ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಏರ್‌ಪೋರ್ಟ್‌ ಆವರಣದಲ್ಲಿ ಐಓಸಿ ಪೆಟ್ರೋಲ್ ಬಂಕ್ ಆರಂಭ

|
Google Oneindia Kannada News

ಬೆಂಗಳೂರು, ನವೆಂಬರ್ 30: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲೇ ಐಓಸಿ ಪೆಟ್ರೋಲ್ ಬಂಕ್ ನಿರ್ಮಾಣ ಮಾಡಲಾಗಿದೆ. ಕೆಐಎ ಆವರಣದಲ್ಲಿ ಇದೇ ಮೊದಲ ಬಾರಿಗೆ ನಿರ್ಮಾಣಗೊಂಡಿರುವ ಪೆಟ್ರೋಲ್ ಬಂಕ್ ಇದಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗೆ ಒಮ್ಮೆ ಕಾಲಿಟ್ಟರೆ ಏರ್‌ಪೋರ್ಟ್ ಹೋಗುವ ಮಾರ್ಗದಲ್ಲಿ ಪೆಟ್ರೋಲ್ ಬಂಕ್‌ಗಳೇ ಇಲ್ಲ, ಒಂದು ವೇಳೆ ವಿಮಾನ ನಿಲ್ದಾಣಕ್ಕೆ ಬಂದ ಬಳಿಕ ಪೆಟ್ರೋಲ್ ಖಾಲಿಯಾದರೆ ಇನ್ಯಾವುದಾದರೂ ವಾಹನದಲ್ಲಿ ತೆರಳಿಯೇ ಪೆಟ್ರೋಲ್ ತರಬೇಕಿತ್ತು. ಇನ್ನುಮುಂದೆ ಆ ತಲೆನೋವಿಲ್ಲ.

ವಿಮಾನ ನಿಲ್ದಾಣದಿಂದ ಮೂರು ಕಿ.ಮೀ ಅಂತರದಲ್ಲಿ ಪೆಟ್ರೋಲ್ ಬಂಕ್ ಇದೆ, ಈ ಹಿಂದೆ 8 ಕಿಮೀ ದೂರು ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯ ಪೆಟ್ರೋಲ್ ಬಂಕ್‌ಗೆ ಹೋಗಬೇಕಿತ್ತು. ಕಂಪನಿಯೇ ರಿಟೇಲ್ ಔಟ್ ಲೆಟ್ ಮಾಲಿಕತ್ವವ ಹೊಂದಿರುವ ಕಾರಣದಿಂದ ಗ್ರಾಹಕರು ಸ್ಥಳದಲ್ಲೇ ಇಂಧನದ ಗುಣಮಟ್ಟ ಪರೀಕ್ಷಿಸಲು ಅವಕಾಶವಿದೆ.

ಕಚ್ಚಾತೈಲ ಬೆಲೆ ನಿರಂತರ ಕುಸಿತ, ಭಾರತದಲ್ಲಿ ಹರ್ಷವೋ ಹರ್ಷ! ಕಚ್ಚಾತೈಲ ಬೆಲೆ ನಿರಂತರ ಕುಸಿತ, ಭಾರತದಲ್ಲಿ ಹರ್ಷವೋ ಹರ್ಷ!

ಬಂಕ್‌ನಲ್ಲಿ ಅನಿರೀಕ್ಷಿತವಾಗಿ ಇಂಧನ ಸೋರಿಕೆಯಾದರೂ ಅದು ಭೂಮಿ ಸೇರದಂತೆ ವ್ಯವಸ್ಥೆ ಕಲ್ಪಿಸಲಾಗಿದೆ. 10 ಕೆವಿವಿದ್ಯುತ್ ಉತ್ಪಾದನಾ ಸೌರಶಕ್ತಿ ಘಟಕವೂ ಇಲ್ಲಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯುರೋಪ್ ರಾಷ್ಟ್ರಗಳಿಗೆ ನೇರವಾಗಿ ಬಾಗಿಲು ತೆರೆಯುವ ಮೂಲಕ ಹೊಸ ದಾಖಲೆಗೆ ನಾಂದಿ ಹಾಡಿದೆ.

ಲಂಡನ್-ಬೆಂಗಳೂರು ನಡುವೆ ಹಾರಾಟಕ್ಕೆ ಏರ್ ಇಂಡಿಯಾ, 256 ಸೀಟುಗಳ ಬೋಯಿಂಗ್ ಡ್ರೀಮ್‌ಲೈನರ್ ವಿಮಾನಗಳನ್ನು ಬಳಕೆ ಮಾಡುತ್ತಿದೆ.

