ಆ. 15ರೊಳಗೆ ಎಲ್ಲೆಡೆ ಇಂದಿರಾ ಕ್ಯಾಂಟೀನ್ ಸಾಧ್ಯವಿಲ್ಲ: ಸಚಿವ ಜಾರ್ಜ್
ಆಗಸ್ಟ್ 15ರೊಳಗೆ ಎಲ್ಲೆಡೆ ಇಂದಿರಾ ಕ್ಯಾಂಟೀನ್ ಸಾಧ್ಯವಿಲ್ಲ. ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಹೇಳಿಕೆ. ಆ. 15ರಂದು 125 ಕ್ಯಾಂಟೀನ್ ಗಳ ಆರಂಭ. ಉಳಿದ 73 ಕ್ಯಾಂಟೀನ್ ಗಳು ಅಕ್ಟೋಬರ್ 2ರಂದು ಉದ್ಘಾಟನೆ.
ಬೆಂಗಳೂರು, ಜುಲೈ 22: ಈ ಹಿಂದೆ ಸರ್ಕಾರ ನಿರ್ಧರಿಸಿದಂತೆ, ಇಂದಿರಾ ಕ್ಯಾಂಟೀನ್ ಗಳು ನಿಗದಿತ ಗುರಿಯಂತೆ ಆಗಸ್ಟ್ 15ರೊಳಗೆ ಬೆಂಗಳೂರಿನ ಎಲ್ಲೆಡೆ ನಿರ್ಮಾಣವಾಗುವುದಿಲ್ಲ ಎಂದು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಕೆಲವು ವಾರ್ಡ್ ಗಳಲ್ಲಿ ಸ್ಥಳದ ಸಮಸ್ಯೆ ಎದುರಾಗಿರುವುದರಿಂದ ಹಾಗೂ ಇನ್ನೂ ಹಲವಾರು ತಾಂತ್ರಿಕ ಸಮಸ್ಯೆಗಳು ತಲೆದೋರಿರುವುದರಿಂದ ಆ ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣವನ್ನು ಮುಂದೂಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅದರಂತೆ, ಆಗಸ್ಟ್ 15ರಂದು ಉದ್ಧಾಟನೆಯಾಗಬೇಕಿದ್ದ 198 ಕ್ಯಾಂಟೀನ್ ಗಳ ಬದಲಿಗೆ, 125 ಕ್ಯಾಂಟೀನ್ ಗಳು ಉದ್ಘಾಟನೆಯಾಗಲಿದ್ದು, ಉಳಿದ 73 ಕ್ಯಾಂಟೀನ್ ಗಳು ಅಕ್ಟೋಬರ್ 2ರಂದು (ಗಾಂಧೀ ಜಯಂತಿ) ಉದ್ಘಾಟನೆಗೊಳ್ಳಲಿವೆ ಎಂದು ಅವರು ಹೇಳಿದ್ದಾರೆ.












Click it and Unblock the Notifications