ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಎಂಎ ಹಗರಣ; ಧೂಳು ತಿನ್ನುತ್ತಿವೆ ಮನ್ಸೂರ್ ಐಷಾರಾಮಿ ಕಾರು!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 06 : ಐಎಂಎ ಹಗರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಬಂಧನವಾಗಿದೆ. ಆರೋಪಿಗೆ ಸೇರಿದ ಐಷಾರಾಮಿ ಕಾರುಗಳು ನಗರದ ಪೊಲೀಸ್ ಠಾಣೆ ಆವರಣದಲ್ಲಿ ಧೂಳು ತಿನ್ನುತ್ತಿವೆ. ಪ್ರಕರಣ ಈಗ ಸಿಬಿಐಗೆ ಹಸ್ತಾಂತರವಾಗಿದೆ.

ಮನ್ಸೂರ್‌ ಖಾನ್‌ಗೆ ಸೇರಿದ ರೇಂಜ್ ರೋವರ್, ಜಾಗ್ವಾರ್ ಸೇರಿದಂತೆ 6 ಕಾರುಗಳನ್ನು ನಗರದ ವಿವಿಧ ಪೊಲೀಸ್ ಠಾಣೆ ಆವರಣದಲ್ಲಿ ನಿಲ್ಲಿಸಲಾಗಿದೆ. ಜೂನ್ ತಿಂಗಳಿನಿಂದ ಅವುಗಳು ಧೂಳು ತಿನ್ನುತ್ತಿದ್ದು, ಬೇರೆ ಕಡೆ ನಿಲುಗಡೆ ಮಾಡಲು ಜಾಗದ ಕೊರತೆ ಎದುರಾಗಿದೆ.

ಐಎಂಎ ಹಗರಣ : 300 ಕೆಜಿ ಚಿನ್ನದ ಬಿಸ್ಕತ್ ಬಗ್ಗೆ ವರದಿ ಕೇಳಿದ ಕೋರ್ಟ್ಐಎಂಎ ಹಗರಣ : 300 ಕೆಜಿ ಚಿನ್ನದ ಬಿಸ್ಕತ್ ಬಗ್ಗೆ ವರದಿ ಕೇಳಿದ ಕೋರ್ಟ್

ಇನ್ನೋವಾ, ರೇಂಜ್ ರೋವರ್, ಜಾಗ್ವಾರ್ ಕಾರುಗಳು. ಶಾಲಾ ಬಸ್, ಮಿನಿ ಟ್ರಕ್, ಮಿನಿ ಬಸ್‌ಗಳನ್ನು ಎಸ್ಐಟಿ ವಶಕ್ಕೆ ಪಡೆದಿತ್ತು. ಜೂನ್ 10ರಂದು ಐಎಂಎ ಹಗರಣದ ಕುರಿತು ಮೊದಲ ದೂರು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ದುಬೈಗೆ ಹಾರುವ ಮುನ್ನ 38 ಕೆಜಿ ಚಿನ್ನ ಕರಗಿಸಿದ್ದ ಮನ್ಸೂರ್ ಖಾನ್ದುಬೈಗೆ ಹಾರುವ ಮುನ್ನ 38 ಕೆಜಿ ಚಿನ್ನ ಕರಗಿಸಿದ್ದ ಮನ್ಸೂರ್ ಖಾನ್

IMA Scam : Mansoor Khan Car Gathering Dust At Police Station

ಎರಡು ಐಷಾರಾಮಿ ಕಾರುಗಳನ್ನು ಹಲಸೂರು ಪೊಲೀಸ್ ಠಾಣೆಯಲ್ಲಿ ನಿಲ್ಲಿಸಲಾಗಿದೆ. ಉಳಿದ ವಾಹನಗಳನ್ನು ಸಿಐಡಿ ಕಚೇರಿಯ ಆವರಣದಲ್ಲಿ ನಿಲ್ಲಿಸಲಾಗಿದೆ. ಈಗ ಪ್ರಕರಣದ ಎಲ್ಲಾ ದಾಖಲೆ, ವಶಪಡಿಸಿಕೊಂಡ ವಸ್ತುಗಳನ್ನು ಎಸ್‌ಐಟಿ ಸಿಬಿಐಗೆ ನೀಡಿದೆ.

ಬಹುಕೋಟಿ ರೂಪಾಯಿ ಐಎಂಎ ಹಗರಣದ ತನಿಖೆ ಸಿಬಿಐಗೆಬಹುಕೋಟಿ ರೂಪಾಯಿ ಐಎಂಎ ಹಗರಣದ ತನಿಖೆ ಸಿಬಿಐಗೆ

ಐಎಂಎ ಮುಖ್ಯ ಕಛೇರಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿದೆ. ಆದರೆ, ಅಲ್ಲಿ ವಾಹನಗಳನ್ನು ನಿಲ್ಲಿಸಲು ಸರಿಯಾದ ವ್ಯವಸ್ಥೆಗಳಿಲ್ಲ. ಆದ್ದರಿಂದ, ಐಷಾರಾಮಿ ಕಾರುಗಳು, ಉಳಿದ ವಾಹನಗಳನ್ನು ಠಾಣೆಯ ಮುಂಭಾಗವೇ ನಿಲ್ಲಿಸಲಾಗಿದೆ.

ಮನ್ಸೂರ್ ಖಾನ್ ದುಬೈಗೆ ಪರಾರಿಯಾಗುವ ಮೊದಲು ಕಪ್ಪು ಬಣ್ಣದ ಜಾಗ್ವಾರ್, ರೇಂಜ್ ರೋವರ್ ಕಾರನ್ನು ವಿಮಾನ ನಿಲ್ದಾಣದಲ್ಲಿ ಪಾರ್ಕ್ ಮಾಡಿದ್ದ. ಹಗರಣದ ತನಖೆ ಆರಂಭಿಸಿದ್ದ ಪೊಲೀಸರು ಅವುಗಳನ್ನು ವಶಕ್ಕೆ ಪಡೆದಿದ್ದರು.

48 ವರ್ಷದ ಮನ್ಸೂರ್ ಖಾನ್ ದುಬೈನಿಂದ ಜುಲೈ 19ರಂದು ಬೆಂಗಳೂರಿಗೆ ವಾಪಸ್ ಆಗಿದ್ದರು. ಆಗ ಎಸ್‌ಐಟಿ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದರು. ಈಗ ಹಗರಣದ ತನಿಖೆ ಸಿಬಿಐಗೆ ವಹಿಸಲಾಗಿದೆ.

English summary
IMA scam main accused Mansoor Ali Khan half-a-dozen vehicles, including two luxury cars have been gathering dust at police stations in the Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X