Ranya Case: ನಟಿ ರನ್ಯಾ ರಾವ್ ಜೊತೆ ಪ್ರಭಾವಿ ನಟ ಶಾಮೀಲು: ಡಿಆರ್‌ಐನಿಂದ ಡ್ರಿಲ್!
Ranya Case: ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ನಟಿ ರನ್ಯಾ ರಾವ್ ಅವರೊಂದಿಗೆ ಹಲವು ಪ್ರಭಾವಿಗಳು, ರಾಜಕಾರಣಿಗಳು ಹಾಗೂ ನಟರ ಹೆಸರು ಸಹ ಕೇಳಿ ಬಂದಿದ್ದು. ಈ ಜಾಲ ತುಂಬಾ ದೊಡ್ಡದಿದೆ ಎನ್ನುವುದು ಬಹಿರಂಗವಾಗಿದೆ. ಇದರಲ್ಲಿ ಇದೀಗ ತೆಲುಗು ಸಿನಿಮಾದ ನಟ ಹಾಗೂ ಉದ್ಯಮಿ ತರುಣ್ ರಾಜ್ ಕೊಂಡೂರು ಅಲಿಯಾಸ್ ವಿರಾಟ್ ಕೊಂಡೂರು (30) ಅವರು ಸಹ ಸಿಕ್ಕಿಹಾಕಿಕೊಂಡಿದ್ದಾರೆ. ಈ ಕೃತ್ಯದಲ್ಲಿ ನಟ ವಿರಾಟ್ ಅವರು ಶಾಮೀಲಾಗಿದ್ದಾರೆ ಎನ್ನುವುದು ಇದೀಗ ಬಹಿರಂಗವಾಗಿದೆ. ದುಬೈನಿಂದ ಬರೋಬ್ಬರಿ 14.2 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ಕನ್ನಡದ ನಟಿ ರನ್ಯಾ ರಾವ್ ಅವರನ್ನು ಮಾರ್ಚ್ 3ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಅಕ್ರಮ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ನಟಿ ರನ್ಯಾರಾವ್ ಅವರೊಂದಿಗೆ ತೆಲುಗು ನಟ (ತರುಣ್ ರಾಜ್ ಕೊಂಡೂರು) ವಿರಾಟ್ ಕೊಂಡೂರು (30) ಅವರು ಸಹ ಶಾಮೀಲಾಗಿದ್ದು. ಅಮೆರಿಕದ ಪಾಸ್‌ಪೋರ್ಟ್ ಬಳಸಿಕೊಂಡು ದುಬೈನ ಮೂಲಕ ಅಕ್ರಮವಾಗಿ ಚಿನ್ನವನ್ನು ಸಾಗಿಸಿರುವುದು ತನಿಖೆಯಿಂದ ಬಹಿರಂಗವಾಗಿದೆ. ರನ್ಯಾ ಅವರನ್ನು ಬಂಧಿಸುತ್ತಿದ್ದಂತೆಯೇ ಈ ಕೇಸ್‌ನಲ್ಲಿ ವಿರಾಟ್ ಕೊಂಡೂರು ಸಹ ಇರುವುದು ಬಹಿರಂಗವಾಗಿದ್ದು. ವಿರಾಟ್ ಅವರನ್ನು ಮಾರ್ಚ್ 9ಕ್ಕೆ ಬಂಧಿಸಲಾಗಿದೆ.

ರನ್ಯಾರಾವ್ - ತರುಣ್ ಹೇಗೆ ಪರಿಚಯ: ತೆಲುಗು ನಟ ತರುಣ್ ಅವರ ಮೂಲ ಹೆಸರು ತರುಣ್ ರಾಜ್ ಕೊಂಡೂರು ಎಂದಾಗಿದೆ. ಅವರು ಹೆಸರು ಬದಲಾಯಿಸಿಕೊಂಡು ವಿರಾಟ್ ಕೊಂಡೂರು ಎಂದು ಇರಿಸಿಕೊಂಡಿದ್ದಾರೆ. ಇನ್ನು ವಿರಾಟ್ ಹಾಗೂ ರನ್ಯಾ ಅವರು ಕಳೆದ 10 ವರ್ಷಗಳಿಂದಲೂ ಪರಿಚಿತರು. ಆಂಧ್ರಪ್ರದೇಶದ ಮೂಲದವಾಗಿರುವ ವಿರಾಟ್ ಅವರು ಆಂಧ್ರಪ್ರದೇಶ ಮೂಲದ ಪ್ರಭಾವಿ ಹಾಗೂ ಶ್ರೀಮಂತ ಕುಟುಂಬಕ್ಕೆ ಸೇರಿದವರಾಗಿದ್ದಾರೆ.
