Get Updates
Get notified of breaking news, exclusive insights, and must-see stories!

ಬೆಂಗಳೂರಿನಲ್ಲಿ ಭಾರತದ ಮೊದಲ "ಅಮಹಾ" ಸೂಪರ್ ಸ್ಪೆಷಾಲಿಟಿ ಒಳರೋಗಿ ಮಾನಸಿಕ ಆರೋಗ್ಯ ಆಸ್ಪತ್ರೆ ಪ್ರಾರಂಭ

ದೇಶದಲ್ಲಿ ಮಾನಸಿಕ ಆರೋಗ್ಯ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಹಾಗೂ ಪ್ರಮುಖ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಮಹಾ (Amaha) ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ. ಸಾಧಾರಣ ಹಾಗೂ ತೀವ್ರತರವಾದ ಮನೋವೈದ್ಯಕೀಯ ಸಮಸ್ಯೆ ಎದುರಿಸುತ್ತಿರುವ ಒಳರೋಗಿಗಳ ಆರೋಗ್ಯ ಸೇವೆಗೆ ಸಂಬಂಧಿಸಿದಂತೆ ಪ್ರತ್ಯೇಕ ಹಾಗೂ ವಿಶೇಷ ವ್ಯವಸ್ಥೆಯನ್ನು ಮಾಡಿಕೊಂಡಿದೆ. ಈ ಮೂಲಕ ದೇಶದಲ್ಲೇ ಮೊದಲ ಖಾಸಗಿ ಸೂಪರ್ ಸ್ಪೆಷಾಲಿಟಿ ಮಾನಸಿಕ ಆರೋಗ್ಯ ಆಸ್ಪತ್ರೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಬೆಂಗಳೂರಿನ ಥಣಿಸಂದ್ರದಲ್ಲಿ ಅಮಹಾ ಅತ್ಯಾಧುನಿಕ ಸೌಲಭ್ಯ ಇರುವ ಆಸ್ಪತ್ರೆ ಉದ್ಘಾಟನೆಯಾಗಿದೆ. ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಈ ಆಸ್ಪತ್ರೆಯು ಆಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ. ಅಲ್ಲದೇ ನಿಖರ ಮಾಹಿತಿ ಹಾಗೂ ಸಹಾನುಭೂತಿಯೊಂದಿಗೆ ಮನೋವೈದ್ಯಕೀಯ ಆರೈಕೆಯನ್ನು ನೀಡುವ ಬದ್ಧತೆಯನ್ನು ಪ್ರದರ್ಶಿಸುತ್ತದೆ.

ಎಐ ಸಾರಾಂಶ - ತಜ್ಞರಿಂದ ಪರಿಶೀಲನೆ

ಭಾರತದ ಪ್ರಮುಖ ಮಾನಸಿಕ ಆರೋಗ್ಯ ಸೇವೆಯನ್ನು ನೀಡುವ ಸಂಸ್ಥೆಯಾಗಿರುವ ಅಮಹಾ ಬೆಂಗಳೂರಿನ ಥಣಿಸಂದ್ರದಲ್ಲಿ ದೇಶದ ಮೊದಲ ಖಾಸಗಿ ಸೂಪರ್ ಸ್ಪೆಷಾಲಿಟಿ ಮಾನಸಿಕ ಆರೋಗ್ಯ ಆಸ್ಪತ್ರೆಯನ್ನು ಪ್ರಾರಂಭಿಸಿದೆ. ಡಾ. ಅಮಿತ್ ಮಲಿಕ್ ಮತ್ತು ನೇಹಾ ಕಿರ್ಪಾಲ್ ನೇತೃತ್ವದಲ್ಲಿ ಮನೋವೈದ್ಯಕೀಯ ಸಮಸ್ಯೆಗಳಿಗೆ ಒಳರೋಗಿ (ಒಪಿಡಿ)ದಾರರಿಗೆ ಆರೋಗ್ಯ ಸೇವೆಯನ್ನು ಕೊಡಲಿದೆ. 27 ಹಾಸಿಗೆಗಳ ಸಾಮರ್ಥ್ಯದೊಂದಿಗೆ ಆಸ್ಪತ್ರೆಯು ಸ್ಕಿಜೋಫ್ರೇನಿಯಾ ಮತ್ತು ಬೈಪೋಲಾರ್ ಡಿಸಾರ್ಡರ್‌ನಂತಹ ಮನೋವೈದ್ಯಕೀಯ ಸಮಸ್ಯೆಗಳಿಗೆ ಸೇವೆಗಳನ್ನು ಒದಗಿಸುತ್ತದೆ. ಈ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ತಂಡ ಹಾಗೂ ಸುಧಾರಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳನ್ನು ಒಳಗೊಂಡಿದೆ. ಹೊರರೋಗಿಗಳಿಗೆ / ಒಪಿಡಿದಾರರಿಗೆ ಡಿಜಿಟಲ್ ಮೂಲಕವೂ ವೈದ್ಯಕೀಯ ಸೇವೆ ಲಭ್ಯವಿದೆ.

