Bengaluru Traffic: ದಾರಿ ತಪ್ಪಿದ ಹೊರ ರಾಜ್ಯದ ಕಾರಿಗೆ ಬುದ್ದಿ ಕಲಿಸಿದ ಶಾಲಾ ಬಸ್!

ಬೆಂಗಳೂರು, ಆಗಸ್ಟ್ 3: ನಗರದಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಜನ ಸಾಕಷ್ಟು ಸಮಸ್ಯೆ ಅನುಭವಿಸಿದ್ದಾರೆ. ಇದರ ನಡುವೆ ನೀವು ಫುಟ್‌ಪಾತ್‌ನಲ್ಲಿ ಹೋಗುವ, ತಪ್ಪಾದ ಸೈಡ್‌ನಲ್ಲಿ ವಾಹನಗಳನ್ನು ಚಲಾಯಿಸುವ ಕಿಡಿಗೇಡಿಗಳನ್ನು ಕೂಡ ನೋಡಿರುತ್ತೀರಿ.

ಎಲ್ಲಾ ವಾಹನಗಳು ಟ್ರಾಫಿಕ್‌ ಸಿಗ್ನಲ್‌ನಲ್ಲಿ ಸಾಲಿನಲ್ಲಿ ನಿಂತು ತಮ್ಮ ಸರದಿಗಾಗಿ ಕಾಯುವಾಗ ಯಾವುದೋ ಒಂದು ವಾಹನ ಲೈನ್ ಕ್ರಾಸ್ ಮಾಡಿ ಮುಂದೆ ಹೋದರೆ ಕೋಪ ಬರುವುದು ಸಹಜ. ಅದರಲ್ಲೂ ಸುಶಿಕ್ಷಿತರು ಎನಿಸಿಕೊಂಡವರೇ ಈ ರೀತಿ ಮಾಡುವುದು ನೋಡಿದಾಗ ರೇಜಿಗೆ ಹುಟ್ಟುವುದು ಸಹಜ.

reverse-in-bengaluru-traffic-mishap

ಹೊರ ರಾಜ್ಯದ ಕಾರೊಂದು ಹೀಗೆ ಟ್ರಾಫಿಕ್ ನಿಯಮ ಮೀರಲು ಹೋಗಿ ಮುಖಭಂಗ ಅನುಭವಿಸಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮ ಎಕ್ಸ್‌ (ಟ್ವಿಟರ್) ನಲ್ಲಿ ಹಂಚಿಕೊಂಡಿದ್ದು ವೀಡಿಯೊ 180,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಇನ್‌ಸ್ಟಾಂಟ್‌ ಕರ್ಮ ಎಂದ ನೆಟ್ಟಿಗರು

ಎಲ್ಲರೂ ಸಾಲಿನಲ್ಲಿ ನಿಂತಿದ್ದಾಗ ಕಾರಿನ ಚಾಲಕನೊಬ್ಬ ತಪ್ಪಾದ ಲೇನ್‌ನಲ್ಲಿ ಮುಂದೆ ಹೋಗಲು ಪ್ರಯತ್ನಿಸಿದ್ದಾನೆ ಆದರೆ ಎದುರುಗಡೆಯಿಂದ ಬಂದ ಶಾಲಾ ಬಸ್‌ ದಾರಿ ಕೊಡದೇ ಕಾರನ್ನು ಹಿಂದಕ್ಕೆ ಚಲಿಸುವಂತೆ ಮಾಡಿದ್ದಾನೆ.

ಇದನ್ನು ಮೂಲತಃ 'MahiTwiets' ಹ್ಯಾಂಡಲ್‌ನೊಂದಿಗೆ ಬಳಕೆದಾರರು ಹಂಚಿಕೊಂಡಿದ್ದಾರೆ, ಕಾರು ನಿಯಮ ಮೀರಿ ಮುಂದೆ ಹೋಗಿದ್ದರ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. "ಟ್ರಾಫಿಕ್‌ನಲ್ಲಿ ಸಾಲಿನಲ್ಲಿ ನಿಂತು ಕಾಯುವವರು ಮೂರ್ಖರಂತೆ" ಎಂದು ವಿಡಿಯೋಗೆ ಶೀರ್ಷಿಕೆ ನೀಡಿದ್ದಾರೆ.