ಇವರ ಕುಟುಂಬವು ಬೆಂಗಳೂರಿನಲ್ಲಿ ಪ್ರತಿಷ್ಠಿತ ಸಂಸ್ಥೆಗಳನ್ನು ಹೊಂದಿದೆ. ಇನ್ನು ಇಲ್ಲೊಂದು ಪ್ರಮುಖ ಅಂಶವೆಂದರೆ ನಟಿ ರನ್ಯಾರಾವ್ ಅವರು ಹಾಗೂ ವಿರಾಟ್ ಅಮೆರಿಕದ ವಜ್ರ ವ್ಯಾಪಾರ ಕಂಪನಿಯೊಂದರಲ್ಲಿ ಪಾರ್ಟನ್ನರ್ ಆಗಿದ್ದಾರೆ. ದುಬೈನ್‌ನಿಂದ ಬಂದ ಚಿನ್ನವನ್ನು ಬಳಸಿಕೊಂಡು ಈ ಅವ್ಯವಹಾರಗಳನ್ನು ಮಾಡಲಾಗಿದೆ ಎನ್ನುವ ವಿಷಯವು ಇದೀಗ ಬಹಿರಂಗವಾಗಿದೆ. ಇನ್ನು ವಿರಾಟ್ ಅವರು 2018ರಲ್ಲಿ "ಪರಿಚಯಂ" ಎನ್ನುವ ತೆಲುಗು ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರಾದರೂ ಈ ಸಿನಿಮಾ ಹೇಳಿಕೊಳ್ಳುವಂತಹ ಯಶಸ್ಸು ಕಾಣಲಿಲ್ಲ. ಆದರೆ ಇವರ ಕುಟುಂಬದ ಬ್ಯುಸಿನೆಸ್‌ಗಳಲ್ಲಿ ವಿರಾಟ್ ತೊಡಗಿಸಿಕೊಂಡಿದ್ದರು. ಶಿಕ್ಷಣ ಸಂಸ್ಥೆಗಳು, ಕೇಬಲ್ ಟಿವಿ ಹಾಗೂ ರೆಸ್ಟೋರೆಂಟ್ ಸೇರಿದಂತೆ ವಿವಿಧ ಉದ್ಯಮಗಳಲ್ಲಿ ಇವರ ಕುಟುಂಬವು ಗುರುತಿಸಿಕೊಂಡಿದೆ.

ಪ್ರವಾಸದ ವಿವರ ಬಹಿರಂಗ: ನಟ ವಿರಾಟ್ ಹಾಗೂ ರನ್ಯಾ ರಾವ್ ಅವರು ಇಬ್ಬರು ಸೇರಿಕೊಂಡು ಅವ್ಯವಹಾರ ನಡೆಸುತ್ತಿದ್ದಾರೆ ಎನ್ನುವ ವಿಷಯವು ಪಾರ್ಸ್ ಪೋರ್ಟ್ ವಿವರ / ವಿವಿಧ ಮಾಹಿತಿಗಳಿಂದ ಸಂಗ್ರಹವಾಗಿದೆ. ಕಂದಾಯ ಗುಪ್ತಚರ ನಿರ್ದೇಶನಾಲಯ (DRI)ದ ಪ್ರಕಾರ, ದುಬೈಗೆ ನಟಿ ರನ್ಯಾ ರಾವ್ ಅವರು ಭೇಟಿ ನೀಡಿದ ಸಂದರ್ಭದಲ್ಲಿ ದುಬೈನಲ್ಲಿ ಮಾಡಿದ ಕಸ್ಟಮ್ಸ್ ಘೋಷಣೆಗಳು, ಅಲ್ಲದೆ ಚಿನ್ನವನ್ನು ಜಿನೀವಾಕ್ಕೆ ತೆಗೆದುಕೊಂಡು ಹೋಗಿರುವುದಾಗಿ ಹೇಳಲಾಗಿದೆ. ಹೀಗಾಗಿ ಭಾರತದಲ್ಲಿ ಮಾತ್ರವಲ್ಲ ವಿಶ್ವದ ಹಲವು ಭಾಗಗಳಿಗೆ ಇವರು ಅಕ್ರಮ ಚಿನ್ನ ಸಾಗಾಣಿಕೆ ಮಾಡುತ್ತಿದ್ದರು ಎನ್ನುವುದು ಬಹಿರಂಗವಾಗಿದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕಿ ಹಾಕಿಕೊಂಡ ಮೇಲೆ ರನ್ಯಾ ರಾವ್ ಅವರ ಬಗ್ಗೆ ಸಂಪೂರ್ಣ ತನಿಖೆ ಮಾಡಲಾಗುತ್ತಿದೆ. ನಟಿಯ ಮನೆಯಲ್ಲಿ ತಪಾಸಣೆ ಮಾಡುವಾಗ ದುಬೈನ ಕಸ್ಟಮ್ಸ್ ಘೋಷಣೆ /ಕಸ್ಟಮ್ಸಗೆ ಸಲ್ಲಿಸಿರುವ ದಾಖಲೆಗಳು ಸಿಕ್ಕಿವೆ. ಅದರಲ್ಲಿ ನಟಿ ರನ್ಯಾರಾವ್ ಅವರು, ದುಬೈನಿಂದ ಜಿನೀವಾಕ್ಕೆ ಚಿನ್ನವನ್ನು ಸಾಗಿಸಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಅವರು ಚಿನ್ನವನ್ನು ಭಾರತಕ್ಕೆ ಸಾಗಿಸಿದ್ದಾರೆ ಎನ್ನುವ ವಿಷಯವು ತನಿಖೆ ವೇಳೆಯಲ್ಲಿ ವರದಿಯಾಗಿದೆ.
ಅಮೆರಿಕ ಪಾಸ್‌ಪೋರ್ಟ್ ಬಳಕೆ: ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣದಲ್ಲಿ ಬಂಧಿಸಲಾಗಿರುವ ನಟಿ ರನ್ಯಾ ಹಾಗೂ ವಿರಾಟ್ ಅವರು ಅಕ್ರಮವಾಗಿ ಯಾವ ರೀತಿ ಚಿನ್ನ ಸಾಗಾಣಿಕೆ ಮಾಡಲಾಗುತ್ತಿತ್ತು. ಯಾವ ವಿಸಾ ಬಳಸಲಾಗುತ್ತಿತ್ತು ಎನ್ನುವ ಅಂಶಗಳನ್ನು ಬಹಿರಂಗಪಡಿಸಿದ್ದಾರೆ. ಇದರಲ್ಲಿ ಪ್ರಮುಖವಾಗಿ ದುಬೈನಿಂದ ಅಕ್ರಮವಾಗಿ ಚಿನ್ನವನ್ನು ಕಳ್ಳಸಾಗಣೆ ಮಾಡುವಾಗ ವಿರಾಟ್ ಕೊಂಡೂರು ಅವರು ಯುಎಸ್ ಪಾಸ್‌ಪೋರ್ಟ್ ಬಳಕೆ ಮಾಡಿರುವುದು ಹಾಗೂ ಇದನ್ನು ಪ್ರಮುಖವಾಗಿ ಬಳಸಿಕೊಂಡಿರುವುದು ಬಹಿರಂಗವಾಗಿದೆ.
