• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳಲೋಕಕ್ಕೆ ಮಂಗಳಯಾನ; ನಡೆದುಬಂದ ದಾರಿ!

By Mahesh
|

ಬೆಂಗಳೂರು, ಸೆ.24: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ತನ್ನ ಮೊದಲ ನೌಕೆಯನ್ನು ಮಂಗಳನತ್ತ ಚಿಮ್ಮಿಸಿ ಸುಮಾರು ಐದು ದಶಕಗಳ ನಂತರ ಭಾರತ ಈ ಮಹಾನ್ ಸಾಹಸಕ್ಕೆ ಕೈ ಹಾಕಿತು. 2013ರ ನವೆಂಬರ್ ನಲ್ಲಿ ಆರಂಭವಾದ ಈ ಅದ್ಭುತ ಯಾನ 2014ರ ಸೆಪ್ಟೆಂಬರ್ ನಲ್ಲಿ ತನ್ನ ಗುರಿ ಮುಟ್ಟಿದೆ. ತನ್ನ ಮೊದಲ ಯತ್ನದಲ್ಲೇ ಮಂಗಳನ ಕಕ್ಷೆಗೆ ತನ್ನ ನೌಕೆಯನ್ನು ಯಶಸ್ವಿಯಾಗಿ ತಲುಪಿಸಿದ ಕೀರ್ತಿ ಭಾರತದ ಇಸ್ರೋ ಸಂಸ್ಥೆಗೆ ಸಿಕ್ಕಿದೆ. ಮಂಗಳಯಾನದ ಕಾಲಾನುಕ್ರಮ ವಿವರ ಇಲ್ಲಿದೆ.

ಭಾರತಕ್ಕಿಂತ ಮೊದಲು ಅಮೆರಿಕ ಅಲ್ಲದೆ ರಷ್ಯಾ, ಯುರೋಪ್ ಖಂಡಗಳು ಮಂಗಳನ ಬಗ್ಗೆ ತಿಳಿಯಲು ಅನೇಕ ಉಪಗ್ರಹಗಳನ್ನು ಕಳಿಸಿದ್ದವು. 51 ಯೋಜನೆಗಳಲ್ಲಿ 26 ಯಶಸ್ವಿಯಾಗಿದ್ದವು. ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ 307 ದಿನಗಳಲ್ಲಿ ಮಂಗಳದ ಅಂಗಳದಲ್ಲಿ ತನ್ನ 'ಮಂಗಳಯಾನ' ನೌಕೆಯನ್ನು ಯಶಸ್ವಿಯಾಗಿ ತಲುಪಿಸಿ ಹೊಸ ಇತಿಹಾಸ ಸೃಷ್ಟಿಸಿದೆ. [ಎಲ್ಲರಿಗಿಂತ ನಾವೇ ಕಡಿಮೆ, ಆದರೂ ಸಾಧನೆ ಹಿರಿಮೆ]

60ರ ದಶಕದಿಂದ ಇಲ್ಲಿಯವರೆಗಿನ ಮಂಗಳಯಾನದ ಐತಿಹಾಸಿಕ ಮೈಲಿಗಲ್ಲು ಹಾಗೂ ಇತರೆ ದೇಶಗಳ ಯಶಸ್ಸು ಹಾಗೂ ವೈಫಲ್ಯಗಳ ವಿವರ ಮುಂದಿದೆ.

ಜುಲೈ 14, 1965: ನಾಸಾದ ಮಾರಿನೆರ್ 4 ಮಂಗಳನತ್ತ ಹಾರಾಟ ನಡೆಸಿ, ಮಂಗಳ ಗ್ರಹದ ಮೇಲ್ಮೈ ಚಿತ್ರಗಳನ್ನು ಮೊಟ್ಟಮೊದಲ ಬಾರಿಗೆ ಜಗತ್ತಿಗೆ ಪರಿಚಯಿಸಿತು. ಸುಮಾರು 8 ತಿಂಗಳುಗಳ ಕಾಲ ತನ್ನ ಯಾನವನ್ನು ಮುಂದುವರೆಸುವಲ್ಲಿ ಯಶಸ್ವಿಯಾಯಿತು.

ಮೇ 19, 1971: ಯುಎಸ್ಎಸ್ಆರ್ ಮಾರ್ಸ್ 2 ಆರ್ಬಿಟರ್ 1972ರ ತನಕ ಮಂಗಳ ಗ್ರಹ ಕುರಿತ ಮಾಹಿತಿ ರವಾನಿಸಿತು. ಅದರೆ, ಲ್ಯಾಂಡರ್ ಕ್ರಾಶ್ ಅದ ಹಿನ್ನೆಲೆಯಲ್ಲಿ ಯೋಜನೆ ಪೂರ್ಣ ಪ್ರಮಾಣದಲ್ಲಿ ಯಶ ಕಾಣಲಿಲ್ಲ.

ಡಿಸೆಂಬರ್ 9, 2003: 1998ರಲ್ಲೇ ಮಂಗಳನ ಅಂಗಳಕ್ಕೆ ಜಿಗಿಯುವ ಪ್ರಯತ್ನ ಮಾಡಿದ್ದ ಜಪಾನಿಯರು ಮತ್ತೊಮ್ಮೆ ಯತ್ನಿಸಿದರೂ ಸಫಲತೆ ಕಾಣಲಿಲ್ಲ.

ಡಿಸೆಂಬರ್ 25, 2003: ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಬೀಗಲ್ 2 ಲ್ಯಾಂಡರ್ ಕಕ್ಷೆ ತಲುಪಿದರೂ ಲ್ಯಾಂಡಿಂಗ್ ವೇಳೆಯಲ್ಲಿ ಸರಿಯಾದ ಸಂವಹನ ಸಾಧಿಸಲು ಆಗಲಿಲ್ಲ.

ನವೆಂಬರ್ 8, 2011: ರಷ್ಯಾದ ಫೋಬೊಸ್ ಗ್ರಂಟ್ ನೌಕೆ ಚೀನಾದ ಮಂಗಳ ಉಪಗ್ರಹ ಯಿಂಗ್ಯೂ 1 ಹೊತ್ತು ನಭಕ್ಕೆ ಹಾರುವ ಯತ್ನದಲ್ಲೇ ವಿಫಲವಾಯಿತು. [ವಿಜ್ಞಾನಿಗಳೆಂದರೆ ಹಾಗೇ, ಮಕ್ಕಳಷ್ಟೇ ಮುಗ್ಧರು!]

ನವೆಂಬರ್ 5, 2014:ಭಾರತದ ಇಸ್ರೋ ಕೇಂದ್ರ ಪ್ರಥಮ ಬಾರಿಗೆ ಮಂಗಳಯಾನ ಆರಂಭಿಸಿ 74 ಮಿಲಿಯನ್ ಡಾಲರ್ ವೆಚ್ಚದಲ್ಲಿ ದೇಶಿ ನಿರ್ಮಿತ ಉಪಗ್ರಹ ಪಿಎಸ್ ಎಲ್ ವಿ ಸಿ25 ವಾಹಕದ ಮೂಲಕ ಹಾರಿಸಿ ಮಂಗಳನ ಕಕ್ಷೆಯನ್ನು ಸೆ.24ರಂದು ಮುಟ್ಟಿಸುವಲ್ಲಿ ಯಶಸ್ವಿ.

ನವೆಂಬರ್ 8, 2014: ನಾಸಾ Mars Atmosphere and Volatile Evolution (MAVEN) ಮೂಲಕ ಮಂಗಳನ ಮೇಲ್ಮೈ ವಾತಾವಾರಣದ ಮಾಹಿತಿ ಕಲೆಹಾಕಲು ಯತ್ನಿಸಿತು. ಸೆ.21ರಂದು ಮಂಗಳನ ಕಕ್ಷೆಗೆ ಮಾವೆನ್ ತಲುಪಿದೆ.

* ನವೆಂಬರ್ 5, 2013 ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟಾದಿಂದ ಇಸ್ರೋದ ಪಿಎಸ್ ಎಲ್ ವಿ ಸಿ25 ಉಡಾವಣಾ ವಾಹಕದ ಮೂಲಕ ಉಪಗ್ರಹ ಉಡಾವಣೆ

* ನವೆಂಬರ್ 7 ರಂದು ಭೂಮಿಯ ಸುತ್ತ ಮೊದಲ ಪರಿಭ್ರಮಣೆ

* ನವೆಂಬರ್ 8 ರಂದು ಭೂಮಿಯ ಸುತ್ತ ಎರಡನೇ ಪರಿಭ್ರಮಣೆ

* ನವೆಂಬರ್ 9 ರಂದು ಭೂಮಿಯ ಸುತ್ತ ಮೂರನೇ ಪರಿಭ್ರಮಣೆ

* ನವೆಂಬರ್ 11 ರಂದು ಭೂಮಿಯ ಸುತ್ತ ನಾಲ್ಕನೇ ಪರಿಭ್ರಮಣೆ

* ನವೆಂಬರ್ 12 ರಂದು ಭೂಮಿಯ ಸುತ್ತ ಐದನೇ ಪರಿಭ್ರಮಣೆ

* ನವೆಂಬರ್ 16 ರಂದು ಭೂಮಿಯ ಸುತ್ತ ಆರನೇ ಪರಿಭ್ರಮಣೆ.

