ಚಿತ್ರಗಳು : ನಮ್ಮ ಮೆಟ್ರೋ ಸುರಂಗ ಮಾರ್ಗದ ನಿಲ್ದಾಣಗಳು
ಬೆಂಗಳೂರು, ಮಾರ್ಚ್ 17 : ಸುರಂಗ ಮಾರ್ಗದಲ್ಲಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಬೇಕು ಎನ್ನುವ ಬೆಂಗಳೂರಿಗರ ಕನಸು ಶೀಘ್ರದಲ್ಲೇ ನನಸಾಗಲಿದೆ. ನಮ್ಮ ಮೆಟ್ರೋ ಪೂರ್ವ-ಪಶ್ಚಿಮ ಕಾರಿಡಾರ್‌ನಲ್ಲಿ ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ಜಂಕ್ಷನ್‌ವರೆಗಿನ ಮಾರ್ಗ ಏಪ್ರಿಲ್ ಮೊದಲ ವಾರದಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ.
ಪೂರ್ವ-ಪಶ್ಚಿಮ ಕಾರಿಡಾರ್‌ನ 18 ಕಿ.ಮೀ ನೇರಳೆ ಮಾರ್ಗದ ಪೈಕಿ 13 ಕಿ.ಮೀ.ಎತ್ತರಿಸಿದ ಮಾರ್ಗ ಮತ್ತು 5 ಕಿ.ಮೀ.ಸುರಂಗ ಮಾರ್ಗವಿದೆ. ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮಾಗಡಿ ರಸ್ತೆ ತನಕ ರೈಲು ಸುರಂಗ ಮಾರ್ಗದಲ್ಲಿ ಸಂಚಾರ ನಡೆಸಲಿದೆ. [ನಮ್ಮ ಮೆಟ್ರೋಗೆ ರಾಜೀನಾಮೆ ನೀಡಿದ 25 ಚಾಲಕರು]
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು, ಸುರಂಗ ಮಾರ್ಗದ ನಿಲ್ದಾಣಗಳ ಕಾಮಗಾರಿಗಳನ್ನು ಮಂಗಳವಾರ ವೀಕ್ಷಿಸಿದ್ದಾರೆ. '5 ಕಿ.ಮೀ. ಸುರಂಗ ಮಾರ್ಗ ಪೂರ್ಣಗೊಂಡಿದೆ. ಈ ಮಾರ್ಗದ 5 ನಿಲ್ದಾಣಗಳ ಪೈಕಿ 4 ನಿಲ್ದಾಣಗಳ ಕಾಮಗಾರಿ ಪೂರ್ಣಗೊಂಡಿದೆ. ಮೆಜೆಸ್ಟಿಕ್ ನಿಲ್ದಾಣದಲ್ಲಿ ಪೂರ್ವ-ಪಶ್ಚಿಮ ಮಾರ್ಗದ ನಿಲ್ದಾಣ ಕಾಮಗಾರಿ 10 ದಿನಗಳಲ್ಲಿ ಪೂರ್ಣಗೊಳ್ಳಲಿದೆ' ಎಂದು ಅವರು ಹೇಳಿದ್ದಾರೆ. [ಮೆಟ್ರೋ 2ನೇ ಹಂತಕ್ಕೆ ಭೂ ಸ್ವಾಧೀನ ಆರಂಭ]
'ಮಾರ್ಚ್ 18 ಅಥವ 19ರಂದು ಬಿಎಂಆರ್‌ಸಿಎಲ್ ಮೆಟ್ರೋ ರೈಲು ಸುರಕ್ಷತಾ ಆಯುಕ್ತ (ಎಂಸಿಎಸ್) ತಂಡಕ್ಕೆ ಪತ್ರ ಬರೆಯಲಿದೆ. ಅವರು ಬಂದು ಸಂಚಾರ ವೀಕ್ಷಣೆ ಮಾಡಿದ ಬಳಿಕ ವಾಣಿಜ್ಯ ಸಂಚಾರಕ್ಕೆ ಪ್ರಮಾಣ ಪತ್ರ ನೀಡಲಿದ್ದಾರೆ' ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಹೇಳಿದ್ದಾರೆ. ಸುರಂಗ ಮಾರ್ಗದ ನಿಲ್ದಾಣಗಳು ಹೇಗಿವೆ? ಚಿತ್ರಗಳಲ್ಲಿ ನೋಡಿ..... [ನಮ್ಮ ಮೆಟ್ರೋ ನಿಲ್ದಾಣಗಳ ನೋಟ]

