ಐಎಂಎ ವಂಚನೆ: ಹೃದಯಾಘಾತದಿಂದ ಹೂಡಿಕೆದಾರ ಸಾವು
ಬೆಂಗಳೂರು, ಜೂನ್ 13: ಐಎಂಎ ಜ್ಯುವೆಲರ್ಸ್ ಸಂಸ್ಥೆಯಲ್ಲಿ ಲಕ್ಷಾಂತರ ಹಣ ಹೂಡಿ ಮೋಸ ಹೋದ ವ್ಯಕ್ತಿಯೊಬ್ಬರು ಇಂದು ಹೃದಯಾಘಾತದಿಂದ ಪ್ರಾಣ ಬಿಟ್ಟಿದ್ದಾರೆ.
ನಗರದ ಹಳೇಗುಡ್ಡದಹಳ್ಳಿ ನಿವಾಸಿ ಅಬ್ದುಲ್ ಪಾಷಾ ಎಂಬುವರು ಐಎಂಎ ಸಂಸ್ಥೆಯಲ್ಲಿ ಎಂಟು ಲಕ್ಷ ಹೂಡಿಕೆ ಮಾಡಿದ್ದರು, ಸಂಸ್ಥೆಯಿಂದ ವಂಚನೆ ಆಗಿದೆ ಎಂದು ತಿಳಿದು ಅವರಿಗೆ ಹೃದಯಾಘಾತವಾಗಿ ಇಂದು ಅವರು ಮೃತಪಟ್ಟಿದ್ದಾರೆ.
ಅಬ್ದುಲ್ ಪಾಷಾ ಅವರು ಇಬ್ಬರು ಹೆಣ್ಣು ಮಕ್ಕಳಿಂದ ಮೂರು-ಮೂರು ಲಕ್ಷ ಮತ್ತು ತಾವು ಸ್ವತಃ ಎರಡು ಲಕ್ಷ ಹಣ ಹೂಡಿಕೆ ಮಾಡಿದ್ದರು. ಸಂಸ್ಥೆಯಿಂದ ವಂಚನೆ ಆಗಿದೆ ಎಂದು ತಿಳಿದಾಗಲೇ ತೀವ್ರ ಖಿನ್ನತೆಗೆ ಜಾರಿದ್ದ ಅವರಿಗೆ ಇಂದು ಹೃದಯಾಘಾತ ಉಂಟಾದ ಕಾರಣ ಹೆಸರುಗಟ್ಟದ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅವರು ಅಲ್ಲಿಯೇ ಅಸುನೀಗಿದ್ದಾರೆ.

ಅವರಿಗೆ ಮದುವೆಯಾಗದ ಮಗಳೊಬ್ಬರು ಇದ್ದರು, ಅವರ ಮದುವೆ ಮುಂದಿನ ತಿಂಗಳು ನಿಶ್ಚಯವಾಗಿತ್ತು.












Click it and Unblock the Notifications