ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬ್ಯಾಟರಾಯನಪುರ ಕ್ಷೇತ್ರ: ಗ್ರಾಮೀಣ-ನಗರ ಮತದಾರರ ಸಮ್ಮಿಲನ

By Manjunatha
|
Google Oneindia Kannada News

ಬೆಂಗಳೂರು, ಏಪ್ರಿಲ್ 20: ಬೆಂಗಳೂರು ಉತ್ತರ ತಾಲ್ಲೂಕಿಗೆ ಸೇರುವ ಬ್ಯಾಟರಾಯನಪುರ ಕ್ಷೇತ್ರ ಬೆಂಗಳೂರಿನ ದೊಡ್ಡ ಕ್ಷೇತ್ರಗಳಲ್ಲಿ ಒಂದು. ಈ ಬಾರಿಯ ಚುನಾವಣೆ ಬ್ಯಾಟಾರಾಯನಪುರ ಕ್ಷೇತ್ರದಲ್ಲಿ ನಡೆಯುತ್ತಿರುವ ಮೂರನೇ ಚುನಾವಣೆಯಷ್ಟೆ. ಈ ಕ್ಷೇತ್ರದಲ್ಲಿ ಮೊದಲ ವಿಧಾನಸಭೆ ಚುನಾವಣೆ ನಡೆದಿದ್ದು 2008ರಲ್ಲಿ.

ಇಲ್ಲಿ ಕೃಷ್ಣಭೈರೇಗೌಡ ಅವರು ಸತತ ಎರಡು ಬಾರಿ ಕಾಂಗ್ರೆಸ್‌ ಬಾರಿ ಆಯ್ಕೆಯಾಗಿದ್ದಾರೆ, 2008ರಲ್ಲಿ ಅವರು 9,352 ಮತಗಳ ಅಂತರದಿಂದ ಗೆದ್ದಿದ್ದರೆ 2013ರಲ್ಲಿ 32,400 ಮತಗಳ ಅಂತರದಿಂದ ಗೆದ್ದಿದ್ದಾರೆ.

ಸರ್ವಜ್ಞನಗರ ಕ್ಷೇತ್ರ ಪರಿಚಯ: ಜಾರ್ಜ್ ಹ್ಯಾಟ್ರಿಕ್ ಕನಸಿಗೆ ಬೀಳುತ್ತಾ ಕಡಿವಾಣ?ಸರ್ವಜ್ಞನಗರ ಕ್ಷೇತ್ರ ಪರಿಚಯ: ಜಾರ್ಜ್ ಹ್ಯಾಟ್ರಿಕ್ ಕನಸಿಗೆ ಬೀಳುತ್ತಾ ಕಡಿವಾಣ?

ಮತದಾರ ಸಂಖ್ಯೆ
ಬ್ಯಾಟರಾಯನಪುರ ಕ್ಷೇತ್ರವು ಬೆಂಗಳೂರಿನ ದೊಡ್ಡ ಕ್ಷೇತ್ರಗಳಲ್ಲಿ ಒಂದು. ಇಲ್ಲಿಯ ಮತದಾರರ ಸಂಖ್ಯೆ 4.19 (4,19,587) ಲಕ್ಷ ಮೀರಿದೆ. ಕ್ಷೇತ್ರದಲ್ಲಿ ಪುರುಷ ಮತದಾರರ ಸಂಖ್ಯೆ 2,19,775. ಮಹಿಳಾ ಮತದಾರರ ಸಂಖೆ 1,99,733.

karnataka assembly election 2018 bengaluru byatarayanapura constituency profile

ಕ್ಷೇತ್ರ ವಿಶೇಷತೆ: ಬ್ಯಾಟರಾಯನಪುರ ವಾರ್ಡ್‌ ಮತ್ತು ಗ್ರಾಮ ಪಂಚಾಯಿತಿ ಎರಡನ್ನೂ ಒಳಗೊಂಡಿರುವುದು ವಿಶೇಷ. ನಗರ ಮತ್ತು ಗ್ರಾಮೀಣ ಭಾಗಕ್ಕೆ ಸೇರಿದ ಎರಡೂ ರೀತಿಯ ಮತದಾರರು ಬ್ಯಾಟರಾಯನಪುರ ಕ್ಷೇತ್ರದಲ್ಲಿದ್ದಾರೆ. ಬ್ಯಾಟರಾಯನಪುರ 7 ವಾರ್ಡುಗಳು ಮತ್ತು 8 ಗ್ರಾಮ ಪಂಚಾಯಿತಿಗಳನ್ನು ಹೊಂದಿದೆ. ಕೆಂಪೆಗೌಡ ವಿಮಾನ ನಿಲ್ದಾಣ ರಸ್ತೆಗೆ ಹೊಂದಿಕೊಂಡಿರುವ ಬ್ಯಾಟರಾಯನಪುರ ವಾಣಿಜ್ಯ, ವ್ಯಾಪಾರದಲ್ಲಿ ಮುಂದುವರೆದ ಕ್ಷೇತ್ರ.