ಮುಂದುವರೆದ ಇಂಧನ ಬೆಲೆ ಇಳಿಕೆ: ಪೆಟ್ರೋಲ್ 40 ಪೈಸೆ ಇಳಿತ ಮುಂದುವರೆದ ಇಂಧನ ಬೆಲೆ ಇಳಿಕೆ: ಪೆಟ್ರೋಲ್ 40 ಪೈಸೆ ಇಳಿತ

ಬ್ರಿಟಿಷ್ ಏರ್‌ವೇಸ್ ಈಗಾಗಲೇ ಲಂಡನ್-ಬೆಂಗಳೂರು ನಡುವೆ ನೇರ ವಿಮಾನ ಸಂಪರ್ಕ ಕಲ್ಪಿಸಿದೆ. ಆದರೆ, ಈ ಮಾರ್ಗದಲ್ಲಿ ಬೆಂಗಳೂರಿನಿಂದ ಪ್ರಯಾಣಿಕರ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಈ ನಿರ್ಧಾರ ಕೈಗೊಂಡಿದೆ. ನ.16ರಿಂದ ಲಂಡನ್ ನಿಂದ ಬೆಂಗಳೂರು ಹಾಗೂ ನ.17ರಿಂದ ಬೆಂಗಳೂರಿನಿಂದ ಲಂಡನ್‌ಗೆ ವಾರಕ್ಕೆ ಮೂರು ಬಾರಿ ವಿಮಾನ ಹಾರಾಟ ಆರಂಭವಾಗಿದೆ.. ಪ್ರಯಾಣದ ಅವಧಿ 9 ತಾಸು 30 ನಿಮಿಷಗಳದ್ದಾಗಿರುತ್ತದೆ.

ಈ ಬೋಯಿಂಗ್ 787 ವಿಮಾನವು ಸೋಮವಾರ, ಬುಧವಾರ ಮತ್ತು ಶುಕ್ರವಾರ ಲಂಡನ್ ನಿಂದ ಬೆಂಗಳೂರಿಗೆ ಬರಲಿದೆ. ಹಾಗೂ ಮಂಗಳವಾರ , ಗುರುವಾರ ಮತ್ತು ಶನಿವಾರ ಬೆಂಗಳೂರಿನಿಂದ ಲಂಡನ್ ಗೆ ತೆರಳಲಿದೆ ಎಂದು ಏರ್ ಇಂಡಿಯಾ ತಿಳಿಸಿದೆ.

ಇದರಿಂದ ಐಡಿ ಮತ್ತು ಆರೋಗ್ಯ ಪ್ರವಾಸಕ್ಕಾಗಿ ಲಂಡನ್ ಗೆ ತೆರಳುವ ಬೆಂಗಳೂರು ಪ್ರಯಾಣಿಕರ ಆಸೆ ಈಡೇರಿದಂತಾಗಿದೆ. ಇದಕ್ಕೆ ಏರ್ ಇಂಡಿಯಾ ವಿಶೇಷ ಆಫರ್ ನೀಡಿದ್ದು, ಬ್ಯುಸಿನೆಸ್ ಕ್ಲಾಸ್ ಪ್ರಯಾಣವು 1,29,500 ಮತ್ತು ಎಕನಾಮಿಕ್ ಕ್ಲಾಸ್ ಪ್ರಯಾಣ 35,220 ನಿಗದಿಪಿಸಲಾಗಿದೆ. ಬೆಂಗಳೂರಿನಿಂದ ವಿಮಾನ ಬೆಳಗ್ಗೆ 5.25ಕ್ಕೆ ಹೊರಡಲಿದೆ.

ಸಿಎನ್‌ಜಿ, ಚಾರ್ಜಿಂಗ್ ವ್ಯವಸ್ಥೆ

ಸಿಎನ್‌ಜಿ, ಚಾರ್ಜಿಂಗ್ ವ್ಯವಸ್ಥೆ

ಬೇಡಿಕೆಗೆ ತಕ್ಕಂತೆ ಭವಿಷ್ಯದಲ್ಲಿ ಬಂಕ್‌ನಲ್ಲಿ ಸಿಎನ್‌ಜಿ ಹಾಗೂ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ಕೆಫೆ ಕಾಫಿ ಡೇ, ಎಟಿಎಂ ಸೇವೆಯೂ ಶೀಘ್ರ ಆರಂಭವಾಗಲಿದೆ.