ಇನ್ನು ತೆಲುಗು ನಟ ವಿರಾಟ್‌ಗೆ ಅಮೆರಿಕದ ಪಾಸ್ ಪೋರ್ಟ್ ಇದೆ. ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾಗೆ ಚಿನ್ನವನ್ನು ಸಾಗಿಸುವುದಾಗಿ ಮೊದಲು ಹೇಳಿಕೊಂಡಿದ್ದಾರೆ. ಅಮೆರಿಕದ ಪಾಸ್‌ಪೋರ್ಟ್ ಹೊಂದಿರುವವರಿಗೆ ಜಿನೀವಾಗೆ ಪ್ರತ್ಯೇಕ ವೀಸಾದ ಅಗತ್ಯವಿಲ್ಲದೆ ಇರುವುದರಿಂದ ವಿರಾಟ್ ಕೊಂಡೂರು ಅವರ ಹೆಸರಿನಲ್ಲಿ ದುಬೈ ಕಸ್ಟಮ್ಸ್‌ನಲ್ಲಿ ಘೋಷಿಸಿಕೊಳ್ಳಲಾಗಿದೆ ಎನ್ನಲಾಗಿದೆ. ಅಮೆರಿಕದ ಪಾಸ್‌ಪೋರ್ಟ್ ಹೊಂದಿದ್ದರೆ ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾಗೆ 90 ದಿನಗಳ ಪ್ರವಾಸಿ ವೀಸಾ ಬಳಸಿಕೊಳ್ಳಬಹುದಾಗಿದ್ದು. ಇದನ್ನೇ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ವಿಮಾನ ಟಿಕೆಟ್ ಖರೀದಿ ಮಾಡಿದರು ಪ್ರಯಾಣ ಮಾಡಲಿಲ್ಲ!
ಇನ್ನು ಇವರಿಬ್ಬರು ಜಿನೀವಾಗೆ ವಿಮಾನ ಟಿಕೆಟ್‌ಗಳನ್ನು ಬುಕ್ ಮಾಡಿದರಾದರೂ. ಅಲ್ಲಿಗೆ ಹೋಗಿಲ್ಲ ಉದ್ದೇಶ ಪೂರ್ವಕವಾಗಿ ಅಕ್ರಮವಾಗಿ ಚಿನ್ನ ಸಾಗಾಣಿಕೆ ಮಾಡುವ ಉದ್ದೇಶದಿಂದಲೇ ಈ ರೀತಿ ಮಾಡಿದರೆ ಎನ್ನುವುದನ್ನು ತನಿಖೆ ಮಾಡಲಾಗುತ್ತಿದೆ. ದುಬೈ ಕಸ್ಟಮ್ಸ್‌ನಲ್ಲಿ ವಿನಾಯಿತಿ ಪಡೆದುಕೊಳ್ಳುವ ಉದ್ದೇಶದಿಂದ ಈ ರೀತಿ ಪ್ಲ್ಯಾನ್ ಮಾಡಿಕೊಂಡಿದ್ದರು ಎನ್ನಲಾಗುತ್ತಿದೆ.
25 ಬಾರಿ ಪ್ರವಾಸ: ನಟಿ ರನ್ಯಾ ರಾವ್ ಅವರು ಹಾಗೂ ವಿರಾಟ್ ಅವರು ಕೆಲವೇ ದಿನಗಳ ಅಂತರದಲ್ಲಿ ಬರೋಬ್ಬರಿ 25 ಬಾರಿ ಪ್ರವಾಸ ಮಾಡಿದ್ದಾರೆ ಎನ್ನುವ ವಿಷಯ ರನ್ಯಾ ಅವರು ಸಿಕ್ಕಿಹಾಕಿಕೊಂಡ ಮೇಲೆ ಬಹಿರಂಗವಾಗಿದೆ. ಬೆಂಗಳೂರಿನಿಂದ ದುಬೈಗೆ ಬೆಳಿಗ್ಗೆ 4 ಗಂಟೆಗೆ ವಿಮಾನದಲ್ಲಿ ಹೋಗುವ ಮೂಲಕ ಅದೇ ದಿನ ಚಿನ್ನ ತೆಗೆದುಕೊಂಡು ವಿಮಾನದ ಮೂಲಕ ಹಿಂದಿರುಗಿದ್ದಾರೆ ಎನ್ನಲಾಗಿದೆ. ಇನ್ನು ಈ ಪ್ರಕರಣವು ರಾಜ್ಯ ಸರ್ಕಾರಕ್ಕೂ ಸಂಕಷ್ಟವನ್ನು ತಂದೊಡ್ಡಿದೆ.












Click it and Unblock the Notifications