ಬೆಂಗಳೂರಿನಲ್ಲಿ ಜಯಮ್ಮ, ಪನ್ನೀರ್ ತಿಥಿ - ಪಿಂಡ ಪ್ರದಾನ

ಬೆಂಗಳೂರು, ಏ.18 : ಮೇಕೆದಾಟು ಯೋಜನೆ ವಿರೋಧಿಸುತ್ತಿರುವ ತಮಿಳುನಾಡು ಸಿಎಂ ಪನ್ನೀರ್ ಸೆಲ್ವಂ ಮತ್ತು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ತಿಥಿ ಮಾಡಿದ ಕನ್ನಡ ಸಂಘಟನೆಗಳ ಕಾರ್ಯಕರ್ತರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ ಕನ್ನಡ ಸಂಘಟನೆ ಕಾರ್ಯಕರ್ತರ ಅಶ್ವಥ್ ನಾರಾಯಣ ಮತ್ತು ಇತರರು ಶನಿವಾರ ಬೆಳಗ್ಗೆ 10.30ರ ಸುಮಾರಿಗೆ ಜಯಲಲಿತಾ ಮತ್ತು ಪನ್ನೀರ್ ಸೆಲ್ವಂ ಫೋಟೋಗೆ ಪಿಂಡ ಪ್ರಧಾನ ಮಾಡಿ ಅವರ ತಿಥಿಯನ್ನು ಆಚರಿಸಿದರು. [ಕರ್ನಾಟಕ ಬಂದ್ : ಕ್ಷಣ-ಕ್ಷಣದ ಮಾಹಿತಿ]

Jayalalithaa

ಕಾವೇರಿ ವಿಚಾರದಲ್ಲಿ ಪದೇ-ಪದೇ ಕ್ಯಾತೆ ತೆಗೆಯುತ್ತಿದ್ದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಕುಡಿಯುವ ನೀರಿಗಾಗಿ ನಾವು ನಿಮ್ಮ ಅಪ್ಪಣೆ ಕೇಳಬೇಕಾಗಿಲ್ಲ ಎಂದು ತಮಿಳುನಾಡು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. [ಆದರೆ ಸತ್ತಂತಿಹರನ್ನು ಬಡಿದೆಚ್ಚರಿಸುವವರು ಯಾರು?]

Panneerselvam

ಕಾರ್ಯಕರ್ತ ಅಸ್ವಸ್ಥ : ಟೌನ್‍ಹಾಲ್‍ ಮುಂಭಾಗದಲ್ಲಿ ಪ್ರತಿಭಟನೆ ಆರಂಭವಾಗುತ್ತಿದ್ದಂತೆಯೇ. ಪ್ರತಿಭಟನಾ ನಿರತ ಜಯಕರ್ನಾಟಕ ಸಂಘಟನೆ ಕಾರ್ಯಕರ್ತನೊಬ್ಬ ಅಸ್ವಸ್ಥಗೊಂಡ. ತಕ್ಷಣ ಆತನಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.

ವಾಟಾಳ್ ಸೈಕಲ್ ಯಾತ್ರೆ : ಟೌನ್‌ಹಾಲ್ ಮುಂಭಾಗದಿಂದ ನೂರಾರು ಕಾರ್ಯಕರ್ತರೊಂದಿಗೆ ಪ್ರತಿಭಟನಾ ಮೆರವಣಿಗೆ ಹೊರಟ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸೈಕಲ್ ಏರಿದರು. ಸದಾ ವಿಭಿನ್ನ ಪ್ರತಿಭಟನೆ ಮಾಡುವ ವಾಟಾಳ್ ಸೈಕಲ್ ಸವಾರಿ ಕಾರ್ಯಕರ್ತರಲ್ಲಿ ಮತ್ತಷ್ಟು ಹುರುಪು ತುಂಬಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+