ಇಂದಿರಾ ಕ್ಯಾಂಟೀನ್‌ ಬನ್ನಿ ರುಚಿಯಾದ ಪಾಯಸ, ಆಲೂಕೂರ್ಮಾ ತಿನ್ನಿ

ಬೆಂಗಳೂರು, ಫೆಬ್ರವರಿ 26 : ನಗರದಲ್ಲಿರುವ ಎಲ್ಲಾ ಇಂದಿರಾ ಕ್ಯಾಂಟೀನ್ ಗಳಲ್ಲಿ ಮಾರ್ಚ್1 ರಿಂದ ಪಾಯಸ ದೊರೆಯಲಿದೆ. ಅದರ ಜತೆಗೆ ಮೆನುವಿನಲ್ಲಿ 10ಕ್ಕೂ ಹೆಚ್ಚು ಬಗೆಯ ಆಹಾರ ಪದಾರ್ಥಗಳು ಸೇರ್ಪಡೆಗೊಂಡಿದೆ.

ಇಂದಿರಾ ಕ್ಯಾಂಟೀನ್ ನಲ್ಲಿ ಪಾಯಸ, ಬಟಾಣಿ ಪಲಾವ್, ಪಾಲಕ್ ಇಡ್ಲಿ, ಸಾಬಕ್ಕಿ ಖೀರು, ವೆಜ್ ಪಲಾವ್, ಆಲೂ ಪಲಾವ್, ಆಲೂ ಬಟಾಣಿ ಕರ್ರಿ, ಆಲೂ ಕೂರ್ಮಾ , ಸಲಾಡ್, ಮೊಸರನ್ನ, ಜೀರಾ ರೈಸ್ ಹೀಗೆ ಹತ್ತಾರು ಆಹಾರ ಪದಾರ್ಥಗಳು ಮೆನುವಿನಲ್ಲಿ ಸೇರ್ಪಡೆಯಾಗಿದೆ.

ಗ್ರಾಹಕರ ಸಲಹೆ ಮೇರೆಗೆ ಮೆನುವಿನಲ್ಲಿ ಬದಲಾವಣೆ ಮಾಡಲಾಗಿದೆ. ಕಂಟ್ರ್ಯಾಕ್ಟರ್ ಹಾಗೂ ಸಿಬ್ಬಂದಿಗಳ ಜತೆಗೆ ಸಭೆ ನಡೆಸಿ ಮಾರ್ಚ್ 1 ರಿಂದ ಪ್ರಾರಂಭಿಸುವಂತೆ ಸಲಹೆ ನೀಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

Indira Canteen to serve Payasam, Aloo kurma

ಮೆನುವಿನಲ್ಲಾದ ಬದಲಾವಣೆಯಿಂದ ಈಗಿರುವ ವೆಚ್ಚದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದ ಅವರು ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಮೊದಲು ಮಾಡಿಕೊಂಡಿದ್ದ ಗುತ್ತಿಗೆಗೆ ಅನುಸಾರವಾಗಿಯೇ ಹಣವನ್ನು ಪಡೆಯಬೇಕು ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+