ಸತ್ತಂತ್ತಿದ್ದ ನದಿಗೆ ಐಎಎಸ್ ಅಧಿಕಾರಿ ಮರುಜೀವ: 'ಸಿಂಗ್ರಿ' ಪುನರುಜ್ಜೀವನದಿಂದ ಮರಳಿತು ಗ್ರಾಮಸ್ಥರ ಬಾಲ್ಯದ ನೆನಪು

ಕರ್ನಾಟಕದ ಬೆಂಗಳೂರಿನಂತಹ ನಗರಗಳಲ್ಲಿ ಕೆರೆಗಳನ್ನು ರಿಯಲ್ ಎಸ್ಟೇಟ್ ಹೆಸರಿನಲ್ಲಿ ಉದ್ಯಮಿ, ರಾಜಕಾರಣಿಗಳು ನುಂಗಿ ನೀರು ಕುಡಿದಿದ್ದಾರೆ. ಅಳಿದು ಉಳಿದು ಕೆರೆಗಳ ಪುನರುಜ್ಜೀವನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನೂ ಕೆಲವು ಕೆರೆಗಳು ಅಭಿವೃದ್ಧಿಗಾಗಿ ಕಾಯುತ್ತಿವೆ. ಆದರೆ ಮಧ್ಯ ಪ್ರದೇಶದ ಪ್ರಮುಖ ಊರಲ್ಲಿ ಐಎಎಸ್ ಅಧಿಕಾರಿಯೊಬ್ಬರು ಸ್ವತಃ ಗ್ರಾಮಸ್ಥರು, ಪಂಚಾಯತ್ ಸದಸ್ಯರ ತಂಡ ಕಟ್ಟಿಕೊಂಡು ನದಿಯನ್ನು ಪುನರುಜ್ಜೀವನಗೊಳಿಸಿದ್ದಾರೆ. 6000 ಜನರಿರುವ ಊರಿನ ನದಿ ದಶಕಗಳ ಹಿಂದಿನಂತೆ ಮತ್ತೆ ಕಂಗೊಳಿಸುವಂತೆ ಮಾಡಿದ ರೋಚಕ ಕಹಾನಿ ಇಲ್ಲಿದೆ.

ಒಂದು ಕಾಲದಲ್ಲಿ ಸಮುದಾಯವನ್ನು ಬೆಸೆದಿದ್ದ ಇಲ್ಲಿನ 'ಸಿಂಗ್ರಿ ನದಿ'ಯು ಮತ್ತೆ ಗತವೈಭವಕ್ಕೆ ಮರಳಿದೆ. ಇಂದಿನ ಅನೇಕ ವೃದ್ಧರ ಅಂದಿನ ಅವರ ಬಾಲ್ಯದೊಂದಿಗೆ ಬೆರೆತುಹೋಗಿದ್ದ ನದಿಯು ಕಾಲಕ್ರಮೇಣ ಜನರ ಗಮನವನ್ನೇ ಸೆಳೆಯದ ಸ್ಥಿತಿಗೆ ತಲುಪಿತ್ತು. ನದಿ ಸಂಪೂರ್ಣವಾಗಿ ಹಾಳಾಗಿತ್ತು. ಅದನ್ನೀಗ ಮತ್ತೆ ಜೀವಂತಗೊಳಿಸಿದ ಘಟನೆ ಮಧ್ಯ ಪ್ರದೇಶದ ನರಸಿಂಗಪುರದಲ್ಲಿ ನಡೆದಿದೆ.

IAS Officer Revives Singri

ಜನರ ದೈನಂದಿನ ಭಾಗವಾಗಿದ್ದ 'ಸಿಂಗ್ರಿ' ನದಿ

ಇಲ್ಲಿನ ಸಿಂಗ್ರಿ ನದಿಯು ದಶಕಗಳ ಹಿಂದೆ ಬಟ್ಟೆ ಒಗೆಯಲು, ಪಾತ್ರೆ, ಜಾನುವಾರು ತೊಳೆಯಲು, ಮಕ್ಕಳು ಸೇರಿದಂತೆ ಗ್ರಾಮಸ್ಥರು ಜಳಕ ಮಾಡುವುದು, ಕೂಡಿಯಲು ಹಾಗೂ ಇತರ ಬಳಕೆಗೆ ಉಪಯೋಗ ಸೇರಿದಂತೆ ಜನರ ದೈನಂದಿನ ಭಾಗವಾಗಿತ್ತು.

