RCB vs KKR: ಕ್ರಿಕೆಟ್ ಪ್ರೇಮಿಗಳೇ... ಪ್ರಯಾಣಿಕರೇ ರಸ್ತೆಗಿಳಿಯುವ ಮುನ್ನ ಒಮ್ಮೆ ಗಮನಿಸಿ
ಬೆಂಗಳೂರು, ಮಾರ್ಚ್. 29: ಸಿಲಿಕಾನ್ ಸಿಟಿಯ ಎಂಜಿ ರಸ್ತೆಯ ಪಕ್ಕದಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡಗಳ ನಡುವಿನ ಐಪಿಎಲ್ ಪಂದ್ಯ ಮಾರ್ಚ್. 29 ರ ಶುಕ್ರವಾರ ನಡೆಯಲಿದೆ.
ಆರ್‌ಸಿಬಿ ಮ್ಯಾಚ್‌ಗೆ ಸೇರುವವರ ಸಂಖ್ಯೆ ಅಧಿಕವಾಗಿರುವ ಕಾರಣ ಸಂಚಾರ ದಟ್ಟಣೆ ತಪ್ಪಿಸಲು ಬೆಂಗಳೂರು ಸಂಚಾರಿ ಪೊಲೀಸರು ಸಂಚಾರ ಸಲಹೆ ನೀಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಪಂದ್ಯದ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಪ್ರದೇಶ ಸುತ್ತಮುತ್ತ ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಹೊಸ ಸಲಹೆಯನ್ನು ನೀಡಿದೆ.

ಸಮಚಾರಿ ಇಲಾಖೆಯು ಪಾರ್ಕಿಂಗ್ ನಿರ್ಬಂಧಗಳನ್ನು ಪಟ್ಟಿ ಮಾಡಿ ಅದರ ಮಾಹಿತಿಯನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಸುಗಮ ವಾಹನ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಮತ್ತು ಟ್ರಾಫಿಕ್ ದಟ್ಟಣೆಯನ್ನು ತಪ್ಪಿಸಲು ಪಾರ್ಕಿಂಗ್‌ಗೆ ಪರ್ಯಾಯ ಸ್ಥಳಗಳನ್ನು ಸಹ ನೀಡಿದೆ.
ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು (ಮಾರ್ಚ್. 29) ಮಧ್ಯಾಹ್ನ 3 ರಿಂದ ರಾತ್ರಿ 11ರ ವರೆಗೆ ಐಪಿಎಲ್ ಕ್ರಿಕೆಟ್ ಪಂದ್ಯ ನಡೆಯಲಿದೆ. ಹಾಗಾದರೆ ಯಾವ್ಯಾವ ರಸ್ತೆಗಳಿಗೆ ನಿರ್ಬಂಧ ಸೂಚಿಸಲಾಗಿದೆ. ಯಾವ್ಯಾವ ಸ್ಥಳಗಳಲ್ಲಿ ಪಾರ್ಕಿಂಗ್ ಇಲ್ಲ... ಎಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದೆ ಎನ್ನುವ ಪಟ್ಟಿ ಇಲ್ಲಿದೆ.
ಪಾರ್ಕಿಂಗ್ ನಿರ್ಬಂಧಗಳು
ಟ್ರಾಫಿಕ್ ಪೊಲೀಸರು ಈ ಕೆಳಗಿನ ಸ್ಥಳಗಳು ಮತ್ತು ಸ್ಟ್ರೀಟ್‌ಗಳಲ್ಲಿ ಯಾವುದೇ ವಾಹನಗಳ ಪಾರ್ಕಿಂಗ್ ಮಾಡುವಂತಿಲ್ಲ ಎಂದು ಪಟ್ಟಿ ಬಿಡುಗಡೆ ಮಾಡಿದೆ.
* ಕ್ವೀನ್ಸ್ ರಸ್ತೆ, ಎಂಜಿ ರಸ್ತೆ, ಎಂಜಿ ರಸ್ತೆಯಿಂದ ಕಬ್ಬನ್ ರಸ್ತೆ, ರಾಜಭವನ ರಸ್ತೆ,
* ಸೆಂಟ್ರಲ್ ಸ್ಟ್ರೀಟ್ ರಸ್ತೆ, ಕಬ್ಬನ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ
* ಕಸ್ತೂರ್ಬಾ ರಸ್ತೆ, ಅಂಬೇಡ್ಕರ್ ವೀದಿ ರಸ್ತೆ, ಟ್ರಿನಿಟಿ ಇನ್, ಲ್ಯಾವೆಲ್ಲೆ ರಸ್ತೆ
* ವಿಠ್ಠಲ್ ಮಲ್ಯ ರಸ್ತೆ, ಕಿಂಗ್ಸ್ ರಸ್ತೆ ಮತ್ತು ನೃಪತುಂಗ ರಸ್ತೆ.
'ಸಂಚಾರ ಸಲಹೆ / Traffic advisory' pic.twitter.com/0VGvqlAuZO
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) March 28, 2024
ಸಾರ್ವಜನಿಕರಿಗೆ ವಾಹನ ಪಾರ್ಕಿಂಗ್ ಸ್ಥಳಗಳು
ಐಪಿಎಲ್ ನೋಡಲು ಬರುವವರಿಗೆ ಪರ್ಯಾಯವಾಗಿ ವಾಹನಗಳ ಪಾರ್ಕಿಂಗ್ ಮಾಡಲು ಅನೇಕ ಸ್ಥಳಗಳನ್ನು ನಿಯೋಜನೆ ಮಾಡಲಾಗಿದೆ.
* ಸೇಂಟ್ ಜೋಸೆಫ್ಸ್ ಇಂಡಿಯನ್ ಸ್ಕೂಲ್ ಗ್ರೌಂಡ್
* ಯುಬಿ ಸಿಟಿ ಪಾರ್ಕಿಂಗ್,
* ಬಿಎಂಟಿಸಿ ಶಿವಾಜಿ ನಗರದ 1 ನೇ ಮಹಡಿ ಮತ್ತು ಹಳೆಯ ಕೆಜಿಐಡಿ (KGID) ಕಟ್ಟಡ,
* ಕಿಂಗ್ಸ್ ರಸ್ತೆ (ಕಬ್ಬನ್ ಪಾರ್ಕ್ ಒಳಭಾಗ)












Click it and Unblock the Notifications