ವಿಶ್ವ ಯೋಗ ದಿನ, ಬೆಂಗಳೂರಲ್ಲಿ ಎಲ್ಲೆಲ್ಲಿ ಕಾರ್ಯಕ್ರಮ?
ಬೆಂಗಳೂರು, ಜೂ. 20 : ಪ್ರಥಮ ಬಾರಿಗೆ ಆಚರಣೆ ಮಾಡಲಾಗುತ್ತಿರುವ 'ವಿಶ್ವ ಯೋಗ ದಿನಾಚರಣೆಗೆ' ಉದ್ಯಾನ ನಗರಿ ಬೆಂಗಳೂರು ಸಜ್ಜಾಗಿದೆ. ನಗರದ ವಿವಿಧ ಭಾಗಗಳಲ್ಲಿ ಜೂನ್ 21ರ ಭಾನುವಾರ ಬೆಳಗ್ಗೆ ಯೋಗ ಪ್ರದರ್ಶನ ನಡೆಯಲಿದೆ.
ಸರ್ಕಾರಿ ಹಾಗೂ ಖಾಸಗಿ ಸಂಘ-ಸಂಸ್ಥೆಗಳು ಯೋಗ ಪ್ರದರ್ಶನ, ಉಪನ್ಯಾಸ, ಯೋಗ ತರಗತಿ, ತರಬೇತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಭಾನುವಾರ ಹಮ್ಮಿಕೊಂಡಿವೆ. ಬೆಂಗಳೂರಿನಲ್ಲಿ ಎಲ್ಲೆಲ್ಲಿ ಏನೇನು ಕಾರ್ಯಕ್ರಮಗಳಿವೆ ಇಲ್ಲಿದೆ ಮಾಹಿತಿ.

ಶಿಲ್ಪಾ ಶೆಟ್ಟಿ ಬರ್ತಾರೆ : ಶ್ವಾಸ ಫೌಂಡೇಷನ್ ವತಿಯಿಂದ ಭಾನುವಾರ ಬೆಳಗ್ಗೆ 7.30ರಿಂದ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಯೋಗ ದಿನಾಚರಣೆ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ನಟಿ ಶಿಲ್ಪಾ ಶೆಟ್ಟಿ, ಗೃಹ ಸಚಿವ ಕೆ.ಜೆ.ಜಾರ್ಜ್, ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಸೇರಿದಂತೆ ಹಲವು ಸಚಿವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರಿಗೆ ಪ್ರವೇಶ ಉಚಿತ. [ಖ್ಯಾತ ಯೋಗಪಟು ಕಮಲೇಶ್ ಬರ್ವಾಲ್ ಸಂದರ್ಶನ]
ವಿಧಾನಸೌಧದ ಮುಂದೆ ಯೋಗ ಪ್ರದರ್ಶನ : ಯೋಗ ದಿನಾಚರಣೆ ಅಂಗವಾಗಿ ಆಯುಷ್ ಇಲಾಖೆ ವಿಧಾನಸೌಧ ಮುಂಭಾಗ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮೂರು ಸಾವಿರ ಎನ್‌ಸಿಸಿ ಕೆಡೆಟ್‌ಗಳು ಯೋಗ ಪ್ರದರ್ಶನ ನೀಡಲಿದ್ದಾರೆ.
ಪತಂಜಲಿ ಯೋಗ ಶಿಕ್ಷಣ ಸಮಿತಿ : ಬಸವೇಶ್ವರನಗರದ ಸಾಣೇಗುರುವನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಬೆಳಗ್ಗೆ 5.45ರಿಂದ ಸಾಮೂಹಿಕ ಯೋಗ ಪ್ರದರ್ಶನ, ಮಾಹಿತಿಗಾಗಿ ಕರೆ ಮಾಡಿ 9901779309.

ಅಕ್ಷರ ಪವರ್ ಯೋಗ ಅಕಾಡೆಮಿ : ಹೆಬ್ಟಾಳದ 'ಮಾಂಫೋ ಕನ್ವೆಕ್ಷನ್ ಸೆಂಟರ್'ನಲ್ಲಿ ಬೆಳಗ್ಗೆ 6 ಗಂಟೆಗೆ 300 ಯೋಗಪಟುಗಳು ಸೂರ್ಯನಮಸ್ಕಾರ ಮಾಡಲಿದ್ದಾರೆ. ಸಂಜೆ 6 ಗಂಟೆಗೆ ಯೋಗಕ್ಕೆ ಸಂಬಂಧಿಸಿದ ಆಹಾರ, ವಸ್ತುಗಳು, ವಸ್ತ್ರಗಳು ಮತ್ತು ಉಪಕರಣಗಳ ಪ್ರದರ್ಶನವಿದೆ. [ಆಂಜನೇಯ ಅವರೇ ನಾವೆಲ್ಲಾ ಸೋಮಾರಿಗಳಾ?]
ರಾಷ್ಟ್ರೋತ್ಥಾನ ಪರಿಷತ್ : ಬಸವನಗುಡಿ ನ್ಯಾಷನಲ್ ಕಾಲೇಜು ಹೈಸ್ಕೂಲ್ ಮೈದಾನದಲ್ಲಿ ಬೆಳಗ್ಗೆ 9ಗಂಟೆಗೆ ಯೋಗ ಪ್ರದರ್ಶನ ಮತ್ತು ಸಾರ್ವಜನಿಕರ ಸಮಾರಂಭ. ಮುಖ್ಯ ಅತಿಥಿಗಳಿ ಕೇಂದ್ರ ಸಚಿವ ಅನಂತ ಕುಮಾರ್.
ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠ : ಮಠದ ಆವರಣದಲ್ಲಿ ಯೋಗ ಶಿಕ್ಷಣ ತಜ್ಞ ಎಸ್.ವೀರಭದ್ರಯ್ಯ ಅವರಿಂದ ಯೋಗ ಕುರಿತು ವಿಶೇಷ ಉಪನ್ಯಾಸ ಆಯೋಜಿಸಲಾಗಿದೆ.
ಬ್ರಹ್ಮಾ ಕುಮಾರೀಸ್ : ವಿಶ್ವಶಾಂತಿಗಾಗಿ ಪ್ರಾರ್ಥಿಸಿ ಸಾಮೂಹಿಕ ಯೋಗ ಕಾರ್ಯಕ್ರಮ, ಸಂಜೆ 4.30 ರಿಂದ 7ಗಂಟೆ. ಸ್ಥಳ : ಕೋರಮಂಗಲದ ಒಳಾಂಗಣ ಕ್ರೀಡಾಂಗಣ. ಮಾಹಿತಿಗಾಗಿ 26674562 ಸಂಖ್ಯೆಗೆ ಕರೆ ಮಾಡಿ.
ಬೆಂಗಳೂರು ವಿವಿ : ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೆಳಗ್ಗೆ 7.30ಕ್ಕೆ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಯೋಗ ದಿನ ಹಮ್ಮಿಕೊಂಡಿದೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಳ್ಳಲಿದ್ದಾರೆ.












Click it and Unblock the Notifications