ಬೆಂಗಳೂರಲ್ಲಿ 4ನೇ ಟರ್ಮಿನಲ್ ನಿರ್ಮಾಣಕ್ಕೆ ಸಿಕ್ತು ಒಪ್ಪಿಗೆ: ಸ್ಥಳ ಯಾವುದು? ಸಮೀಕ್ಷೆ ವೆಚ್ಚ, ವಿವರ

ಬೆಂಗಳೂರು, ಮೇ 10: ಬೆಂಗಳೂರು ವ್ಯಾಪ್ತಿಯಲ್ಲಿ ನೈಋತ್ಯ ರೈಲ್ವೆಯು 03 ಟರ್ಮಿನಲ್ ಗಳನ್ನು ದಶಕಗಳಿಂದಲೂ ನಿರ್ವಹಿಸುತ್ತಾ ಬಂದಿದೆ. ಇತ್ತೀಚಿನ ವರ್ಷಗಳಲ್ಲಿ ರೈಲ್ವೆ 4ನೇ ಟರ್ಮಿನಲ್ ನಿರ್ಮಿಸಬೇಕು ಎಂಬ ಪ್ರಸ್ತಾವನೆ ಕೇಳಿ ಬಂದಿತ್ತು. ಈ ಇದೀಗ ರೈಲ್ವೆ ಇಲಾಖೆಯು ಹೊಸ 4ನೇ ಟರ್ಮಿನಲ್ ಸ್ಥಾಪನೆಯ ಯೋಜನೆಗೆ ಅನುಮೋದನೆ ನೀಡಿದೆ. ಈ ಮೂಲಕ ಭವಿಷ್ಯದಲ್ಲಿ ರೈಲು ಪ್ರಯಾಣಿಕರಿಗೆ ಮತ್ತಷ್ಟು ಸಾರಿಗೆ ಅನುಕೂಲ ಸಿಗಲಿದೆ.

ನೈಋತ್ಯ ರೈಲ್ವೆಯು ಬೆಂಗಳೂರಿನಲ್ಲಿ ಸದ್ಯ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ಟರ್ಮಿನಲ್ (KSR Bengaluru), ಯಶವಂತಪುರ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ (SMVT)' ಸೇರಿ ಮೂರನ್ನು ನಿರ್ವಹಿಸುತ್ತಿದೆ. ಪ್ರಸ್ತಾಪಿತ ಹೊಸ ನಾಲ್ಕನೇ ಟರ್ಮಿನಲ್ ಯೋಜನೆಯ ಅಂತಿಮ ಸ್ಥಳ ಸಮೀಕ್ಷೆ (FLS) ಅನುಮೋದನೆ ದೊರೆತಿದೆ. ಶೀಘ್ರವೇ ಯೋಜನೆಯ ಪ್ರಾಥಮಿಕ ಕೆಲಸಗಳು ಪೂರ್ಣಗೊಳ್ಳುವ ನಿರೀಕ್ಷೆ ಇವೆ.

Indian Railway Approves 4th Terminal Project and Land Survey in Bengaluru

ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಬಂಡವಾಳ ಹೂಡಿಕೆ ಹೆಚ್ಚಾಗುತ್ತಿದೆ. ಹೊಟ್ಟೆಗಾಡಿಗಾಗಿ ವಲಸೆ ಬರುವ ಕಾರ್ಮಿಕ ಸಂಖ್ಯೆ, ಉದ್ಯೋಗಿಗಳ ಸಂಖ್ಯೆ ಏರಿಕೆ ಆಗುತ್ತಿದೆ. ಇದರಿಂದ ಅಗತ್ಯಕ್ಕೆ ತಕ್ಕಂತೆ ಸಾರಿಗೆ ಸೇವೆ, ಮೂಲ ಸೌಕರ್ಯ ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ರೈಲ್ವೆ ಮೂಲ ಸೌಕರ್ಯ ಹೆಚ್ಚಿಸಿ, ಹೆಚ್ಚುತ್ತಿರುವ ಪ್ರಯಾಣಿಕರ ಬೇಡಿಕೆ ಪೂರೈಸುವ ಉದ್ದೇಶದಿಂದ ಈ ಟರ್ಮಿನಲ್ ನಿರ್ಮಿಸಲಾಗುವುದು ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಟರ್ಮಿನಲ್ ಯೋಜನೆಗೆ ಅಂತಿಮ ಸ್ಥಳದ ಸಮೀಕ್ಷೆಯು ಅಂದಾಜು 1.35 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಸಲಾಗುತ್ತದೆ. ಟರ್ಮಿನಲ್ ನಿರ್ಮಾಣಕ್ಕೆ ಸ್ಥಳ ಅಂತಿಮಗೊಳಿಸಬೇಕಿದೆ. ಮೂಲಗಳ ಪ್ರಕಾರ ದೇವನಹಳ್ಳಿ ನಿಲ್ದಾಣದ ಬಳಿ ಅಥವಾ ಯಲಹಂಕ-ದೇವನಹಳ್ಳಿ-ಚಿಕ್ಕಬಳ್ಳಾಪುರ ಕಾರಿಡಾರ್ ನ ಯಾವುದೇ ಭಾಗದಲ್ಲಿ ಸ್ಥಳವನ್ನು ತಾತ್ಕಲಿಕವಾಗಿ ಗುರುತಿಸಲಾಗಿದೆ.

