ಶಿಷ್ಟಾಚಾರ, ಹಕ್ಕುಚ್ಯುತಿ ಹೆಸರಿನಲ್ಲಿ ಶರತ್ ಬಚ್ಚೇಗೌಡ 'ಕೈ'ಹಿಡಿದ ಕಾಂಗ್ರೆಸ್
ಹೊಸಕೋಟೆ ಕ್ಷೇತ್ರದ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಅವರು ಕಾಂಗ್ರೆಸ್ ಸೇರಲಿದ್ದಾರೆ ಎನ್ನುವ ಸುದ್ದಿಯೋ/ವದಂತಿಯೋ ಅದು ಇಂದು ನಿನ್ನೆಯದಲ್ಲ. ಆದರೆ, ಅಧಿಕೃತವಾಗಿ ಕಾಂಗ್ರೆಸ್ ಆಗಲಿ ಶರತ್ ಆಗಲಿ ಈ ಬಗ್ಗೆ ಹೇಳಿಕೆಯನ್ನು ನೀಡುತ್ತಿಲ್ಲ.
ವಿಧಾನ ಮಂಡಲದ ಹಾಲೀ ಬಜೆಟ್ ಅಧಿವೇಶನದಲ್ಲಿ, ಶರತ್ ತಮ್ಮ ಒಂದು ಕಾಲನ್ನು ಕಾಂಗ್ರೆಸ್ಸಿನಲ್ಲಿಟ್ಟಿರುವುದು ಹೌದು ಎನ್ನುವುದಕ್ಕೆ ಪೂರಕ ಎನ್ನುವಂತೆ ವಿದ್ಯಮಾನವೊಂದು ನಡೆದಿದೆ. ಇದು ಸ್ಪಷ್ಟವಾಗಿ ಶರತ್ ಅವರು ಬಿಜೆಪಿಯಿಂದ ದೂರವಾಗುತ್ತಿರುವ ಸೂಚನೆಯಂತೆ ತೋರುತ್ತಿದೆ.
ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ಆರೋಪಿಸಿದ್ದಾರೆ. ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆದ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರನ್ನು ಕರೆಯದೇ ಇರುವುದು ಶರತ್ ಬೆಂಬಲಿಗರನ್ನು ಕೆರಳಿಸಿದೆ.
ರಾಜಕೀಯ ಜಿದ್ದಾಜಿದ್ದಿಗೆ ಹೆಸರಾಗಿರುವ ಹೊಸಕೋಟೆಯ ಗೌತಂ ಕಾಲೋನಿಯಲ್ಲಿ ಸರಕಾರದ ಅನುದಾನದ ಅಡಿಯಲ್ಲಿ ಒಳಚರಂಡಿ ಕಾಮಗಾರಿಯ ಗುದ್ದಲಿಪೂಜೆ ಕಾರ್ಯಕ್ರಮವಿತ್ತು. ಸಚಿವ ಎಂ.ಟಿ.ಬಿ ನಾಗರಾಜ್ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆಯೇ, ಶರತ್ ಬೆಂಬಲಿಗರು ಪ್ರತಿಭಟನೆ ನಡೆಸಲು ಆರಂಭಿಸಿ, ಹೆದ್ದಾರಿ ತಡೆಯನ್ನು ಮಾಡಿದ್ದರು. ಇದಕ್ಕಾಗಿ ಶರತ್ ಸೇರಿದಂತೆ ಹದಿನೆಂಟು ಜನರ ವಿರುದ್ದ ಎಫ್‌ಐಆರ್ ದಾಖಲಾಗಿತ್ತು.

ಅಧಿವೇಶನ ಆರಂಭ
ಅಧಿವೇಶನ ಆರಂಭವಾದ ನಂತರ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಶರತ್ ಬಚ್ಬೇಗೌಡ ಹಕ್ಕುಚ್ಯುತಿ ಮಂಡನೆಯನ್ನು ಮಾಡಿದ್ದರು. ಸ್ಪೀಕರ್ ಕಾಗೇರಿಯವರು ಇದಕ್ಕೆ ಅವಕಾಶವನ್ನೂ ನೀಡಿದ್ದರು. ಈ ಬಗ್ಗೆ ಸದನದಲ್ಲಿ ಮಾತನಾಡಿದ ಶರತ್, ಸ್ಥಳೀಯ ಪೊಲೀಸರು ಮತ್ತು ನಗರಸಭೆಯ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಈ ಸಂದರ್ಭದಲ್ಲಿ ಶರತ್ ಬೆಂಬಲಕ್ಕೆ ಕಾಂಗ್ರೆಸ್ ಶಾಸಕರು ನಿಂತರು. ಪ್ರಮುಖವಾಗಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಕೃಷ್ಣ ಭೈರೇಗೌಡ ಅವರು ಸರಕಾರದ ವಿರುದ್ದ ಕಿಡಿಕಾರುತ್ತಾ, ಸದನದ ಬಾವಿಗೆ ಇಳಿದರು. ಆಗ ಕಾಂಗ್ರೆಸ್ಸಿನ ಇತರ ಶಾಸಕರೂ ಶರತ್ ಪರವಾಗಿ ನಿಂತರು.
Recommended Video

