ಅಮೆರಿಕದಲ್ಲಿ ಚೇತರಿಕೆ ಆದ್ರೂ ಟೆಕ್ಕಿ ನೇಮಕಾತಿ ಆಗುತ್ತಿಲ್ಲ

IT firms shun campuses despite surge in projects from America,
ಬೆಂಗಳೂರು, ಸೆ.24: ಅಮೆರಿಕದಲ್ಲಿ ಆರ್ಥಿಕ ಚೇತರಿಕೆ ಕಂಡುಬಂದಿದೆ. ಇದರಿಂದ ಭಾರತದ ಮಾಹಿತಿ ತಂತ್ರಜ್ಞಾನ ಕಂಪನಿಗಳಿಗೆ ಅನೇಕ ಯೋಜನೆಗಳು ದಕ್ಕುತ್ತಿವೆ. ಆದರೂ ಭಾರತೀಯ ಕಂಪನಿಗಳು ಅದಕ್ಕೆ ತಕ್ಕಂತೆ ನೇಮಕಾತಿ ಆಗುತ್ತಿಲ್ಲ ಎಂಬುದು ಮಾಹಿತಿ ತಂತ್ರಜ್ಞಾನ ಉದ್ಯಮದ ಸದ್ಯದ ಅಳಲು.

ಕಳೆದ ಜೂನ್ ತ್ರೈಮಾಸಿಕದಲ್ಲಿ ನೇಮಕಾತಿಯನ್ನು ಕಡಿಮೆ ಮಾಡಲಾಗಿತ್ತು. ಆದರೆ ಅದಾದ ನಂತರ ಹೊಸ ಯೋಜನೆಗಳು ಕಂಪನಿಗಳಿಗೆ ದೊರೆಯುತ್ತಿದ್ದು ಮುಂದಿನ ತ್ರೈಮಾಸಿಕದ ಫಲಿತಾಂಶ ಆಶಾದಾಯಾಕವೆನಿಸಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ನೇಮಕಾತಿ ನಡೆಯದಿರುವುದನ್ನು ಉದ್ಯಮ ಪರಿಣತರು ಗಮನಿಸಿದ್ದಾರೆ. ತಜ್ಞರ ಪ್ರಕಾರ ಐಟಿ ವಲಯದಲ್ಲಿ ಸದ್ಯಕ್ಕೆ ನೇಮಕಾತಿ ಸ್ಥಗಿತಗೊಂಡಿದೆ.

Cognizant, Wipro, TCS, Infosys ನಂತಹ ಕಂಪನಿಗಳು ಕಳೆದ ವರ್ಷ ಸಾವಿರಾರು ವಿದ್ಯಾರ್ಥಿಗಳನ್ನು ನೇಮಿಸಿಕೊಂಡಿದ್ದಾರಾದರೂ ಸದ್ಯಕ್ಕೆ ಯಾವುದೇ ನೇಮಕಾತಿಗೆ ಮುಂದಾಗಿಲ್ಲ. ಮುಂಬೈ, ಚೆನ್ನೈನಲ್ಲೂ ಇದೇ ಪ್ರವೃತ್ತಿ ಕಂಡುಬಂದಿದೆ.

ಕಳೆದ ವರ್ಷ ಸುಮಾರು ಕಂಪನಿಗಳು ಕಾಲೇಜು ಕ್ಯಾಂಪಸ್ಸುಗಳಿಗೆ ಎಡತಾಕಿದ್ದವು. ಆದರೆ ಈ ಬಾರಿ ಅರ್ಧಕ್ಕರ್ಧ ಕಂಪನಿಗಳು ಇತ್ತ ತಲೆ ಹಾಕುತ್ತಿಲ್ಲ ಮಾನವ ಸಂಪನ್ಮೂಲ ಸಂಸ್ಥೆಯ ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ.

ಇನ್ನು ATOS ಮತ್ತು Accenture ಅಂತಹ ಕಂಪನಿಗಳು ಮೇ ತಿಂಗಳಲ್ಲಿಯೇ ಕ್ಯಾಂಪಸ್ ನೇಮಕಾತಿ ಮಾಡಿಕೊಂಡಿವೆಯಾದರೂ ಯಾವೊಂದು ಕಂಪನಿಯೂ ಇನ್ನೂ ಯಾವುದೇ ವಿದ್ಯಾರ್ಥಿಯನ್ನು ತಮ್ಮ ಕಂಪನಿಗೆ ಬಂದು ಉದ್ಯೋಗಕ್ಕೆ ಸೇರಿಕೊಳ್ಳಿ ಎಂದು ತಿಳಿಸಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+