Bengaluru Second Airport: ಕನಕಪುರ ರಸ್ತೆಯಲ್ಲಿ ಬೆಂಗಳೂರು 2ನೇ ಏರ್‌ಪೋರ್ಟ್ ಆದ್ರೆ ಏನೆಲ್ಲ ಅನುಕೂಲ?
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಒತ್ತಡ, ದಟ್ಟಣೆ ತಗ್ಗಿಸಲು ಬೆಂಗಳೂರಿಗೆ ಎರಡನೇ ಏರ್‌ಪೋರ್ಟ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಸಜ್ಜಾಗಿದೆ. ಈಗಾಗಲೇ ಗುರುತಿಸಿರುವ ಮೂರು ಸ್ಥಳಗಳ ಪೈಕಿ ಎರಡು ಜಾಗ ಕನಕಪುರ ರಸ್ತೆಯಲ್ಲೇ ಇವೆ. ಇದರಲ್ಲೇ ಒಂದು ಜಾಗ ಫೈನಲ್ ಆಗುವುದು ಬಹುತೇಕ ಫಿಕ್ಸ್ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಇದೇ ನಿಜವಾದರೆ ಕನಕಪುರಕ್ಕೆ ಬಂಪರ್ ಎಂತಲೇ ಹೇಳಲಾಗುತ್ತಿದೆ. ಈ ಎರಡನೇ ಏರ್‌ಪೋರ್ಟ್ ತಲೆ ಎತ್ತಿದರೆ ಕನಕಪುರಕ್ಕೆ ಏನೆಲ್ಲ ಲಾಭ ಎಂಬುದನ್ನು ಇಲ್ಲಿ ತಿಳಿಯಿರಿ..
ಬೆಂಗಳೂರಿಗೆ ಎರಡನೇ ಏರ್‌ಪೋರ್ಟ್‌ಗಾಗಿ ಕರ್ನಾಟಕ ಸರ್ಕಾರ ಮೂರು ಜಾಗಗಳನ್ನು ಅಂತಿಮಗೊಳಿಸಿ, ಕೇಂದ್ರದ ಅನುಮೋದನೆಗೆ ಕಳಿಸಿಕೊಟ್ಟಿದೆ. ಈ ಪೈಕಿ ಒಂದು ಜಾಗ ಮಾತ್ರ ಕುಣಿಗಲ್ ರಸ್ತೆಯ ಹಾಸನ ಹೆದ್ದಾರಿ ಬಳಿ ಇದೆ. ಉಳಿದ ಎರಡೂ ಜಾಗ ಕನಕಪುರ ರಸ್ತೆಯಲ್ಲೇ ಮಾರ್ಕ್ ಆಗಿವೆ. ಒಂದು ಬೆಂಗಳೂರು ಮೆಟ್ರೋದ ಕೊನೇ ನಿಲ್ದಾಣದಿಂದ ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿದ್ದರೆ, ಮತ್ತೊಂದು ಜಾಗ ಕನಕಪುರ ರಸ್ತೆಯ ಹಾರೋಹಳ್ಳಿ ಬಳಿ ಗುರುತಿಸಲಾಗಿದೆ.

ಇದರಲ್ಲಿ ಒಂದು ಜಾಗ ಬೆಂಗಳೂರು ನಗರ ವ್ಯಾಪ್ತಿಯಲ್ಲಿದ್ದರೆ, ಮತ್ತೊಂದು ರಾಮನಗರ ಜಿಲ್ಲಾ ವ್ಯಾಪ್ತಿಗೆ ಬರುತ್ತದೆ. ಒಟ್ಟಾರೆ ಈ ಎರಡರಲ್ಲಿ ಯಾವ ಜಾಗ ಫೈನಲ್ ಆದ್ರೂ ಕನಕಪುರ ರಸ್ತೆಯಲ್ಲೇ ಹೊಸ ಏರ್‌ಪೋರ್ಟ್ ಫಿಕ್ಸ್ ಆಗಲಿದೆ. ಬೆಂಗಳೂರಿನಿಂದ ಈಗಾಗಲೇ ಕನಕಪುರದವರೆಗೆ ವಿಶಾಲವಾದ ರಸ್ತೆ ನಿರ್ಮಾಣವಾಗುತ್ತಿದೆ. ಹಾಗಾಗಿ ಈ ನೂತನ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕೂಡ ಸುಲಭವಾಗಲಿದೆ. ಏರ್‌ಪೋರ್ಟ್ ನಿರ್ಮಾಣವಾದ್ರೆ ಅದರ ಸುತ್ತ ಸುಮಾರು 50 ಕಿಲೋಮೀಟರ್‌ವರೆಗೆ ಅಭಿವೃದ್ಧಿ ನಿಶ್ಚಿತ ಎನ್ನುತ್ತಾರೆ ರಿಯಲ್ ಎಸ್ಟೇಟ್ ತಜ್ಞರು.
