ದೇಶದಲ್ಲೇ ಮೊದಲ ಬಾರಿಗೆ ಗೂಡ್ಸ್ ರೈಲು ನಿಲ್ದಾಣಗಳ ನಿರ್ಮಾಣ
ಬೆಂಗಳೂರು, ಆಗಸ್ಟ್ 27: ದೇಶದಲ್ಲೇ ಮೊದಲ ಬಾರಿಗೆ ಸರಕು ಸಾಗಣಿಕೆಗೆ ನೆರವಾಗುವಂತೆ ನೂರು ವಿಶೇಷ ವಿನ್ಯಾಸದ ರೈಲು ನಿಲ್ದಾಣ ಹಾಗೂ ಟರ್ಮಿನಲ್ ನಿರ್ಮಾಣಕ್ಕೆ ಇಲಾಖೆ ಮುಂದಾಗಿದೆ.
ಸುಮಾರು 82 ಸಾವಿರ ಕೋಟಿ ರೂ. ವಿಶೇಷ ಸರಕು ಸಾಗಣೆ ಯೋಜನೆಯಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಯೋಜನೆ ಸುಮಾರು 3360 ಕಿ.ಮೀ ವ್ಯಾಪ್ತಿಯನ್ನು ಒಳಗೊಂಡಿರುತ್ತದೆ. ದೇಶದಲ್ಲೇ ಮೊದಲ ಬಾರಿಗೆ ಸರಕು ಸಾಗಣಿಕೆಗೆ ವಿಶೇಷವಾದ ನಿಲಲ್ದಾಣವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಪಶ್ಚಿಮ ಹಾಗೂ ಪೂರ್ವ ರೈಲ್ವೆ ವಲಯಗಳ ನಡುವೆ ಸಂಪರ್ಕವನ್ನು ಕಲ್ಪಿಸುವ ಕೆಲಸ ನಡೆಯಲಿದೆ. ಯೋಜನೆಯಲ್ಲಿ 12 ಖಾಸಗಿ ಸರಕು ಟರ್ಮಿನಲ್, 15 ಸೈಡಿಂಗ್ಸ್, 10 ಶೆಡ್ ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಶೆಡ್ ಗಳಲ್ಲಿ ವಾರ್ಷಿಕ 30 ಕೋಟಿ ಟನ್ ಸರಕು ಸಂಗ್ರಹಿಸಬಹುದಾಗಿದೆ.

ಈ ಯೋಜನೆ ಒಂಭತ್ತು ರಾಜ್ಯ ಹಾಗೂ 50 ಜಿಲ್ಲೆಗಳಲ್ಲಿ ವ್ಯಾಪಿಸಿದ್ದು, ಪಶ್ಚಿಮದಲ್ಲಿ 48 ಹಾಗೂ ಪೂರ್ವದಲ್ಲಿ 58 ನಿಲ್ದಾಣಗಳನ್ನು ಹೊಂದಲಿದೆ. ಖಾಸಗಿ ಸಹಭಾಗಿತ್ವದಲ್ಲಿ 2021ರ ಒಳಗೆ ಯೋಜನೆ ಅಂತ್ಯಗೊಳಿಸುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದೆ. ಯೋಜನೆ ಪೂರ್ಣವಾದ ನಂತರ ಈ ರೈಲುಗಳಿಗೆ ಹೊಸ ವೇಳಾಪಟ್ಟಿಯನ್ನು ತಯಾರಿಸಲಾಗುತ್ತದೆ.












Click it and Unblock the Notifications