ಮತ್ತೊಂದು ಮೆಟ್ರೋ ಮಾರ್ಗ ಉದ್ಘಾಟನೆಗೆ ಸಿದ್ಧ
ಬೆಂಗಳೂರಿನ ಮತ್ತೊಂದು ನಮ್ಮ ಮೆಟ್ರೋ ರೈಲು ಮಾರ್ಗ ಉದ್ಘಾಟನೆಗೆ ಸಿದ್ಧವಾಗಿದೆ. ಏಪ್ರಿಲ್‌ನಲ್ಲಿ ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಜಂಕ್ಷನ್‌ವರೆಗಿನ ಮಾರ್ಗ ಸಂಚಾರಕ್ಕೆ ಮುಕ್ತವಾಗಲಿದೆ.

18 ಕಿ.ಮೀ.ಮಾರ್ಗವಿದು
ನಮ್ಮ ಮೆಟ್ರೋ ಮೊದಲನೇ ಹಂತದ ಪೂರ್ವ-ಪಶ್ಚಿಮ ಕಾರಿಡಾರ್‌ನ ನೇರಳೆ ಮಾರ್ಗದವಿದಾಗಿದೆ. 18 ಕಿ.ಮೀ. ಮಾರ್ಗದಲ್ಲಿ ಸುರಂಗದಲ್ಲಿಯೂ ರೈಲು ಸಂಚಾರ ನಡೆಸಲಿದೆ.

5 ಕಿ.ಮೀ.ಸುರಂಗ ಮಾರ್ಗ
18 ಕಿ.ಮೀ. ನಮ್ಮ ಮೆಟ್ರೋ ಮಾರ್ಗದಲ್ಲಿ 13 ಕಿ.ಮೀ.ಎತ್ತರಿಸಿದ ಮಾರ್ಗ ಮತ್ತು 5 ಕಿ.ಮೀ.ಸುರಂಗ ಮಾರ್ಗವಿದೆ. ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮಾಗಡಿ ರಸ್ತೆ ತನಕ ರೈಲು ಸುರಂಗ ಮಾರ್ಗದಲ್ಲಿ ಸಂಚರಿಸಲಿದೆ.

ಕಾಮಗಾರಿ ಬಾಕಿ ಇದೆ
5 ಕಿ.ಮೀ. ಸುರಂಗ ಮಾರ್ಗ ಪೂರ್ಣಗೊಂಡಿದೆ. ಈ ಮಾರ್ಗದ 5 ನಿಲ್ದಾಣಗಳ ಪೈಕಿ 4 ನಿಲ್ದಾಣಗಳ ಕಾಮಗಾರಿ ಪೂರ್ಣಗೊಂಡಿದೆ. ಮೆಜೆಸ್ಟಿಕ್ ನಿಲ್ದಾಣದಲ್ಲಿ ಪೂರ್ವ-ಪಶ್ಚಿಮ ಮಾರ್ಗದ ನಿಲ್ದಾಣ ಕಾಮಗಾರಿ 10 ದಿನಗಳಲ್ಲಿ ಪೂರ್ಣಗೊಳ್ಳಲಿದೆ.

ಸಾರ್ವಜನಿಕ ಸಂಚಾರಕ್ಕೆ ಒಪ್ಪಿಗೆ ಬೇಕು
ಈ ಮಾರ್ಗದಲ್ಲಿ ಸಂಚಾರ ಆರಂಭಿಸಲು ಮೆಟ್ರೋ ರೈಲು ಸುರಕ್ಷತಾ ಆಯುಕ್ತ (ಎಂಸಿಎಸ್) ತಂಡದ ಒಪ್ಪಿಗೆ ಬೇಕು. ನಗರದಕ್ಕೆ ಆಗಮಿಸಿ ಪರೀಕ್ಷಾರ್ಥ ಸಂಚಾರ ವೀಕ್ಷಣೆ ಮಾಡುವ ತಂಡ ನಂತರ, ಪ್ರಮಾಣ ಪತ್ರ ನೀಡಲಿದೆ.