ಹಾಗಾಗಿ, ಈ ಭಾಗದಲ್ಲೇ ಏರ್‌ಪೋರ್ಟ್ ಬಂದರೆ ಕನಕಪುರ ತಾಲ್ಲೂಕಿಗಂತೂ ಲಾಭವೋ ಲಾಭ ಎಂದು ಅಂದಾಜಿಸಲಾಗಿದೆ. ಒಂದು ವೇಳೆ ಹಾರೋಹಳ್ಳಿ ಬಳಿ ನಿರ್ಮಾಣವಾದರೂ ಕನಕಪುರದ ಚಿತ್ರಣವೇ ಬದಲಾಗಲಿದೆ ಎಂದು ಹೇಳಲಾಗುತ್ತಿದೆ. ಸದ್ಯ ರಾಮನಗರ ಜಿಲ್ಲೆಯ ತಾಲ್ಲೂಕು ಕೇಂದ್ರವಾಗಿರುವ ಕನಕಪುರವು ದಶಕದೊಳಗೆ ಬೆಂಗಳೂರಿಗೆ ಸೆಡ್ಡು ಹೊಡೆಯುವಂತೆ ಬೆಳೆಯಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಕನಕಪುರ ರಸ್ತೆವರೆಗೆ ಮೆಟ್ರೋ ಸೇವೆ ಇರುವುದರಿಂದ ಮುಂದೆ ಈ ಭಾಗಕ್ಕೂ ನಮ್ಮ ಮೆಟ್ರೋ ವಿಸ್ತರಿಸಿರುವ ಸಾಧ್ಯತೆಯೂ ಇದೆ.

ದೇವನಹಳ್ಳಿ ಮಾದರಿಯ ಅಭಿವೃದ್ಧಿ
ಮೆಟ್ರೋ ಬಂದ ನಂತರ ಕನಕಪುರ ರಸ್ತೆಯು ಈಗಾಗಲೇ ಭಾರಿ ಅಭಿವೃದ್ಧಿ ಕಾಣುತ್ತಿದೆ. ಇದರೊಟ್ಟಿಗೆ ಏರ್‌ಪೋರ್ಟ್ ಕೂಡ ಬಂದರೆ ಅಭಿವೃದ್ಧಿ ಶರವೇಗದಲ್ಲಿ ಸಾಗಲಿದೆ. ಈ ಹಿಂದೆ ದೇವನಹಳ್ಳಿ ಕೂಡ ಹಿಂದುಳಿದಿದ್ದ ಪ್ರದೇಶವೇ ಆಗಿತ್ತು. ಆದರೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಬಂದ ನಂತರವೂ ಇದೀಗ ಸ್ವರೂಪವೇ ಬದಲಾಗಿದೆ. ಇಲ್ಲಿನ ಭೂಮಿಗೆ ಬಂಗಾರದ ಬೆಲೆ ಬಂದಿದೆ. ವರ್ಷದಿಂದ ವರ್ಷಕ್ಕೆ ಬೆಲೆ ಗಗನಕ್ಕೇರುತ್ತಲೇ ಇವೆ. ಪ್ರಮುಖ ಕಂಪನಿಗಳು ಕೂಡ ಬೆಂಗಳೂರು ಕೇಂದ್ರ ಭಾಗ ತೊರೆದು ಇಲ್ಲಿಗೆ ಶಿಫ್ಟ್ ಆಗುತ್ತಿವೆ. ಗಗನಚುಂಬಿ ಕಟ್ಟಡಗಳು, ಅಪಾರ್ಟ್‌ಮೆಂಟ್‌ಗಳು, ಟೌನ್‌ಶಿಪ್‌ಗಳು ಕೂಡ ಭಾರಿ ಸಂಖ್ಯೆಯಲ್ಲಿ ತಲೆ ಎತ್ತುವ ಮೂಲಕ ಬೆಂಗಳೂರು ನಗರಕ್ಕೆ ಟಕ್ಕರ್ ಕೊಡುತ್ತಿದೆ.
