ಬೆಂಗಳೂರು ಬಿಬಿಎಂಪಿ ಕಮಿಷನರ್‌ ಹೆಸ್ರರಲ್ಲಿ ಕಿರಾತಕರು ಮಾಡಿದ್ರು ಖತರ್ನಾಕ್ ಪ್ಲಾನ್

ಬೆಂಗಳೂರು ಮಹಾನಗರ ಪಾಲಿಕೆ ದೇಶದ ಪ್ರತಿಷ್ಠಿತ ಪಾಲಿಕೆಗಳಲ್ಲಿ ಒಂದಾಗಿದೆ. ಆದರೆ, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜನರ ಕೆಂಗಣ್ಣಿಗೆ ಗುರಿಯಾಗಿದ್ದೇ ಹೆಚ್ಚು. ಬೆಂಗಳೂರಿನ ಸಮಸ್ಯೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ವಿಷಯದಲ್ಲಿ ರಾಜ್ಯದಲ್ಲಿ ಯಾವುದಾದರೂ ಒಂದು ಸ್ಥಳೀಯ ಆಡಳಿತ ಹೆಚ್ಚು ವಿರ್ಮಶೆಗೆ ಒಳಪಟ್ಟಿದೆ ಎಂದರೆ ಅದು ಬಿಬಿಎಂಪಿ ಮಾತ್ರ. ಆದರೆ, ಇದೀಗ ಬಿಬಿಎಂಪಿ ಹಾಗೂ ಕಮಿಷನರ್‌ ಹೆಸರಲ್ಲಿ ಕಿರಾತಕರು ಖತರ್ನಾಕ್ ಪ್ಲಾನ್ ಮಾಡಿದ್ದಾರೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತರ ಹೆಸರಿನಲ್ಲಿ ಕಿರಾತಕರು ಖತರ್ನಾಕ್ ಪ್ಲಾನ್ ಮಾಡಿದ್ದು. ಇದೀಗ ಬಿಬಿಎಂಪಿಯ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಕೆಲವು ಕಿಡಿಗೇಡಿಗಳು ಸೋಷಿಯಲ್‌ ಮೀಡಿಯಾದಲ್ಲಿ ಬಿಬಿಎಂಪಿ ಕಮಿಷನರ್‌ ಭಾವಚಿತ್ರ, ಹೆಸರು, ಹುದ್ದೆ ಮತ್ತು ಸಂಸ್ಥೆಯ ಹೆಸರನ್ನು ಹಾಕಿಕೊಂಡು ಖತರ್ನಾಕ್ ಪ್ಲಾನ್ ಅನ್ನೇ ಮಾಡಿದ್ದಾರೆ. ಆಯುಕ್ತರ ಹೆಸರಿನಲ್ಲೇ ನಕಲಿ ಎಫ್‌ಬಿ ಅಕೌಂಟ್‌ ಮಾಡಿದ್ದಾರೆ. ನಕಲಿ‌ ಫೇಸ್ ಬುಕ್‌ ಅಕೌಂಟ್‌ (https://www.facebook.com/share/72znq6cB8NENELpo/) ಓಪನ್‌ ಮಾಡಿದ್ದಾರೆ.

In the name of Bengaluru BBMP Commissioner the buyers made a Khatarnak plan

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಹೆಸರಲ್ಲಿ ನಕಲಿ ಫೇಸ್‌ಬುಕ್ ಅಕೌಂಟ್ ತೆರೆಯಲಾಗಿದೆ. ಈ ಬಗ್ಗೆ ಕೆಲವರು ದೂರು ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ (ಅಕ್ಟೋಬರ್‌ 11) ಸಿಇಎನ್ ಪೊಲೀಸ್ ಠಾಣೆ(ಕೇಂದ್ರ ವಿಭಾಗ)ಯಲ್ಲಿ ಎಫ್.ಐ.ಆರ್ ದಾಖಲಿಸಲಾಗಿದೆ.

ಈ ಅಕೌಂಟ್‌ನಿಂದ ಕೆಲವರಿಗೆ ದುಡ್ಡು ಕೇಳುವ, ಆದೇಶ ನೀಡುವ ಮೆಸೇಜ್‌ಗಳನ್ನೂ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಮುಂದುವರಿದು ಫೇಕ್‌ ಫೇಸ್ ಅಕೌಂಟ್‌ನಿಂದ ಪಾಲಿಕೆಯ ಅಧಿಕಾರಿ ಹಾಗೂ ನೌಕರರಿಗೆ ಮತ್ತು ಸಾರ್ವಜನಿಕರಿಗೆ ವಂಚಿಸುವ ಸಾಧ್ಯತೆ ಇದೆ. ಹೀಗಾಗಿ, ಫೇಸ್ ಬುಕ್ ಅಕೌಂಟ್‌ ಡಿಲೀಟ್ ಮಾಡಿಸಿ, ಫೇಸ್ ಬುಕ್ ಖಾತೆಯನ್ನು ತೆರೆದಿರುವ ಅಪರಿಚಿತ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಬಿಬಿಎಂಪಿ ದೂರು ನೀಡಿದೆ.

ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಕನ್ನಡದ ಕೊಲೆ

ಬಿಬಿಎಂಪಿಯ ಕಮಿಷನರ್‌ ಫೇಕ್‌ ಅಕೌಂಟ್‌ ಕ್ರಿಯೇಟ್‌ ಆಗಿರುವ ಸಂದರ್ಭದಲ್ಲಿಯೇ ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್‌ನ ಬಗ್ಗೆಯೂ ಜೋರು ಚರ್ಚೆಗಳು ನಡೆದಿವೆ. ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ನಮ್ಮ ನಾಯಕರು, ಜಗತ್ತನ್ನು ಬದಲಿಸುವ ಇಂಧನ ಹೊಂದಿರುವ ದೂರದೃಷ್ಟಿಯ ಜನರು ಎಂದು ಬರೆಯಲಾಗಿದೆ.

ಬಿಬಿಎಂಪಿಯ ಅಧಿಕೃತ ವೆಬ್‌ಸೈಟ್‌ https://bbmp.gov.in/home ನಲ್ಲಿ ಕನ್ನಡವನ್ನು ಕೊಲೆ ಮಾಡಲಾಗಿದೆ. ಹಲವು ವಾಕ್ಯಗಳು ಇಂಗ್ಲಿಷ್‌ನ ಯಥಾವತ್ತು ಅನುವಾದವಾಗಿವೆ. ಬಿಬಿಎಂಪಿ ಬೆಂಗಳೂರಿನ ಅಭಿವೃದ್ಧಿ, ಕಾಮಗಾರಿ ಹಾಗೂ ಸೇವೆ ಸೇರಿದಂತೆ ಹಲವು ಜವಾಬ್ದಾರಿ ಹೊತ್ತಿದೆ. ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಕನ್ನಡ ಬಳಕೆಗೆ ಭಾರೀ ನಿರ್ಲಕ್ಷ್ಯ ತೋರಿಸಿದೆ. ಇನ್ನು ಈ ವೆಬ್‌ಸೈಟ್‌ನಲ್ಲಿ ಮುಖಪುಟದಲ್ಲಿ ಮಾತ್ರ ಕನ್ನಡ ಬಳಸಲಾಗಿದೆ ಒಳಗೆಲ್ಲ ಇಂಗ್ಲಿಷ್‌ ಮಯವಾಗಿದೆ.

ಇನ್ನು ಬಿಬಿಎಂಪಿಯು ಹಸಿರುಮಿತ್ರ ಯೋಜನೆಯ ಬಗ್ಗೆ ನೀಡಿರುವ ವಿವರದಲ್ಲೂ ಕನ್ನಡದ ಅಪಹಾಸ್ಯ ಮಾಡಲಾಗಿದೆ. ಬೆಂಗಳೂರು GARDEN CITY ಎಂದು ಪ್ರಕ್ಯಾತಿ ಗಳಿಸಿದೆ. ಇದರ ಹಿರಿಮೆಯನ್ನು ಇನ್ನಷ್ಟು ಕಪಾಡುವ ನಿಟ್ಟಿನಲ್ಲಿ ಪರಿಸರವನ್ನು ಹಸಿರುಕರಣಗೊಳಿಸುವುದು ಬಹು ಮುಖ್ಯ ಪಾತ್ರ. ಉದ್ಯಾನವನಗಳು ಬೆಂಗಳೂರಿನ ನಾಗರೀಕರಿಗೆ ಉತ್ತಮವಾದ ಆಮ್ಲಜನಕ ಮತ್ತು ಮನೋಲ್ಲಾಸವನ್ನು ಒದಗಿಸುವ ಮೂಲವಾಗಿದೆ ಎಂದು ತಪ್ಪು ತಪ್ಪಾಗಿ ಬರೆಯಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+