Infosys: WFH ನಿಯಮದಲ್ಲಿ ಬದಲಾವಣೆ ತಂದ ಇನ್ಫೋಸಿಸ್
ಬೆಂಗಳೂರು, ಮಾರ್ಚ್ 07: ಮೈಸೂರು ಕ್ಯಾಂಪಸ್‌ನಲ್ಲಿ ಟ್ರೈನಿಗಳ ವಜಾ ಕಾರಣಕ್ಕೆ ಸುದ್ದಿಯಲ್ಲಿದ್ದ ಇನ್ಫೋಸಿಸ್ ಈಗ ಮನೆಯಿಂದ ಕೆಲಸ ಮಾಡುವ ನಿಯಮದಲ್ಲಿ ಬದಲಾವಣೆ ಮಾಡಿದೆ. ಮಾರ್ಚ್ 10ರಿಂದ ಅನ್ವಯವಾಗುವಂತೆ ಈ ನಿಯಮ ಜಾರಿಗೆ ಬರಲಿದ್ದು, ಮನೆಯಿಂದಲೇ ಕೆಲಸ ಮಾಡುವ ಆಯ್ಕೆಯನ್ನು ಕಡಿಮೆ ಮಾಡಿಕೊಳ್ಳಿ ಎಂದು ಉದ್ಯೋಗಿಗಳಿಗೆ ಕರೆ ನೀಡಿದೆ.
ಇನ್ಫೋಸಿಸ್‌ನಲ್ಲಿ ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳು ಮೊಬೈಲ್ ಅಪ್ಲಿಕೇಶನ್ ಮೂಲಕ ಹಾಜರಾತಿ ದಾಖಲು ಮಾಡುತ್ತಿದ್ದರು. ಆದರೆ ಈಗ ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ಕಡಿಮೆ ಮಾಡಿ, 10 ದಿನ ಕಛೇರಿಯಿಂದ ಕೆಲಸ ಮಾಡಿ ಎಂದು ಗುರುವಾರ ಇ-ಮೇಲ್ ಕಳಿಸಲಾಗಿದೆ.

ತಿಂಗಳಿನಲ್ಲಿ ಕನಿಷ್ಠ 10 ದಿನ ಕಛೇರಿಯಿಂದ ಕೆಲಸ ಮಾಡಿ. 'ಕಛೇರಿಗೆ ಮರಳಿ' ಎಂದು ಇನ್ಫೋಸಿಸ್ ಇ-ಮೇಲ್‌ನಲ್ಲಿ ಉದ್ಯೋಗಿಗಳಿಗೆ ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ಕ್ಯಾಂಪಸ್‌ನ ಟೀಮ್ ಲೀಡ್‌ಗಳಿಗೆ ಮನೆಯಿಂದ ಕೆಲಸ ಮಾಡುವ ಆಯ್ಕೆ ನೀಡುವುದನ್ನು ಕಡಿಮೆ ಮಾಡಿ ಎಂದು ನಿರ್ದೇಶನ ನೀಡಲಾಗಿದೆ.
ಕಛೇರಿಗೆ ಬನ್ನಿ: ತಿಂಗಳಿನಲ್ಲಿ ಮನೆಯಿಂದಲೇ ಕೆಲಸ ಮಾಡುವ ದಿನಗಳ ಆಯ್ಕೆಯನ್ನು ಕಡಿಮೆ ಮಾಡಿ. ಹೈಬ್ರಿಡ್ ಮಾದರಿಯ ನಿಯಮದಲ್ಲಿ ಬದಲಾವಣೆ ತರಲಾಗುತ್ತಿದೆ. ಹಿರಿಯ ಉದ್ಯೋಗಿಗಳು ಸೇರಿ ಎಲ್ಲರೂ ತಿಂಗಳಿನಲ್ಲಿ ಕನಿಷ್ಠ 10 ದಿನ ಕಛೇರಿಯಿಂದ ಕೆಲಸ ಮಾಡಬೇಕು ಎಂದು ಹೇಳಿದೆ.
