Darshan Arrest: ನನಗೂ ಇದಕ್ಕೂ ಸಂಬಂಧನೇ ಇಲ್ಲ ಎನ್ನುತ್ತಿರುವ ದರ್ಶನ್: ಸಾಕ್ಷಿಗಳ ಆರ್ಭಟದ ಮುಂದೆ ನಟ ಗಪ್‌ಚುಪ್
ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿದ್ದಾರೆ. ಮಂಗಳವಾರ ಮೈಸೂರಿನಲ್ಲಿ ಜಿಮ್ ಮಾಡುತ್ತಿದ್ದ ವೇಳೆ ಇವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ದರ್ಶನ್‌ರನ್ನು ವಿಚಾರಣೆ ನಡೆಸಿ ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ. ಕೋರ್ಟ್ ದರ್ಶನ್‌ರನ್ನು ಆರು ದಿನ ಪೋಲಿಸ್ ಕಸ್ಟಡಿಗೆ ನೀಡಿದೆ.
ದರ್ಶನ್‌ರನ್ನು ಕಸ್ಟಡಿಗೆ ಪಡೆದ ಪೊಲೀಸರು, ಪಟ್ಟಣಗೆರೆ ಕಾರ್ ಶೆಡ್‌ನಲ್ಲಿ ಸ್ಥಳ ಮಹಜರು ಸಹ ಮಾಡಿಸಿದ್ದಾರೆ. ಆಗಲು 13 ಜನ ಆರೋಪಿಗಳನ್ನು ಕರೆದುಕೊಂಡು ಸ್ಥಳ ಮಹಜರು ನಡೆಸಲಾಗಿದೆ. ಬಳಿಕ ನಡೆಯುತ್ತಿರುವ ವಿಚಾರಣೆಯಲ್ಲಿ ದರ್ಶನ್ ತನಗೂ ಈ ಕೊಲೆಗೆ ಸಂಬಂಧ ಇಲ್ಲವೇ ಇಲ್ಲ ಎಂದು ಹೇಳುತ್ತಿದ್ದಾರೆ.

ದರ್ಶನ್ ಪೊಲೀಸರ ಮುಂದೆ, ನಾನು ರೇಣುಕಸ್ವಾಮಿ ಅವರನ್ನು ಕರೆದುಕೊಂಡು ಬರುವಂತೆ ಹೇಳಿದ್ದು ನಿಜ. ಆದರೆ ಕೊಲೆ ಮಾಡಲು ತಿಳಿಸಿದ್ದಿಲ್ಲ ಎಂದು ನಟ ದರ್ಶನ್ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ನನಗೂ ಇದಕ್ಕೂ ಯಾವುದೇ ಸಂಬಂಧನೇ ಇಲ್ಲ ಎಂದು ಹೇಳುತ್ತಲೇ ಇದ್ದಾರೆ. ಆದರೆ ಸಾಕ್ಷಿಗಳು ಮಾತ್ರ ದರ್ಶನ್ ವಿರುದ್ಧ ಸಮರ ಸಾರಿದಂತೆ ಕಾಣುತ್ತಿವೆ.
ಏನು ಏನು ಸಾಕ್ಷಿಗಳು ಸಿಕ್ಕಿವೆ?
ಕೊಲೆಯಾದ ಸ್ಥಳದ ಟವರ್ ಡಂಪ್ ನಲ್ಲಿ ದರ್ಶನ್, ಪವಿತ್ರಾಗೌಡ, ನಾಗರಾಜ್, ವಿನಯ್, ಸೇರಿ ಆರು ಮಂದಿ ಟವರ್ ಡಂಪ್ ಸಿಕ್ಕಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಕೊಲೆಯ ನಂತರ ಇಬ್ಬರು ಆರೋಪಿಗಳು ಪೊಲೀಸ್ ಅಧಿಕಾರಿಗಳ ಜೊತೆ ಕೃತ್ಯದ ಬಗ್ಗೆ ಚರ್ಚಿಸಿರೋ ಕಾಲ್ ಡಿಟೇಲ್ಸ್ ಸಿಕ್ಕಿದ್ದು, ಕೃತ್ಯದ ನಂತರ ಕಾರ್ತಿಕ್, ಕೇಶವ್, ನಿಖಿಲ್ ನಾಯ್ಕ್ ತಾವೇ ಕೊಲೆ ಮಾಡಿದ್ದಾಗಿ ಸರೆಂಡರ್ ಆಗಿದ್ದಾರೆ.

ಪೊಲೀಸರ ಅಸಲಿ ವಿಚಾರಣೆ ವೇಳೆ ಮೃತ ದೇಹ ಬಿಸಾಡಲಿಕ್ಕೆ ದರ್ಶನ್, ತಲಾ ಐದು ಲಕ್ಷ ನೀಡಿದ್ದಾಗಿ ಹೇಳಿಕೆ ನೀಡಿದ್ದು, ದೀಪಕ್ ವಿಚಾರಣೆ ವೇಳೆ ಪ್ರದೋಶ್, ಪವನ್, ವಿನಯ್ ಹೆಸರು ಬಹಿರಂಗ ಪಡಿಸಿದ್ದಾರೆ. ವಿನಯ್, ಪವನ್, ಪ್ರದೋಶ್ ವಿಚಾರಣೆ ವೇಳೆ ದರ್ಶನ್ ಪವಿತ್ರಾಗೌಡ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ರೇಣುಕಸ್ವಾಮಿ ಪವಿತ್ರಾಗೌಡರಿಗೆ ಅಶ್ವೀಲ ಮೆಸೇಜ್ ಮಾಡಿದ್ದರಿಂದ ತನ್ನ ಅಭಿಮಾನಿಗಳ ಮೂಲಕ ಅವರನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ದರ್ಶನ ಕರೆಸಿಕೊಂಡಿದ್ದಾರೆ. ವಿಚಾರಣೆಯ ವೇಳೆ ಬಂಧಿತರು ಈ ಬಗ್ಗೆಯೂ ಪೊಲೀಸರ ಮುಂದೆ ಮೌನ ಮುರಿದಿದ್ದಾರೆ ಎಂದು ತಿಳಿದು ಬಂದಿದೆ. ರೇಣುಕಾಸ್ವಾಮಿ ಕೊಲೆ ನಡೆದ ಸ್ಥಳದಲ್ಲಿ ರಕ್ತದ ಕಲೆ, ಕೂದಲು ಹಾಗೂ ಬೆವರಿನ ಸ್ಯಾಂಪಲ್ಸ್ ಲಭ್ಯವಾಗಿದ್ದು, ಬಂಧಿತರ ಫಿಂಗರ್ ಪ್ರಿಂಟ್ ಪಡೆಯಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ರೇಣುಕಾಸ್ವಾಮಿ ಕೊಲೆಯಾದ ನಂತರ ದೀಪಕ್, ವಿನಯ್, ಪವನ್, ಪದೇ ಪದೇ ದರ್ಶನ್ ಗೆ ವಾಟ್ಸಾಫ್ ಹಾಗೂ ನಾರ್ಮಲ್ ಕರೆ ಮಾಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.












Click it and Unblock the Notifications