India s first Amaha super specialty inpatient mental health hospital opens in Bengaluru

ವಿಶ್ವಾಸಾರ್ಹ ಮಾನಸಿಕ ಆರೋಗ್ಯ ಸೇವೆ ವಿಸ್ತರಿಸುವ ಉದ್ದೇಶ

ಬೆಂಗಳೂರು, ಮುಂಬೈ ಹಾಗೂ ದೆಹಲಿಯಲ್ಲಿರುವ ತನ್ನ ಹೊರರೋಗಿ ಕೇಂದ್ರಗಳಲ್ಲಿ 40,000ಕ್ಕೂ ಹೆಚ್ಚು ಜನರಿಗೆ ಆರೋಗ್ಯ ಸೇವೆ ನೀಡಲಾಗುತ್ತಿದೆ. ಅಮಹಾ ಹೊಸ 27 ಹಾಸಿಗೆಗಳ ಆಸ್ಪತ್ರೆಯು ಸ್ಕಿಜೋಫ್ರೇನಿಯಾ, ಬೈಪೋಲಾರ್ ಡಿಸಾರ್ಡರ್, ಎಡಿಎಚ್‌ಡಿ, ಆಘಾತ, ಚಿಕಿತ್ಸೆ - ಖಿನ್ನತೆ ಸಮಸ್ಯೆ ಹಾಗೂ ಡೆಡ್‌ಡಿಕ್ಷನ್‌ನಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಆರೋಗ್ಯ ಸೇವೆಯನ್ನು ನೀಡುವ ಉದ್ದೇಶವನ್ನು ಸಹ ಒಳಗೊಂಡಿದೆ.

ಈ ಸೌಲಭ್ಯವನ್ನು ಹಾಗೂ ವಿಶೇಷತೆಯ ಹಿಂದೆ ಅಮಹಾದ ಸ್ಥಾಪಕ ಮತ್ತು ಸಿಇಒ ಮತ್ತು ಯುಕೆಯಲ್ಲಿ ತರಬೇತಿ ಪಡೆದಿರುವ ಮನೋವೈದ್ಯ ಡಾ. ಅಮಿತ್ ಮಲಿಕ್ ಮತ್ತು ಸಹ-ಸಂಸ್ಥಾಪಕಿ ಮತ್ತು ಜಾಗತಿಕ ಮಾನಸಿಕ ಆರೋಗ್ಯ ರಾಯಭಾರಿ ನೇಹಾ ಕಿರ್ಪಾಲ್ ಅವರ ನೇತೃತ್ವ ಇದೆ. ಒಟ್ಟಾರೆ ಡಿಜಿಟಲ್, ಹೊರರೋಗಿ ಮತ್ತು ಈಗ ಒಳರೋಗಿಗಳಿಗೆ ಅನುಕೂಲವಾಗುವ ಸೇವೆಯನ್ನು ಒಂದೇ ಜಾಗದಲ್ಲಿ ನೀಡಲಾಗುತ್ತಿದೆ. ಅಮಹಾವನ್ನು ಭಾರತದ ಅತಿದೊಡ್ಡ ಖಾಸಗಿ ಮಾನಸಿಕ ಆರೋಗ್ಯ ಸೇವೆಯನ್ನಾಗಿ ಮಾಡಲಾಗಿದೆ.