ದೀಪಾವಳಿಗೂ ಮುನ್ನ ಪೆಟ್ರೋಲ್, ಡೀಸೆಲ್ ಇನ್ನಷ್ಟು ಇಳಿಕೆ ದೀಪಾವಳಿಗೂ ಮುನ್ನ ಪೆಟ್ರೋಲ್, ಡೀಸೆಲ್ ಇನ್ನಷ್ಟು ಇಳಿಕೆ

ಪೆಟ್ರೋಲ್‌ಬಂಕ್‌ನಲ್ಲಿರುವ ಸೌಲಭ್ಯಗಳೇನೇನು?

ಪೆಟ್ರೋಲ್‌ಬಂಕ್‌ನಲ್ಲಿರುವ ಸೌಲಭ್ಯಗಳೇನೇನು?

ದಿನದ 24 ಗಂಟೆಯೂ ಇಂಧನ ಲಭ್ಯವಾಗಿರುತ್ತದೆ, ನೈಟ್ರೋಜನ್ ಹಾಗೂ ಏರ್, ಕಾರ್‌ವಾಶ್, ಟಯರ್ ಚೇಂಜ್, ಗುಣಮಟ್ಟದ ಇಂಧನ, ಎಕ್ಸ್‌ಟ್ರಾ ಪ್ರೀಮಿಯಂ ಪೆಟ್ರೋಲ್, ಎಲ್ಲೆಡೆ ಸಿಸಿ ಕ್ಯಾಮರಾ, ಡಿಜಿಟಲ್ ಪಾವತಿಗೆ ಅವಕಾಶ, ಸ್ತ್ರೀ ಹಾಗೂ ಪುರುಷರಿಗೆ ಪ್ರತ್ಯೇಕ ಶೌಚಗೃಹ ಸೌಲಭ್ಯಗಳಿವೆ.

ವಾಹನ ಸವಾರರಿಗೆ ಮತ್ತಷ್ಟು ನೆಮ್ಮದಿ: ಪೆಟ್ರೋಲ್, ಡೀಸೆಲ್ ದರ ಇಳಿಕೆ ವಾಹನ ಸವಾರರಿಗೆ ಮತ್ತಷ್ಟು ನೆಮ್ಮದಿ: ಪೆಟ್ರೋಲ್, ಡೀಸೆಲ್ ದರ ಇಳಿಕೆ

ಲಕ್ಷಾಂತರ ಮಂದಿಗೆ ಅನುಕೂಲ

ಲಕ್ಷಾಂತರ ಮಂದಿಗೆ ಅನುಕೂಲ

ಪ್ರತಿನಿತ್ಯ 2100 ಏರ್‌ಪೋರ್ಟ್ ಟ್ಯಾಕ್ಸಿ, 17 ಸಾವಿರ ಆಪ್ ಆಧಾರಿತ ಟ್ಯಾಕ್ಸಿ, 18 ಸಾವಿರಕ್ಕೂ ಹೆಚ್ಚು ಖಾಸಗಿ ಕಾರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತದೆ. ನಿಲ್ದಾಣದ 27,500 ಸಿಬ್ಬಂದಿ ಬಸ್ ಅಥವಾ ಖಾಸಗಿ ವಾಹನ ಬಳಸುತ್ತಾರೆ. ಹೀಗಾಗಿ ಕೆಐಎ ನಿಲ್ದಾಣದಲ್ಲಿ ಪೆಟ್ರೋಲ್ ಬಂಕ್‌ಗೆ ಹೆಚ್ಚು ಬೇಡಿಕೆಯಿತ್ತು.

ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಮೊದಲ ಪೆಟ್ರೋಲ್ ಬಂಕ್

ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಮೊದಲ ಪೆಟ್ರೋಲ್ ಬಂಕ್

ದೇಶದಲ್ಲೇ ಮೊದಲ ಬಾರಿಎ ಕೊಚ್ಚಿ ವಿಮಾನ ನಿಲ್ದಾಣದಲ್ಲಿ 2001ರಲ್ಲಿ ಮೊದಲ ಪೆಟ್ರೋಲ್ ಬಂಕ್ ಆರಂಭಿಸಲಾಗಿತ್ತು. ಇದೀ ಕೆಐಎನಲ್ಲೂ ಲಭ್ಯವಿದೆ. ವಿಮಾನ ನಿಲ್ದಾಣದ ಹೊರ ವಿನ್ಯಾಸದಂತೆಯೇ ಪೆಟ್ರೋಲ್ ಬಂಕ್ ವಿನ್ಯಾಸವಿದೆ.

English summary
Trial operations of an Indian Oil Company Owned Company Operated (COCO) petrol bunk have commenced at the Kempegowda International Airport, Bengaluru. The petrol bunk is a boon to visitors and people working in KIA, since the nearest bunk is 4 km from the airport. The new facility is located close to Trumpet Junction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X