ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಜ್ಞಾನಿಗಳೆಂದರೆ ಹಾಗೇ, ಮಕ್ಕಳಷ್ಟೇ ಮುಗ್ಧರು!

By ಮಹೇಶ್ ಮಲ್ನಾಡ್
|
Google Oneindia Kannada News

ಇಸ್ರೋದಲ್ಲಿ ಇಂದು ಹಬ್ಬದ ವಾತಾವರಣ..ಛೇ ಈಗ ಅಲ್ಲಿದ್ರೇ ಅಂಥಾ ನನಗನಿಸ್ತಾ ಇದೆ. ನನಗೇಕೆ ಹಲವಾರು ಮಂದಿಗೆ ವಿಜ್ಞಾನಿಗಳನ್ನು ಹತ್ತಿರದಿಂದ ನೋಡಿ ಅವರ ಸಂಭ್ರಮದಲ್ಲಿ ಭಾಗವಹಿಸುವ ಖುಷಿ ಇರುತ್ತದೆ. ಇಸ್ರೋ ಕೇಂದ್ರಗಳ ಕ್ಯಾಂಟಿನ್ ಗಳಲ್ಲಿ ಇಂದು ತಲಾ ಎರಡು ಲಡ್ಡುಗಳು ಸಿಕ್ತಾ ಇತ್ತು. ಹಬ್ಬದೂಟ. ದಿನಪೂರ್ತಿ ಹಾಗೂ ನಾಳೆ ಕೂಡಾ ಆಡಿಟೋರಿಯಂನಲ್ಲಿ ರಿಪೀಟ್ ಟೆಲಿಕಾಸ್ಟ್ ಮಾಡಲಾಗುತ್ತದೆ.

ಈಗ ಲೈವ್ ನಲ್ಲಿ ಹೇಗೆ ಯೋಜನೆ ಯಶಸ್ವಿಯಾಗಿದ್ದಕ್ಕೆ ಚಪ್ಪಾಳೆ ತಟ್ಟಿ ಮಕ್ಕಳಂತೆ ಮುಗ್ಧರಾಗಿ ಸಂಭ್ರಮಪಟ್ಟರೋ ಅದೇ ರೀತಿ ನಾಳೆ ರಿಪೀಟ್ ಟೆಲಿಕಾಸ್ಟ್ ಆದಾಗಲೂ ಅದೇ ಜೋಶ್ ನಲ್ಲಿ ಸಂಭ್ರಮಿಸುತ್ತಾರೆ. ವಿಜ್ಞಾನಿಗಳೆಂದರೆ ಏನಪ್ಪಾ ಹೀಗೆಲ್ಲಾ ಇರ್ತಾರಾ ಎಂದು ಅನಿಸುವಷ್ಟು ಮಟ್ಟಿಗೆ ಅವರ ಉಲ್ಲಾಸ ಉತ್ಸಾಹವಿರುತ್ತದೆ. ಅವರಲ್ಲಿ ಸಹಜ ಕುತೂಹಲವಿರುತ್ತದೆ. ಕೆಲವರು ಮಾತು ಕಮ್ಮಿ ಎನಿಸಿದರೂ ಮಾಹಿತಿಯ ಆಗರವಾಗಿರುತ್ತಾರೆ.