ಅಧಿಕಾರ ಅನ್ನುವುದು ಶಾಶ್ವತವಲ್ಲ
"ಅಧಿಕಾರ ಅನ್ನುವುದು ಶಾಶ್ವತವಲ್ಲ , ಇವತ್ತು ಇಲ್ಲಿ ಕೂತವರು ನಾಳೆ ಅಲ್ಲಿ ಕೂರಬಹುದು. ಅಲ್ಲಿ ಕೂತವರು ಇಲ್ಲಿ ಬರಬಹುದು. ಹೊಸಕೋಟೆಯಲ್ಲಿ ಕಾರ್ಯಕ್ರಮ ನಡೆಯುತ್ತದೆ. ಶನಿವಾರ ಬೆಳಗ್ಗೆ ಕಾರ್ಯಕ್ರಮಕ್ಕೆ ಸಚಿವರನ್ನ ಆಹ್ವಾನಿಸುತ್ತಾರೆ. ಇವೆಲ್ಲವನ್ನೂ ನಗರಸಭೆಯ ಆಯುಕ್ತರು ಮಾಡುತ್ತಾರೆ. ಸ್ಥಳೀಯ ಶಾಸಕನಿಗೆ ಆಹ್ವಾನ ಕೊಡಿಸುವಷ್ಟೂ ಸೌಜನ್ಯವಿಲ್ಲವೇ? ಇದನ್ನು ಪ್ರಶ್ನಿಸಿ ನಮ್ಮ ಬೆಂಬಲಿಗರು ಪ್ರತಿಭಟನೆ ಮಾಡಿದರೆ, ಲಾಠಿಚಾರ್ಜ್ ಮಾಡುತ್ತಾರೆ"ಎಂದು ಶರತ್ ಬಚ್ಚೇಗೌಡ ಆಕ್ರೋಶ ವ್ಯಕ್ತ ಪಡಿಸಿದರು.

ಹಕ್ಕುಚ್ಯುತಿ ಹೆಸರಿನಲ್ಲಿ ಶರತ್ ಬಚ್ಚೇಗೌಡ 'ಕೈ'ಹಿಡಿದ ಕಾಂಗ್ರೆಸ್
ರಾಜಕೀಯದಲ್ಲಿ ಇಂತಹ ಶಿಷ್ಟಾಚಾರ ಉಲ್ಲಂಘನೆಯಾಗುವ ಹತ್ತುಹಲವು ನಿದರ್ಶನಗಳಿವೆ. ಆದರೆ, ಶರತ್ ಪರವಾಗಿ ಕಾಂಗ್ರೆಸ್ ಶಾಸಕರು ಒಂದಾಗಿ, ಬಾವಿಗಿಳಿದಿದ್ದು ಪ್ರಮುಖಾಂಶವಾಗಿತ್ತು. ಕಳೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು, ಬಿಜೆಪಿಗೆ ಪಾಠ ಕಲಿಸಿದ ಯುವ ಮುಖಂಡ ಶರತ್ ಬಚ್ಚೇಗೌಡ, ಕಾಂಗ್ರೆಸ್ಸಿಗೆ ಮತ್ತಷ್ಟು ಹತ್ತಿರವಾಗುತ್ತಿರುವುದಕ್ಕೆ ಈ ವಿದ್ಯಮಾನ ಒಂದು ಉದಾಹರಣೆ. ದಟ್ಸ್ ಆಲ್...
-
Bagalkote: ಕೃಷ್ಣ ಮೇಲ್ದಂಡೆ ಯೋಜನೆ ವಿಳಂಬಕ್ಕೆ ಕಾಂಗ್ರೆಸ್ಸೇ ಕಾರಣ: ವಿವರ ಬಿಚ್ಚಿಟ್ಟ ಬಸವರಾಜ ಬೊಮ್ಮಾಯಿ -
Baglkot By Poll:9 ವರ್ಷ ಅಧಿಕಾರದಲ್ಲಿದ್ದ ಬಿಜೆಪಿ ಸಾಧನೆ ಶೂನ್ಯ: ಗ್ಯಾರಂಟಿ ಯೋಜನೆಗಳ ಲೆಕ್ಕ ಕೊಟ್ಟ ಸಿದ್ದರಾಮಯ್ಯ -
ದಾವಣಗೆರೆ ಟಿಕೆಟ್ ವಿಚಾರವಾಗಿ ನಾನು ಮುನಿಸಿಕೊಂಡಿರಲಿಲ್ಲ: ಸಚಿವ ಜಮೀರ್ ಅಹಮದ್ ಖಾನ್ ಸ್ಪಷ್ಟನೆ -
ಕೇರಳದಲ್ಲಿ ಬದಲಾವಣೆಯ ಪರ್ವ ಆರಂಭ: ಅಭಿವೃದ್ಧಿಗಾಗಿ ಜನ ಕಾಂಗ್ರೆಸ್ ಕೈಹಿಡಿಯಲಿದ್ದಾರೆ-ಡಿ.ಕೆ.ಶಿವಕುಮಾರ್ ಭವಿಷ್ಯ -
Karnataka Rain: ಚಂಡಮಾರುತ ಪ್ರಸರಣ: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಭಾಗಗಳಲ್ಲಿ 6 ದಿನ ಮಳೆ: ಐಎಂಡಿ ವರದಿ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ












Click it and Unblock the Notifications