ಸ್ವಲ್ಪ ತಡಿಯಿರಿ ಬಿಸಿಲು ಇಳಿಯತ್ತೆ, ಮಳೆ ಬೀಳತ್ತೆ
ಬೆಂಗಳೂರು, ಏ. 29 : ಕಳೆದ ಎರಡು ವಾರಗಳಿಂದ ರಾಜ್ಯದಲ್ಲಿ ಉಷ್ಣಾಂಶ ಅಲ್ಲಲ್ಲಿ ವಿಪರೀತ ಏರುತ್ತಿರುವುದರಿಂದ ರಾಜ್ಯದ ಜನತೆ ಗಾಬರಿ ಬಿದ್ದಿದ್ದು ನಿಜ. ಆದರೆ ಜನತೆ ಭಯ ಪಡುವ ಅಗತ್ಯ ಇಲ್ಲ. ಮೇ ಮೊದಲ ವಾರದಿಂದ ಬಿಸಿಲಿನ ಝಳ ಕ್ರಮೇಣ ಕಡಿಮೆಯಾಗಲಿದ್ದು ಕೆಲ ದಿನಗಳಲ್ಲಿ ರಾಜ್ಯದ ಹಲವೆಡೆ ಮಳೆ ಬೀಳುವ ಸಾಧ್ಯತೆಯಿದೆ.
ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಬಿ.ಪುಟ್ಟಣ್ಣ ಅವರ ಪ್ರಕಾರ, ರಾಜ್ಯದ ಕರಾವಳಿ, ಪಶ್ಚಿಮ ಘಟ್ಟ ಮತ್ತು ಉತ್ತರ ಕರ್ನಾಟಕದ ಒಳನಾಡಿನಲ್ಲಿ ಸಂಜೆ, ರಾತ್ರಿಯ ಸಮಯದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ.
ನಮ್ಮ ಹವಾಮಾನ ಇಲಾಖೆ ವರದಿ ಪ್ರಕಾರ ಜುಲೈ ಆಗಸ್ಟ್ ತಿಂಗಳಿನಲ್ಲಿ ವಾಡಿಕೆಯ ಪ್ರಕಾರ ಬೀಳಬೇಕಾದ ಮಳೆಯ ಪ್ರಮಾಣದಲ್ಲಿ ಈ ವರ್ಷ ಶೇ.95ರಷ್ಟು ಮಳೆ ದೇಶದಲ್ಲಿ ಬೀಳಲಿದೆ ಎಂದು ಒನ್ ಇಂಡಿಯಾ ಕನ್ನಡಕ್ಕೆ ಸೋಮವಾರ ತಿಳಿಸಿದರು. [ಬಿಸಿಲನಾಡಿನ ಊರುಗಳಿಗೆ ಸೆಡ್ಡು ಹೊಡೆದ ಬೆಂಗಳೂರು!]
ದಕ್ಷಿಣ ಏಷ್ಯಾ ಹವಾಮಾನ ಮುನ್ನೋಟ ವೇದಿಕೆಯವರ ವರದಿಗೆ ಪ್ರತಿಕ್ರಿಯಿಸಿದ ಪುಟ್ಟಣ್ಣ, ಯಾವೆಲ್ಲಾ ಮಾನದಂಡವನ್ನು ಅಧ್ಯಯನ ಮಾಡಿ ಅವರು ವರದಿ ಸಿದ್ದ ಪಡಿಸಿದ್ದಾರೋ ಗೊತ್ತಿಲ್ಲ. ಭಾರತ ಸರ್ಕಾರಕ್ಕೆ ಹವಾಮಾನ (IMD) ಇಲಾಖೆಯ ವರದಿಯೇ ಅಂತಿಮ.
ಇತ್ತೀಚಿಗಷ್ಟೇ ದಕ್ಷಿಣ ಏಷ್ಯಾ ಹವಾಮಾನ ಮುನ್ನೋಟ ವೇದಿಕೆಯವರು ಎಲ್ ನಿನೋ ಪರಿಣಾಮದಿಂದಾಗಿ ಭಾರತ ಸೇರಿದಂತೆ ದಕ್ಷಿಣ ಏಷ್ಯಾದ ಭಾಗಗಳಲ್ಲಿ ಮಳೆಯ ಪ್ರಮಾಣ ವಾಡಿಕೆಗಿಂತ ಕಡಿಮೆಯಾಗುವ ಸಂಭವ ಶೇ.60ರಷ್ಟು ಇದೆ ಎಂದು ತನ್ನ ವರದಿಯಲ್ಲಿ ತಿಳಿಸಿತ್ತು.

ಪ್ರಸ್ತುತ ಬೆಂಗಳೂರಿನ ಉಷ್ಣಾಂಶ 37ಡಿಗ್ರಿ ಸೆಲ್ಸಿಯಸ್ ಇದ್ದು ಸೋಮವಾರ ರಾತ್ರಿ ಬೆಂಗಳೂರಿನ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಮಳೆಯಾಗಿದೆ.
ಮಳೆಯ ಪ್ರಮಾಣ(ಸೆಂ.ಮೀ):
ನಾಪೋಕ್ಲು(ಕೊಡಗು) 5; ಕಲ್ಗಿ(ಗುಲ್ಬರ್ಗ) 3; ಗುಲ್ಬರ್ಗ, ಸೇಡಂ, ಸುಳೇಪೇಟ್(ಗುಲ್ಬರ್ಗ) 2;ಚಿಕ್ಕೊಡಿ(ಬೆಳಗಾಂ)1
Conditions for Bangalore, IN at 12:59 pm IST: Current Conditions:Partly Cloudy, 37 CForecast:Tue - Partly Cloudy. High: 38 Low: 23...
— Bangalore weather (@BloreFeelsLike) April 29, 2014 











Click it and Unblock the Notifications