Tomato Price: ಬೆಂಗಳೂರಿನಲ್ಲಿ ಟೊಮೆಟೊ ದರ ₹100ಗೆ ಇಳಿಕೆ

ಬೆಂಗಳೂರು, ಜುಲೈ 23: ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಟೊಮೆಟೋ ದರದಲ್ಲಿ ಭಾರಿ ಏರಿಕೆ ಆಗಿದ್ದು, ಇದೀಗ ದರದಲ್ಲಿ ಇಳಿಕೆಯ ಲಕ್ಷಣಗಳು ಕಂಡು ಬಂದಿದೆ. ಮುಕ್ತ ಮಾರುಕಟ್ಟೆಯಲ್ಲಿ 100 ರೂಪಾಯಿ ಇದ್ದು, ಚಿಲ್ಲರೆಯಾಗಿ 150-200 ರೂಪಾಯಿವರೆಗೆ ಇತ್ತು.

ಗಗನಕ್ಕೇರಿದ್ದ ಟೊಮೇಟೊ ಬೆಲೆಯು ರಾಜ್ಯಾದ್ಯಂತ ಕುಟುಂಬಗಳಿಗೆ ಆರ್ಥಿಕ ಬರೆ ನೀಡಿತ್ತು. ಜುಲೈ ತಿಂಗಳಲ್ಲಿಯೇ ಮೊದಲ ಬಾರಿಗೆ ಶನಿವಾರ ಬೆಂಗಳೂರಿನ ಹಾಪ್‌ಕಾಮ್ಸ್‌ನಲ್ಲಿ ಪ್ರತಿ ಕಿಲೋ ಟೊಮೆಟೋಗೆ 100 ರೂಪಾಯಿಗಿಂತ ಕಡಿಮೆ ಆಗಿದೆ.

In Bengaluru Tomato Price Decreased To Below 100 Rs Per Kg

ಬೆಂಗಳೂರಿನಾದ್ಯಂತ ಹಾಪ್‌ಕಾಮ್ಸ್ ಘಟಕಗಳಲ್ಲಿ ಟೊಮ್ಯಾಟೊ ಪ್ರತಿ ಕೆ.ಜಿಗೆ 99 ರೂಪಾಯಿಗೂ ಮಾರಾಟವಾಗಿದೆ. ಹೀಗಿದ್ದರೂ ಚಿಲ್ಲರೆ ವ್ಯಾಪಾರಿಗಳು,ತಳ್ಳುಗಾಡಿ ಮೂಲಕ ಬರುವ ಮಾರಾಟಗಾರರು ಮತ್ತು ಖಾಸಗಿ ತರಕಾರಿ ಮಾರಾಟಗಾರರು ಟೊಮೆಟೋವನ್ನು ಕೆ.ಜಿಗೆ 120 ರಿಂದ 140 ರೂಪಾಯಿಗೆ ಮಾರಾಟವನ್ನು ಮುಂದುವರಿಸಿದ್ದಾರೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮತ್ತು ತೋಟಗಾರಿಕಾ ಉತ್ಪಾದಕರ ಸಹಕಾರ ಮಾರಾಟ ಮತ್ತು ಸಂಸ್ಕರಣಾ ಸೊಸೈಟಿಯ ಅಧಿಕಾರಿಗಳು ತಾಜಾ ಬೆಳೆಗಳ ಆಗಮನದಿಂದ ಬೆಲೆಗಳು ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಇದೇ ಬೆಲೆ ಸ್ಥಿರ ಸಾಧ್ಯತೆ

ಒಂದು ತಿಂಗಳ ಹಿಂದಷ್ಟೇ 100 ರೂಪಾಯಿ ಇದ್ದ ಟೊಮೆಟೋ ದಿಢೀರ್‌ ನೇ ಕೆಜಿಗೆ 140 ರೂಪಾಯಿಗೆ ಹೆಚ್ಚಾಯಿತು. ಸದ್ಯ ಬೆಂಗಳೂರಿನ ಸುತ್ತಮುತ್ತಲಿನ ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರದಿಂದ ತಾಜಾ ಟೊಮೊಟೋ ಪೂರೈಕೆ ಆಗುತ್ತಿದೆ. ಹೀಗಾಗಿ ಬೆಂಗಳೂರು ಮಾರುಕಟ್ಟೆಗಳಲ್ಲಿ ಬೆಲೆ ಸ್ಥಿರಗೊಳ್ಳಲು ಪ್ರಾರಂಭಿಸಿದೆ.