* ಡಿಸೆಂಬರ್ 1 ರಂದು ಭೂಕಕ್ಷೆಯಿಂದ ಮಂಗಳನತ್ತ ಪಯಣ ಶುರು.

* ಡಿಸೆಂಬರ್ 4 ರಂದು ಭೂಕಕ್ಷೆಯಿಂದ ಮಂಗಳನತ್ತ ಪಯಣ ಶುರು 9.25 ಲಕ್ಷ ಕಿ.ಮೀ ಸುತ್ತಳತೆಯಿಂದ ಎಸ್ಕೇಪ್.

* ಡಿಸೆಂಬರ್ 11 ರಂದು ಭೂಕಕ್ಷೆಯಿಂದ ಮಂಗಳನತ್ತ ಹಾರಿದ ಮಂಗಳಯಾನ ನೌಕೆಯ ಅಲ್ಪ ಸ್ವಲ್ಪ ಬದಲಾವಣೆ.

* ಏಪ್ರಿಲ್ 9, 2014 ರಂದು ಮಂಗಳಯಾನ ನೌಕೆ ಪಥ ಸರಿಪಡಿಸುವಿಕೆ.

* ಜೂನ್ 11, 2014 ರಂದು ಎರಡನೇ ಬಾರಿ ಪಥ ಸರಿಪಡಿಸುವಿಕೆ.

* ಸೆಪ್ಟೆಂಬರ್ 22, 2014ರಂದು ಮಂಗಳನ ಗುರುತ್ವ ವಲಯಕ್ಕೆ ಮಂಗಳಯಾನ ಪ್ರವೇಶ, 10 ತಿಂಗಳು ನಿಷ್ಕ್ರಿಯವಾಗಿದ್ದ 440 ನ್ಯೂಟನ್ LAM ಇಂಜಿನ್ ಪರೀಕ್ಷೆ, ಮತ್ತೊಮ್ಮೆ ಪಥ ಸರಿಪಡಿಸುವಿಕೆ. [LAM ಇಂಜಿನ್ ಟೆಸ್ಟ್ ವರದಿ]

* ಸೆಪ್ಟೆಂಬರ್ 23, 2014: ಇಸ್ರೋ ವಿಜ್ಞಾನಿಗಳಿಂದ ಮಂಗಳಯಾನ ನೌಕೆ ಮಂಗಳನ ಕಕ್ಷೆಗೆ ಸೇರಿಸಲು ಅಂತಿಮ ಹಂತದ ಸಿದ್ಧತೆ

* ಸೆಪ್ಟೆಂಬರ್ 24 ಬೆಳಗ್ಗೆ ನೌಕೆಯ ಇಂಜಿನ್ ವೇಗ ತಗ್ಗಿಸಿ ಕಕ್ಷೆಯೊಳಗೆ ಪ್ರವೇಶಿಸಲು ಸಜ್ಜುಗೊಳಿಸಲಾಯಿತು. 8ಗಂಟೆಯೊಳಗೆ ಮಂಗಳನ ಕಕ್ಷೆ ಮಂಗಳಯಾನ ನೌಕೆ ಪ್ರವೇಶ. [ಮಂಗಳಯಾನ ಯಶಸ್ವಿ]

* ಸೆ.24, 2014: ಪ್ರಧಾನಿ ಮೋದಿ ಅವರಿಂದ ಅಭೂತಪೂರ್ವ ಸಾಧನೆಗೆ ಅಭಿನಂದಿಸಿ ಭಾಷಣ.[ಭಾಷಣದ ಪೂರ್ಣವರದಿ]

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Chronology of events: The orbiter named Mangalyaan almost five decades after NASA completed the first successful mission to Mars, India launched its own spacecraft toward Earth’s closest neighbor.On Wednesday(Sep.24) successfully placed its Mars Orbiter Mission (MOM) in the Red Planet's orbit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more