• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನನ್ನ ಮತ್ತು ಶ್ರೀರಾಮುಲು ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ: ಸುಧಾಕರ್

|

ಬೆಂಗಳೂರು, ಏಪ್ರಿಲ್ 4: ನನ್ನ ಹಾಗೂ ಶ್ರೀರಾಮುಲು ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸಚಿವ ಡಾ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

   7 ತಿಂಗಳ ಕೊರೊನಾ ಸೋಂಕಿತ ಮಗಿವಿನ ಜೊತೆ ವೈದ್ಯರು ಹೇಗೆ ನಡೆದುಕೊಂಡಿದ್ದಾರೆ ನೋಡಿ

   ಕೆಲವು ದಿನಗಳಿಂದ ಶ್ರೀರಾಮುಲು ಹಾಗೂ ಸುಧಾಕರ್ ನಡುವೆ ಕೋಲ್ಡ್ ವಾರ್ ನಡೆಯುತ್ತಿದೆ ಎನ್ನುವ ಸುದ್ದಿಗಳು ಹರಿದಾಡಿದ್ದವು. ಅದಕ್ಕೆ ಪುಷ್ಟಿ ಎಂಬಂತೆ ಶುಕ್ರವಾರ ನಡೆದ ಸಭೆಯಲ್ಲಿ ನಿತ್ಯ ಕೊರೊನಾ ಹೆಲ್ತ್ ಬುಲೆಟಿನ್ ಓದಬೇಕು, ಆ ಜವಾಬ್ದಾರಿಯನ್ನು ಶ್ರೀರಾಮುಲು, ಸುಧಾಕರ್ ಬದಲಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೆ ನೀಡಿದ್ದಾರೆ.

   ಗಂಡು ಮಗುವಿಗೆ ಜನ್ಮ ನೀಡಿದ ಕೊರೊನಾ ಸೋಂಕಿತ ವೈದ್ಯೆ

   ಇದೆಲ್ಲವನ್ನೂ ಅಲ್ಲಗಳೆದಿರುವ ಸುಧಾಕರ್ ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಮುನಿಸಿನ ರಾಜಕೀಯ ಮಾಡಲು ನಾವು ಸಣ್ಣ ಮಕ್ಕಳಲ್ಲ. ನಮ್ಮದೇ ಆದ ಜವಬ್ದಾರಿಗಳಿವೆ. ಈ ಸುಳ್ಳು ಸುದ್ದಿಗಳ ಹಿಂದೆ ನೀಚ ರಾಜಕೀಯ ಷಡ್ಯಂತ್ರವಿದೆ.

   ನನ್ನ ಮತ್ತು ಆರೋಗ್ಯ ಸಚಿವರಾದ ಶ್ರೀರಾಮುಲು ಅವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕೊರೋನಾ ವಿರುದ್ಧ ಟೊಂಕ ಕಟ್ಟಿ ಹೋರಾಡುತ್ತಿದ್ದೇವೆ. ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದೇವೆ.

   ಕೊರೊನಾ ವೈರಸ್‌ಗೆ ತಡೆ ಒಡ್ಡಿತಾ ಭಾರತ? ಇಲ್ಲಿದೆ ಮಾಹಿತಿ!

   ನಾನು ಮತ್ತು ಶ್ರೀರಾಮುಲು ಅವರು ಅಣ್ಣ-ತಮ್ಮಂದಿರಂತೆ ಈ ರಾಜ್ಯದ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.ಇನ್ನು ನಾವಿಬ್ಬರು ಜನರ ಮಧ್ಯೆ ಇದ್ದು ಜನ ಸೇವೆ ಮಾಡಿಕೊಂಡು ಜನ ಪ್ರತಿನಿಧಿಗಳಾದವರು ನಮ್ಮ ಜನರಿಂದ ಬರುವ ಶಹಬಾಷ್ ಗಿರಿಯೇ ನಮಗೆ ಶ್ರೀ ರಕ್ಷೆ ಇದರಲ್ಲಿ ಪ್ರಚಾರದ ಮಾತೆಲ್ಲಿ ?,

   ಇನ್ನು ನಮ್ಮಿಬ್ಬರ ನಡುವೆ ಕಂದಕ ಹುಟ್ಟು ಹಾಕಿ ಜನ ಸಂಕಷ್ಟದಲ್ಲಿ ಇರುವ ಈ ಸಮಯದಲ್ಲಿ ಸುಳ್ಳು ಸುದ್ದಿ ಹಬ್ಬಿಸುವ ಮನಸ್ಥಿತಿ ಕೊರೊನಾಕ್ಕಿಂತ ಅಪಾಯಕಾರಿ , ನಾನೊಬ್ಬ ವೈದ್ಯ ಅದಕ್ಕಿಂತ ಹೆಚ್ಚಾಗಿ ಜನಸೇವೆಗೆ ತೊಡಗಿಸಿಕ್ಕೊಂಡವನು ಈ ರೀತಿಯ ಮಾತುಗಳಿಗೆ ಧೃತಿಗೆಟ್ಟು ಕರ್ತವ್ಯ ವಿಮುಖನಾಗುವವನು ನಾನಲ್ಲ ಪ್ರತಿಯೊಂದು ಟೀಕೆ ಪ್ರತಿ ಬಾರಿ ನನ್ನನ್ನು ಇನ್ನಷ್ಟು ಬಲಶಾಲಿಯಾಗಿ ಮಾಡಿದೆ ನನಗೆ ಆತ್ಮ ಸ್ಥೈರ್ಯ ತುಂಬುತ್ತದೆ "ನಿಂದಕರಿರಬೇಕಯ್ಯ " ಅನ್ನುವ ಬಸವಣ್ಣನ ಮಾತಿನಂತೆ ಮುನ್ನುಗಿ ಇನ್ನಷ್ಟು ಜನತಾ ಜನಾರ್ಧನ ಸೇವೆ ಮಾಡಲು ಪ್ರೇರೇಪಿಸುತ್ತದೆ .

   ನಮ್ಮ ಒಗ್ಗಟನ್ನು ಕೊರೊನ ಮಹಾಮಾರಿಯನ್ನು ಓಡಿಸುವಲ್ಲಿ ತೋರಿಸೋಣಸುಳ್ಳು ಸುದ್ದಿ ಹಬ್ಬಿಸುವವರಿಗೆ ಅವರವರ ದೇವರು ಒಳ್ಳೆ ಬುದ್ದಿ ಕೊಡಲೆಂದು ಪ್ರಾರ್ಥಿಸುತ್ತೇನೆ.

   English summary
   Minsiter Dr K Sudhakar Says there is no Variance between me and sriramulu.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X