಿಕರಂತೆಯೇ ನೀವೂ ಕೆಲಸ ಮಾಡುತ್ತಿದ್ದೀರಿ. ದೇಶದ ಆರ್ಥಿಕತೆಯನ್ನು ವೃದ್ಧಿಸಿದ್ದೀರಿ ಎಂದರು.

ಪ್ರಧಾನಿ ಹುದ್ದೆಗೇರಲು ನಾನು ಸಿದ್ಧ ಎಂದ ರಾಹುಲ್ ಗಾಂಧಿಪ್ರಧಾನಿ ಹುದ್ದೆಗೇರಲು ನಾನು ಸಿದ್ಧ ಎಂದ ರಾಹುಲ್ ಗಾಂಧಿ

ಸಾಲಮನ್ನಾ ಯಾಕಿಲ್ಲ?

ಸಾಲಮನ್ನಾ ಯಾಕಿಲ್ಲ?

ಕೇಂದ್ರ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಲು ಆಸಕ್ತಿ ವಹಿಸುತ್ತಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಕರ್ನಾಟಕದ ರೈತರ ಸಾಲಮನ್ನಾ ಮಾಡಿ ಎಂದರೆ ನಿರ್ಲಕ್ಷಿಸುವ ಕೇಂದ್ರ ಸರ್ಕಾರ ಉದ್ಯಮಿಗಳ ಮೇಲೆ ಮಾತ್ರ ಅತಿಯಾದ ಪ್ರೀತಿ ತೋರಿಸುತ್ತದೆ. ಕೇಂದ್ರವು 15 ಉದ್ಯಮಿಗಳ 2 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದೆ. ಆದರೆ, ರೈತರು ಹಾಗೂ ಸಣ್ಣ ಉದ್ದಿಮೆದಾರರ ಸಾಲಗಳನ್ನು ಮನ್ನಾ ಮಾಡಿಲ್ಲ. ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುವ ಸರ್ಕಾರ ಉದ್ಯಮಿಗಳ ಸಾಲಮನ್ನಾಕ್ಕೆ ಆತುರ ತೋರುತ್ತಿರುವುದು ಏಕೆ ಎಂದು ಅವರು ಪ್ರಶ್ನಿಸಿದರು. ಸಣ್ಣ ಉದ್ದಿಮೆದಾರರಿಗೆ ಮತ್ತು ರೈತರಿಗೆ ಸುಲಭವಾಗಿ ಸಾಲ ಸಿಗಬೇಕು ಎಂದರು.

ಬೇಡಿಕೆಗಳನ್ನಿಟ್ಟ ಮಹಿಳಾ ನೌಕರರು

ಬೇಡಿಕೆಗಳನ್ನಿಟ್ಟ ಮಹಿಳಾ ನೌಕರರು

ಇದೇ ಸಂದರ್ಭದಲ್ಲಿ ಮಹಿಳಾ ಉದ್ಯೋಗಿಗಳು ತಮ್ಮ ಆರ್ಥಿಕ ಸಬಲತೆ ಮತ್ತು ಸಾಮಾಜಿಕ ಪ್ರಗತಿಗಾಗಿ ಅನುಕೂಲವಾಗುವಂತೆ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ರಾಹುಲ್ ಗಾಂಧಿ ಅವರಿಗೆ ಮನವಿ ಸಲ್ಲಿಸಿದರು.

ಪಿಎಫ್ ಮೊತ್ತವನ್ನು ಗಣನೀಯ ರೀತಿಯಲ್ಲಿ ಹೆಚ್ಚಿಸಬೇಕು. ಗಾರ್ಮೆಂಟ್ಸ್ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಿಸಬೇಕು. ಗರಿಷ್ಠ ಕೆಲಸದ ಅವಧಿಯನ್ನ ಸರ್ಕಾರವೇ ನಿಗದಿ ಪಡಿಸಬೇಕು, ಅತಿ ಅವಶ್ಯಕ ರಜೆಗಳ ಸಂಬಳವನ್ನು ಕಂಪೆನಿಗಳು ನೀಡಬೇಕು (ಉದಾಹರಣೆಗೆ: ಗರ್ಭಿಣಿಯರಿಗೆ), ಗಾರ್ಮೆಂಟ್ಸ್ ಕೆಲಸಗಾರರ ಮಕ್ಕಳಿಗೆ ಶಾಲಾ ಕಾಲೇಜುಗಳಲ್ಲಿ ಅಧಿಕ ವಿನಾಯಿತಿ ನೀಡಬೇಕು, ಕಂಪೆನಿಗಳು ಗಾರ್ಮೆಂಟ್ಸ್ ನೌಕರರ ಆರೋಗ್ಯದ ಬಗ್ಗೆ ಗಮನಹರಿಸುವಂತಾಗಬೇಕು ಎಂದು ಬೇಡಿಕೆ ಸಲ್ಲಿಸಿದರು.

