• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸುಂದರ, ಸುಲಲಿತ, ಸುರಕ್ಷಿತ ಬೆಂಗಳೂರು: ಬಿಜೆಪಿ ಪ್ರಾಮಿಸ್!

By Nayana
|

ಬೆಂಗಳೂರು, ಮೇ4: ವಿಶ್ವದರ್ಜೆಯ ನಗರವನ್ನಾಗಿ ಬೆಂಗಳೂರು ಅಭಿವೃದ್ಧಿ, ಮೂಲಸೌಕರ್ಯ ಮೇಲ್ದರ್ಜೆಗೆ ಹೆಚ್ಚಿಸುವುದು, ಬೆಂಗಳೂರು ಸಂಪರ್ಕಿಸುವ ಹೆದ್ದಾರಿಗಳ ಅಭಿವೃದ್ಧಿ, ಸ್ಟಾರ್ಟಪ್ ಸ್ನೇಹಿ ಪರಿಸರ ಹೀಗೆ ಬೆಂಗಳೂರಿನ ಸಮಗ್ರ ಅಭಿವೃದ್ಧಿಯ ಕನಸನ್ನು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಬಿತ್ತಿದೆ.

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಶುಕ್ರವಾರ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಬೆಂಗಳೂರನ್ನು ವಿಶ್ವದರ್ಜೆ ನಗರವನ್ನಾಗಿಸಲು ನಗರಕ್ಕೆ ಅತ್ಯಾಧುನಿ ಮೂಲಸೌಕರ್ಯ, ಗುಣಮಟ್ಟದ ಜೀವನ ಹಾಗೂ ನಾಗರಿಕರ ಆಶೋತ್ತರಗಳನ್ನು ಈಡೇರಿಸಲು ನಾನಾ ಅವಕಾಶಗಳನ್ನು ಸೃಷ್ಟಿಸಲಾಗುವುದು. ಕರ್ನಾಟಕ ಹಾಗೂ ದೇಶದ ಜನರಿಗಷ್ಟೇ ಅಲ್ಲ ವಿಶ್ವದ ಜನರಿಗೆ ಹೆಮ್ಮೆಯ ನಗರವಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ.

ಕರ್ನಾಟಕ ಚುನಾವಣೆ: ಬಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ

ಅಂತಾರಾಷ್ಟ್ರೀಯ ಗುಣಮಟ್ಟಕ್ಕನುಗುಣವಾಗಿ ಬಿಎಂಟಿಸಿ, ಬಿಎಂಆರ್‌ಸಿಎಲ್ ಮತ್ತು ಉಪನಗರ ರೈಲು ಸಂಪರ್ಕಕ್ಕಾಗಿ ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸಿಟಿ ಅಥಾರಿಟಿ ಸ್ಥಾಪಿಸಲಾಗುತ್ತದೆ. ಗಂಭೀರ ಅವಲೋಕನ ಬಳಿಕ ಕೆಲವು ರಸ್ತೆಗಳನ್ನು ಪಾದಚಾರಿಗಳಿಗಾ ಮಾತ್ರ ಎಂದು ಗುರತಿಸುವುದು ಸೇರಿದಂತೆ ಸಾಕಷ್ಟು ಭರವಸೆಗಳನ್ನು ಬಿಜೆಪಿ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ನೀಡಿದೆ.

'ನಮ್ಮ ಕರ್ನಾಟಕಕ್ಕೆ ನಮ್ಮ ವಚನ': ಬಿಜೆಪಿ ಪ್ರಣಾಳಿಕೆ ಮುಖ್ಯಾಂಶ

ಮೆಟ್ರೋ ರೈಲು ಜಾಲ ವಿಸ್ತರಣೆ

ಮೆಟ್ರೋ ರೈಲು ಜಾಲ ವಿಸ್ತರಣೆ

ಸಾಧ್ಯಾಸಾಧ್ಯತೆ ವರದಿ ನಂತರ ನಂತರ ಮೆಟ್ರೋ ಹಸಿರು ಮಾರ್ಗವನ್ನು ಒಂದು ಭಾಗದಲ್ಲಿ ಬಿಐಇಸಿ ಮೂಲಕ ನೆಲಮಂಗಲ ಬಸ್ ನಿಲ್ದಾಣದವರೆಗೆ ಹಾಗೂ ಇನ್ನೊಂದು ಭಾಗದಲ್ಲಿ ಅಂಜನಪುರ ಮೂಲಕ ಕನಕಪುರ ಬಸ್ ನಿಲ್ದಾಣದವರೆಗೆ ವಿಸ್ತರಣೆ ಮಾಡಲಾಗುವುದು.

