Narayana Murthy: ಇನ್ಫೋಸಿಸ್ ನಾರಾಯಣಮೂರ್ತಿಗೆ ತಮಿಳುನಾಡಿನಿಂದ ತರಾಟೆ, ಕಾರಣವೇನು
ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರಿಗೆ ಇದೀಗ ತಮಿಳುನಾಡಿನಿಂದಲೂ ವಿರೋಧ ವ್ಯಕ್ತವಾಗುತ್ತಿದೆ. ನಾರಾಯಣ ಮೂರ್ತಿ ಅವರ ಹೇಳಿಕೆಗಳು ಇತ್ತೀಚಿನ ದಿನಗಳಲ್ಲಿ ಯುವ ಸಮೂಹದ ಕೆಂಗಣ್ಣಿಗೆ ಗುರಿಯಾಗುವುದು ಹೆಚ್ಚಾಗಿದೆ. ವಾರಕ್ಕೆ 70 ಗಂಟೆ ಕೆಲಸ ಮಾಡಬೇಕು ಎನ್ನುವ ಅವರ ಮಾತು ಕರ್ನಾಟಕದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿತ್ತು. ಇದೀಗ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗಿದ್ದ ವಿಷಯಕ್ಕೇ ಇದೀಗ ತಮಿಳುನಾಡಿನಲ್ಲೂ ವಿರೋಧ ವ್ಯಕ್ತವಾಗುತ್ತಿದೆ. ತಮಿಳುನಾಡಿನ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರು ವಾರಕ್ಕೆ ನಾಲ್ಕು ದಿನ ದುಡಿದರೆ ಸಾಕು, ತಾಸುಗಟ್ಟಲೆ ದುಡಿಯುವುದು ಅರ್ಥಹೀನ ಎಂದಿದ್ದಾರೆ. ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ಹೆಚ್ಚೆಚ್ಚು ಕೆಲಸ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಕೆಲಸದ ದಕ್ಷತೆಯ ಕಡೆ ಗಮನಕೊಡಬೇಕಷ್ಟೇ ಅಂತ ಅವರು ಅಭಿಪ್ರಾಯಪಟ್ಟಿದ್ದಾರೆ.
ಇನ್ಫೋಸಿಸ್ ನಾರಾಯಣ ಅವರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು. ಯುವಕರು ವಾರಕ್ಕೆ 70 ದಿನ ಕೆಲಸ ಮಾಡುವುದರಿಂದ ದೇಶದ ಅಭಿವೃದ್ಧಿ ಸಾಧ್ಯ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಯುವಕರು ಹೆಚ್ಚೆಚ್ಚು ದುಡಿಯುತ್ತಾರೆ ಎಂದಿದ್ದರು. ಇದಕ್ಕೆ ಕರ್ನಾಟಕವು ಸೇರಿದಂತೆ ದೇಶದ ವಿವಿಧ ಭಾಗದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಇದಾದ ಮೇಲೆ ನಾರಾಯಾಣ ಮೂರ್ತಿ ಅವರು ಈ ವಿಚಾರವಾಗಿ ವಿಷಾದ ಹಾಗೂ ಕ್ಷಮೆ ಸಹ ಕೇಳಿದ್ದರು. ಆದರೆ, ಈಚೆಗೆ ನಾನು ಸಾಯುವವರೆಗೂ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎನ್ನುವುದನ್ನು ಪ್ರತಿಪಾದಿಸುತ್ತೇನೆ ಎಂದಿದ್ದರು. ಇದೀಗ ಈ ವಿಷಯ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದ್ದು, 70 ಗಂಟೆ ಕೆಲಸ ಮಾಡಬೇಕು ಎನ್ನುವ ಅಭಿಪ್ರಾಯಕ್ಕೆ ಮತ್ತೆ ವಿರೋಧ ವ್ಯಕ್ತವಾಗುತ್ತಿದೆ.

ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿ ಪಿ. ಚಿದಂಬರಂ ಅವರು ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ. ಜನ ನಿತ್ಯವೂ ಹೋರಾಟದಂತೆ ಬದಲಾಗಿದೆ. ಅಸಮರ್ಥ ಮತ್ತು ಕಳಪೆ ಗುಣಮಟ್ಟದ ಮೂಲಸೌಕರ್ಯದಿಂದ ಜನ ಹೈರಾಣಾಗುತ್ತಿದ್ದಾರೆ. ಕೆಲಸ ಹಾಗೂ ವೈಯಕ್ತಿಕ ಜೀವನದ ನಡುವೆ ಸಮತೋಲನ ಇರಬೇಕು. ಜೀವನದಲ್ಲಿ ಸಮಾಧಾನಕರ ಹಾಗೂ ಉತ್ತಮ ಜೀವನ ಸಾಮಾಜಿಕ ಕ್ರಮಕ್ಕೆ ನಿಯಮಿತವಾಗಿ ಕೆಲಸ ಮಾಡುವ ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಮುಂದುವರಿದು ನಾವು ವಾರದಲ್ಲಿ ನಾಲ್ಕು ದಿನಗಳು ಕೆಲಸ ಮಾಡಿದರೆ ಸಾಕು ಎಂದಿದ್ದಾರೆ. ಸೋಮವಾರ ಮಧ್ಯಾಹ್ನ 12 ಗಂಟೆಯಿಂದ ಶುಕ್ರವಾರ ಮಧ್ಯಾಹ್ನ 2 ರವರೆಗೆ ಕೆಲಸ ಮಾಡಿದರೆ ಸಾಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹೌದು ನಾನು ವೈಯಕ್ತಿಕ ಹಾಗೂ ಕೆಲಸದ ಸಮತೋಲನ ಪರಿಕಲ್ಪನೆ (Work-life balance) ಬಗ್ಗೆ ನಂಬಿಕೆ ಹೊಂದಿಲ್ಲ ಎಂದಿರುವ ಹೇಳಿಕೆಯನ್ನು ಉಲ್ಲೇಖಿಸಿ ಚಿದಂಬರಂ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ.
ಚಿದಂಬರಂ ಅವರ ಟ್ವೀಟ್‌ಗೆ ಹಲವರು ಸಹಮತ ವ್ಯಕ್ತಪಡಿಸಿದ್ದಾರೆ. ಹೌದು ಕೆಲಸವೇ ಜೀವನವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ನಾರಾಯಣ ಮೂರ್ತಿ ಅವರ ಅಭಿಪ್ರಾಯಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಮುಖ್ಯವಾಗಿ ಯುವ ಸಮೂಹ ನಾರಾಯಣ ಮೂರ್ತಿ ಅವರ ಹೇಳಿಕೆಯನ್ನು ಉಗ್ರವಾಗಿ ಖಂಡಿಸಿತ್ತು. 70 ಗಂಟೆ ಕೆಲಸ ಮಾಡಿದರೆ, ಮನೆ, ಮಕ್ಕಳು ಹಾಗೂ ಟ್ರಾಫಿಕ್‌ನ ಕತೆ ಏನು ಕೆಲಸ ಮಾಡುವುದು ತಿನ್ನುವುದು ಹಾಗೂ ಮಲಗುವುದರಲ್ಲೇ ಜೀವನ ಕಳೆದು ಹೋಗುತ್ತದೆ ಎಂದು ಯುವಕ ಹಾಗೂ ಯುವತಿಯರು ಅಭಿಪ್ರಾಯಪಟ್ಟಿದ್ದರು.












Click it and Unblock the Notifications