• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸ್ಯಾಂಡಲ್ ವುಡ್ ನಟರಿಗೆ ಬಿಗ್ ಶಾಕ್! ಯಾರ್ಯಾರ ಮನೆ ಮೇಲೆ ಐಟಿ ದಾಳಿ?

|
   ದಿ ವಿಲನ್, KGF, ನಟಸಾರ್ವಭೌಮನಿಗೆ ಶಾಕ್ ನೀಡಿದ IT..! | Oneindia Kannada

   ಬೆಂಗಳೂರು, ಜನವರಿ 03: ಕನ್ನಡದ ಘಟಾನುಘಟಿ ನಟರಾದ ಪುನೀತ್ ರಾಜಕುಮಾರ್, ಶಿವರಾಜ್ ಕುಮಾರ್, ಸುದೀಪ್, ಯಶ್ ಸೇರಿದಂತೆ ಹಲವು ನಟರು, ನಿರ್ದೇಶಕರು, ನಿರ್ಮಾಪಕರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

   ತೆರಿಗೆ ವಂಚನೆ ಆರೋಪದ ಮೇಲೆ ದಾಳಿ ನಡೆದಿದೆ. ಇಂದು ಬೆಳ್ಳಂಬೆಳಗ್ಗೆ ಏಕಕಾಲದಲ್ಲೇ ದಾಳಿ ನಡೆಸಿದ ಐಟಿ ಅಧಿಕಾರಿಗಳು ದಾಖಲೆಗಳ ಪರಿಶಿಲನೆಯಲ್ಲಿ ತೊಡಗಿದ್ದಾರೆ. ಪ್ರತಿಯೊಬ್ಬರ ಮನೆಯಲ್ಲೂ ತಲಾ ಎಂಟು ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

   ನಟ ಪುನೀತ್, ಶಿವಣ್ಣ, ರಾಕ್ ಲೈನ್ ಮನೆ ಮೇಲೆ ಐಟಿ ದಾಳಿ

   ದಾಳಿ ನಡೆಸಿರುವ ಐಟಿ ಅಧಿಕಾರಿಗಳು, ಮನೆಯಲ್ಲಿರುವ ಯಾರೂ ಮನೆಯಿಂದ ಹೊರಹೋಗದಂತೆ ನಿರ್ಬಂಧ ಹೇರಿದ್ದಾರೆ. ಕರ್ನಾಟಕ-ಗೋವಾ ವಲಯದ ಹಿರಿಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

   ಅಪ್ಪು-ಶಿವಣ್ಣ ಮನೆ ಮೇಲೆ ಐಟಿ ದಾಳಿ

   ಅಪ್ಪು-ಶಿವಣ್ಣ ಮನೆ ಮೇಲೆ ಐಟಿ ದಾಳಿ

   ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮನೆ ಮೇಲೆ ಬೆಳ್ಳಂಬೆಳಗ್ಗೆ ಐಟಿ ದಾಳಿ ನಡೆದಿದ್ದು, ಪುನೀತ್ ರಾಜಕುಮಾರ್ ಅವರ ಸದಾಶಿವ ನಗರ ನಿವಾಸದಲ್ಲಿ ಐಟಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ನಾಗವಾರದಲ್ಲಿರುವ ಶಿವರಾಜ್ ಕುಮಾರ್ ಅವರ ಮನೆಯಲ್ಲೂ ದಾಖಲೆಗಳ ಪರಿಶಿಲನೆ ನಡೆಸಲಾಗುತ್ತಿದೆ. ತಲಾ ಎಂಟು ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

   ನಟ ಪುನೀತ್ ರಾಜ್ ಕುಮಾರ್ ಮನೆ ಮೇಲೆ ಐಟಿ ದಾಳಿ

   ಯಶ್-ಸುದೀಪ್ ಮನೆ ಮೇಲೆ ಐಟಿ ಕಣ್ಣು

   ಯಶ್-ಸುದೀಪ್ ಮನೆ ಮೇಲೆ ಐಟಿ ಕಣ್ಣು

   ಕೆಜಿಎಫ್ ಚಿತ್ರದ ಅಮೋಘ ಯಶಸ್ಸಿನ ಖುಷಿಯಲ್ಲಿದ್ದ ರಾಕಿಂಗ್ ಸ್ಟಾರ್ ಯಶ್ ಅವರ ಮನೆ ಮೇಲೂ ಐಟಿ ದಾಳಿ ನಡೆದಿದೆ. ಜೆಪಿ ನಗರದಲ್ಲಿರುವ ಕಿಚ್ಚ ಸುದೀಪ್ ಮನೆಯ ಮೇಲೂ ದಾಳಿ ನಡೆದಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಕನ್ನಡದ ಘಟಾನುಘಟಿ ನಟರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ಕಣ್ಣು ಬಿದ್ದಿದೆ.

   ರಾಕ್ ಲೈನ್ ಗೂ ಶಾಕ್!

   ರಾಕ್ ಲೈನ್ ಗೂ ಶಾಕ್!

   ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ತೆರಿಗೆ ವಂಚಿಸಿದ ಆರೋಪ ಎದುರಿಸುತ್ತಿದ್ದು, ಅವರ ಮನೆ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದೆ. ಪಾರದರ್ಶಕ ವ್ಯವಹಾರದ ದಾಖಲೆ ನೀಡದೆ ಸಿನಿಮಾ ಮಾಡಿರುವ ಆರೋಪ ಮತ್ತು 2018 ರಲ್ಲಿ ಕನ್ನಡ ಚಿತ್ರರಂಗ ಕೋಟಿ ಕೋಟಿ ವ್ಯವಹಾರ ದಾಟಿದ ಕಾರಣ ಈ ದಾಳಿ ನಡೆದಿದೆ.

   ನಿರ್ದೇಶಕ, ನಿರ್ಮಾಪಕರ ಮೇಲೂ ಐಟಿ ಕಣ್ಣು

   ನಿರ್ದೇಶಕ, ನಿರ್ಮಾಪಕರ ಮೇಲೂ ಐಟಿ ಕಣ್ಣು

   'ಕೆಜಿಎಫ್' ಡೈರೆಕ್ಟರ್ ಪ್ರಶಾಂತ ನೀಲ್, ನಿರ್ಮಾಪಕ ವಿಜಯ್ ಕಿರಗಂದೂರು, 'ವಿಲನ್' ನಿರ್ಮಾಪಕ ಸಿ ಆರ್ ಮನೋಹರ್ ಅವರ HSR ಲೇಔಟ್ ನಿವಾಸ, ವಿತರಕ, ನಿರ್ಮಾಪಕ ಜಯಣ್ಣ ಅವರ ನಿವಾಸದ ಮೇಲೂ ದಾಳಿ ನಡೆದಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

   English summary
   Income tax raid on famous Kannada actors Puneeth Rajkumar, Shiva Rajkumar, Sudeep, Yash's houses in Bengaluru creates a panic situation in Sandalwood .
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X