ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನತಾ ಕರ್ಫ್ಯೂ: ದಿನಾಲೂ ಗಿಜಿಗುಡುತ್ತಿದ್ದ ಸದಾಶಿವನಗರ ನಿಶ್ಯಬ್ಧ!

|
Google Oneindia Kannada News

ಬೆಂಗಳೂರು, ಮಾ. 22: ರಾಜಕೀಯ, ಚಿತ್ರರಂಗದ ಗಣ್ಯರು ವಾಸಿಸುವ ಬೆಂಗಳೂರಿನ ಸದಾಶಿನಗರ ಸಂಪೂರ್ಣ ಸ್ತಬ್ಧವಾಗಿದೆ. ಹೆಚ್ಚಾಗಿ ರಾಜಕೀಯ ಗಣ್ಯರ ಮನೆಗಳಿರುವ ಸದಾಶಿವನಗರದಲ್ಲಿ ಬೆಂಬಲಿಗರಿಂದ ತುಂಬಿ ತುಳುಕುತ್ತಿತ್ತು. ಆದರೆ ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಇವತ್ತು ಸದಾಶಿವನಗರದ ರಸ್ತೆಗಳು ಖಾಲಿಯಾಗಿದೆ.

ರಾಜಕಾರಣಿಗಳು ಹಾಗೂ ಚಿತ್ರರಂಗದ ಗಣ್ಯರು ಹಾಗೂ ಶ್ರೀಮಂತರು ಹೆಚ್ಚಾಗಿರುವ ಪ್ರದೇಶ ಸದಾಶಿವನಗರ. ಜೊತೆಗೆ ಉನ್ನತಾಧಿಕಾರಿಗಳು ಇಲ್ಲಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ಕೊಟ್ಟಿರುವ ಜನತಾ ಕರ್ಫ್ಯೂಗೆ ಎಲ್ಲರೂ ಸಂಪೂರ್ಣ ಬೆಂಬಲ ಕೊಟ್ಟಿದ್ದಾರೆ. ಹೀಗಾಗಿ ಎಲ್ಲರೂ ತಮ್ಮ ಮನೆಯಲ್ಲಿದ್ದು ಕೊರೊನಾ ವೈರಸ್ ವಿರುದ್ಧ ಸರ್ಕಾರದ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಹೀಗಾಗಿ ಇಡೀ ಸದಾಶಿನಗರ ಬಣಗುಡುತ್ತಿದೆ.

Coronavirus Janta Curfew Live Updates: ಭಾರತದಲ್ಲಿ ಕೊರೊನಾ ಸಾವಿನ ಸಂಖ್ಯೆ 7ಕ್ಕೆ ಏರಿಕೆCoronavirus Janta Curfew Live Updates: ಭಾರತದಲ್ಲಿ ಕೊರೊನಾ ಸಾವಿನ ಸಂಖ್ಯೆ 7ಕ್ಕೆ ಏರಿಕೆ

ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್, ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸೇರಿದಂತೆ ಅನೇಕ ರಾಜಕೀಯ ನಾಯಕರ ಮನೆಗಳು ಸದಾಶಿವನರದಲ್ಲಿವೆ.

Janata curfew: Prestigious Sadashivanagar in Bangalore is Completely Quiet

ಯುಗಾದಿ ಮುಗಿಯುವವರೆಗೂ ಬರಬೇಡಿ: ದೇಶದಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿರುವುದರಿಂದ ಹಬ್ಬ ಮುಗಿಯುವವರೆಗೆ ಮನೆಗೆ ಬರಬೇಡಿ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕೊರೊನಾ ಹರಡುತ್ತಿರುವ ಪ್ರಮಾಣ ಹೆಚ್ಚಾಗುತ್ತಿದೆ. ಹಬ್ಬ ಮುಗಿಯುವವರೆಗೆ ಕಾರ್ಯಕರ್ತರು ಬರಬಾರದು. ಹಬ್ಬದ ಬಳಿಕ ನಾನೇ ನಿಮ್ಮ ಕ್ಷೇತ್ರಗಳಿಗೆ ಬರುತ್ತೇನೆ. ಮನೆಮುಂದೆ ಬಂದು ಒತ್ತಡ ತರಬೇಡಿ. ಸರ್ಕಾರದ ಜೊತೆಗೆ ನಾವು ಕೈಜೋಡಿಸಬೇಕಿದೆ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

English summary
Janata curfew: Prestigious Sadashivanagar in Bangalore is completely quiet. Prominent politicians and cinema dignitaries are at home and support the Janata curfew.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X