ಸಾಧ್ಯಾಸಾಧ್ಯತೆ ವರದಿ ನಂತರ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರವರೆಗಿನ ಮಾರ್ಗವನ್ನು ಅತ್ತಿಬೆಲೆವರೆಗೆ ವಿಸ್ತರಣೆ ಮಾಡಲಾಗುವುದು.

ವಿಮಾನ ನಿಲ್ದಾಣದವರೆಗಿನ ಮೆಟ್ರೊ ಸಂಪರ್ಕವನ್ನು ತ್ವರಿತ ಗತಿಯ ಸಾಧ್ಯಾಸಾಧ್ಯತೆ ವರದಿ ನಂತರ ಕೋರಮಂಗಲದ ಮೂಲಕ ಬಿಟಿಎಂ ಲೇಔಟ್‌ನಿಂದ ಇಂದಿರಾನಗರಕ್ಕೆ, ವರ್ತೂರು ಮೂಲಕ ಬೊಮ್ಮಸಂದ್ರದಿಂದ ಕಾಡುಗೋಡಿಗೆ ಮತ್ತು ಬೈರಮಂಗಲ ಹಾಗೂ

ಇನ್ನೋವೇಟಿವ್ ಫಿಲ್ಮ್ ಸಿಟಿ ಮೂಲಕ ಹಾರೋಹಳ್ಳಿಯಿಂದ ಬಿಡದಿ ಟರ್ಮಿನಸ್‍ವರೆಗೆ ಸಂಪರ್ಕ ಮಾರ್ಗಗಳ ನಿರ್ಮಾಣ. ಮೈಸೂರು ರಸ್ತೆ, ಸುಮನಹಳ್ಳಿ, ಯಶವಂತಪುರ, ನಾಗವಾರ, ಕೆ.ಆರ್‍ಪುರಂ ಹಾಗೂ ಸೆಂಟ್ರಲ್ ಸಿಲ್ಕ್ ಬೋರ್ಡ್ ಮಾರ್ಗವಾಗಿ ಪುಟ್ಟೇನಹಳ್ಳಿ ಕ್ರಾಸ್‌ನಿಂದ ಆರಂಭಿಸಿ ಆರ್‌ವಿ ರಸ್ತೆವರೆಗೆ ಹೊರ ವರ್ತುಲ ಮಾರ್ಗ ನಿರ್ಮಾಣ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ

ಹೆಮ್ಮೆಯ ಬೆಂಗಳೂರು ನಿರ್ಮಾಣಕ್ಕೆ ಬಿಜೆಪಿ ಪಣ

ಹೆಮ್ಮೆಯ ಬೆಂಗಳೂರು ನಿರ್ಮಾಣಕ್ಕೆ ಬಿಜೆಪಿ ಪಣ

ಬೆಂಗಳೂರಿನ ಅಗತ್ಯಗಳನ್ನು ಪೂರೈಸಲು 'ನವ ಬೆಂಗಳೂರು ಕಾಯಿದೆ'ಎಂಬ ಹೊಸ ಕಾನೂನು ಜಾರಿಗೊಳಿಸಲಾಗುವುದು. ಮನೆಗಳ ಬೆಲೆ ಕಡಿಮೆ ಮಾಡಲು, ಉತ್ತಮ ನಗರ ಯೋಜನೆ ಮತ್ತು ವಸತಿ ಪ್ರದೇಶಗಳು ವಾಣಿಜ್ಯ ಚಟುವಟಿಕೆ ಪ್ರದೇಶಗಳಾಗಿ ಬದಲಾಗುವುದನ್ನು ತಡೆಗಟ್ಟಲು ಜಪಾನಿನ ಝೋನಿಂಗ್ ಮಾದರಿಯಲ್ಲಿ ಅಂತರ್ಗತ ವಲಯ ಪ್ರಕ್ರಿಯೆಯನ್ನುಕಾರ್ಯಗತಗೊಳಿಸಲಾಗುವುದು.

