ಲಲನೆಯರ ಜೊತೆ ಸರಸಕ್ಕಾಗಿ ಸರಗಳ್ಳತನ ಮಾಡುತ್ತಿದ್ದ ಗ್ಯಾಂಗ್ ಅಂದರ್..!
ಬೆಂಗಳೂರು: ಚಂದ ಚಂದದ ಲಲನೆಯನ್ನು ಜೊತೆಗಿನ ಸರಸಕ್ಕಾಗಿ ಇಲ್ಲೊಂದು ಟೀಮ್ ಕಳ್ಳತನಕ್ಕೆ ಇಳಿದಿತ್ತು. ಮಾನಿನಿಯರ ಮಾದಕ ಸೆಳೆತಕ್ಕೆ ಸಿಲುಕಿ ಸರಗಳ್ಳತನ ಹಾದಿಯನ್ನು ತುಳಿದಿದ್ದರು. ವೇಶ್ಯೆಯರ ಜೊತೆ ಸಂಬಂಧ ಬೆಳೆಸಿಕೊಳ್ಳಲು ಸರಗಳ್ಳತನ ಮಾಡುತ್ತಿದ್ದ ಮೂವರು ಕುಖ್ಯಾತ ಸರಗಳ್ಳರನ್ನು ಜಯನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೇ 26ರಂದು ಮಹಿಳೆಯನ್ನು ಹಿಂಬಾಲಿಸಿ ಸರಗಳ್ಳತನ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಜಯನಗರ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ತನಿಖೆ ನಡೆಸಿ ಆರೋಪಿಗಳಾದ ರಮೇಶ್, ಲೋಕೇಶ್ ಹಾಗೂ ಮೊಹಮ್ಮದ್ ಮುದಾಸೀರ್ ಎಂಬುವರನ್ನು ಬಂಧಿಸಿ 140 ಗ್ರಾಂ ಆರು ಚಿನ್ನದ ಸರ ಹಾಗೂ ಎರಡು ಬೈಕ್ ವಶಪಡಿಸಿಕೊಂಡಿದ್ದಾಾರೆ.
ಜಯನಗರ ಪೊಲೀಸರು ಬಂಧಿಸಿರುವ ಮೂವರು ಆರೋಪಿಗಳು ಬೇರೆ ಬೇರೆ ಏರಿಯಾಗಳಾಗಿದ್ದರೂ ಒಗ್ಗೂಡಿಯೇ ಸರಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರು. ನಗರದ ವಿವಿಧ ಕಡೆ 10ಕ್ಕಿಂತ ಹೆಚ್ಚು ಸರಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿ ಪರಪ್ಪನ ಅಗ್ರಹಾರ ಜೈಲಿಗೆ ಸೇರಿದ ಆರೋಪಿಗಳು ಅಲ್ಲಿ ಪರಸ್ಪರ ಪರಿಚಿತರಾಗಿ ಸ್ನೇಹಿತರಾಗಿದ್ದರು. ಗ್ಯಾಂಗ್ ರೀತಿಯಲ್ಲಿ ಟೀಮ್ ಕಟ್ಟಿಕೊಂಡು ಜಾಮೀನು ಸಿಕ್ಕ ಬಳಿಕ ಹೊರಬಂದು ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಸರಗಳ್ಳತನ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರು.
ವೇಶ್ಯೆಯರ ಸಹವಾಸಕ್ಕಾಗಿಯೇ ಸರಗಳ್ಳತನ
ಸರಗಳ್ಳತನವನ್ನು ಮಾಡುವುದು ವೈಶ್ಯಯರ ಸಂಪರ್ಕವನ್ನು ಮಾಡುವುದು. ಇದು ಆರೋಪಿಗಳ ನಿರಂತರವಾಗಿ ಕಾರ್ಯವಾಗಿತ್ತು. ವೇಶ್ಯೆಯರ ಸಂಪರ್ಕ ಹೊಂದಿದ್ದ ಆರೋಪಿಗಳು ಹಣಕ್ಕಾಗಿ ವಾಮಮಾರ್ಗ ಕಂಡುಕೊಂಡಿದ್ದರು. ನಗರದ ವಿವಿಧೆಡೆ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು ಕದ್ದ ಬೈಕಿನಲ್ಲಿ ಸರಗಳ್ಳತನ ಮಾಡುತ್ತಿದ್ದರು. ಕದ್ದ ಸರವನ್ನು ವೇಶ್ಯೆಯರಿಗೆ ನೀಡಿ ಅಂಟಿಸಿಕೊಂಡಿದ್ದ ದುಶ್ಚಟಗಳನ್ನ ತೀರಿಸಿಕೊಳ್ಳುತ್ತಿದ್ದರು. ಕುಡಿತಕ್ಕೆ ದಾಸರಾಗಿದ್ದ ಆರೋಪಿಗಳು ಮೋಜು ಮಸ್ತಿಯ ಜೀವನವನ್ನು ನಡೆಸುತ್ತಿದ್ದರು.

ಐವತ್ತಕ್ಕೂ ಹೆಚ್ಚು ಮಹಿಳೆಯರ ಜೊತೆ ಸಂಪರ್ಕ
ಸರಗಳ್ಳತನದ ಆರೋಪಿಗಳಾದ ರಮೇಶ್ ವಿರುದ್ಧ ಸುಬ್ರಮಣ್ಯಪುರ ಪೊಲೀಸ್ ಠಾಣೆ ರೌಡಿಶೀಟರ್ ಆಗಿದ್ದು ಈತನ ವಿರುದ್ಧ 13ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣ ದಾಖಲಾಗಿವೆ. ಲೋಕೇಶ್ ಹಾಗೂ ಮೊಹಮ್ಮದ್ ವಿರುದ್ಧ ತಲಾ 11 ಕೇಸ್ ಗಳು ದಾಖಲಾಗಿವೆ. ಸರಗಳ್ಳತನ ಮಾಡಿದರೆ ಹೆಚ್ಚು ಹಣ ಸಿಗಲಿದೆ ಎಂಬ ಕಾರಣಕ್ಕಾಗಿಯೇ ನಿರಂತರವಾಗಿ ಸರಗಳ್ಳತನ ಕೃತ್ಯಗಳಲ್ಲಿ ಮಾತ್ರ ತೊಡಗಿಸಿಕೊಂಡಿದ್ದರು. ಸುಮಾರು 50ಕ್ಕಿಂತ ಹೆಚ್ಚು ಮಹಿಳೆಯರ ಜೊತೆ ಸಂಬಂಧ ಹೊಂದಿದ್ದರು ಎಂದು ಆರೋಪಿಗಳು ಹೇಳಿರುವುದಾಗಿ ಪೊಲೀಸ್ ಮೂಲಘಲು ಮಾಹಿತಿ ನೀಡಿವೆ.

ದಕ್ಷಿಣ ವಿಭಾಗದ ಡಿಸಿಪಿ ಹೇಳಿದ್ದೇನು..?
ಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಸರಗಳ್ಳತದ ಪ್ರಕರಣ ತನಿಖೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಮೋಜು ಮಸ್ತಿಗಾಗಿ ಕಳ್ಳತನ ಮಾಡುತ್ತಿದ್ದರು. ಇವರ ವಿರುದ್ದ ನಗರ ಬೇರೆ ಬೇರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಜೈಲಿಗೂ ಹೋಗಿ ಬಂದಿದ್ದಾರೆ. ಇವರಿಂದ 140ಗ್ರಾಂ ತೂಕದ 6 ಚಿನ್ನದ ಸರ ಮತ್ತು ಎರಡು ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ದಕ್ಷಿಣ ವಿಭಾದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications