ಐಸಿಐಸಿಐ ಬ್ಯಾಂಕಿನಲ್ಲಿ ಉದ್ಯೋಗ ಅವಕಾಶ
ಬೆಂಗಳೂರು, ಮಾ.24: ತರಬೇತಿ ಮೂಲಕ ಪ್ರೊಬೇಷನರಿ ಅಧಿಕಾರಿಗಳನ್ನು ನೇಮಕಾತಿ ಮಾಡಿಕೊಳ್ಳಲು ಐಸಿಐಸಿಐ ಹಾಗೂ ಮಣಿಪಾಲ್ ಅಕಾಡೆಮಿ ಪ್ರಕಟಣೆ ಹೊರಡಿಸಿವೆ. ನವೆಂಬರ್ 2015 ಹಾಗೂ ಫೆಬ್ರವರಿ 2016 ಬ್ಯಾಚಿನ ಅಭ್ಯರ್ಥಿಗಳು ಜೂನ್ 30, 2016ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆ ವಿವರ:
ಐಸಿಐಸಿಐ ಪ್ರೊಬೇಷನರಿ ಅಧಿಕಾರಿ
ವಯೋಮಿತಿ: 30/06/2015ರ ಅನ್ವಯ(30 ಜೂನ್ 1990ದಿನಾಂಕದಂದು ಅಥವಾ ನಂತರ ಹುಟ್ಟಿರಬೇಕು) ವಯಸ್ಸು 25 ವರ್ಷ ಮೀರಿರಬಾರದು.
ವಿದ್ಯಾರ್ಹತೆ: ಪದವಿ ಶೇ 55(ಸರಾಸರಿ)
ಆಯ್ಕೆ ಪ್ರಕ್ರಿಯೆ: ಆನ್ ಲೈನ್ ಆಪ್ಟಿಡ್ಯೂಟ್ ಟೆಸ್ಟ್, ಸೈಕೋಮೆಟ್ರಿಕ್ ಅಸೈನ್ಮೆಂಟ್, ಸಮೂಹ ಸಂವಹನ ಪರೀಕ್ಷೆ, ಮೆರಿಟ್ ಲಿಸ್ಟ್, ವೈಯಕ್ತಿಕ ಸಂದರ್ಶನ.

ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಐಸಿಐಸಿಐ ವೆಬ್ ತಾಣ (www.icicicareers.com)ಕ್ಕೆ ಭೇಟಿಕೊಟ್ಟು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆ ದಿನಾಂಕ 30/06/2015.
ಆನ್ಲೈನ್ ನಲ್ಲಿ ಅರ್ಜಿಸಲ್ಲಿಕೆ:
* ಐಸಿಐಸಿಐ ವೆಬ್ ತಾಣ ಕ್ಲಿಕ್ ಮಾಡಿ
* PO ನೇಮಕಾತಿ ಕ್ಲಿಕ್ ಮಾಡಿ ಅರ್ಜಿ ಹಾಕಿ
* ಅರ್ಜಿ ಸಲ್ಲಿಸುವ ಮುನ್ನ ಕೂಲಂಕುಷವಾಗಿ ಒಮ್ಮೆ ಓದಿ, ಅರ್ಜಿ ತುಂಬಿ.
* ಅರ್ಜಿ ಸಲ್ಲಿಸಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಐಸಿಐಸಿಐ ಬ್ಯಾಂಕ್ ನೀಡಿರುವ ಜಾಹೀರಾತು ನೋಡಲು ಇಲ್ಲಿ ಕ್ಲಿಕ್ ಮಾಡಿ
ಒನ್ ಇಂಡಿಯಾ ಸುದ್ದಿ












Click it and Unblock the Notifications