• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನೋಡ ಬನ್ನಿ: ಬೆಂಗಳೂರು ಕರಗ ಎಷ್ಟೊಂದು ಸುಂದರ!

By Mahesh
|

ಬೆಂಗಳೂರು, ಏಪ್ರಿಲ್ 22: ನೂರಾರು ವರ್ಷಗಳ ಇತಿಹಾಸವಿರುವ ಬೆಂಗಳೂರು ಕರಗ ಶುಕ್ರವಾರ ಮಧ್ಯರಾತ್ರಿ ಮತ್ತೊಮ್ಮೆ ನಗರದ ಹಿರಿಮೆಯನ್ನು ಹೆಚ್ಚಿಸಲಿದೆ. ಧಾರ್ಮಿಕ, ಜಾನಪದ ಸೊಗಡು, ಶ್ರದ್ದೆ, ನಂಬಿಕೆ, ಭಕ್ತಿಯ ಪ್ರತೀಕವಾದ ತಿಗಳರಪೇಟೆ ಧರ್ಮರಾಯಸ್ವಾಮಿ ದೇವಾಲಯದ ವಾರ್ಷಿಕ ಕರಗೋತ್ಸವ ಏಪ್ರಿಲ್22ರ ಮಧ್ಯರಾತ್ರಿ ಧರ್ಮರಾಯಸ್ವಾಮಿ ದೇವಾಲಯದಿಂದ ಆರಂಭವಾಗಲಿದೆ.

ಚೈತ್ರ ಶುಕ್ಲ ಸಪ್ತಮಿಯಿಂದ ಬಹುಳ ಬಿದಿಗೆಯವರೆಗೆ ಕರಗ ಮಹೋತ್ಸವ ನಡೆಯಲಿದೆ. ಕರಗ ಉತ್ಸವದ ಕೇಂದ್ರಬಿಂದು ಕರಗ ಶಕ್ತ್ಯೋತ್ಸವ ಮತ್ತು ಧರ್ಮರಾಯಸ್ವಾಮಿ ರಥೋತ್ಸವ ಏ.22ರಂದು ನಡೆಯಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಈ ಬಾರಿಯ ಕರಗ ಮಹೋತ್ಸವಕ್ಕಾಗಿ ಅನುದಾನವನ್ನು ನೀಡುತ್ತಾ ಬಂದಿದೆ. ಮುಜರಾಯಿ ಇಲಾಖೆ ಹಾಗೂ ಧರ್ಮರಾಯಸ್ವಾಮಿ ದೇವಾಲಯದ ಸಮಿತಿ ವತಿಯಿಂದ ಕರಗ ಮಹೋತ್ಸವ ಆಯೋಜನೆ ಮಾಡಲಾಗಿದೆ.[ಹೊಸ ಇತಿಹಾಸ ಬರೆದ ಚಿಕ್ಕದೇವಮ್ಮನ ಜಾತ್ರೆ]

ದ್ರೌಪದಿ ದೇವಿಯ ಮಾನಸ ಪುತ್ರರಾದ ತಿಗಳ ಜನಾಂಗದ ವಂಶಸ್ಥರು ಕರಗ ಹೊರುವುದು ಪದ್ಧತಿ. ಈ ಬಾರಿ ಏಪ್ರಿಲ್ 14 ರಂದು ಧ್ವಜಾರೋಹಣದ ಮೂಲಕ ಕರಗ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಏಪ್ರಿಲ್ 22ರ ಮಧ್ಯರಾತ್ರಿ ಮಹೋತ್ಸವ ನಡೆಯಲಿದೆ.[ಸುತ್ತೂರು ಜಾತ್ರೆಗೆ ಕಳೆಗಟ್ಟಿದ ಜನಜಾತ್ರೆ]

ನಗರದ ನಾಲ್ಕು ದಿಕ್ಕಿನಲ್ಲಿರುವ ಆಂಜನೇಯ ಸ್ವಾಮಿ ದೇವಾಲಯಗಳ ಗಡಿ ದಾಟದಂತೆ, ಯಾವುದೇ ಜಾತಿ, ಮತ, ವರ್ಗ ಭೇದಭಾವವಿಲ್ಲದೆ ಕರಗ ಸಾಗಲಿದೆ. ನಾಲ್ಕನೇ ಬಾರಿಗೆ ಅರ್ಚಕ ಲಕ್ಷ್ಮೀಶ ಅವರು ಕರಗ ಹೊತ್ತು ಮೆರವಣಿಗೆಯಲ್ಲಿ ಸಾಗಲಿದ್ದಾರೆ.

ಕರಗ ಸಾಗುವ ಹಾದಿ: ಮಧ್ಯರಾತ್ರಿ 12 ಗಂಟೆಯಿಂದ ಬೆಳಗ್ಗೆ 6 ರ ತನಕ ಉತ್ಸವ ಜರುಗಲಿದ್ದು, ನಗರತ್ ಪೇಟೆ, ಸಿದ್ದಣ್ಣಗಲ್ಲಿ, ಕಬ್ಬನ್ ಪೇಟೆ, ಗಾಣಿಗರಪೇಟೆ, ಅವೆನ್ಯೂ ರಸ್ತೆ, ಕೆ. ಆರ್ ಮಾರುಕಟ್ಟೆ, ರಾಣಾಸಿಂಗ್ ಪೇಟೆ, ಅಕ್ಕಿಪೇಟೆ, ಮಸ್ತಾನ್ ದರ್ಗಾ, ಬಳೆಪೇಟೆ, ಕಿಲಾರಿ ರಸ್ತೆ, ಯಲಹಂಕ ಗೇಟ್, ಕುಂಬಾರ ಪೇಟೆ, ಗೊಲ್ಲರ ಪೇಟೆ ಮೂಲಕ ಮರಳಿ ಧರ್ಮರಾಯನಗುಡಿಗೆ ವಾಪಸಾಗಲಿದೆ.[ಶಿರಸಿ ಮಾರಿಕಾಂಬಾ ಜಾತ್ರೆಯ ಇತಿಹಾಸವೇನು?]

ಬೆಂಗಳೂರು ಕರಗ ಎಷ್ಟೊಂದು ಸುಂದರ!

ಬೆಂಗಳೂರು ಕರಗ ಎಷ್ಟೊಂದು ಸುಂದರ!

-

-

-

-

-

-

-

ಬೆಂಗಳೂರು ಕರಗ ಎಷ್ಟೊಂದು ಸುಂದರ!

ಬೆಂಗಳೂರು ಕರಗ ಎಷ್ಟೊಂದು ಸುಂದರ!

ಕರಗ ಉತ್ಸವ ಅರಳೆ ಪೇಟೆಯಲ್ಲಿರುವ ಮಸ್ತಾನ್ ಸಾಹೇಬರ ದರ್ಗಾಕ್ಕೆ ಭೇಟಿಕೊಡುವುದು ವಿಶೇಷ ಇದು ಟಿಪ್ಪು ಸುಲ್ತಾನರ ಕಾಲದಿಂದ ನಡೆದುಕೊಂಡು ಬಂದ ಪದ್ಧತಿ. [ತಿಗಳ ಸಮುದಾಯತ್ತ ಸಿಎಂ ಸಿದ್ದರಾಮಯ್ಯ ಸ್ನೇಹ 'ಹಸ್ತ']

ಸಂತ ಮಸ್ತಾನ್ ಸಾಹೇಬ್ ಅವರು ಧರ್ಮರಾಯಸ್ವಾಮಿ ದೇವಾಲಯಕ್ಕೆ ಪ್ರತಿನಿತ್ಯ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದರು. ಅವರು ಕಾಲವಶವಾದ ನಂತರ ಅವರಿಗೆ ಗೌರವ ಸೂಚಿಸುವ ಸಲುವಾಗಿ ಕರಗ ಅಲ್ಲಿಗೆ ಹೋಗುವುದು ವಾಡಿಕೆ. ಹಸಿ ಕರಗ ಉತ್ಸವದ ವಿಡಿಯೋ ನೋಡಿ

ಈ ಬಾರಿ ಪಟಾಕಿ ಸಿಡಿ ಮದ್ದಿನ ಆರ್ಭಟವಿಲ್ಲದೆ ಕರಗ ಮಹೋತ್ಸವ ನಡೆಸಲಿದೆ. ಜಾನಪದ ಕಲೆಗಳಾದ ವೀರಗಾಸೆ, ಡೊಳ್ಳು ಕುಣಿತ, ಪೂಜಾ ಕುಣಿತ, ಚೋಮನ ಕುಣಿತ ಸೇರಿದಂತೆ ಅನೇಕ ರೀತಿಯ ಸಾಂಸ್ಕೃತಿಕ ವೈಭವವನ್ನು ವೀಕ್ಷಿಸಬಹುದು.

English summary
The oldest community festivals on Namma Bengaluru 'Bangalore Karaga' kicks off from the Dharmarayaswamy temple in Thigalarapet towards midnight of April 22.The 11-day festival starts with the flag hoisting on the night of April 14, This year the Karaga (sacred floral pot) will be carried by Lakshimisha
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X