ಕಳೆದ ಒಂಬತ್ತು ವರ್ಷಗಳ ಅವಧಿಯಲ್ಲಿ ಅಮಹಾ ಭಾರತದ ಅಗ್ರಗಣ್ಯ ಮತ್ತು ಅತಿದೊಡ್ಡ ಸೂಪರ್ ಸ್ಪೆಷಾಲಿಟಿ ಮಾನಸಿಕ ಆರೋಗ್ಯ ಸೇವೆಯಾಗಿ ಬೆಳೆದಿದೆ. ಇದು ಕ್ಲಿನಿಕಲ್ ಶ್ರೇಷ್ಠತೆ ಹಾಗೂ ಉತ್ತಮ ಗುಣಮಟ್ಟದ ಆರೈಕೆ ಅನುಭವದ ಬದ್ಧತೆಯನ್ನು ಒಳಗೊಂಡಿದೆ. ಈ ಪ್ರಯಾಣವು ನನಗೆ ವೃತ್ತಿಪರ ಮತ್ತು ವೈಯಕ್ತಿಕವೂ ಆಗಿದೆ. ಯುಕೆಯಲ್ಲಿ ತರಬೇತಿ ಪಡೆದ ಮನೋವೈದ್ಯರಾಗಿ ಜಾಗತಿಕವಾಗಿ ಈ ಆರೋಗ್ಯ ಸೇವೆಯನ್ನು ಸ್ಥಾಪಿಸಲು ಮತ್ತು ನಡೆಸಲು ಸಹಾಯ ಮಾಡಿದ್ದು ಮಾತ್ರವಲ್ಲ. ಮನೋವೈದ್ಯರಾಗಿ ಹಾಗೂ ಆರೈಕೆದಾರರಾಗಿಯೂ ಅನುಭವ ನೀಡಿದೆ. ತೀವ್ರವಾದ ಮನೋವೈದ್ಯಕೀಯ ತೊಂದರೆಯನ್ನು ಅನುಭವಿಸುತ್ತಿರುವವರ ಕುಟುಂಬದವರು ಏನನ್ನು ಎದುರಿಸುತ್ತಿರುತ್ತಾರೆ. ಅವರ ಆರೋಗ್ಯ ಚೇತರಿಕೆ ಹಾಗೂ ಅವರಲ್ಲಿ ಭರವಸೆ ಮೂಡಿಸುವ ಎರಡೂ ಕೆಲಸವನ್ನೂ ಆಸ್ಪತ್ರೆ ಮಾಡುತ್ತಿದೆ. ಈ ರೀತಿಯ ವಾತಾವರಣವನ್ನು ನಿರ್ಮಿಸಲಾಗುತ್ತಿದೆ. ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರಿಗೆ ನಿಜವಾಗಿಯೂ ಏನು ಅವಶ್ಯವಿದೆ ಎನ್ನುವುದನ್ನು ನಾವು ತಿಳಿದುಕೊಂಡಿದ್ದೇವೆ ಎಂದು ಡಾ. ಮಲಿಕ್ ಅವರು ಹೇಳಿದ್ದಾರೆ.

ಈ ಆಸ್ಪತ್ರೆ ಉಳಿದ ಆಸ್ಪತ್ರೆಗಳಿಗಿಂತ ಹೇಗೆ ಭಿನ್ನ ಮತ್ತು ವಿಶೇಷ

1. ಮನೋವೈದ್ಯಕೀಯ ಸಮಸ್ಯೆ ಎದುರಿಸುತ್ತಿರುವ ಒಳರೋಗಿಗಳ ಆರೈಕೆಗೆ ಪ್ರತ್ಯೇಕವಾಗಿ ಮೀಸಲಾಗಿರುವ ಭಾರತದ ಮೊದಲ ಖಾಸಗಿ ಆಸ್ಪತ್ರೆ

2. ಮನೋವೈದ್ಯರು, ಮನಶಾಸ್ತ್ರಜ್ಞರು, ಮನೋವೈದ್ಯಕೀಯ ನರ್ಸ್‌ಗಳು, ಸಹಾಯಕರು ಹಾಗೂ ತಜ್ಞರು ಸೇರಿದಂತೆ 200+ ಪರಿಣಿತರು ಈ ತಂಡದಲ್ಲಿ ಇದ್ದಾರೆ.