ಈ ಮಾದರಿಯಡಿಯಲ್ಲಿ ವಸತಿ ವಲಯಗಳನ್ನು ವಸತಿ ಚಟುವಟಿಕೆಗಳಿಗೆ ಮಾತ್ರ ಬಳಸುವುದು, ವಾಣಿಜ್ಯ ವಲಯಗಳನ್ನು ವಾಣಿಜ್ಯ ಮತ್ತು ವಸತಿ ಚಟುವಟಿಕೆಯಲ್ಲಿ ಮಾತ್ರ ಬಳಸುವುದು, ಸಣ್ಣ ಉದ್ಯಮ ವಲಯಗಳನ್ನು ಕೇವಲ ಸಣ್ಣ ಉದ್ಯಮ, ವಾಣಿಜ್ಯ ಮತ್ತು ವಸತಿ ಚಟುವಟಿಕೆಗಳಿಗೆ ಬಳಸುವುದು ಹಾಗೂ ಭಾರಿ ಉದ್ಯಮ ವಲಯದ ವಸತಿಯೂ ಸೇರಿದಂತೆ ಎಲ್ಲಾ ರೀತಿಯ ಆರ್ಥಿಕ ಚಟುವಟಿಕೆಗಳಿಗೆ ಬಳಸಲು ಅನುಮತಿ ನೀಡಲಾಗುವುದು.

ಬೆಂಗಳೂರು ವಿಮಾನ ನಿಲ್ದಾಣದ ಸುತ್ತ ಮುತ್ತಲ ಪ್ರದೇಶದ ಸದುಪಯೋಗ ಮಾಡಿಕೊಳ್ಳಲು ದೇವನಹಳ್ಳಿ ಐಟಿ ಸಿಟಿ ನಿರ್ಮಾಣ ಮಾಡಲಾಗುವುದು. ಐಐಎನ್‌ಸಿ ಬೆಂಗಳೂರು ಹಾಗೂ ಐಐಎಂ ಬೆಂಗಳೂರು, ಇವುಗಳ ಸಹಯೋಗದೊಂದಿಗೆ ` 200 ಕೋಟಿ ವೆಚ್ಚದಲ್ಲಿ ಕೆ-ಹಬ್ ಸ್ಥಾಪಿಸಲಾಗುವುದು. ಐಟಿ ಉದ್ಯಮ ಇತ್ತೀಚೆಗೆ ಎದುರಿಸಿದ ಸವಾಲುಗಳಿಗೆ ಸ್ಪಂದಿಸಲುಮತ್ತು ಪ್ರತಿಕ್ರಿಯಿಸಲು ಕರ್ನಾಟಕ ಐಸಿಟಿ ನೀತಿ, 2011ರ ಪರಿಷ್ಕರಣೆ ಮಾಡಲಾಗುವುದು.

17 ಸಾವಿರ ಕೋಟಿ ವೆಚ್ಚದಲ್ಲಿ ಉಪನಗರ ರೈಲ್ವೆ ಅಭಿವೃದ್ಧಿ

17 ಸಾವಿರ ಕೋಟಿ ವೆಚ್ಚದಲ್ಲಿ ಉಪನಗರ ರೈಲ್ವೆ ಅಭಿವೃದ್ಧಿ

ಕೇಂದ್ರ ಸರ್ಕಾರ ಘೋಷಿಸಿದ ` 17,000 ಕೋಟಿಗಳನ್ನು ಬಳಸಿ ಬೆಂಗಳೂರಿನ ಉಪನಗರ ರೈಲ್ವೆ ಜಾಲವನ್ನು ಪೂರ್ಣಗೊಳಿಸಲು ಬಿ-ರೈಡ್ (ಬೆಂಗಳೂರು ರೈಲ್ವೆ ಇನ್ಫ್ರಾಸ್ಟ್ರಕ್ಚರ್ ಡೆವಲ್‍ಮೆಂಟ್ ಕಾರ್ಪೊರೇಶನ್) ಸ್ಥಾಪಿಸಲಾಗುವುದು. ಸರಿಯಾದ ಯೋಜನೆ ರೂಪಿಸುವ ಮೂಲಕ ಇಂಟರ್ ಮೊಡಲ್ ಸಂಪರ್ಕ ಸುಗಮಗೊಳಿಸಿ ಏಕೀಕೃತ ಪ್ರಯಾಣಿಕರ ಕಾರ್ಡ್ ನೀಡಲಾಗುವುದು.

ಬಿಎಂಟಿಸಿ ಸಂಖ್ಯೆ ದ್ವಿಗುಣಗೊಳಿಸುವ ಭರವಸೆ

ಬಿಎಂಟಿಸಿ ಸಂಖ್ಯೆ ದ್ವಿಗುಣಗೊಳಿಸುವ ಭರವಸೆ

ಬಿಎಂಟಿಸಿ ಬಸ್ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗುತ್ತದೆ. ಕಿರಿದಾದ ರಸ್ತೆಗಳಲ್ಲಿ ಬಸ್ ಗಳಿಂದ ಉಂಟಾಗುವ ಸಂಚಾರ ದಟ್ಟಣೆಯನ್ನು ತಗ್ಗಿಸಲು ಬಿಎಂಟಿಸಿ ಮಿನಿ ಬಸ್ ಸೇವೆಯನ್ನು ಪ್ರಾರಂಭಿಸಲಾಗುತ್ತದೆ. ಸಮೂಹ ಸಾರಿಗೆಯನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ವಾಣಿಜ್ಯ ವಲಯದಲ್ಲಿ ಕಾರ್ಖಾನೆ ಹಾಗೂ ಕಚೇರಿಗಳಿಗೆ ಒಲ್ಲಂದ ಮಾಡಿಕೊಂಡು ಉದ್ಯೋಗಿಗಳಿಗೆ ವಿಶೇಷ ರಿಯಾಯಿತಿ ದರದಲ್ಲಿ ಪ್ರಾಕೇಜ್‌ಗಳನ್ನು ನೀಡಲಾಗುತ್ತದೆ.

ಪೊಲೀಸ್‌ ಠಾಣೆಗಳ ಸಂಖ್ಯೆ ದ್ವಿಗುಣ

ಪೊಲೀಸ್‌ ಠಾಣೆಗಳ ಸಂಖ್ಯೆ ದ್ವಿಗುಣ

ನಗರದಲ್ಲಿ ಪೊಲೀಸ್ ಠಾಣೆಗಳ ಸಂಖ್ಯೆಯನ್ನು ದ್ವಿಗುಣಗೊಳಿಸುತ್ತೇವೆ. ಬೆಂಗಳೂರನ್ನು ಸುರಕ್ಷಿತವಾಗಿಡಲು ಪೊಲೀಸ್ ಪಡೆಯಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ನಗರದ ಪೊಲೀಸ್ ಪಡೆಯಲ್ಲಿ 3 ಪಾಳಿಗಳ ವ್ಯವಸ್ಥೆ ಮರು ಸ್ಥಾಪನೆ ಬಗ್ಗೆ ಪರಿಶೀಲಿಸಲಾಗುವುದು. ಮಹಿಳಾ ಪೊಲೀಸ್ ಠಾಣೆಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು.

