ಒಂದೊಮ್ಮೆ ಮೆಟ್ರೋ ಸ್ಮಾರ್ಟ್ಕಾರ್ಡ್ ವಾಪಸ್ ನೀಡಿದರೂ ಹಣ ಮಾತ್ರ ಸಿಗಲ್ಲ
ಬೆಂಗಳೂರು, ಏ.1: ಮೆಟ್ರೋ ನಿಗಮ ಹೊಸ ನಿಯಮವೊಂದು ಜಾರಿಗೆ ತಂದಿದ್ದು ಪ್ರಯಾಣಿಕರು ಇದರಿಂದ ಬೇಸರಗೊಂಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ನಮ್ಮ ಮೆಟ್ರೋ ಸ್ಮಾರ್ಟ್ ಕಾರ್ಡಿನಲ್ಲಿ ಕನಿಷ್ಠ 50 ರೂ ಹಣ ಇರಲೇಬೇಕು ಎಂದು ಮೆಟ್ರೋ ನಿಗಮ ಹೇಳಿದೆ. ಹಾಗಾಗಿ ಬೇಸರದಿಂದ ಪ್ರಯಾಣಿಕರು ಕಾರ್ಡ್ ಮರಳಿಸಲು ಮುಂದಾಗಿದ್ದಾರೆ. ಆದರೆ ಕಾರ್ಡಿನಲ್ಲಿದ್ದ ಹಣ ಮಾತ್ರ ನಿಮಗೆ ಎಂದಿಗೂ ಸಿಗುವುದಿಲ್ಲ.
ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ ಬಿಎಂಆರ್ಸಿಎಲ್ ಹೊಸ ಶಾಕ್ ನೀಡುತ್ತಲೇ ಇದೆ. ನಿಲ್ದಾಣಗಳಲ್ಲಿ ಕೌಂಟರ್ ಮುಂಭಾಗ ಉದ್ದದ ಸಾಲು ತಪ್ಪಿಸಲು ಮೆಟ್ರೋ ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯನ್ನು ಮಾಡಲಾಗಿತ್ತು. ಇದೀಗ ಮೆಟ್ರೋ ಸ್ಮಾರ್ಟ್ ಕಾರ್ಡ್ ಗೆ ರೀಚಾರ್ಜ್ ಮಾಡಿಸಲು ಉದ್ದದ ಸಾಲು ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸ್ಮಾರ್ಟ್ ಕಾರ್ಡಿನಲ್ಲಿ ಒಮ್ಮ ರೀಚಾರ್ಜ್ ಮಾಡಿದರೆ ಹಣ ಮತ್ತೆ ಕೈಗೆ ಸಿಗುವುದಿಲ್ಲ. ಎಎಫ್ಸಿ ಗೇಟ್ ಮೇಲೆ ಕಾರ್ಡ್ ಇಟ್ಟರೆ ಅದು ಸ್ಕ್ಯಾನ್ ಆಗುತ್ತದೆ. ಆ ರೀತಿ ಸ್ಕ್ಯಾನ್ ಆಗುವ ಸಾಮರ್ಥ್ಯ ಕಳೆದುಕೊಳ್ಳುವ ಮಟ್ಟಿಗೆ ಕಾರ್ಡ್ ಗೆ ಹಾನಿಯಾದಾಗ ಅದನ್ನು ಸಿಬ್ಬಂದಿಗೆ ಹಿಂದಿರುಗಿಸಬಹುದು. ಕಾರ್ಡ್ ಸ್ಕ್ಯಾನ್ ಆಗುವ ಸಾಮರ್ಥ್ಯ ಕಳೆದುಕೊಂಡಿದೆ ಎಂದು ಖಚಿತವಾದರೆ ಮಾತ್ರ ಸಿಬ್ಬಂದಿ ಅದರಲ್ಲಿನ ಹಣವನ್ನು ವಾಪಸ್ ನೀಡುತ್ತಾರೆ.
ಸ್ಮಾರ್ಟ್ ಕಾರ್ಡ್ನಲ್ಲಿ ಒಮ್ಮೆಲೆ 3 ಸಾವಿರ ರೂ ರೀಚಾರ್ಜ್ ಮಾಡಿಸಿಕೊಳ್ಳಬಹುದು. ಕನಿಷ್ಠ 50 ರೂ ರೀಚಾರ್ಜ್ ಮಾಡಬೇಕಾಗುತ್ತದೆ. ಅದಕ್ಕಿಂತ ಕಡಿಮೆ ರೀಚಾರ್ಜ್ ಮಾಡುವ ಅವಕಾಶವೇ ಇಲ್ಲ. ಹೊಸ ನಿಯಮದ ಬಳಿಕ ಪ್ರಯಾಣಿಕರು ಪದೇ ಪದೇ ರೀಚಾರ್ಜ್ ಮಾಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
-
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications