ನಮ್ಮ ಮೆಟ್ರೋ ಸಾಲದ ಹೊರೆ ಹೆಚ್ಚಳ: 538 ಕೋಟಿ ನಷ್ಟ

ಬೆಂಗಳೂರು, ಜೂನ್ 10: ಬೆಂಗಳೂರು ನಮ್ಮ ಮೆಟ್ರೋ ರೈಲು ನಿಗಮವು ನಷ್ಟ ಅನುಭವಿಸುತ್ತಿದೆ. 2017-18ನೇ ಸಾಲಿನಲ್ಲಿ ನಿಗಮ 538.05 ಕೋಟಿ ರೂ. ನಷ್ಟದ ಪ್ರಮಾಣ 81 ಕೋಟಿ ರೂ. ಅಧಿಕವಾಗಿದೆ.

2017ರ ಏಪ್ರಿಲ್‌ನಿಂದ 2018 ಮಾರ್ಚ್ ಅಂತ್ಯದವರೆಗೆ ನಿಗಮ 324.95 ಕೋಟಿ ರೂ. ಆದಾಯವನ್ನು ಟಿಕೆಟ್ ಮಾರಾಟದಿಂದ ಗಳಿಸಿತ್ತು. ಜತೆಗೆ ನಿಲ್ದಾಣದಲ್ಲಿರುವ ವಾಣಿಜ್ಯ ಮಳಿಗೆಗಳು ಎಟಿಎಂ ಕೇಂದ್ರಗಳಿಂದ ಬಾಡಿಗೆ ರೂಪದಲ್ಲಿ 14.84 ಕೋಟಿ ರೂ. ಪಡೆದಿದೆ. ನೌಕರರ ವೇತನಕ್ಕೆ 78.28 ಕೋಟಿ ರೂ. ಸೇರಿ ಒಂದು ವರ್ಷದಲ್ಲಿ ನಿಗಮ 767.08 ಕೋಟಿ ರೂ. ವ್ಯಯಿಸಿದೆ.

2015-16ರಲ್ಲಿ 341 ಕೋಟಿ ರೂ. ನಷ್ಟದಲ್ಲಿದ್ದ ನಿಗಮ 2016-17ರಲ್ಲಿ ಮತ್ತೆ 457.88 ಕೋಟಿ ರೂ. ನಷ್ಟ ಅನುಭವಿಸಿತ್ತು. 2017-18ರಲ್ಲಿ ನಷ್ಟ ಮತ್ತೆ 81 ಕೋಟಿ ರೂ. ಅಧಿಕವಾಗಿ 538.05 ಕೋಟಿ ರೂ.ಗೆ ತಲುಪಿದೆ. ಮೆಟ್ರೋ ಸಂಚಾರ ಪ್ರಾರಂಭವಾಗಿ ಕೇವಲ 6 ವಷವಾಗುತ್ತಿರುವ ಹಿನ್ನೆಲೆಯಲ್ಲಿ ನಷ್ಟದ ಬಗ್ಗೆ ನಿಗಮ ಹೆಚ್ಚು ತಲೆಕೆಡಿಸಿಕೊಂಡಿಲ್ಲ.ಮೊದಲು ನಷ್ಟ ಅನುಭವಿಸುವುದು ಸಾಮಾನ್ಯ, ನಿಗಮ ಕೇವಲ ಮೆಟ್ರೋ ಕಾರ್ಯಾಚರಣೆ ನಡೆಸುತ್ತಿಲ್ಲ. ಬದಲಾಗಿ ಮೆಟ್ರೋ ಮಾರ್ಗ ಕಾಮಗಾರಿ ಹೊಣೆಯೂ ನಿಗಮದ ಮೇಲೆ ಇದೆ.

Increasing net loss of BMRCL worried authority

ಈ ಸಾಲಿನಲ್ಲಿ ವಿದ್ಯುತ್ ದರಕ್ಕೆ ಬೆಸ್ಕಾಂ ರಿಯಾಯಿತಿ ನೀಡಿದೆ. ಪ್ರತಿ ಯುನಿಟ್‌ಗೆ 6 ರೂ. ಇದ್ದ ದರ ಇದೀಗ 5 ರೂ.ಗೆ ಇಳಿಕೆಯಾಗಿದ್ದು, ನಿಗಮಕ್ಕೆ ಪ್ರತಿ ತಿಂಗಳು 1 ಕೋಟಿ ರೂ. ಉಳಿಕೆಯಾಗುತ್ತಿದೆ. ಮೆಟ್ರೋ ಮಾರ್ಗದಲ್ಲಿ ಕ್ರಮೇಣವಾಗಿ 6 ಬೋಗಿ ಮೆಟ್ರೋ ರೈಲು ಸಂಚಾರ ಆರಂಭವಾಗಲಿದ್ದು, ಪ್ರಯಾಣಿಕರ ಸಂಖ್ಯೆಯೂ ಏರಿಕೆಯಾಗಲಿದೆ ಇದರಿಂದ ನಿಗಮಕ್ಕೆ ಆದಾಯವೂ ಹೆಚ್ಚುವ ನಿರೀಕ್ಷೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+