ಬೆಂಗಳೂರಿನ ಆಟೋ ಡ್ರೈವರ್ ಮನೆ ಮೇಲೆ ಐಟಿ ದಾಳಿ!
ಬೆಂಗಳೂರು, ಮೇ 01: ನಗರದ ಆಟೋ ಡ್ರೈವರ್ ಒಬ್ಬರ ಮನೆಯ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ವಿಚಿತ್ರವೆನಿಸಿದರೂ ಇದು ನಿಜ, ಸಾಮಾನ್ಯ ಆಟೋ ಚಲಾಯಿಸುವ ಆಟೋ ಡ್ರೈವರ್ ಒಬ್ಬರ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆಶ್ಚರ್ಯವೆಂಬತೆ ಅಲ್ಲಿ ಅಪಾರ ಪ್ರಮಾಣದ ಹಣ, ಆಸ್ತಿಯನ್ನೂ ಪತ್ತೆ ಮಾಡಿದ್ದಾರೆ.
ಬೆಂಗಳೂರಿನ ವೈಟ್‌ಫಿಲ್ಡ್ ವಿಲ್ಲಾದಲ್ಲಿ ವಾಸವಿರುವ ಸುಬ್ರಮಣಿ ಎಂಬ ಆಟೋ ಡ್ರೈವರ್ ಅವರ ಮನೆ ಮೇಲೆ ಐಟಿ ಅಧಿಕಾರಿಗಳು ಕೆಲ ದಿನಗಳ ಹಿಂದೆ ದಾಳಿ ನಡೆಸಿದ್ದರು. ಈ ಸಮಯ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಗರದಲ್ಲಿ ಆಟೋ ಓಡಿಸುತ್ತಿರುವ ಸುಬ್ರಹ್ಮಣ್ಯ ಅವರಿಗೆ ಹಲವು ಪ್ರಮುಖ ರಾಜಕಾರಣಿಗಳು, ಉದ್ಯಮಿಗಳ ಒಡನಾಟ ಇದೆ ಎಂಬ ಕಾರಣಕ್ಕೆ ಐಟಿ ಅಧಿಕಾರಿಗಳು ಸುಬ್ರಹ್ಮಣ್ಯ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಸುಬ್ರಹ್ಮಣ್ಯ ಅವರ ಹೆಸರಿನಲ್ಲಿ ಐಶಾರಾಮಿ ವಿಲ್ಲಾಗಳು, ಕಾರುಗಳು, ಆಸ್ತಿ ಇರುವುದು ಪತ್ತೆಯಾಗಿದೆ ಎಂದು ಹೇಳಲಾಗಿದೆ.
ಸುಬ್ರಹ್ಮಣ್ಯ ಬಿಜೆಪಿ ಮುಖಂಡನಾಗಿದ್ದು, ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಆಪ್ತ ಎಂದು ಹೇಳಲಾಗಿದೆ. ಆದರೆ ಸುಬ್ರಹ್ಮಣ್ಯ ಮೇಲೆ ಐಟಿ ದಾಳಿ ಪ್ರತಿಕ್ರಿಯೆ ನೀಡಿರುವ ಅವರು ಸುಬ್ರಹ್ಮಣ್ಯ ಯಾರೆಂಬುದು ತಿಳಿದಿಲ್ಲ, ಅವರ ಮನೆಯಲ್ಲಿ ಅಕ್ರಮ ಆಸ್ತಿ, ಹಣ ಪತ್ತೆಯಾಗಿದ್ದರೆ ಕ್ರಮ ಕೈಗೊಳ್ಳಲಿ ಎಂದು ಹೇಳಿದ್ದಾರೆ.












Click it and Unblock the Notifications