ಯಶವಂತಪುರ ವಿಧಾನಸಭಾ ಕ್ಷೇತ್ರ: 'ಹಳ್ಳಿ ಮನುಷ್ಯನ ಪೇಟೆ ಸವಾರಿ'ಯಶವಂತಪುರ ವಿಧಾನಸಭಾ ಕ್ಷೇತ್ರ: 'ಹಳ್ಳಿ ಮನುಷ್ಯನ ಪೇಟೆ ಸವಾರಿ'

ಸಮಸ್ಯೆಗಳು: * ಅರ್ಕಾವತಿ ಬಡಾವಣೆ ಸಮಸ್ಯೆ ಈ ಕ್ಷೇತ್ರದ ಬಹುದೊಡ್ಡ ಸಮಸ್ಯೆ, ಅರ್ಕಾವತಿ ಬಡಾವಣೆಗೆ ಸರಿಯಾದ ನೀರು ಮತ್ತು ವಿದ್ಯುತ್ ಸಂಪರ್ಕವೇ ಇಲ್ಲ. ಅಲ್ಲಿನ ನಿವಾಸಿಗಳು ಮೂಲಸೌಲಭ್ಯ ಕೊರತೆಯಿಂದ ಸಮಸ್ಯೆ ಪಡುತ್ತಿದ್ದಾರೆ.

* ಕ್ಷೇತ್ರದ ಸುಪರ್ದಿಯಲ್ಲಿ ಬರುವ 50ಕ್ಕೂ ಹೆಚ್ಚು ಹಳ್ಳಿಗಳಿಗೆ ಇಂದಿಗೂ ಸರಿಯಾದ ರಸ್ತೆಗಳಿಲ್ಲ, ಸ್ವಚ್ಛತೆ ಮತ್ತು ನೀರಿನ ವ್ಯವಸ್ಥೆಯೂ ಅಷ್ಟಕ್ಕಷ್ಟೆ.

* ಕೊಡಿಗೇಹಳ್ಳಿ ರೈಲ್ವೆ ಅಂಡರ್‌ಪಾಸ್ ಕಾಮಗಾರಿ ಮೂರು ವರ್ಷದಿಂದ ನಡೆಯುತ್ತಲೇ ಇದೆ. ಇದು ಸಂಚಾರ ವ್ಯತ್ಯಯ ಉಂಟು ಮಾಡಿದೆ.

ಕ್ಷೇತ್ರದ ವಾರ್ಡುಗಳು: ಜಕ್ಕೂರು, ಥಣಿಸಂದ್ರ, ಬ್ಯಾಟರಾಯನಪುರ, ಕೊಡಿಗೇಹಳ್ಳಿ, ವಿದ್ಯಾರಣ್ಯಪುರ, ದೊಡ್ಡಬೊಮ್ಮಸಂದ್ರ, ಕುವೆಂಪುನಗರ.

ಈ ಬಾರಿ ನಾಮಪತ್ರ ಸಲ್ಲಿಸಿರುವ ಪ್ರಮುಖರು: ಕಾಂಗ್ರೆಸ್‌ನಿಂದ ಕೃಷ್ಣಭೈರೇಗೌಡ, ಬಿಜೆಪಿ ಪಕ್ಷದಿಂದ ಎ.ರವಿ, ಜೆಡಿಎಸ್‌ನಿಂದ ಟಿ.ಜಿ.ಚಂದ್ರ.

English summary
Karnataka Assembly Election 2018: Read all about byatarayanapura assembly constituency of Bengaluru. Get election news from Bengaluru district. Know about byatarayanapura candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X