ಬೆಂಗಳೂರಿನಲ್ಲಿ ತೊಂದರೆಯಲ್ಲಿರುವ ಮಹಿಳೆಯರ ಕರೆಗೆ "ಕಿತ್ತೂರು ರಾಣಿ ಚೆನ್ನಮ್ಮ ಫ್ಲೈಯಿಂಗ್ ಸ್ಕ್ವಾಡ್ ೧ನಿಂದ ತಕ್ಷಣವೇ ಸ್ಪಂದಿಸುವ ವ್ಯವಸ್ಥೆ ಮಾಡಲಾಗುವುದು. ಬೆಂಗಳೂರಿನ ಉದ್ಯೋಗಸ್ಥ ಮಹಿಳೆಯರಿಗಾಗಿ ರಾತ್ರಿ 10 ರಿಂದ ಮುಂಜಾನೆ 5 ಗಂಟೆಯವರೆಗೆ ಕೇವಲ ಮಹಿಳೆಯರಿಗಾಗಿ ಇರುವ ಜಿಪಿಎಸ್ ಸೌಲಭ್ಯ ಹೊಂದಿದ ಬಸ್ ಸೇವೆಯನ್ನು ಒದಗಿಸಲಾಗುವುದು. ರಾತ್ರಿ 10 ರಿಂದ ಮುಂಜಾನೆ 5 ಗಂಟೆಯವರೆಗೆ ಸೇವೆ ಒದಗಿಸುವ ಮಹಿಳಾ ಆಟೋ ರಿಕ್ಷಾ ಮತ್ತು ಟ್ಯಾಕ್ಸಿಗಳಿಗೆ ಪ್ರೋತ್ಸಾಹ ಧನ ನೀಡುವ ಮೂಲಕ ಉತ್ತೇಜನ ನೀಡಲಾಗುವುದು.

ನಾಡಪ್ರಭು ಕೆಂಪೇಗೌಡ ನಿಧಿ ಸ್ಥಾಪನೆ

ನಾಡಪ್ರಭು ಕೆಂಪೇಗೌಡ ನಿಧಿ ಸ್ಥಾಪನೆ

ಬೆಂಗಳೂರಿನ ಕೆರೆಗಳನ್ನು ಸ್ವಚ್ಛಗೊಳಿಸಿ, ಪುನರುಜ್ಜೀವನಗೊಳಿಸಲು 2,500 ಕೋಟಿ ನಾಡಪ್ರಭು ಕೆಂಪೇಗೌಡ ನಿಧಿ ಸ್ಥಾಪಿಸಲಾಗುವುದು.ಅಮೃತ್ (ಅಟಲ್ ನಗರ ನವೀಕರಣ ಮತ್ತು ಪುನಶ್ಚೇತನ ಮಿಷನ್)ನಿಂದ ಶಿಫಾರಸು ಮಾಡಲಾದ ನಗರ ನೀರಿನ ಸರಬರಾಜಿಗೆ ಸಂಬಂಧಿಸಿದಂತೆ ಶಿಫಾರಸುಗಳ ತ್ವರಿತ ಅನುಷ್ಠಾನ. ವಿಶೇಷವಾಗಿ ನಗರದ ನೀರಿನ ಕೊಳವೆಗಳನ್ನು ನವೀಕರಿಸುವ ಕಾರ್ಯ ತ್ವರಿತಗೊಳಿಸಲಾಗುವುದು.

2022ರ ವೇಳೆಗೆ ಎಲ್ಲರಿಗೂ ಸೂರು ನೀಡುವ ಗುರಿ ಹೊಂದಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ)ಯನ್ನು ಬೆಂಗಳೂರಿನಲ್ಲಿ ಜಾರಿಗೆ ತರಲಾಗುವುದು. ಬೆಂಗಳೂರನ್ನು ಕಸ ಮುಕ್ತ (ಝೀರೋ ಗಾರ್ಬೇಜ್) ನಗರವನ್ನಾಗಿ ಮಾಡುವ ಭರವಸೆಯನ್ನು ನಾವು ನೀಡುತ್ತೇವೆ. ನಗರದ ತ್ಯಾಜ್ಯ ನೀರನ್ನು 100% ಪುನರ್ಬಳಕೆ ಸಾಧ್ಯವಾಗಿಸಲಿದ್ದೇವೆ. ನಗರದ ಸ್ವಚ್ಛತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ದಿಟ್ಟ ಕ್ರಮಗಳನ್ನು ಕೈಗೊಳ್ಳುವ ಮೂಲಕ ಬೆಂಗಳೂರನ್ನು ದೇಶದ ಅತಿಸ್ವಚ್ಛ ಮೆಟ್ರೊಪಾಲಿಟನ್ ಸಿಟಿಯನ್ನಾಗಿಸುತ್ತೇವೆ.