3. ಡೀಪ್ ಟ್ರಾನ್ಸ್‌ಕ್ರೇನಿಯಲ್ ಮ್ಯಾಗ್ನೆಟಿಕ್ ಸ್ಟಿಮ್ಯುಲೇಷನ್ (ಡೀಪ್ ಟಿಎಂಎಸ್), ಕೆಟಮೈನ್-ಸಹಾಯಕ ಚಿಕಿತ್ಸೆ ಹಾಗೂ ಎಲೆಕ್ಟ್ರೋಕನ್ವಲ್ಸಿವ್ ಥೆರಪಿ (ಇಸಿಟಿ) ನಂತಹ ಸುಧಾರಿತ ಚಿಕಿತ್ಸೆಗಳು ಇಲ್ಲಿ ಲಭ್ಯವಿದೆ.

4. ಆರಾಮ, ಸುರಕ್ಷತೆ ಮತ್ತು ಶೀಘ್ರ ಗುಣಮುಖರಾಗುವಂತಹ ಮಾದರಿಯಲ್ಲಿ ಚಿಕಿತ್ಸಾ ವ್ಯವಸ್ಥೆ ಇದೆ.

5. 15 ಕ್ಕೂ ಹೆಚ್ಚು ಭಾಷೆಗಳಲ್ಲಿ ಸೇವೆ ಇದೆ. ಅಲ್ಲದೇ ಆರೈಕೆ ಹಾಗೂ 24/7 ವೈದ್ಯಕೀಯ ಸೇವೆ ಲಭ್ಯವಿದೆ.

6. ಮನೋವೈದ್ಯಕೀಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರ ನಿರಂತರ ಆರೈಕೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಹೊರರೋಗಿಗಳಿಗೆ ಹಾಗೂ ಅಗತ್ಯ ಇರುವವರಿಗೆ ಡಿಜಿಟಲ್ ಸೌಲಭ್ಯವೂ ಲಭ್ಯವಿದೆ.

200 ಕ್ಕೂ ಹೆಚ್ಚು ಮನೋವೈದ್ಯರು, ಮನಶಾಸ್ತ್ರಜ್ಞರು ಹಾಗೂ ವೃತ್ತಿಪರರನ್ನು ಒಳಗೊಂಡಿರುವ ಕ್ಲಿನಿಕಲ್ ತಂಡವು 24/7 ಸೇವೆಯನ್ನು ನೀಡಲಿದೆ. ಮುಂದುವರಿದು ಈ ರೀತಿ ಆರೋಗ್ಯ ಸಮಸ್ಯೆ ಎದುರಿಸುತ್ತಿರು ಕುಟುಂಬದವರಿಗೆ ಕ್ಲಿನಿಕಲ್ ಸಪೋರ್ಟ್‌ ನೀಡಲಿದೆ. ಆದರೆ ಪ್ರತಿಯೊಬ್ಬರಿಗೆ ಅವಶ್ಯವಿರುವ ಸೌಕರ್ಯ ಹಾಗೂ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ನಮ್ಮ ಸಮಗ್ರ ಆರೋಗ್ಯ ಕಾಳಜಿಯು ವಿವಿಧ ಚಟುವಟಿಕೆಗಳು, ಪೌಷ್ಟಿಕಾಂಶದ ಊಟ ವ್ಯವಸ್ಥೆ ಹಾಗೂ ಶೀಘ್ರ ಗುಣಪಡಿಸುವ ವ್ಯವಸ್ಥೆಯನ್ನು ಒಳಗೊಂಡಿದೆ. ಮಾನಸಿಕ ಆರೋಗ್ಯವು ಘನತೆ, ಸಹಾನುಭೂತಿ ಹಾಗೂ ವಿಜ್ಞಾನವನ್ನು ಒಳಗೊಂಡಿರಬೇಕು ಎಂದು ನಾವು ನಂಬುತ್ತೇವೆ. ನಾವು ಮಾನಸಿಕ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರನ್ನು ಘನತೆಯಿಂದ ನಡೆಸಿಕೊಳ್ಳಲಿದ್ದೇವೆ ಎಂದು ಕ್ಲಿನಿಕಲ್ ನಿರ್ದೇಶಕಿ ಡಾ. ದಿವ್ಯಾ ಜಿ ನಲ್ಲೂರ್ ಅವರು ಹೇಳಿದ್ದಾರೆ.