ಉಚಿತ ಪಾಸ್ ಕೊಡಿಸಿ

ಉಚಿತ ಪಾಸ್ ಕೊಡಿಸಿ

ಸ್ವಲ್ಪ ಹೊತ್ತು ಮಾತನಾಡಿದ ಬಳಿಕ ಗಾರ್ಮೆಂಟ್ ಉದ್ಯೋಗಿಗಳೊಂದಿಗೆ ಸಂವಾದ ನಡೆಸಿದರು. ನಮಗೆ 6 ರಿಂದ 8 ಸಾವಿರ ವೇತನ ಸಿಗುತ್ತೆ. ಅದರಲ್ಲಿ 2 ಸಾವಿರ ರೂಪಾಯಿ ಬಸ್‌ಪಾಸ್‌ಗೆ ಖರ್ಚಾಗುತ್ತದೆ. ಇದರಿಂದ ಜೀವನ ನಡೆಸುವುದು ಕಷ್ಟವಾಗುತ್ತಿದೆ. ಉಚಿತ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ನೌಕರರು ಮನವಿ ಮಾಡಿದರು.

ಆರ್‌ಟಿಇ ಅಡಿ ಎಲ್ಲ ಮಕ್ಕಳಿಗೂ ಸೀಟು ಸಿಗುತ್ತಿಲ್ಲ. ಈಗ ನಿಗದಿ ಮಾಡಿರುವ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಹೆಚ್ಚು ಡೊನೇಷನ್ ನೀಡಲು ನಮ್ಮಿಂದ ಸಾಧ್ಯವಿಲ್ಲ ಎಂದು ಅಹವಾಲು ತೋಡಿಕೊಂಡರು. ಇದಕ್ಕೆ ರಾಹುಲ್ ಗಾಂಧಿ ಕೇಂದ್ರ ಮತ್ತು ರಾಜ್ಯದಲ್ಲಿ ತಮ್ಮದೇ ಸರ್ಕಾರ ಬಂದ ಬಳಿಕ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

ಎಂಟಿಆರ್‌ನಲ್ಲಿ ಊಟ

ಎಂಟಿಆರ್‌ನಲ್ಲಿ ಊಟ

ಬಸವನಗುಡಿಯಲ್ಲಿರುವ ದೊಡ್ಡಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ ಅಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಕಾಟನ್‌ಪೇಟೆಯಲ್ಲಿರುವ ಹಜರತ್ ತವಕ್ಕಲ್ ಮಸ್ತಾನ್‌ ದರ್ಗಾಕ್ಕೆ ಭೇಟಿ ನೀಡಿದರು. ಚಿಕ್ಕಪೇಟೆ ಹಾಗೂ ಗಾಂಧಿನಗರದಲ್ಲಿ ರೋಡ್‌ಶೋ ನಡೆಸಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ನಂತರ ರಸೆಲ್ ಮಾರ್ಕೆಟ್‌ನಲ್ಲಿ ಬಹಿರಂಗ ಸಭೆಯಲ್ಲಿ ಭಾಗವಹಿಸಿದರು.
ಲಾಲ್ ಬಾಗ್ ರಸ್ತೆಯಲ್ಲಿರುವ ಎಂಟಿಆರ್‌ಗೆ ಭೇಟಿಕೊಟ್ಟ ರಾಹುಲ್ ಗಾಂಧಿ, ಅಲ್ಲಿ ಭೋಜನ ಸವಿದರು.

English summary
karnataka assembly elections 2018: Congress president Rahul Gandhi visited and intercated with women employee of a garment factory near Hosur road in Bengaluru on wednesday ಮಹಿಳಾ ಉದ್ಯೋಗಿಗಳೂ ಸೈನಿಕರಂತೆ: ರಾಹುಲ್ ಗಾಂಧಿ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X