ವಿಡಿಯೋದಲ್ಲಿ ಕಿರಿದಾದ ರಸ್ತೆಯ ಒಂದು ಬದಿಯಲ್ಲಿ ವಾಹನಗಳ ಉದ್ದನೆಯ ಸಾಲು ಕಾಯುತ್ತಿರುವುದನ್ನು ನೋಡಬಹುದು , ಆದರೆ ಹರ್ಯಾಣ ರಾಜ್ಯದ ನೋಂದಾಯಿತ ಕಾರು, ಶಾಲಾ ಬಸ್ ಎದುರು ಭಾಗದಿಂದ ಬಂದ ನಂತರ ಕಾರು ದಾರಿಗೆ ಸುಂಕವಿಲ್ಲದೆ ಹಲವು ಮೀಟರ್ ಹಿಂದಕ್ಕೆ ಬಂದಿದೆ.

ದಂಡ ಕಟ್ಟಿದ ಕಾರು ಚಾಲಕ

ಈ ವಿಡಿಯೋ ವೈಟ್‌ಫೀಲ್ಡ್ ಟ್ರಾಫಿಕ್ ಪೊಲೀಸರ ಗಮನವನ್ನೂ ಸೆಳೆದಿದೆ. ಟ್ವೀಟ್‌ಗೆ ಅವರು ಪ್ರತಿಕ್ರಿಯೆ ನೀಡಿದ್ದು, "ನಿಯಮ ಮೀರಿದವರ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು, ನಾವು ಈ ಬಗ್ಗೆ ಪರಿಶೀಲನೆ ಮಾಡುವುದಾಗಿ" ಹೇಳಿದ್ದಾರೆ.

ಅದಾದ ಸ್ವಲ್ಪ ಸಮಯದ ನಂತರ ಎರಡನೇ ಪ್ರತಿಕ್ರಿಯೆ ನೀಡಿದ ವೈಟ್‌ಫೀಲ್ಡ್ ಸಂಚಾರ ಪೊಲೀಸ್ ಠಾಣೆಯ ಪೊಲೀಸರು, ಸಂಚಾರ ನಿಯಮ ಉಲ್ಲಂಘಿಸಿದ ಕಾರಿನ ಮಾಲೀಕರಿಗೆ ದಂಡ ವಿಧಿಸಲಾಗಿದೆ ಎಂದು ಹೇಳಿದರು. "ವಾಹನವನ್ನು ಪತ್ತೆಹಚ್ಚಲಾಗಿದೆ. ಸಂಚಾರ ನಿಯಮ ಉಲ್ಲಂಘನೆಗೆ ಅಗತ್ಯ ಕ್ರಮ ತೆಗೆದುಕೊಂಡಿದ್ದು, ಕಾರು ಮಾಲೀಕರು ದಂಡದ ಮೊತ್ತವನ್ನು ಪಾವತಿಸಿದ್ದಾರೆ," ಎಂದು ಹೇಳಿದ್ದಾರೆ.

ಪೊಲೀಸರು ತ್ವರಿತಗತಿಯಲ್ಲಿ ಸ್ಪಂದಿಸಿ ಕ್ರಮ ತೆಗೆದುಕೊಂಡಿದ್ದಕ್ಕೆ ಟ್ವಿಟರ್ ಬಳಕೆದಾರರು ಬೆಂಗಳೂರು ಟ್ರಾಫಿಕ್ ಪೊಲೀಸರನ್ನು ಶ್ಲಾಘಿಸಿದ್ದಾರೆ. ನಿಯಮ ಮೀರುವ ಅಂತಹ ಅಪರಾಧಿಗಳಿಗೆ ಒಬ್ಬರು ಕಲಿಸುವ ಏಕೈಕ ಮಾರ್ಗವಾಗಿದೆ, ಎಂದು ಇನ್ನೊಬ್ಬ ಬಳಕೆದಾರರು ಉತ್ತರಿಸಿದರು.

ಬೆಂಗಳೂರು ಟ್ರಾಫಿಕ್ ಪೊಲೀಸ್ ಇಲಾಖೆಯು ಈ ಹಿಂದೆ ಹಲವಾರು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಸಂಚಾರ ಶಿಸ್ತಿನ ಬಗ್ಗೆ ಜಾಗೃತಿ ಮೂಡಿಸಿದ್ದರೂ, ಆಗಾಗ್ಗೆ ಇಂತಹ ಘಟನೆಗಳು ನಡೆಯುತ್ತಿರುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+