ಸರ್ಕಾರ ಮತ್ತು ವೈದ್ಯಕೀಯ ಸೇವೆ

ಇನ್ನು ಈ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ, ಕರ್ನಾಟಕದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಆಸ್ಪತ್ರೆಯ ವಿಶೇಷತೆಯನ್ನು ಮೆಚ್ಚಿಕೊಂಡಿದ್ದಾರೆ. ಯುವಕರು ಮತ್ತು ವಯಸ್ಕರಲ್ಲಿ ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಸವಾಲುಗಳೊಂದಿಗೆ, ವಿಶೇಷ, ಬಹು-ಶಿಸ್ತಿನ ಆರೈಕೆಯನ್ನು ನೀಡುವ ಅಮಹಾದಂತಹ ಹೆಚ್ಚಿನ ಸಂಸ್ಥೆಗಳು ನಮಗೆ ಅಗತ್ಯವಿದೆ. ಮನೋವೈದ್ಯಕೀಯ ಸೇವೆ ಈಗ ಕರ್ನಾಟಕದ ಸಾರ್ವಜನಿಕ ಆರೋಗ್ಯ ಸೇವೆಗಳ ಅಡಿಯಲ್ಲಿ 14 ಪ್ರಮುಖ ಆರೋಗ್ಯ ವಿಭಾಗದಲ್ಲಿ ಇರಲಿದೆ ಎನ್ನುವ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಕ್ಕೆ ಸಂತೋಷವಾಗುತ್ತದೆ ಎಂದಿದ್ದಾರೆ.

ಕರ್ನಾಟಕದ ಕಂದಾಯ ಸಚಿವರ ಪತ್ನಿ ಮೀನಾಕ್ಷಿ ಕೃಷ್ಣ ಬೈರೆಗೌಡ ಅವರು, ಮನೋವೈದ್ಯಕೀಯ ಕ್ಷೇತ್ರದಲ್ಲಿ ಈ ರೀತಿಯ ಆರೋಗ್ಯ ಸೇವೆಯ ಬಗ್ಗೆ ಮಾತನಾಡಿದ್ದಾರೆ. ಸುಮಾರು 200 ಮಿಲಿಯನ್ ಭಾರತೀಯರು ಮಾನಸಿಕ ಆರೋಗ್ಯ ಸಮಸ್ಯೆಯ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅಮಹಾದಂತಹ ಸೌಲಭ್ಯಗಳು ಕೇವಲ ಅಗತ್ಯವಷ್ಟೇ ಅಲ್ಲ. ಅತ್ಯವಶ್ಯಕವೂ ಆಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನಿಮ್ಹಾನ್ಸ್‌ನ ಹಿರಿಯ ಪ್ರಾಧ್ಯಾಪಕಿ ಡಾ. ಪ್ರಭಾ ಚಂದ್ರ, ಅಮಹಾದ ಹೊಸ ಮಾದರಿಯ ಆರೋಗ್ಯ ಸೇವೆ ಹಾಗೂ ಒಳರೋಗಿಗಳ ಆರೋಗ್ಯ ಸೇವೆಗೆ ಮಾಡಿಕೊಂಡಿರುವ ವ್ಯವಸ್ಥೆಯನ್ನು ಶ್ಲಾಘಿಸಿದರು.