ISRO

ಮಂಗಳಯಾನ ಯಶಸ್ವಿಯಾದ ನಂತರ ಮಾತನಾಡಿದ ಮೋದಿ ಅವರು ಕ್ರಿಕೆಟ್ ಪಂದ್ಯ ಗೆದ್ದಾಗ ಭಾರತ ಸಂಭ್ರಮಿಸುವುದಕ್ಕೂ ಹೆಚ್ಚಿನ ಸಂಭ್ರಮ ಇಂದು ನಾವು ಕಾಣಬೇಕಿದೆ. ನಮ್ಮ ವಿಜ್ಞಾನಿಗಳ ಸಾಧನೆ ಆ ಗೆಲುವಿಗಿಂತ ದೊಡ್ಡ ಪ್ರಮಾಣದ್ದು ಎಂದಿದ್ದಾರೆ. ನಿಜ ಇದು ದೊಡ್ಡ ಸಾಧನೆ ಹಾಗೂ ವಿಜ್ಞಾನಿಗಳ ಸಂಭ್ರಮ ಕೂಡಾ ಕ್ರಿಕೆಟ್ ಮ್ಯಾಚ್ ಗೆದ್ದಾಗ ಚಿಣ್ಣರು ನಲಿದಾಡುವುದಕ್ಕಿಂತ ಹೊರತಾಗಿರುವುದಿಲ್ಲ.[ಮೋದಿ ಭಾಷಣದ ಪೂರ್ಣವರದಿ]

ಬೆಂಗಳೂರಿನ ಭಾರತೀಯ ಬಾಹ್ಯಕಾಶ ಕೇಂದ್ರ ISAC, ಇಂದು ಮೋದಿ ಭೇಟಿ ನೀಡಿದ ಟೆಲಿಮೆಟ್ರಿ ಕೇಂದ್ರ ISTRAC, ಬ್ಯಾಲಾಳುವಿನ ಹೊಸ ಕೇಂದ್ರ, LPSC, LEOS ಜೊತೆಗೆ ಹಾಸನದ ಎಂಸಿಎಫ್ ಕೇಂದ್ರ ಹೀಗೆ ಇಸ್ರೋದ ಪ್ರತಿ ಯೋಜನೆಯಲ್ಲೂ ಕರ್ನಾಟಕದ ಕೊಡುಗೆ ಅಪಾರ. ಆದರೆ, ರಾಜ್ಯದ ಇಂಜಿನಿಯರ್ ಪದವೀಧರರು ವಿಜ್ಞಾನಿಗಳಾಗದೆ ಸಾಫ್ಟ್ ವೇರ್ ಟೆಕ್ಕಿಗಳಾಗಲು ಹವಣಿಸುವುದು ಹೆಚ್ಚಿದ್ದರಿಂದ ಪರರಾಜ್ಯದ ಪ್ರತಿಭಾವಂತರ ದಂಡು ಇಲ್ಲಿನ ಇಸ್ರೋಗಳನ್ನು ತುಂಬಿಸಿದೆ.

ಇಸ್ರೋದಲ್ಲಿ ಕನ್ನಡ ಭಾಷಣ ಕೇಳಿಸುತ್ತದೆ: ಆದರೆ, ಇಸ್ರೋ ಕೇಂದ್ರದಲ್ಲಿ ಕನ್ನಡಿಗರಿಲ್ಲವೇ? ಮೋದಿ ಭಾಷಣ ಕನ್ನಡದಲ್ಲಿ ಏಕಿಲ್ಲ? ಸಿಎಂ ಸಿದ್ದರಾಮಯ್ಯ ಅವರಿಗೆ ಮಾತನಾಡುವ ಅವಕಾಶ ನೀಡಬೇಕಿತ್ತು? ಎಂದು ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಕೂಗೆದ್ದಿರುವುದು ಕಂಡು ಬಂದಿದೆ. [ಮಂಗಳಯಾನ ಯಶಸ್ವಿ]

ಇಸ್ರೋದಲ್ಲಿ ಕನ್ನಡಿಗರು ಅನೇಕರಿದ್ದಾರೆ. ಜೊತೆಗೆ ಪ್ರತಿ ವರ್ಷ ನಡೆಯುವ ಸೆಮಿನಾರ್ ನಲ್ಲಿ ಕನ್ನಡದಲ್ಲೇ ವಿಜ್ಞಾನಿಗಳು ತಮ್ಮ ಪ್ರಬಂಧಗಳನ್ನು ಮಂಡಿಸುತ್ತಾರೆ. ಈ ಸೆಮಿನಾರ್ ಗಳನ್ನು ಐಸಾಕ್ ಕೇಂದ್ರಕ್ಕೆ ಮಾತ್ರ ಸೀಮಿತಗೊಳಿಸದೆ ಹೊರ ಜಗತ್ತಿಗೂ ಪ್ರಸಾರ ಮಾಡಿದರೆ ಎಲ್ಲರಿಗೂ ಅನುಕೂಲ ಹಾಗೂ ಜ್ಞಾನಾರ್ಥಿಗಳಿಗೆ ಅಪಾರ ಪ್ರಮಾಣದ ಮಾಹಿತಿ ಲಭ್ಯವಾಗಲಿದೆ ಎಂಬುದು ನನ್ನ ಅನಿಸಿಕೆ.

