ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್ 19: ಒಂದೇ ತಿಂಗಳಲ್ಲಿ ಬೆಂಗಳೂರಿನ ಕಲ್ಪಳ್ಳಿ ಸ್ಮಶಾನ ಭರ್ತಿ

|
Google Oneindia Kannada News

ಬೆಂಗಳೂರು, ಮೇ 18: ಕೊರೊನಾ ಸೋಂಕಿತರ ಶವವನ್ನು ಅಂತ್ಯಸಂಸ್ಕಾರ ಮಾಡಲು ಪ್ರಾರಂಭಿಸಿ ಒಂದು ತಿಂಗಳೊಳಗಾಗಿ ಕಲ್ಪಳ್ಳಿ ಸ್ಮಶಾನ ಭರ್ತಿಯಾಗಿದೆ.

ಇನ್ಯಾವುದೇ ಕೊರೊನಾ ಸೋಂಕಿತರ ಅಂತ್ಯ ಸಂಸ್ಕಾರ ಮಾಡಲು ಇಲ್ಲಿ ಜಾಗವಿಲ್ಲ, ಕುಟುಂಬದವರು ಈ ಪ್ರದೇಶದಲ್ಲಿ ಕುಟುಂಬದವರು ಪ್ಲಾಟ್ ಹೊಂದಿದ್ದರೆ ಮಾತ್ರ ಅಂತ್ಯ ಸಂಸ್ಕಾರ ಮಾಡಬಹುದು ಇಲ್ಲವಾದಲ್ಲಿ ಕೊರೊನಾ ಸೋಂಕಿತರು ಅಥವಾ ಸೋಂಕು ಇಲ್ಲದೆ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೂ ಜಾಗ ಖಾಲಿ ಇಲ್ಲ.

ಟಿ.ಆರ್. ಮಿಲ್ ಸ್ಮಶಾನದ ಮುಂದೆ ಹೌಸ್ ಫುಲ್ ಬೋರ್ಡ್ ಹಾಕಿದ ಸಿಬ್ಬಂದಿ !ಟಿ.ಆರ್. ಮಿಲ್ ಸ್ಮಶಾನದ ಮುಂದೆ ಹೌಸ್ ಫುಲ್ ಬೋರ್ಡ್ ಹಾಕಿದ ಸಿಬ್ಬಂದಿ !

ಜಾಗವಿಲ್ಲದ ಕಾರಣ ಸೋಮವಾರದಿಂದ ಕೊರೊನಾ ಸೋಂಕಿತರ ಶವವನ್ನು ಸ್ವೀಕರಿಸುತ್ತಿಲ್ಲ, ಏಪ್ರಿಲ್‌ನಿಂದ ಕೊರೊನಾ ಸೋಂಕಿತರ ಶವದ ಅಂತ್ಯ ಸಂಸ್ಕಾರ ಆರಂಭಿಸಿದ್ದರು.

Kalpalli Burial Ground Run Out Of Space Less Than A Month After It Started Accepting Covid Bodies

25 ದಿನಗಳಲ್ಲಿಯೇ ಸ್ಮಶಾನದಲ್ಲಿ 250ಕ್ಕೂ ಹೆಚ್ಚು ಶವದ ಅಂತ್ಯಕ್ರಿಯೆ ನಡೆಸಲಾಗಿದೆ, 84 ಎಕರೆ ಸ್ಮಶಾನ ಇದಾಗಿದೆ. ಕೊರೊನಾ ಸೋಂಕಿತರ ಅಂತ್ಯಕ್ರಿಯೆಗೆ ಆನ್‌ಲೈನ್‌ನಲ್ಲಿ ಬುಕ್ ಬುಕಿಂಗ್ ನಿಲ್ಲಿಸಿದ್ದೇವೆ ಎಂದು ಎಡಿಡಿಎಸ್ ಗ್ರೇವ್ ವರ್ಕರ್ಸ್ ಯೂನಿಯನ್ ರಾಜ್ಯ ಕಾರ್ಯದರ್ಶಿ ರಾಜಾ ಕಲ್ಪಳ್ಳಿ ತಿಳಿಸಿದ್ದಾರೆ.

ಕುಟುಂಬದವರು ಶವವನ್ನು ಹಿಡಿದು ಬಂದಾಗ ಅನಿವಾರ್ಯವಾಗಿ ವಾಪಸ್ ಕಳುಹಿಸಬೇಕಾಗಿದೆ, ಇದು ಬೇಸರವೆನಿಸುತ್ತದೆ. ನಿತ್ಯ 20-30 ಶವಕ್ಕೆ ಅಂತ್ಯಸಂಸ್ಕಾರ ನಡೆಸಲಾಗುತ್ತಿತ್ತು, ಒಂದೊಮ್ಮೆ ಬಿಬಿಎಂಪಿ ಜಾಗವನ್ನು ಸ್ವಚ್ಛಗೊಳಿಸಿದರೆ 300 ಶವಗಳನ್ನು ಸುಡಬಹುದಾದ ಜಾಗ ನಿರ್ಮಾಣವಾಗುತ್ತದೆ ಎಂದರು.

Recommended Video

ಬ್ಲಾಕ್ ಫಂಗಸ್ ಬಗ್ಗೆ ಎಲ್ಲರೂ ಭಯ ಪಡಬೇಕಾಗಿಲ್ಲ | Oneindia Kannada

ಕರ್ನಾಟಕದಲ್ಲಿ 30,309 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ, 58,395ಮಂದಿ ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ 8678 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ, 31,795 ಮಂದಿ ಗುಣಮುಖರಾಗಿದ್ದಾರೆ.

English summary
Bengaluru: Kalpalli Burial Ground Run Out Of Space Less Than A Month After It Started Accepting Covid Bodies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X