In Bengaluru Tomato Price Decreased To Below 100 Rs Per Kg

ಹಾಪ್‌ಕಾಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಮಿರ್ಜಿ ಅವರು, ಕಳೆದ ಎರಡು ದಿನಗಳಿಂದ ಟೊಮೆಟೊ ಬೆಲೆ ಕೆಜಿಗೆ 100 ರೂ.ಗಿಂತ ಕಡಿಮೆಗೆ ಮಾರಾಟವಾಗಿದೆ. ಕಳೆದ ಎರಡು ದಿನಗಳಿಂದ 70ರಿಂದ 71 ಸಾವಿರ ಬಾಕ್ಸ್ ಟೊಮೆಟೊ ಸಿಗುತ್ತಿದೆ. ಆದರೆ, 15 ಕೆಜಿ ಟೊಮೆಟೊ ಬಾಕ್ಸ್ ಒಂದಕ್ಕೆ 1,700 ರಿಂದ 1,900 ರೂ.ವರೆಗೆ ಬೆಲೆ ಇದೆ ಎಂದು ಕೋಲಾರ ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಿವರಿಸಿದರು.

ಕೋಲಾರ ಮಾರುಕಟ್ಟೆಯಿಂದ ಬೆಂಗಳೂರಿಗೆ ಅಲ್ಪ ಪ್ರಮಾಣದ ಟೊಮ್ಯಾಟೊ ಮಾತ್ರ ಸರಬರಾಜಾಗುತ್ತಿದೆ ಮತ್ತು ಈ ಭಾಗದ ಕೆಲವೇ ರೈತರು ತಮ್ಮ ಉತ್ಪನ್ನಗಳನ್ನು ನೇರವಾಗಿ ಬೆಂಗಳೂರು ಮಾರುಕಟ್ಟೆಗೆ ಮಾರಾಟ ಮಾಡುತ್ತಾರೆ.

ಹಬ್ಬಗಳ ಹೊತ್ತಿಗೆ ಉತ್ತಮ ಪೂರೈಕೆ ನಿರೀಕ್ಷೆ

ಇನ್ನೂ ಬೆಂಗಳೂರಿನ ಮಾಲ್‌ಗಳು ಮತ್ತು ಸೂಪರ್‌ ಬಜಾರ್‌ಗಳಲ್ಲಿ ಮಾರಾಟವಾಗುವ ಟೊಮೆಟೊಗಳು ಗುಣಮಟ್ಟದಲ್ಲಿ ಸ್ವಲ್ಪಮಟ್ಟಿಗೆ ಗುಣಮಟ್ಟ ಸರಿ ಇಲ್ಲದ್ದಾಗಿವೆ. ದೀರ್ಘ ಬಾಳಿಕೆಗೆ ಬರುತ್ತಿಲ್ಲ ಎನ್ನಲಾಗಿದೆ. ಈ ಮಧ್ಯೆ ಉತ್ತರ ಭಾರತದ ವ್ಯಾಪಾರಿಗಳು ಹೆಚ್ಚಿನ ಬೆಲೆ ನೀಡಿ ಉತ್ತಮ ಗುಣಮಟ್ಟದ ಟೊಮೆಟೊಗಳ ಲೋಡ್‌ ಖರೀದಿಸಿದ್ದು ಕಂಡು ಬಂದಿದೆ.

ಇನ್ನು ಕೆಲವೇ ವಾರಗಳಲ್ಲಿ ಹಬ್ಬಗಳು ಆರಂಭವಾಗಲಿವೆ. ಈ ಸಂಬಂಧ ಮಾರುಕಟ್ಟೆಗಳಿಗೆ ತಾಜಾ ಟೊಮೆಟೊಗಳ ಪೂರೈಕೆ ಪ್ರಮಾಣ ಹೆಚ್ಚಾಗಲಿದೆ. ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಅದರ ಗರಿಷ್ಠ ಮಟ್ಟವನ್ನು ತಲುಪುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+