ಮಾರ್ಚ್ 25ರಂದು ಭೇಟಿ
'ಮಾರ್ಚ್ 18 ಅಥವ 19ರಂದು ಬಿಎಂಆರ್‌ಸಿಎಲ್ ಮೆಟ್ರೋ ರೈಲು ಸುರಕ್ಷತಾ ಆಯುಕ್ತ (ಎಂಸಿಎಸ್) ತಂಡಕ್ಕೆ ಪತ್ರ ಬರೆಯಲಿದೆ. ಮಾರ್ಚ್ 25ರಂದು ತಂಡ ಬೆಂಗಳೂರಿಗೆ ಭೇಟಿ ನೀಡಲಿದೆ' ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಹೇಳಿದ್ದಾರೆ.

3 ತಿಂಗಳಲ್ಲಿ ನಿಲ್ದಾಣ ಪೂರ್ಣ
ಮೆಜೆಸ್ಟಿಕ್‌ನಲ್ಲಿ ಸುಮಾರು 7.20 ಎಕರೆ ಪ್ರದೇಶದಲ್ಲಿ 500 ಕೋಟಿ ವೆಚ್ಚದಲ್ಲಿ ಮೆಟ್ರೋ ನಿಲ್ದಾಣ ನಿರ್ಮಿಸಲಾಗುತ್ತಿದೆ. ಆ ನಿಲ್ದಾಣದಲ್ಲಿ ಒಂದೇ ಬಾರಿಗೆ 20 ಸಾವಿರ ಪ್ರಯಾಣಿಕರು ಸಂಚರಿಸಬಹುದಾಗಿದೆ. ಮೂರು ತಿಂಗಳಲ್ಲಿ ನಿಲ್ದಾಣದ ಕಾಮಗಾರಿ ಪೂರ್ಣಗೊಳ್ಳಲಿದೆ.

18 ಕಿ.ಮೀ.ಮಾರ್ಗದಲ್ಲಿನ ನಿಲ್ದಾಣಗಳು
ಬೈಯಪ್ಪನಹಳ್ಳಿಯಿಂದ ಹೊರಡುವ ನಮ್ಮ ಮೆಟ್ರೋ ರೈಲು ಇಂದಿರಾ ನಗರ, ಎಂ.ಜಿ.ರಸ್ತೆ, ವಿಧಾನಸೌಧ, ಕೆಂಪೇಗೌಡ ಬಸ್ ನಿಲ್ದಾಣದ ಮೂಲಕ ಮಾಗಡಿ ರಸ್ತೆ ತಲುಪಲಿದೆ. ಅಲ್ಲಿಂದ ವಿಜಯನಗರ, ಅತ್ತಿಗುಪ್ಪೆ, ದೀಪಾಂಜಲಿ ನಗರ ನಿಲ್ದಾಣದ ಮೂಲಕ ಮೈಸೂರು ರಸ್ತೆ (ನಾಯಂಡಹಳ್ಳಿ) ತಲುಪಲಿದೆ.

ವಿಧಾನಸೌಧದ ಮುಂಭಾಗದಲ್ಲಿ ಮೆಟ್ರೋ ನಿಲ್ದಾಣ
ಈ ಮಾರ್ಗದಲ್ಲಿ ವಿಧಾನಸೌಧದ ಮುಂಭಾಗದಲ್ಲಿ ಒಂದು ನಿಲ್ದಾಣವಿದೆ. ಸುರಂಗ ಮಾರ್ಗದಲ್ಲಿ ರೈಲು ಹಾದು ಹೋಗಲಿದ್ದು, ನೆಲದಡಿಯಲ್ಲಿ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ.












Click it and Unblock the Notifications