ಬ್ಲೇಡಿನಿಂದ ಕೈಕೊಯ್ದುಕೊಂಡು ಪೊಲೀಸರಿಗೆ ಕರೆ ಮಾಡಿದ ಮಹಿಳಾ ಟೆಕ್ಕಿ
ಬೆಂಗಳೂರು, ಮಾರ್ಚ್ 29: ಮಹಿಳಾ ಟೆಕ್ಕಿಯೊಬ್ಬರು ಬ್ಲೇಡಿನಿಂದ ಕೈಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.
ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಕೆಯ ಮೂಲತಃ ಬಾಗಲಕೋಟೆಯವಳಾಗಿದ್ದು ಸಹೋದ್ಯೋಗಿಯೊಬ್ಬ ಪ್ರೀತಿಸಿ ಕೈಕೊಟ್ಟಿದ್ದ ಅದಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದೆ ಎಂದು ತಿಳಿಸಿದ್ದಾರೆ.
ಪ್ರತಿಷ್ಠಿತ ಐಟಿ ಕಂಪನಿಯೊಂದರಲ್ಲಿ ಕಳೆದ ಎರಡು ವರ್ಷಗಳಿಂದ ಅವರು ಕೆಲಸ ನಿರ್ವಹಿಸುತ್ತಿದ್ದರು. ಬಿಟಿಎಂ ಲೇಔಟ್‌ಲ್ಲಿರುವ ಪಿಜಿಯಲ್ಲಿ ವಾಸವಿದ್ದರು ಆದರೆ ಗುರುವಾರ ಮೂರ್ತಿನಗರದ ಲಾಡ್ಜ್ಒಂದರಲ್ಲಿ ಉಳಿದುಕೊಂಡಿದ್ದರು.

ರಾತ್ರಿ 9.30ರ ಸುಮಾರಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹೆಚ್ಚಿನ ಮಾಹಿತಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮೇಲೆ ದೊರೆಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆಯ ಪೋಷಕರು ಕೂಡ ಬೆಂಗಳೂರಿಗೆ ಬಂದಿದ್ದು ಅವರ ಬಗ್ಗೆ ಮಾಹಿತಿ ಹೇಳಲು ಹಿಂದೇಟು ಹಾಕಿದ್ದಾರೆ.












Click it and Unblock the Notifications