Suhas Murder Case: ಸುಹಾಸ್ ಹ*: ಕೊಲೆ ಸುಪಾರಿಗೆ ವಿದೇಶದಿಂದ ಹಣ ಬಂದ ಬಗ್ಗೆ ಮಹತ್ವದ ಮಾಹಿತಿ!
Suhas Murder Case: ಮಂಗಳೂರಿನ ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಹತ್ಯೆಗೆ ಸಂಬಂಧಿಸಿದಂತೆ ವಿದೇಶದಿಂದ ಹಣ ಬಂದಿದೆ ಎನ್ನುವ ಗಂಭೀರ ವಿಷಯವೊಂದು ಚರ್ಚೆಯ ಮುನ್ನೆಲೆಗೆ ಬಂದಿದ್ದು. ಈ ಸಂಬಂಧ ಮಹತ್ವದ ಮಾಹಿತಿಯನ್ನು ಗೃಹ ಸಚಿವ ಜಿ. ಪರಮೇಶ್ವರ್ ಅವರು ಹಂಚಿಕೊಂಡಿದ್ದಾರೆ. ಸುಹಾಸ್ ಹತ್ಯೆ ಸುಪಾರಿಗೆ ವಿದೇಶದಿಂದ ಹಣ ನೀಡಿದ್ದರು ಎಂಬ ಆರೋಪವು ಹಾಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ಅವರು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋಧನಾತ್ಮಕ ವೀಡಿಯೋ ಮತ್ತು ಪೋಸ್ಟ್‌ಗಳನ್ನು ಹಂಚಿಕೊಳ್ಳುವವರ ಮೇಲೆ ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಮಂಗಳೂರಿಗೆ ಭೇಟಿ ನೀಡಿದಾಗ ಸೂಚಿಸಿದ್ದೇನೆ. ಇಂದು ಬೆಳಗ್ಗೆಯೂ ಸಹ ಕಾನೂನು ಸುವಸ್ಥೆ ಎಡಿಜಿಪಿ ಅವರಿಗೆ ಹೇಳಿದ್ದೇನೆ. ಈ ಬಗ್ಗೆ ನಿಗಾವಹಿಸಿ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದರು.

ರೌಡಿಶೀಟರ್ ಅಂತ ಹೇಳಿ ಕೆಟಗೆರಿಯಲ್ಲಿ ಪೊಲೀಸ್ ಠಾಣೆಯಲ್ಲಿ ರಿಜಿಸ್ಟರ್ ಆಗಿದ್ದರೆ ಕರೆಯಬಹುದಲ್ಲವೇ? ಯಾವ ಪಾರ್ಟಿಯಲ್ಲಾದರು ಇರಲಿ. ಅಪರಾಧ ಪ್ರಕರಣಗಳು ಇದ್ದು, ರೌಡಿಶೀಟರ್ ಸಂಬಂಧಪಟ್ಟ ಸೆಕ್ಷನ್ ಇದ್ದರೆ ಅಂತವರನ್ನು ಯಾರು ಬೇಕಾದರು ಕರೆಯಬಹುದು. ಕಾನೂನು ಕರೆಯುತ್ತದೆ ಎಂದಾದರೆ, ನಾವು, ನೀವು ಏನು ಎಂದು ಪ್ರಶ್ನಿಸಿದರು.
ಈ ಸಂಬಂಧ ಮಾತನಾಡಿದ ಅವರು, ಸುಹಾಸ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬೊಬ್ಬರು ಒಂದೊಂದು ಹೇಳಿಕೆಯನ್ನು ನೀಡುತ್ತಿದ್ದಾರೆ. ತನಿಖೆಯ ಬಳಿಕ ಎಲ್ಲವೂ ಹೊರಬರಲಿದೆ. ಕೊಲೆಗೆ ಯಾರು ಸುಪಾರಿ ಕೊಟ್ಟಿದ್ದರು. ಕೊಟ್ಟಿಲ್ಲವೇ? ಒಂದು ವೇಳೆ ಕೊಟ್ಟಿದ್ದರೆ, ಎಷ್ಟು ಹಣ ನೀಡಿದ್ದರು ಎಂಬುದಯ ಗೊತ್ತಾಗಲಿದೆ. ತನಿಖೆಗೂ ಮೊದಲು ಉಹೆ ಮಾಡಲು ಬರುವುದಿಲ್ಲ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ತನಿಖೆ ಸಂಪೂರ್ಣವಾದ ಬಳಿಕ ಸತ್ಯಾಂಶ ಗೊತ್ತಾಗಲಿದೆ ಅಂತಲೂ ಹೇಳಿದ್ದಾರೆ.