ಪ್ರತಿ ವಾರ್ಡ್‌ಗೆ ಕನಿಷ್ಠ 10 ಸಾರ್ವಜನಿಕ ಶೌಚಾಲಯಗಳಂತೆ ನಗರದೆಲ್ಲೆಡೆ 2,000 ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗುವುದು.

ಸಂಗೀತ ನೃತ್ಯ ಕೇಂದ್ರ ಸ್ಥಾಪನೆ

ಸಂಗೀತ ನೃತ್ಯ ಕೇಂದ್ರ ಸ್ಥಾಪನೆ

ನಗರದ 4 ಪ್ರಮುಖ ಸ್ಥಳಗಳಲ್ಲಿ ಸಂಗೀತ ಮತ್ತು ನೃತ್ಯ ಕೇಂದ್ರ ಸ್ಥಾಪಿಸಿ ಅಲ್ಲಿನ ಸಭಾಂಗಣವನ್ನು ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಪ್ರದರ್ಶನಗಳಿಗೆ ಹೆಚ್ಚಿನ ರಿಯಾಯಿತಿ ದರದಲ್ಲಿ ನೀಡಲಾಗುವುದು. ಕರ್ನಾಟಕ ಸಂಗೀತ ಮತ್ತು ಸಾಂಪ್ರದಾಯಿಕ ನೃತ್ಯ ಪ್ರಕಾರಗಳಾದ ಭರತನಾಟ್ಯ ಮತ್ತು ಯಕ್ಷಗಾನದಲ್ಲಿ ತರಬೇತಿ ನೀಡಲು ಈ ಸಂಗೀತ ಮತ್ತು ನೃತ್ಯ ಕೇಂದ್ರಗಳನ್ನು ಬಳಸಿಕೊಳ್ಳಲಾಗುವುದು. ಕಬ್ಬನ್‌ಪಾರ್ಕ್‌ನಲ್ಲಿರುವ ಶೇಷಾದ್ರಿ ಐಯ್ಯರ್ ಮೆಮೋರಿಯಲ್ ಲೈಬ್ರರಿಯಲ್ಲಿನ ಸೌಲಭ್ಯಗಳನ್ನು ನವೀಕರಿಸಿ ಗ್ರಂಥಾಲಯದಲ್ಲಿನ ಸಂಗ್ರಹವನ್ನು ನವೀಕರಿಸಲಾಗುವುದು ಮತ್ತು 10 ಕೋಟಿಗಳಲ್ಲಿ ಗ್ರಂಥಾಲಯದಲ್ಲಿನ ಸಂಗ್ರಹಗಳನ್ನು ಡಿಜಟಲೀಕರಣಗೊಳಿಸಿನವೀಕರಿಸಲಾಗುವುದು.

ನಗರದಾದ್ಯಂತ "ಫ್ರೀ ಆರ್ಟ್" ವಲಯಗಳನ್ನು ಸ್ಥಾಪಿಸಲಾಗುವುದು ಹಾಗೂ ಈ ಮೂಲಕ ಬೆಂಗಳೂರಿಗರು ನಗರವನ್ನು ಸುಂದರಗೊಳಿಸುವಂತೆ ಪ್ರೇರೇಪಿಸಲಾಗುವುದು. ಪ್ರತಿಯೊಂದು ವಾರ್ಡ್‌ನಲ್ಲಿ ಉದ್ಯಾನ ಸ್ಥಾಪಿಸಿ ಅಲ್ಲಿ ಬಯಲು ರಂಗಮಂದಿರಗಳನ್ನು ತೆರೆದು ಸಂಗೀತ, ನೃತ್ಯ ಮತ್ತು ನಾಟಕ ಪ್ರದರ್ಶನಗಳಿಗೆ ಅವಕಾಶ ಮಾಡಿಕೊಡಲಾಗುವುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru will be upgrade to world class city with development of infrastructure. Living status. sustainable industries. New era startups and citizens wishes. BJP has promises all these assurance in Manifesto which released on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more