ರಾಜಧಾನಿ ಬೆಂಗಳೂರಿನ ಎರಡನೇ ಆತ್ಯಾಧುನಿಕ ಟರ್ಮಿನಲ್ ರೂಪದಲ್ಲಿ ತಲೆ ಎತ್ತಲಿದೆ. ಮೊದಲ ಸುವ್ಯವಸ್ಥಿ ಟರ್ಮಿನಲ್ ಆಗಿ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಬೆಂಗಳೂರು ಗುರುತಿಸಿಕೊಂಡಿದೆ. ಪೂರ್ವ ಮತ್ತು ಈಶಾನ್ಯ ಭಾರತಕ್ಕೆ ಹೋಗುವ ಸುಮಾರು 50 ರೈಲುಗಳು ಬೆಂಗಳೂರಿನಿಂದ ಹೊರಡುತ್ತದೆ. 2024-25ರಲ್ಲಿ ನೈಋತ್ಯ ರೈಲ್ವೆ ಬೆಂಗಳೂರು 103.72 ಮಿಲಿಯನ್ ಸೇರಿ ಒಟ್ಟು 212.06 ಮಿಲಿಯನ್ ಪ್ರಯಾಣಿಕರು ರೈಲ್ವೆ ಸೇವೆ ಪಡೆದಿದ್ದಾರೆ. ಬೆಂಗಳೂರಿನ ಮೂರು ರೈಲುಗಳು ಗರಿಷ್ಠ ಸಂಖ್ಯೆಯ ರೈಲುಗಳನ್ನು ನಿರ್ವಃಹಿಸುತ್ತವೆ.

ಹಾಲಿ ಟರ್ಮಿನಲ್ ವ್ಯವಸ್ಥೆಯಲ್ಲಿ ಉತ್ತಮ ಕಾರ್ಯ ನಿರ್ವಹಣೆ ನಡೆದಿದೆ. ಹೀಗಿದ್ದರೂ ಪ್ಲಾಟ್‌ಫಾರ್ಮ್‌ಗಳು ಸದಾ ತುಂಬಿರುತ್ತವೆ. ಜನ ದಟ್ಟಣೆ ಹೆಚ್ಚಾಗಿದೆ. ಖಾಲಿ ರೇಕ್ ಚಲನೆ, ಮೀಸಲು ಸರಕು ಕಾರಿಡಾರ್ ಇಲ್ಲದಿರುವುದು, ನಗರ ಸಾಂದ್ರತೆ ಹೆಚ್ಚಿರುವ ಸ್ಥಳಗಳಲ್ಲಿ ವಿಸ್ತರಣೆ ಅಸಾಧ್ಯವಾಗಿಸಿದೆ. ಹೀಗಾಗಿ ಟರ್ಮಿನಲ್ ಶಿಫ್ಟ್‌ಗಳಂತಹ ಯೋಜನೆ ಜಾರಿಗೆ ತಂದು ಹಾಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರೈಲ್ವೆ ಇಲಾಖೆ ಮುಂದಾಗಿದೆ.

ಇದೊಂದು ಬೃಹತ್ ಟರ್ಮಿನಲ್ ಆಗಲಿದ್ದು, ಈ ಸಂಬಂಧ ಸೂಕ್ತ ಸ್ಥಳದ ಸರ್ವೇಗಾಗಿ ಈಗಾಗಲೇ ನೈಋತ್ಯ ರೈಲ್ವೆಯು ಸಮೀಕ್ಷೆ ನಡೆಸಲು ಸಲಹೆಗಾರರನ್ನು ನೇಮಿಸಿಕೊಂಡಿದೆ. ಅಂದಾಜು ವೆಚ್ಚ, ಡಿಪಿಆರ್, ಇತರ ವಿವರ ಸಹ ರೂಪಿಸಲಾಗುತ್ತದೆ. ಈ ಹೊಸ ನಾಲ್ಕನೇ ಟರ್ಮಿನಲ್ ಅಂದಾಜು 1,000 ಎಕರೆಯಲ್ಲಿ ಎಲೆಎತ್ತಲಿದೆ. ಬೆಲೆ 1,500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ನಿರೀಕ್ಷೆ ಇದೆ.

4 ನೇ ರೈಲ್ವೆ ಟರ್ಮಿನಲ್ ನಲ್ಲಿ ಏನೆಲ್ಲ ಬರಲಿದೆ?

* ಈ ಟರ್ಮಿನಲ್‌ನಲ್ಲಿ 16 ಪ್ಲಾಟ್‌ಫಾರ್ಮ್‌ಗಳು ನಿರ್ಮಾಣಗೊಳ್ಳಲಿವೆ.

* 12 ಪಿಟ್ ಲೈನ್‌ಗಳು

* ಆಡಳಿತ ಕಟ್ಟಡಗಳು ಮತ್ತು ಮಳಿಗೆಗಳು

* ಪ್ರತಿ ದಿನ 36 ರೈಲು ನಿರ್ವಹಣೆ ಸಾಮರ್ಥ್ಯ ಹೊಂದಿರಲಿದೆ.

* 5 ವಾಷಿಂಗ್ ಲೈನ್‌ಗಳು (ACWP-ಸಜ್ಜುಗೊಂಡವು)

* 6 ಹೆವಿ ರಿಪೇರಿ ಬೇ ಲೈನ್‌ಗಳು

* 24 ಸ್ಟೇಬಿಲಿಂಗ್ ಲೈನ್‌ಗಳು

* 2 ಪಿಟ್ ವೀಲ್ ಲೇಥ್ ಲೈನ್‌ಗಳು

* 6 ಸಿಕ್ ಲೈನ್‌ಗಳು

* ಅಗತ್ಯ ಸುಸಜ್ಜಿತ ವ್ಯವಸ್ಥೆಗಳನ್ನು ಈ ಟರ್ಮಿನಲ್ ಹೊಂದಿರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+