ಜೀವನದ ಮಟ್ಟವನ್ನು ಸುಧಾರಿಸುವ ನಿರಂತರ ಆರೈಕೆ ಸೇವೆ

ಅಮಹಾದ ಹೊಸ ಮಾದರಿಯು ಇವುಗಳನ್ನು ಒಳಗೊಂಡಿದೆ:

ಪ್ರಮುಖ ಮಹಾನಗರಗಳಲ್ಲಿ ಹೊರರೋಗಿ ಕೇಂದ್ರಗಳು

600+ ಸ್ವ-ಆರೈಕೆ ಸಾಧನಗಳೊಂದಿಗೆ ಆನ್‌ಲೈನ್ ಚಿಕಿತ್ಸಾ ವೇದಿಕೆ

ಚಿಲ್ಡ್ರನ್ ಫಸ್ಟ್ ಎನ್ನುವ ಬದ್ಧತೆಯ ಮೂಲಕ ಮಗು ಮತ್ತು ಯುವ ಸಮುದಾಯಕ್ಕೆ ಮಾನಸಿಕ ಆರೋಗ್ಯ ಸೇವೆಗಳು

ಸಂಕೀರ್ಣ ಮಾನಸಿಕ ಆರೋಗ್ಯ ಸಮಸ್ಯೆಯನ್ನು ಎದುರಿಸುವ ಕುಟುಂಬಗಳಿಗೆ 24/7 ಆರೈಕೆ ಸೇವೆ

ಆತ್ಮಹತ್ಯೆ, ಸ್ಕಿಜೋಫ್ರೇನಿಯಾ ಹಾಗೂ ತೀವ್ರ ಬಿಕ್ಕಟ್ಟಿನ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರ ಕುಟುಂಬದವರಿಗೆ ಯಾವ ರೀತಿಯ ಬೆಂಬಲ ಅವಶ್ಯವಿದೆ ಹಾಗೂ ಅವರಿಗೆ ಹೇಗೆ ಧೈರ್ಯ ತುಂಬಬೇಲು ಎನ್ನುವುದು ನಮಗೆ ತಿಳಿದಿದೆ. ಈ ಆಸ್ಪತ್ರೆಯು ಆರೈಕೆಯ ವಿಧಾನವನ್ನು ವಿಸ್ತರಿಸಿಕೊಂಡಿದೆ ಎಂದು ನೇಹಾ ಕಿರ್ಪಾಲ್ ತಮ್ಮ ಸ್ವಂತ ಆರೈಕೆಯ ಅನುಭವವನ್ನು ಹಂಚಿಕೊಳ್ಳುತ್ತಾರೆ.

ಅಮಹಾ ಬಗ್ಗೆ

ಅಮಹಾ ಜಾಗತಿಕವಾಗಿ ಅತ್ಯುತ್ತಮ ಗುಣಮಟ್ಟದ ಮನೋವೈದ್ಯಕೀಯ ಮತ್ತು ಮಾನಸಿಕ ಆರೈಕೆಯನ್ನು ನೀಡುವ ಭಾರತದ ಪ್ರಮುಖ ಮಾನಸಿಕ ಆರೋಗ್ಯ ಸಂಸ್ಥೆಯಾಗಿದೆ. ನೇರ ಹಾಗೂ ಡಿಜಿಟಲ್ ವೇದಿಕೆಗಳಲ್ಲಿ ಬಲವಾದ ಸೇವೆಯನ್ನು ನೀಡುತ್ತದೆ. ಅಮಹಾ ಮಾನಸಿಕ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವವರು ಹಾಗೂ ಕುಟುಂಬದವರೊಂದಿಗೆ ಸಾಂಸ್ಕೃತಿಕ ಹೊಂದಾಣಿಕೆ, ನಿಖರ ಮಾಹಿತಿ ಮತ್ತು ಡಿಜಿಟಲ್ ಬೆಂಬಲಿತ ಸೇವೆಗಳನ್ನು ನೀಡುತ್ತದೆ. ಭಾರತದಲ್ಲಿ ಮಾನಸಿಕ ಆರೋಗ್ಯ ಆರೈಕೆಯನ್ನು ಉನ್ನತೀಕರಿಸುವುದು ಮತ್ತು ಘನತೆಯಿಂದ ಮತ್ತು ಸಮಗ್ರ ಚಿಕಿತ್ಸಾ ಮಾದರಿಗಳ ಮೂಲಕ ಅವರ ಆರೋಗ್ಯವನ್ನು ಸುಧಾರಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+