'ಸಿಂಗ್ರಿ ನದಿ' ಅವರ ಬಾಲ್ಯದ ಅವಿಭಾಜ್ಯ ಅಂಗವಾಗಿತ್ತು ಎಂದು 47ವರ್ಷದ ಸ್ಥಳೀಯ ನಿವಾಸಿ ಕಮಲೇಶ್ ಮಲೈಯಾ ಅವರು ಹೇಳುತ್ತಾರೆ. ಗಣೇಶ್ ಮೆಹ್ರಾ ಅವರು ಸಹ ತಾವು ನದಿಯೊಂದಿಗೆ ಕಳೆದ ಬಾಲ್ಯದ ನೆನಪುಗಳನ್ನು ಸ್ಮರಿಸಿದ್ದಾರೆ. ಹೀಗೆ ಗ್ರಾಮದ ಅನೇಕರಿಗೆ ಇಂದು ಪುನರುಜ್ಜೀವನಗೊಂಡು ನದಿಯಲ್ಲಿ ದೀಪ ಬೆಳಗಿ ಸಂಭ್ರಮಿಸಿದ್ದಾರೆ. ಗತ ಕಾಲದ ನೆನಪುಗಳಿಗೆ ಮರಳಿ ಭಾವುಕರಾಗಿದ್ದಾರೆ.

ಕಸ ತುಂಬಿ ಹೋಗಿದ್ದ ನದಿಗೆ IAS ಅಧಿಕಾರಿ ಕಾಯಕಲ್ಪ

ಆಳದ ಅವರಿಲ್ಲದೇ ಮಕ್ಕಳು ಆಟವಾಡುತ್ತಿದ್ದ, ಅನೇಕ ಕುಟುಂಬಗಳಿಗೆ ನೀರಿನ ಮೂಲವಾಗಿದ್ದ ಸಿಂಗ್ರಿ ನದಿಯು ಇತ್ತೀಚೆಗೆ ಕಸದಿಂದ ತುಂಬಿ ಹೋಗಿತ್ತು. ಕಲುಷಿತಗೊಂಡಿತು, ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಯಿತು. ಇದೇ ವೇಳೆ ಇಲ್ಲಿನ ನರಸಿಂಗ್ ಪುರದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ (IAS) ಗಜೇಂದ್ರ ಸಿಂಗ್ ನಾಗೇಶ್ ಅವರು 2025ರಲ್ಲಿ ಅಧಿಕಾರ ವಹಿಸಿಕೊಂಡು ನದಿ ಕುರಿತು ಮಾಹಿತಿ ಪಡೆದರು.

ಬಳಿಕ ಅಧಿಕಾರಿ ನೇತೃತ್ವ ಮತ್ತು ಸ್ಥಳೀಯ ನಾಯಕತ್ವ ಮತ್ತು ಸಮುದಾಯದ ಒಗ್ಗಟ್ಟಿನ ಪ್ರಯತ್ನಗಳ ಫಲವಾಗಿ ಈ ನದಿಯ ಕಥೆ, ಸ್ಥಿತಿಗಳು ಬದಲಾದವು. ಅನೇಕ ಸವಾಲುಗಳ ನಡುವೆ ಹಿಡಿದ ಹಠದಂತೆ ಅಧಿಕಾರಿಯು ನದಿ ಸ್ವಚ್ಛಗೊಳಿಸುವಲ್ಲಿ ಯಶಸ್ವಿಯಾದರು.

3 ತಿಂಗಳ ಶ್ರಮ, ಎದುರಾದ ಸವಾಲುಗಳು

ಒಂದು ಕಾಲದಲ್ಲಿ ಪ್ರಮುಖವಾಗಿದ್ದ 600 ಮೀಟರ್ ಉದ್ದದ ನದಿಯು, ಇಲ್ಲಿನ ಸಮುದಾಯಗಳ ಜೀವನದಲ್ಲಿ ತನ್ನ ಸ್ಥಾನವನ್ನೇ ಕಳೆದುಕೊಂಡಿತ್ತು. ಮಾಲಿನ್ಯ ಮತ್ತು ನಿರ್ಲಕ್ಷ್ಯದಿಂದ ನದಿ ಹಾಗೂ ಅದರ ಸುತ್ತಮುತ್ತಲಿನ ಪರಿಸರ ಹಾನಿಗೊಳಗಾಗಿತ್ತು. ಒಂದು ಕಾಲದಲ್ಲಿ ಜನರಿಗೆ ಆಸರೆಯಾಗಿದ್ದ ನೈಸರ್ಗಿಕ ಸಂಪನ್ಮೂಲದಿಂದ ಜನರು ದೂರವಾಗಿದ್ದರು. ಅಮೂಲ್ಯವಾದ ಸ್ಥಳೀಯ ಪರಿಸರ ವ್ಯವಸ್ಥೆಯನ್ನು ಪುನಃಸ್ಥಾಪಿಸುವ ಅಗತ್ಯವಿತ್ತು. ಇದೆಲ್ಲ ಸವಾಲುಗಳ ನಡುವೆ ಗ್ರಾಮಸ್ಥರ ಮನವೊಲಿಸುವಲ್ಲಿ ಐಎಎಸ್ ಅಧಿಕಾರಿ ಯಶಸ್ವಿಯಾದರಲ್ಲದೇ ಅವರು ಕೈ ಜೋಡಿಸುವಂತೆ ಪ್ರೇರೇಪಿಸಿದರು.