ಇದೇ ಬದಲಾವಣೆ ಮುಂದೆ ಕನಕಪುರದಲ್ಲೂ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಕನಕಪುರ ಮಾತ್ರವಲ್ಲದೆ, ಇಡೀ ರಾಮನಗರ ಜಿಲ್ಲೆಯ ಗೇಮ್ ಚೇಂಜರ್ ಆಗಿಯೂ ಈ ಏರ್‌ಪೋರ್ಟ್ ಇರಲಿದೆ. ಅಲ್ಲಿನ ಭೂಮಿಗೂ ಬಂಗಾರದ ಬೆಲೆ ಬಂದು, ಹೂಡಿಕೆದಾರರ ಸ್ವರ್ಗ ಎನಿಸಿಕೊಳ್ಳುವುದರಲ್ಲಿ ಅನುಮಾನವಿಲ್ಲ ಎಂಬುದು ತಜ್ಞರ ಅಭಿಪ್ರಾಯ. ಹಾಗಾಗಿ ಕನಕಪುರ ಮುಂದಿನ ವರ್ಷಗಳಲ್ಲಿ ರಿಯಲ್ ಎಸ್ಟೇಟ್‌ನ ಉದ್ಯಮದ ನೆಚ್ಚಿನ ತಾಣವಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಈಗಾಗಲೇ ಇಕ್ಕಟ್ಟಿನ ಪರಿಸ್ಥಿತಿ ಇರುವುದರಿಂದ ಜನ ಕೂಡ ಕನಕಪುರ ರಸ್ತೆ ಕಡೆಗೆ ಶಿಫ್ಟ್ ಆಗಿ ಮನೆ ಖರೀದಿಸಬಹುದು.

ಸಂಪರ್ಕ ಸೇತುವೆಯಾಗಿ ಹಾರೋಹಳ್ಳಿ
ಸಂಭಾವ್ಯ ಏರ್‌ಪೋರ್ಟ್ ಸ್ಥಳಗಳಲ್ಲಿ ಕನಕಪುರ ರಸ್ತೆಯ ಹಾರೋಹಳ್ಳಿ ಕೂಡ ಒಂದು. ಇದು ಬೆಂಗಳೂರು ಹಾಗೂ ಕನಕಪುರದ ನಡುವೆ ಕೊಂಡಿಯಂತಿದೆ. ಇದೇ ಜಾಗದಲ್ಲಿ ವಿಮಾನಗಳು ಸದ್ದು ಮಾಡಿದರೆ, ಡಬಲ್ ಧಮಾಕಾ ಎನ್ನುವಂತೆ ಇತ್ತ ಬೆಂಗಳೂರು ಅತ್ತ ಕನಕಪುರಕ್ಕೆ ಭಾರಿ ಅನುಕೂಲವಾಗಲಿದೆ. ಬೆಂಗಳೂರಿಗೆ ಕನಕಪುರ ಸೇರಿಕೊಳ್ಳುವಲ್ಲಿಯೂ ಹಾರೋಹಳ್ಳಿ ಪ್ರಮುಖ ಸಂಪರ್ಕಕೊಂಡಿಯಾಗಲಿದೆ. ಇದರ ಜೊತೆಗೆ ವ್ಯಾಪಾರ, ವಾಣಿಜ್ಯ ವಹಿವಾಟಿಗೂ ಪುಷ್ಟಿ ಸಿಗಲಿದೆ. ನಗರೀಕರಣಕ್ಕೆ ಈ ಪ್ರದೇಶವು ಒಗ್ಗಿಕೊಳ್ಳಲಿದೆ.
ಈಗಾಗಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಈ ಭಾಗದ ಕೆಲವು ಪ್ರದೇಶಗಳು ಕೂಡ ಸೇರ್ಪಡೆಗೊಂಡಿರುವುದು ಮತ್ತಷ್ಟು ಅನುಕೂಲವಾಗಲಿದೆ. ಹಾಗಾಗಿ ಬೆಂಗಳೂರು ಕನಕಪುರ ಬೆಸೆಯುವುದು ಕಷ್ಟದ ಮಾತೇನೂ ಅಲ್ಲ. ಆದರೆ ಇದೆಲ್ಲವೂ ಎರಡನೇ ಏರ್‌ಪೋರ್ಟ್‌ನ ಭವಿಷ್ಯದ ಮೇಲೆ ನಿಂತಿದೆ. ಇಷ್ಟೆಲ್ಲ ಅಭಿವೃದ್ಧಿ ಕಂಡರೆ ಏರ್‌ಪೋರ್ಟ್‌ಗೆ ಹತ್ತಿರದ ಪ್ರದೇಶವಾಗಿ ಬಡಾವಣೆಗಳು ಕೂಡ ತಲೆ ಎತ್ತುತ್ತವೆ. ಇಲ್ಲಿಗೆ ಮನೆಗಳು ಶಿಫ್ಟ್ ಆದರೆ ಕ್ರಮೇಣ ನಗರ ಸಂಸ್ಕೃತಿಗೂ ಒಳಗಾಗುತ್ತೆ.

ಕನಕಪುರ ಪ್ರದೇಶವು ರೆಸಾರ್ಟ್‌ಗಳು, ಪ್ರವಾಸಿ ತಾಣಗಳು ಸೇರಿದಂತೆ ಪ್ರವಾಸೋದ್ಯಮದಲ್ಲೂ ಸದ್ದು ಮಾಡುತ್ತಿದ್ದು, ಎರಡನೇ ಏರ್‌ಪೋರ್ಟ್‌ನಿಂದ ಇದಕ್ಕೆ ಮತ್ತಷ್ಟು ಬಲ ಸಿಗಲಿದೆ. ಪ್ರವಾಸಿ ಕೇಂದ್ರವಾಗಿ ಕನಕಪುರ ಸ್ವರೂಪ ಸಂಪೂರ್ಣ ಬದಲಾಗಲಿದೆ. ಇದೇ ರೀತಿ ರಾಮನಗರಕ್ಕೂ ಕೂಡ ಏರ್‌ಪೋರ್ಟ್‌ನಿಂದ ಭಾರಿ ಅನುಕೂಲಗಳೇ ಸಿಗಲಿವೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ತವರು ಕ್ಷೇತ್ರ ಕೂಡ ಕನಕಪುರ. ಹೀಗಾಗಿ ಈ ಭಾಗದಲ್ಲೇ ಏರ್‌ಪೋರ್ಟ್ ನಿರ್ಮಾಣಕ್ಕೆ ಅವರು ಅವಿರತ ಶ್ರಮ ವಹಿಸಿದ್ದಾರೆ. ಈ ಹಿಂದೆ ರಾಮನಗರವನ್ನು ಬೆಂಗಳೂರಿಗೆ ಸೇರಿಸುವ ಬಗ್ಗೆ ಮಾತನಾಡಿದ್ದ ಅವರು ತಮ್ಮ ಸ್ವಂತ ತಾಲ್ಲೂಕಿನ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿದ್ದಾರೆ. ಇದೇ ಕಾರಣದಿಂದ ಕನಕಪುರ ರಸ್ತೆಯಲ್ಲೇ ಎರಡು ಜಾಗಗಳನ್ನು ಗುರುತಿಸಲಾಗಿದೆ ಎಂದು ಹೇಳಲಾಗುತ್ತಿದೆ. ಕನಕಪುರದ ಅಭಿವೃದ್ಧಿಯ ಉದ್ದೇಶದಿಂದಲೇ ಏರ್‌ಪೋರ್ಟ್ ಅನ್ನು ಈ ಭಾಗದಲ್ಲಿ ನಿರ್ಮಿಸಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಒಟ್ಟಾರೆ, ಹೊಸ ಏರ್‌ಪೋರ್ಟ್‌ನಿಂದ ಕನಕಪುರ ಭಾಗದ ಅಭಿವೃದ್ಧಿಯಂತೂ ಗ್ಯಾರಂಟಿ.