ISRO Mars Orbiter Mission Successful Child like enthusiasm scientists

ಇಸ್ರೋದ ಮಂಗಳಯಾನ ಯೋಜನೆಯಲ್ಲಿ ಸುಮಾರು 14 ವಿಜ್ಞಾನಿಗಳು ತೊಡಗಿಕೊಂಡಿದ್ದರು. ಅಧ್ಯಕ್ಷ ಕೆ ರಾಧಾಕೃಷ್ಣನ್, ವಿ. ಆದಿಮೂರ್ತಿ, ಎಂ. ಅಣ್ಣಾದೊರೈ, ಪಿ. ರಾಬರ್ಟ್, ಸುಬ್ಬಯ್ಯ ಅರುಣನ್, ಬಿ.ಎಸ್. ಚಂದ್ರಶೇಖರ್, ಎಸ್.ಕೆ. ಶಿವಕುಮಾರ್, ಬಿ. ಜಯಕುಮಾರ್, ವಿ. ಕೇಶವರಾಜು, ಪಿ. ಏಕಾಂಬರಂ, ಪಿ. ಕೆ. ಕೃಷ್ಣನ್, ಎಂ. ಎಸ್. ಪನ್ನೀರ ಸೆಲ್ವಂ, ಎಂ. ಎಸ್. ವೈ. ಪ್ರಸಾದ್ ಹಾಗೂ ಐಸಾಕ್ ನ ಶಿವಕುಮಾರ್ ಸೇರಿದಂತೆ ಅನೇಕ ವಿಜ್ಞಾನಿಗಳ ಪರಿಶ್ರಮ ಸಾರ್ಥಕವಾಗಿದೆ.[ಐತಿಹಾಸಿಕ ಮೈಲಿಗಲ್ಲು ಹಿನ್ನೋಟ]

ಮಗುವಿನಂಥ ಮನಸ್ಸಿನ ವಿಜ್ಞಾನಿಗಳು ಹಗಲು ರಾತ್ರಿ ಎನ್ನದೆ ದುಡಿದ ಫಲವನ್ನು ಅಕ್ಷರಗಳಿಂದ ಹೊಗಳಲು ಸಾಧ್ಯವಿಲ್ಲ. ಇಂಥದ್ದೊಂದು ಕೇಂದ್ರದಲ್ಲಿ(ಐಸಾಕ್ ನ ಹೈಬ್ರೀಡ್ ಮೈಕ್ರೋಸರ್ಕೀಟ್ಸ್ ಲ್ಯಾಬ್) ಕೆಲಕಾಲ ಕಳೆದ ನನ್ನ ಜೀವನ ಸಾರ್ಥಕ. ವಿಜ್ಞಾನಿಗಳು ನಮ್ಮಂಥೇ ಮನುಷ್ಯರೇ, ನಮಗಿಂತ ಕೊಂಚ ಹೆಚ್ಚು ಭಾವುಕರು ಅವರ ಸಾಧನೆ ಬಗ್ಗೆ ಹೆಮ್ಮೆ ಹಾಗೂ ಗರ್ವವಿದೆ.

English summary
ISRO Mars Orbiter Mission Successful: Child-like enthusiasm among ISRO scientists for their next Solar mission.Excited ISRO scientists are greeting each other. Truly a proud moment for India said ISAC director KS Shivakumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X