ಹರೀಶ್ ಪೂಜಾ ವಿರುದ್ಧ ದಾಖಲಾಗಿರುವ ಪ್ರಕರಣದ ಕುರಿತು ಬಿಜೆಪಿ ಆರೋಪಗಳಿಗೆ ಪ್ರತಿಕ್ರಿಯಿಸಿ ದ್ವೇಷ ರಾಜಕಾರಣದ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ. ಶಾಸಕ ಹರೀಶ್ ಪೂಂಜಾ ಪ್ರಚೋಧನಾತ್ಮಕ ಹೇಳಿಕೆ ಕೊಟ್ಟಿದ್ದರೆ, ಆ ಹೇಳಿಕೆಯನ್ನು ಪೊಲೀಸರು ಕಾನೂನಾತ್ಮಕವಾಗಿ ಪರಿಶೀಲಿಸಿ ಸೆಕ್ಷನ್‌ಗಳನ್ನು ಹಾಕಿರುತ್ತಾರೆ. ಸುಮ್ಮನೇ ಶಾಸಕರ ಮೇಲೆ ಎಫ್‌ಐಆರ್ ಹಾಕಲು ಬರುವುದಿಲ್ಲ. ಅವರ ಹೇಳಿಕೆಯಲ್ಲಿನ ಅಂಶಗಳು ಕಾನೂನಿಗೆ ವಿರುದ್ಧವಾಗಿದ್ದರೆ ಎಫ್‌ಐಆರ್‌ಗು ಮೊದಲು ಪರಿಶೀಲಿಸುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಹಿಂದೂ ವಿರೋಧಿ ನಡೆ ಎಂದ ಕಾಂಗ್ರೆಸ್: ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದ ಕುಕೃತ್ಯಗಳು ಮುಂದುವರಿಯುತ್ತಲೇ ಇವೆ ರಾಜ್ಯ ಕಾಂಗ್ರೆಸ್ ಸರ್ಕಾರವು ಆಕ್ರೋಶ ಹೊರ ಹಾಕಿದೆ. ಸಿಇಟಿ ಪರೀಕ್ಷೆಯಲ್ಲಿ ಜನಿವಾರ ಕತ್ತರಿಸಿ ಪರೀಕ್ಷೆ ಬರೆಯುವಂತೆ ಹೇಳಿದ್ದ ಕಾಂಗ್ರೆಸ್ ಸರ್ಕಾರ ಈಗ ನೀಟ್ ಪರೀಕ್ಷೆಯಲ್ಲೂ ತನ್ನ ಹಳೆ ಚಾಳಿ ಮುಂದುವರಿಸಿದೆ. ಕಾಂಗ್ರೆಸ್ ಆಡಳಿತದಲ್ಲಿ ಒಂದೆಡೆ ಹಿಂದೂಗಳಿಗೆ ರಕ್ಷಣೆಯಿಲ್ಲ, ಇನ್ನೊಂದೆಡೆ ಹೀಗೆ ಹಿಂದೂಗಳ ನಂಬಿಕೆ, ಆಚಾರಗಳ ಮೇಲೆ ದಾಳಿ ಮಾಡುವ ಕೆಟ್ಟ ರಾಜಕಾರಣ ಮಾಡುತ್ತಿದೆ ಎಂದು ದೂರಿದೆ.
ಕಲಬುರಗಿಯಲ್ಲಿ ನಡೆದ ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಯ ಜನಿವಾರ ತೆಗೆಸಿ ಪರೀಕ್ಷೆ ಬರೆಯುವಂತೆ ಮಾಡಿರುವುದು ಅಕ್ಷಮ್ಯ. ಈ ಕೂಡಲೇ ಇದಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಂಡು ನೊಂದ ವಿದ್ಯಾರ್ಥಿಗೆ ಮನೋಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದೆ.












Click it and Unblock the Notifications