-
ರಶ್ಮಿಕಾ ಮೊದಲ ಸಿನಿಮಾದಲ್ಲಿ ನಾನು ಹೀರೋ, ನೀನು ಬಾಲಿವುಡ್ಗೆ ಪಕ್ಕಾ ಹೋಗ್ತೀಯ ಎಂದಿದ್ದೆ: ನಟ ತ್ರಿವಿಕ್ರಮ್ -
ಇರಾನ್ ಸುಪ್ರೀಂ ಯತೊಲ್ಲಾ ಅಲಿ ಖಮೇನಿ ಅಂತ್ಯ: ವಿಶ್ವದ ಮೇಲೆ 5 ಪರಿಣಾಮ ಸಾಧ್ಯತೆ: ಆಶಿಶ್ ಸಾರಡ್ಕ ಬರಹ -
Thalapathy Vijay: 400 ಕೋಟಿ ಆಸ್ತಿಗೆ ಒಡತಿ, ಲಂಡನ್ ಬೆಡಗಿ: ಯಾವ ಸಿನಿಮಾಗೂ ಕಡಿಮೆ ಇಲ್ಲ ದಳಪತಿ ವಿಜಯ್-ಸಂಗೀತಾ ಲವ್ ಸ್ಟೋರಿ -
ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಹೇಗಿದ್ರು ನೋಡಿ ರಶ್ಮಿಕಾ ಮಂದಣ್ಣ, ವಿಡಿಯೋ ವೈರಲ್ -
Sanju Samson: ವೆಸ್ಟ್ ಇಂಡೀಸ್ ವಿರುದ್ಧ ಅಬ್ಬರ: ತೆಗಳಿದ ಬಾಯಲ್ಲೇ ಸಂಜು ಸ್ಯಾಮ್ಸನ್ಗೆ ಗೌತಮ್ ಗಂಭೀರ್ ಶಹಭಾಸ್ಗಿರಿ -
Lunar Eclipse 2026:ನಾಳೆ ಕೇತುಗ್ರಸ್ತ ಚಂದ್ರಗ್ರಹಣ: ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ದರ್ಶನದ ಸಮಯ ಬದಲು, ಗ್ರಹಣ ಶಾಂತಿ ಹೋಮ -
Horoscope March 2: ಈ ರಾಶಿಯವರಿಗೆ ಸಕಾರಾತ್ಮಕ ಪ್ರಗತಿ, ಮೇಷ-ಮೀನ ರಾಶಿಯವರೆಗೆ ಇಂದಿನ ದಿನ ಭವಿಷ್ಯ -
ಮಧ್ಯಪ್ರಾಚ್ಯದಲ್ಲಿ ವಿಮಾನಗಳ ಸಂಚಾರ ವ್ಯತ್ಯಯ: ಕರ್ನಾಟಕದ ನಾಗರಿಕರಿಗೆ ಸರ್ಕಾರ ನೆರವು -
Gold Rate : ಆಭರಣ ಪ್ರಿಯರಿಗೆ ಬಿಗ್ ಶಾಕ್; ಭಾರಿ ಏರಿಕೆ ಕಂಡ ಚಿನ್ನ- ಬೆಳ್ಳಿ ದರ, ಇಲ್ಲಿದೆ ಇಂದಿನ ಬೆಲೆ ಪಟ್ಟಿ -
Iran Vs America, Israel ಯುದ್ಧ ತೀವ್ರ: ಗಲ್ಫ್ ರಾಷ್ಟ್ರಗಳಿಗೂ ವ್ಯಾಪಿಸಿದ ಸಂಕಷ್ಟ; ಈ ಕ್ಷಣದ 10 ಪ್ರಮುಖ ಬೆಳವಣಿಗೆಗಳು -
ಯುದ್ಧದ ನಡುವೆಯೂ ಸರ್ವಧರ್ಮ ಸಮನ್ವಯತೆ ಸಂದೇಶ: ನಮ್ ಭಾರತ ಅಂದ್ರೆ ಹೀಗೆ ಅಂತಾ ವಿಶ್ವಕ್ಕೆ ಸಾರಿದ ಸಂಜು ಸ್ಯಾಮ್ಸನ್ -
Gold Price: ಇಂದು ಚಿನ್ನದ ಬೆಲೆಯಲ್ಲಿ ದಾಖಲೆಯ ಕುಸಿತ, ಯುದ್ಧದ ಎಫೆಕ್ಟ್ನಿಂದ ಬಂಗಾರ-ಬೆಳ್ಳಿ ಮತ್ತಷ್ಟು ದುಬಾರಿ! ಮುನ್ಸೂಚನೆ












Click it and Unblock the Notifications