ಸ್ಥಳೀಯ ಪಂಚಾಯಿತಿಗಳು ಮತ್ತು ಸಮುದಾಯದ ಮುಖಂಡರು ನದಿಯ ದಡವನ್ನು ಪುನಃಸ್ಥಾಪಿಸಲು ಹಾಗೂ ಜನರು ಮತ್ತೆ ನದಿಯೊಂದಿಗೆ ಬೆರೆಯುವಂತಹ ವಾತಾವರಣ ಸೃಷ್ಟಿಸಲು ಶ್ರಮಿಸಿದರು. 3 ತಿಂಗಳಲ್ಲಿ ನದಿ ಸ್ವಚ್ಚಗೊಳಿಸಿ, ನದಿ ತೀರವನ್ನು ಅತ್ಯಾಕರ್ಷಣೆಯಾಗಿ ಮಾಡಲಾಯಿತು. ಅದರ ಪಕ್ಕದಲ್ಲಿಯೇ ಬಯಲು ರಂಗಮಂದಿರ ಮತ್ತು ಸಾರ್ವಜನಿಕ ಸ್ಥಳದ ನಿರ್ಮಿಸಲಾಯಿತು. ಜನರನ್ನು ಮತ್ತೆ ನದಿಯತ್ತ ಕರೆತರುವ ಸಾಂಸ್ಕೃತಿಕ ಚಟುವಟಿಕೆಗಳು ಪುನಾರಂಭಗೊಂಡಿವೆ.

ಅದ್ಧೂರಿ 'ದೀಪದಾನ'

ನದಿ ಪುನರುಜ್ಜೀವಗೊಳ್ಳುತ್ತಿದ್ದಂತೆ ಗ್ರಾಮದ ಸುಮಾರು 1500 ಜನರು ನದಿ ದಡದಲ್ಲಿ ಸೇರಿ ದೀಪ ದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನೀರಿನ ಮೇಲೆ ಬೆಳಗುತ್ತಿದ್ದ ದೀಪಗಳನ್ನು ಕಣ್ತುಂಬಿಕೊಂಡು, ಹಳೆಯ ನೆನಪುಗಳಿಗೆ ಜಾರಿದರು. ಇಂದಿನದ್ದು ಕೇವಲ ಸಂಭ್ರಮಾಚರಣೆ ಅಲ್ಲ, ಸಮುದಾಯಗಳ ಜೀವನದ ಅವಿಭಾಜ್ಯ ಅಂಗದ ಪುನರ್ ಸ್ಥಾಪನೆ, ಬದುಕಿನ ಸಂಕೇತ ಮತ್ತೆ ಹೊಳೆಯುವಂತಾಗಿದ ಎಂದು ಗ್ರಾಮಸ್ಥರು ಅಧಿಕಾರಿಗೆ ಕೃತಜ್ಞತೆ ಸಲ್ಲಿಸಿದರು.

ಒಬ್ಬ ಐಎಎಸ್ ಅಧಿಕಾರಿ, ಗ್ರಾಮಸ್ಥರು ಮನಸ್ಸು ಮಾಡಿದರೆ ಸುತ್ತಮುತ್ತಲಿನ ಪ್ರಕೃತಿಯನ್ನು ನಮ್ಮೊಂದಿಗೆ ಜೀವಂತವಾಗಿಬಸಹುದಾಗಿದೆ. ಇದರಿಂದ ಆರೋಗ್ಯ ವೃದ್ಧಿ, ಪ್ರಕೃತಿ ಕುರಿತ ಜಾಗೃತಿಗಳು ಹಾಗೂ ಸಮುದಾಯಗಳ ಒಳಗೊಳ್ಳುವಿಕೆ ಹೆಚ್ಚಾಗುತ್ತದೆ. ಸ್ವಂತ ಊರಿಗಾಗಿ ಏನನ್ನಾದರೂ ಸಾಧಿಸಲು ಮಾದರಿಯಾಗುತ್ತದೆ ಎಂಬುದಕ್ಕೆ 'ಸಿಂಗ್ರಿ ನದಿ'ಯ ಕಥೆ ಇಂದು ಸಾಕ್ಷಿಯಾಗಿ ನಿಂತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+