ಇನ್ಫೋಸಿಸ್ ತನ್ನ ಇ-ಮೇಲ್‌ನಲ್ಲಿ, 'ನೀವು ತಿಳಿದಿರುವಂತೆ, ನಮ್ಮ ಸಂಯೋಜಿತ ಕೆಲಸ ಮಾದರಿಯು ಉದ್ಯೋಗಿಗಳು ತಿಂಗಳಿಗೆ ಕನಿಷ್ಠ 10 ದಿನಗಳು ಅಥವಾ ಅಗತ್ಯಗಳ ಪ್ರಕಾರ ಯಾವುದು ಹೆಚ್ಚೋ ಅದಕ್ಕೆ ಅನುಗುಣವಾಗಿ ಕಛೇರಿಯಿಂದ ಕೆಲಸ ಮಾಡಲು ನಿರೀಕ್ಷಿಸುತ್ತದೆ' ಎಂದು ತಿಳಿಸಿದೆ.
ಈ ಆದೇಶದಲ್ಲಿ ಜೆಎಲ್ 5 ಮತ್ತು ಅದರ ಕೆಳಗಿನ ಮಟ್ಟದ ಉದ್ಯೋಗಿಗಳಿಗೆ ಅನ್ವಯಿಸುತ್ತದೆ, ಇದರಲ್ಲಿ ಟೀಮ್ ಲೀಡ್‌ಗಳು, ಸಾಫ್ಟ್‌ವೇರ್ ಇಂಜಿಯರ್‌ಗಳು, ಹಿರಿಯ ಇಂಜಿನಿಯರ್‌ಗಳು, ಸಿಸ್ಟಮ್ ಇಂಜಿನಿಯರ್‌ಗಳು ಮತ್ತು ಸಲಹೆಗಾರರು ಸೇರಿದಂತೆ ಇತರರು ಸೇರಿದ್ದಾರೆ.
ವಿಶೇಷವಾಗಿ ಮೇಲ್ದರ್ಜೆಯಾದ ಜೆಎಲ್ 6ನಲ್ಲಿ ಮ್ಯಾನೇಜರ್‌ಗಳು, ಹಿರಿಯ ಮ್ಯಾನೇಜರ್‌ಗಳು, ಡೆಲಿವರಿ ಮ್ಯಾನೇಜರ್‌ಗಳು ಮತ್ತು ಹಿರಿಯ ಡೆಲಿವರಿ ಮ್ಯಾನೇಜರ್‌ಗಳನ್ನು ಒಳಗೊಂಡಿದೆ, ಆದರೆ ಉಪಾಧ್ಯಕ್ಷರನ್ನು ಈ ಆದೇಶದಿಂದ ಹೊರತುಪಡಿಸಲಾಗಿರುವುದು, ಕುತೂಹಲಕ್ಕೆ ಕಾರಣವಾಗಿದೆ.
ಇನ್ಫೋಸಿಸ್‌ನಲ್ಲಿ 3 ಲಕ್ಷಕ್ಕೂ ಅಧಿಕ ಉದ್ಯೋಗಿಗಳಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಆರಂಭವಾದ ಮೆನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ಹಾಗೆಯೇ ಮುಂದುವರೆಸಲಾಗಿತ್ತು. 2024ರಲ್ಲಿ ಕಂಪನಿ ವಾರದಲ್ಲಿ ಕನಿಷ್ಠ 2-3 ದಿನ ಕಛೇರಿಗೆ ಬನ್ನಿ ಎಂದು ಉದ್ಯೋಗಿಗಳಿಗೆ ಕರೆ ನೀಡಿತ್ತು. ಈಗ ತಿಂಗಳಿನಲ್ಲಿ ಕನಿಷ್ಠ 10 ದಿನ ಕಛೇರಿಗೆ ಬನ್ನಿ ಎಂದು ಹೇಳಿದೆ.
2024ರಲ್ಲಿಯೇ ಹಲವು ಸಾಫ್ಟ್‌ವೇರ್ ಕಂಪನಿಗಳು ಉದ್ಯೋಗಿಗಳಿಗೆ ವಾರದಲ್ಲಿ 3 ದಿನ ಕಛೇರಿಗೆ ಬರಬೇಕು ಎಂದು ಸೂಚನೆ ನೀಡಿದ್ದವು. ಬೆಂಗಳೂರು ನಗರದ ಹಲವು ಐಟಿ ಉದ್ಯೋಗಿಗಳು ಈ ಮಾದರಿಯನ್ನು ಅನುಸರಿಸುತ್ತಿದ್ದಾರೆ. ಈಗ ಇನ್ಫೋಸಿಸ್ ತಿಂಗಳಿನಲ್ಲಿ 10 ದಿನ ಕಛೇರಿಯಿಂದ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದೆ.












Click it and Unblock the Notifications