ಜಾತಿ, ಮತಗಳನ್ನು ಮೀರಿದ ಆಚರಣೆ ಯೋಗ: ಅನಂತ್ ಕುಮಾರ್
Recommended Video

ಬೆಂಗಳೂರು, ಜೂನ್ 21: ಪಿಇಎಸ್ ಕಾಲೇಜಿನ ಮೈದಾನದಲ್ಲಿ ಸಾವಿರಾರು ವಿದ್ಯಾರ್ಥಿಗಳ ಜತೆ ಕೇಂದ್ರ ಸಚಿವ ಅನಂತ್ ಕುಮಾರ್ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಯೋಗಾಭ್ಯಾಸ ನಡೆಸಿದರು.
ಖ್ಯಾತ ಹಾಕಿ ಪಟು ಆಶಿಶ್ ಬಳ್ಳಾಲ್, ಪಿಇಎಸ್ ವಿಶ್ವವಿದ್ಯಾಲಯದ ಕುಲಪತಿ ದೊರೆಸ್ವಾಮಿ ಸೇರಿದಂತೆ ಅನೇಕ ಪ್ರಮುಖರು ಯೋಗದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು.
ಬಳಿಕ ಮಾತನಾಡಿದ ಸಚಿವ ಅನಂತ್ ಕುಮಾರ್, ಪ್ರಧಾನಿ ನರೇಂದ್ರ ಮೋದಿಯವರು ಯೋಗವನ್ನು ವಿಶ್ವ ವ್ಯಾಪಿಗೊಳಿಸಿದ್ದಾರೆ.
ಯೋಗ ದಿನದ ಆಚರಣೆಯ ಕುರಿತು ಮೋದಿ ಅವರು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿದ್ದರು.

ಇದಕ್ಕೆ ಎಲ್ಲಾ 177 ದೇಶಗಳು ಅದಕ್ಕೆ ಮುಕ್ತವಾಗಿ ತಮ್ಮ ಆಚರಣೆ ಎಂಬಂತೆ ಬೆಂಬಲಿಸಿದವು. ಯೋಗ ಯಾವುದೇ ಜಾತಿಗೆ ಸಂಬಂಧಿಸಿದ್ದಲ್ಲ. ಅದು ಎಲ್ಲ ಜಾತಿ, ಮತ, ಪಂಥಗಳನ್ನು ಮೀರಿದ್ದು, ಜಗತ್ತಿನ ಆರೋಗ್ಯಕ್ಕೆ ಸಂಬಂಧಿಸಿದ್ದು ಎಂದು ಹೇಳಿದರು.
ಯೋಗ ನನ್ನ ಬಾಲ್ಯದಿಂದಲೂ ಜೀವನದಲ್ಲಿ ಹಾಸು ಹೊಕ್ಕಾಗಿದೆ. ರಾಜಕೀಯ ಹಾಗೂ ಸಾರ್ವಜನಿಕ ಜೀವನದಲ್ಲಿ ಒತ್ತಡಗಳ ನಡುವೆ ನನ್ನ ಆರೋಗ್ಯವನ್ನು ಕಾಪಾಡಿರುವುದು ಯೋಗ.

ನೀವು ಸಹ ನಿಮ್ಮ ಬದುಕಿನಲ್ಲಿ ಇದನ್ನು ಅಳವಡಿಸಿಕೊಳ್ಳಬೇಕು. ಶ್ರೀಕೃಷ್ಣನ ಯೋಗ ಸೂತ್ರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಆರೋಗ್ಯ ಪಡೆದುಕೊಳ್ಳಬೇಕು. ಸ್ವಸ್ಥ ಮತ್ತು ಸಶಕ್ತ ಭಾರತಕ್ಕಾಗಿ ನಾವೆಲ್ಲರೂ ಸ್ವಸ್ಥರಾಗಬೇಕು ಎಂದು ಹೇಳಿದರು.












Click it and Unblock the Notifications