ಜೂ. 21ಕ್ಕೆ 7 ಸಾವಿರ ಮಂದಿಯಿಂದ ಯೋಗ ಪ್ರದರ್ಶನ

ಬೆಂಗಳೂರು, ಜೂ.19: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಬಸವನಗುಡಿ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ 7 ಸಾವಿರಕ್ಕೂ ಹೆಚ್ಚು ಜನರು ಏಕಕಾಲದಲ್ಲಿ ಯೋಗ ಪ್ರದರ್ಶನ ನೀಡಲು ಬಿಜೆಪಿ ಸಿದ್ಧತೆ ನಡೆಸಿದೆ.

ಜೂ.21ರಂದು ಬೆಳಗ್ಗೆ 10.30ಕ್ಕೆ ಯೋಗ ದಿನ ಕಾರ್ಯಕ್ರಮ ಆರಂಭವಾಗಲಿದ್ದು, ಸುಮಾರು 20 ನಿಮಿಷಗಳ ಕಾಲ ಯೋಗ ಪ್ರದರ್ಶನ ನೀಡಲಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೋತ್ಥಾನ ಪರಿಷತ್ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ ಅವರು ತಿಳಿಸಿದರು.

ಜಯನಗರ, ಸುಂಕೇನಹಳ್ಳಿ, ಕಲ್ಯಾಣನಗರ, ಅದಮ್ಯ ಚೇತನ ಶಾಲೆ, ಕೇಶವ ಶಿಲ್ಪ ಒಳಗೊಂಡಂತೆ ವಿವಿಧ ಯೋಗ ಕೇಂದ್ರಗಳ ಶಿಕ್ಷಕರು 'ಯೋಗ ದಿನ'ದಲ್ಲಿ ಪಾಲ್ಗೊಂಡು ಯೋಗ ಪ್ರದರ್ಶನ ನೀಡಲಿದ್ದಾರೆ. ಇದೇ ವೇಳೆ 'ಯೋಗ' ಸಂಬಂಧಿತ ವಿಶೇಷ ಲೇಖನ ಮಾಹಿತಿಯನ್ನೊಳಗೊಂಡ ಸ್ಮರಣ ಸಂಚಿಕೆಯು ಬಿಡುಗಡೆಯಾಗಲಿದೆ ಎಂದು ಹೇಳಿದರು.

International Yoga Day Celebration on June 21 in Bengaluru

ರಾಜ್ಯಪಾಲ ವಜುಭಾಯಿ ರೂಢಾವಾಲಾ ಅವರು ಯೋಗ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ವ್ಯವಸ್ಥಾ ಪ್ರಮುಖ ಮಂಗೇಶ್ ಭೇಂಡೆರವರು ಪ್ರಧಾನ ಭಾಷಣ ಮಾಡುವರು ಎಂದು ಹೇಳಿದರು.

ಕೇಂದ್ರ ರಸಗೊಬ್ಬರ ಸಚಿವ ಅನಂತ್ ಕುಮಾರ್‌ ಅವರು 'ಯೋಗ ಪ್ರದರ್ಶಿನಿ' ಉದ್ಘಾಟಿಸುವರು. ಯೋಗದ ಇತಿಹಾಸ ಪ್ರಮುಖ ಯೋಗ ಪ್ರವರ್ತಕರು, ಯೋಗದ ವಿವಿಧ ಅಂಗಗಳು ಕರ್ನಾಟಕ ಯೋಗಕ್ಕೆ ನೀಡಿದ ಕೊಡುಗೆ ಯೋಗ ಪರಿಕರಗಳು, ರಾಷ್ಟ್ರೋತ್ಥಾನ ಪರಿಷತ್ತಿನ ಚಟುವಟಿಕೆಗಳನ್ನು ವಿವರಿಸುವ ಮಾಹಿತಿಯನ್ನು ಈ ಪ್ರದರ್ಶಿನಿಯು ಒಳಗೊಂಡಿರುತ್ತದೆ ಎಂದು ವಿವರಿಸಿದರು.

ಶಾಸಕ ಸಿಎನ್ ಅಶ್ವಥನಾರಾಯಣ ಅವರು ಸ್ಯಾಂಕಿ ಕೆರೆ ಆವರಣ, ಸುಬ್ರಮಣ್ಯ ನಗರ ಮೈದಾನ, ಮಲ್ಲೇಶ್ವರ ಮೈದಾನದಲ್ಲಿ ಯೋಗ ದಿನ ಆಚರಣೆ ಹಮ್ಮಿಕೊಳ್ಳಲಾಗಿದೆ ಎಂದರು.

ಜಯನಗರ ಶಾಸಕ ಬಿಎನ್ ವಿಜಯಕುಮಾರ್ ಅವರು ಮಾತನಾಡಿ ಶಾಲಿನಿ ಗ್ರೌಂಡ್, ಜಯನಗರ 5ನೇ ಬ್ಲಾಕ್ ಮೈದಾನ, ಕಿತ್ತೂರು ರಾಣಿ ಚೆನ್ನಮ್ಮ ಗ್ರೌಂಡ್, ಜಯನಗರ 3ನೇ ಬ್ಲಾಕ್, ದುರ್ಗಪರಮೇಶ್ವರಿ ಮೈದಾನ, ಜೆಪಿನಗರದಲ್ಲಿ ಯೋಗಭ್ಯಾಸ ಆಯೋಜಿಸಿದ್ದಾರೆ.

ಕೇಂದ್ರ ರಸಗೊಬ್ಬರ ಸಚಿವ ಅನಂತ್ ಕುಮಾರ್, ಕೇಂದ್ರ ಕಾನೂನು ಸಚಿವ ಡಿವಿ ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಹಲವಾರು ನಾಯಕರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಪ್ರಕಟಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+